Link copied!
Sign in / Sign up
5
Shares

ಟೆರ್ರಾಕೋಟಾ ಆಭರಣಗಳನ್ನ ಮನೆಯಲ್ಲೆ ಸರಳವಾಗಿ ಮಾಡುವುದನ್ನ ಹಂತಹಂತವಾಗಿ ತಿಳಿಸುತ್ತೇವೆ ಓದಿ!

ಮಾನವ ಸೌಂದರ್ಯವು ಒಂದು ಅಂತರ್ಗತ ಪ್ರೀತಿಯನ್ನು ಹೊಂದಿದೆ. ಆಭರಣಗಳನ್ನು ತಯಾರಿಸುವ ಮತ್ತು ಧರಿಸಿರುವ ಕಲೆ ಪುರಾತನ ನಾಗರೀಕತೆಗಳಿಗೆ ಹಿಂದಿನದು .ಹಳೆಯ ಆಭರಣಗಳನ್ನು ನೈಸರ್ಗಿಕ ಸಾಮಾಗ್ರಿಗಳಾದ ಜೇಡಿಮಣ್ಣು , ಮರ , ಕೊಂಬು , ಮೂಳೆ ಗಳಿಂದ ತಯಾರಿಸಲಾಯಿತು . ಟೆರಾಕೋಟ ಆಭರಣ ಪ್ರಂಪಚದ ಹಳೆಯ ಆಭರಣಗಳಲ್ಲೊಂದು.
 
ಟೆರಾಕೋಟ ಎನ್ನುವುದು ಇಟಾಲಿಯನ್ ಪದವಾಗಿದ್ದು ,ಇದರರ್ಥ "ಬೇಯಿಸಿದ ಭೂಮಿ" ಎಂದು . ಇದರ ಇತಿಹಾಸವು ಹರಪ್ಪ ಮತ್ತು ಮೊಹೆನ್ಜ್ಜೋಡಾರೊ ನಾಗರೀಕತೆಗೆ ಹಿಂದಿನದು. ಟೆರಾಕೋಟ ಕಠಿಣವಾದ ಕೆಂಪು ಸುಟ್ಟ ಜೇಡಿ ಮಣ್ಣಿನಿಂದ ಕೂಡಿರುತ್ತದೆ .ಈ ವಸ್ತುಗಳಿಂದ ಮತ್ತು ಅದರ ನೈಸರ್ಗಿಕ ,ಕಂದು, ಕಿತ್ತಳೆ ಬಣ್ಣದ ಬಣ್ಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಉಲ್ಲೇಖಿಸಲು ಇದನ್ನು ಬಳಸಲಾಗುತ್ತದೆ . ಇದನ್ನು ಕರಕುಶಲ ಮತ್ತು ಮಡಿಕೆಗಳನ್ನು ,ಇತ್ತೀಚಿನ ದಿನಗಳಲ್ಲಿ ಆಭರಣಗಳನ್ನು ತಯಾರಿಸಲು ಬಳಸಲಾಗುತ್ತದೆ . ಅವು ಸುಂದರವಾದ ಬಣ್ಣ ಸಂಯೋಜನೆಯಲ್ಲಿ ಬಳಸಲಾಗುತ್ತದೆ .ಇಂದು ಟೆರಾಕೋಟ ಆಭರಣ ಸಾಂಪ್ರದಾಯಿಕ , ಅಲೆಮಾರಿ ಮತ್ತು ಬುಡಕಟ್ಟು ವಸ್ತ್ರಗಳೊಂದಿಗೆ ಧರಿಸಿದಾಗ ವಿಲಕ್ಷಣ ಡ್ರೆಸ್ಸಿಂಗ್ ಶೈಲಿಯನ್ನೂ ಮೂಡಿಸುತ್ತದೆ . ಭಾರತೀಯ ಸಂಸ್ಕೃತಿಯ ವಿವಿಧ ಸಂಸ್ಕೃತಿ ಯ ಭಾವಗಳು ಟೆರಾಕೋಟ ಫ್ಯಾಶನ್ ಆಭರಣಗಳಲ್ಲಿ ಪ್ರತಿಬಿಂಬಿಸುವ ಕರಕುಶಲಗಳಿಗೆ ಕಾರಣವಾಗಿವೆ .
 
 
ಇವು ಸಾಮಾನ್ಯವಾಗಿ ಕೈಯಿಂದ ತಯಾರಿಸಲ್ಪಡುತ್ತದೆ ಮತ್ತು ಅದರ ವೈವಿಧ್ಯತೆಯೂ ವಿನ್ಯಾಸದ ಸೌಂದರ್ಯದ ವಿಷಯದಲ್ಲಿ ಮತ್ತು ದುಬಾರಿ ವಸ್ತುಗಳನ್ನು ಒದಗಿಸುವಂತೆ, ದುಬಾರಿ ವಸ್ತುಗಳೊಂದಿಗೆ ಸಮನಾಗಿರುತ್ತದೆ .ಟೆರಾಕೋಟ ಮೊದಲು ಅಪೇಕ್ಷಿತ ರೂಪದಲ್ಲಿ ರೂಪುಗೊಳ್ಳುತ್ತದೆ , ಮತ್ತು ನಂತರ ಗೂಡು ಅಥವಾ ಸೂರ್ಯನಲ್ಲಿ ಬೇಯಿಸಲ್ಪಡುತ್ತದೆ .ಟೆರಾಕೋಟ ಫ್ಯಾಶನ್ ಆಭರಣಗಳನ್ನು ಕೈಗಳಿಂದ ರೂಪಿಸಬಹು .ಟೆರಾಕೋಟ ಫ್ಯಾಶನ್ ಆಭರಣಗಳು ಒಂದು ಹಳ್ಳಿ ಗಾಡಿನ ಮತ್ತು ಮಣ್ಣಿನ ಮನವಿಯನ್ನು ಹೊಂದಿದೆ . ಇದು ಸಾಂಪ್ರದಾಯಿಕ ಮತ್ತು ಸಮಕಾಲೀನ ಸಾಂರ್ಧಬಿಕ ಉಡುಗೆಗಳೊಂದಿಗೆ ಒಂದು ಪರಿಕಾರವಾಗಿ ಬಳಕೆಯಲ್ಲಿದೆ .
 
■ ಉತ್ಪನ್ನಗಳಲ್ಲಿ ನೆಕ್ಲೇಸ್ ,ಕಿವಿಯೋಲೆ ,ಬಳೆಗಳು , ಪೆಂಡೆಂಟ್ಗಳು ,ಸರಗಳು ಸೇರಿವೆ . ಟೆರಾಕೋಟ ಆಭರಣವನ್ನು ತಯಾರಿಸುವುದು ತುಂಬಾ ರೋಮಾಂಚಕಾರಿ. ಮತ್ತು ಸುಲಭ .
 
■ಟೆರಾಕೋಟ ಆಭರಣಗಳನ್ನು ಮನೆಯಲ್ಲಿ ನೈಸರ್ಗಿಕ ಜೇಡಿಮಣ್ಣು ಮತ್ತು ಕೆಲವು ಮೂಲ ತಂತ್ರಗಳನ್ನು ಬಳಸಿ ಮಾಡಬಹುದು .
 
■ ಈಗ ಟೆರಾಕೋಟ ಆಭರಣವನ್ನು ತಯಾರಿಸುವ  ಪ್ರಕ್ರಿಯೆಯಲ್ಲಿ ಮತ್ತಷ್ಟು ಚಲಿಸೋಣ . ಟೆರಾಕೋಟ ಮಣ್ಣನ್ನು ಬಳಸಿ ಹೇಗೆ ಆಭರಣಗಳನ್ನು ಮನೆಯಲ್ಲಿ  ಸುಲಭವಾಗಿ ಹೇಗೆ ಮಾಡುವುದೆಂದು ನೋಡೊಣ . ಇದನ್ನು ಬರಿ ಹವ್ಯಾಸವಾಗಿಲ್ಲದೆ ಮಹಿಳೆಯರು ಚಿಕ್ಕ ಉಧ್ಯಮವಾಗಿ ಪ್ರಾರಂಬಿಸ ಬಹುದು .ಇದು ಪರಿಸರ  ಸ್ನೇಹಿಯು ಹೌದು .
 
 
ಆಭರಣಗಳನ್ನು ತಯಾರಿಸಲು ಬೇಕಿರುವ ವಸ್ತುಗಳು
 
೧. ಟೆರಾಕೋಟ ಮಣ್ಣು 
 
ಇದು ಎರಡು ವಿಧಗಳಲ್ಲಿ ಲಭ್ಯವಿದೆ .
1:-ಬೇಕಿಂಗ್ ಕ್ಲೇ .
2 :- ಏರ್ ಡ್ರೈ ಕ್ಲೇ . 
 
ಇದು ನಿಮಗೆ ಕುಂಬಾರರ ಹತ್ತಿರ ಸಿಗುತ್ತದೆ ಮತ್ತು ಕೆಲವೊಂದು ಅಂಗಡಿಗಳಲ್ಲೂ ದೊರೆಯುತ್ತದೆ .
 
೨. ಆಭರಣವನ್ನು ಮಾಡಲು ಬೇಕಾಗಿರುವ ಟೂಲ್ಸ್
 
ಗೇರ್ ವೈಯರ್ ಅಥವಾ ಕಪ್ಪು ದಪ್ಪವಾದ ದಾರ 
 
 
ನೋಸ್ ಪ್ಲ್ಯಯರ್
 
 
 
ನಿಕ್ರೋಂಮ್ ವೈಯರ್ 
 
 
ಮೋಲ್ಡ್  
 
ಇಂಪ್ರೆಶನ್ ಕಾರ್ವಿಂಗ್ ಟೂಲ್ಸ್ 
 
 
 
ಕುಕ್ಕಿ ಕಟರ್
 
 
 
ಮನೆಯಲ್ಲಿರುವ ಮತ್ತು ಸುತ್ತಲೂ ಇರುವ ಸರಳ ವಸ್ತುಗಳು ಇದ್ದರು ಸಾಕು .ಟೆಂಪ್ಲೆಟ್ ಆಕಾರಕ್ಕೆ ವಿನ್ಯಾಸಗಳನ್ನು ತಯಾರಿಸಲು ಮತ್ತು ಮಣ್ಣಿನ ಕತ್ತರಿಸುವಿಕೆಗಾಗಿ ಪೆನ್ ಚಾಕುವನ್ನು ಬಳಸಬಹುದು .
ವೃತ್ತಾಕಾರದ ಮುಚ್ಚಳವನ್ನು ದುಂಡಾದ ಮುಕ್ತ ಭಾಗವನ್ನಾಗಿ ಬಳಸಬಹುದು ,ರಂಧ್ರವನ್ನು ಮಾಡಲು ಟೂತ್ ಪಿಕ್ ಬಳಸಬಹುದು .
 
 
ಸರ ಮಾಡಲು ಮಣ್ಣಿನ ಮಣಿಗಳು
 
 
◆ ಹಂತ 1:- ಮೊದಲು ಕೈಗೆ ಎಣ್ಣೆ ಅಥವಾ ನೀರನ್ನು ಸವರಿಕೊಳ್ಳಿ ನಂತರ ಮಣ್ಣನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡು ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿದ ನಂತರ ಟೂತ್ ಪಿಕ್ ಬಳಸಿ ಉಂಡೆಯ ಮಧ್ಯ ಭಾಗದಲ್ಲಿ ರಂಧ್ರವನ್ನಿರಿಸಿ ಇನ್ನೊಂದು ಕಡೆಯಿಂದ ಎಳೆದುಕೊಳ್ಳಬೇಕು . ನಂತರ ಎರಡು ಅಥವಾ ಮೂರು ದಿನಗಳ ಕಾಲ ಒಣಗಲು ಬಿಡಬೇಕು .
 
 
 ಪೆಂಡೆಂಟ್
 
◆ ಹಂತ 2 :- ಕಾರ್ಡ್ಬೋರ್ಡ್ ಹಾಳೆಯಲ್ಲಿ ಮಾಡಲು  ಬಯಸುವ ಪೆಂಡೆಂಟ್ ವಿನ್ಯಾಸವನ್ನು ಕತ್ತರಿಸಿ ,(ನಿಮ್ಮಲ್ಲಿ ಕುಕ್ಕಿ ಕಟರ್ ಇದ್ದರೆ ,ಅಥವಾ ಮೋಲ್ಡ್ ಇದ್ದರೆ ಬಳಸಬಹುದು . ) ತದನಂತರ ಮಣ್ಣನಲ್ಲಿ ಟೆಂಪ್ಲೇಟ್ ಕತ್ತರಿಸಿದಂತೆ ಕತ್ತರಿಸಿ . ಇದರಿಂದ ಪೆಂಡೆಂಟ್ ಆಕಾರ ಉತ್ತಮವಾಗಿ ಕಾಣುತ್ತದೆ . ನಂತರ "u" ಪಿನ್ ಅನ್ನು ಪೆಂಡೆಂಟಿನ ಮೇಲ್ಬಾಗದಲ್ಲಿ (೧)ಹುಕ್ಕಿನ ಹಾಗೆ ಇರಿಸಬೇಕು .ನಂತರ 2 ಅಥವಾ 3 ದಿನಗಳ ಕಾಲ ಒಣಗಲು ಬಿಡಬೇಕು . 
 
 
◆ ಹಂತ 3:- ಟೆರಾಕೋಟ ಮಣ್ಣಿನಿಂದ ಮಾಡಿರುವ  ಮಣಿಗಳು ಹಾಗೂ ಪೆಂಡೆಂಟ್ ಅನ್ನು ಸುಡುವುದು .
ಟೆರಾಕೋಟ ಜ್ವೇಲರಿಯನ್ನು ಸುಡಲು ಅನೇಕ ರೀತಿಗಳಿವೆ .ಇವನ್ನು ಕುಂಬಾರನ ಹತ್ತಿರ ಕೊಟ್ಟು ಸುಡುವುದು ಅಥವಾ ಮನೆಯಲ್ಲಿ ಸರಳವಾಗಿ ಸುಡಬಹುದು .ಇದನ್ನು ಸುಡುವುದರಿಂದ ಗಟ್ಟಿಯಾಗುತ್ತದೆ ಗಮನಿಸಿ ಸುಡುವ ಮೊದಲು ಚೆನ್ನಾಗಿ ಒಣಗಿರಬೇಕು . ಈಗ ಮನೆಯಲ್ಲಿ ಹೇಗೆ  ಸುಡಬಹುದೆಂದು ನೋಡೊಣ .
 
ಕಬ್ಬಿಣದ ಬಾಂಡ್ಲಿ ಅಥವಾ ಮಡಿಕೆಯ ತಳದಲ್ಲಿ ಮೊದಲು ಇದ್ದಿಲ್ಲನ್ನು ಹಾಕಬೇಕು ನಂತರ ಅದರ ಮೇಲೆ ಸಾ ಡಸ್ಟ್ ಪೌಡರ್ ಹಾಕಬೇಕು ನಂತರ ಅದರ ಮೇಲೆ ಒಣಗಿಸಿದಂತ ಟೆರಾಕೋಟ ಜಿವ್ಲರೀಯನ್ನು ಇಡಬೇಕು , ನಂತರ ಅದರ ಮೇಲೆ ಮತ್ತೆ ಸಾ ಡಸ್ಟ್ ಪೌಡರ್ ಸುತ್ತಲೂ ಉದುರಿಸಬೇಕು , ನಂತರ ಬೆಂಕಿಯನ್ನು ಹೊತ್ತಿಸಬೇಕು ಇದನ್ನು ನಾಲ್ಕು ಅಥವಾ ಐದು ಗಂಟೆಗಳ ಕಾಲ ಬಿಡಬೇಕು . ಆರಿದ ನಂತರ ಟೆರಾಕೋಟ ಜಿವ್ಲರೀ ಪೇಂಟ್ ಮಾಡಲು ಸಿದ್ದ .
 
 
 
◆ ಹಂತ 4:-ಪೇಂಟ್ ಮಾಡುವ ವಿಧಾನ 
 
 
ಇದಕ್ಕೆ ಪರ್ಲ್ ಅಥವಾ ಮೆಟಾಲಿಕ್ ಫ್ಯಾಬ್ರಿಕ್ ಪೇಂಟ್ ಬಳಸಬಹುದು .ಬ್ರಷ್ಯಿಂದ ನಿಮಗೆ ಇಷ್ಟವಾದ ಬಣ್ಣದಲ್ಲಿ ಪೇಂಟ್ ಮಾಡಿ .
 
 
◆ ಹಂತ 5:-ಪೋಣಿಸುವ ವಿಧಾನ 
ಇದಕ್ಕೆ ಕ್ರೋಂ ವಯರ್ ಅಥವಾ ದಾರವನ್ನು ಬಳಸಬಹುದು .ದಾರವನ್ನು ಚೂಸ್ ಮಾಡುವಾಗ ದಾರ ತುಂಬಾ ತೆಳ್ಳಗಿರಬಾರದು .ಏಕೆಂದರೆ ಅದು ಮಣ್ಣಿನಲ್ಲಿ ಮಾಡಿರುವ ಪೆಂಡೆಂಟ್ , ಮಣಿಗಳ ತೂಕವನ್ನು ಸರಿದೂಗಬೇಕು . ಅದಕ್ಕಾಗಿ ತುಂಬಾ ದಪ್ಪವಾದ ದಾರವನ್ನು ಕೂಡ ಕೊಳ್ಳಬಾರದು . ಮೀಡಿಯಂ ದಾರವನ್ನು ಕೊಳ್ಳಬೇಕು . ದಾರದಲ್ಲಿ ಪೆಂಡೆಂಟ್ , ಮಣಿಗಳನ್ನು ಪೋಣಿಸಿದ ನಂತರ ಗಂಟನ್ನು ಹಾಕಬೇಕು , ನಂತರ ದಾರದ ತುದಿಗೆ ಹುಕ್ಕನ್ನು ಹಾಕಬೇಕು , ನಮಗೆ ಸುಂದರವಾದ ಸರ ರೆಡಿ .ನಾವು ನಮ್ಮ ಕೈಯಿಂದ ಮಾಡಿರುವ 
 ಆಭರಣಗಳನ್ನು ಹಾಕಿಕೊಳ್ಳಲು ಹೆಮ್ಮೆ ಎನಿಸುತ್ತದೆ . ನಿಮ್ಮ ಸ್ನೇಹಿತೆಯರಿಗೂ ಪ್ರೇಸೆಂಟ್ ಮಾಡಿ ಅವರಿಗೂ ಇದರ ಬಗ್ಗೆ ಅರಿವು ಮೂಡಿಸಿ .
Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon