Link copied!
Sign in / Sign up
93
Shares

ಸುಂದರವಾದ ಟೆರೇಸ್,ಅಂಗಳ ಗಾರ್ಡನ್ ಸುಲಭವಾಗಿ ಮಾಡುವುದನ್ನ ಬಿಡಿಬಿಡಿಯಾಗಿ ಹೇಳಿಕೊಡ್ತೇವೆ ಓದಿ!

ಇತ್ತೀಚಿನ ದಿನಗಳಲ್ಲಿ ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗುತ್ತಿದೆ .ಕೀಟನಾಶಕ, ಗೊಬ್ಬರಗಳ ಬಳಕೆ, ವಿಷಕಾರಿ ಆಹಾರ ಬೆಳೆಯುವುದನ್ನು ತಡೆಯಲು ನಗರವಾಸಿಗಳು ತಮ್ಮ ಕುಟುಂಬಕ್ಕೆ ಅಗತ್ಯವಾದ ತರಕಾರಿಗಳನ್ನು ಟೆರೇಸ್ ಅಥವಾ ಮನೆಯಂಗಳದಲ್ಲಿ ಬೆಳಸಬಹುದು. ಪ್ರತಿ ಕುಟುಂಬದ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳುವುದು ಅವಶ್ಯಕವಾಗಿದೆ. ನಮಗೆ ಇಷ್ಟವಾದ ತರಕಾರಿಗಳನ್ನು ಅತೀ ಕಡಿಮೆ ಜಾಗದಲ್ಲಿ ಸಾವಯವ ಗೊಬ್ಬರ ಬಳಸಿ ಬೆಳೆಯಬಹುದಾಗಿದೆ. ಇದಕ್ಕೆ ಕಡಿಮೆ ವೆಚ್ವಾವಾಗುತ್ತದೆ .ಮನೆಯ ಸದಸ್ಯರೆಲ್ಲರೂ ಒಟ್ಟಾಗಿ ಕೆಲಸ ಮಾಡಬಹುದಾಗಿದೆ.
 
ಟೆರೇಸ್ ಕೈತೋಟ ಇತ್ತೀಚೆಗೆ ಬಹಳ ಮಹತ್ವ ಪಡೆದಿದ್ದು ಮಹಿಳೆಯರು ಇದರ ಸದುಪಯೋಗ ಪಡೆದು ಕೂಳ್ಳಬಹುದು .ದೇಶದ ಅನೇಕ ನಗರಗಳಲ್ಲಿ ಟೆರೇಸ್ ತೋಟದಿಂದ ಅನೇಕ ಮಹಿಳೆಯರು ಉತ್ತಮ ಆದಯವನ್ನು ಗಳಿಸುತ್ತಿದ್ದಾರೆ . ಟೆರೇಸ್ ಅಥವಾ ಅಂಗಳ ಕೈತೋಟ ಇಂದಿನ ಅಗತ್ಯವಾಗಿದ್ದು, ಮಹಿಳೆಯರಿಗೆ  ಇದರ ಅರಿವು ಮೂಡಿಸಬೇಕು . ನಗರಗಳಲ್ಲಿ ವಾಸಿಸುವ ಪ್ರತಿಯೊಬ್ಬರೂ ಟೆರೇಸ್ ಅಥವಾ ಮನೆ ಅಂಗಳದಲ್ಲಿ ಕೈತೋಟ ಅಳವಡಿಸಿಕೊಳ್ಳುವುದು ಅಗತ್ಯ . ಮನೆ ಕೆಲಸಗಳ ನಡುವೆ ಕೈತೋಟ ಕೃಷಿಯಲ್ಲಿ ತೊಡಗಿಕೊಳ್ಳುವುದರಿಂದ ಮನಸ್ಸಿಗೆ ಆನಂದವಾಗುತ್ತದೆ . ಇತ್ತೀಚಿನ ದಿನಗಳಲ್ಲಿ ನಗರ ವಾಸಿಗಳು ಕೈತೋಟ ಅಥವಾ ಉದ್ಯಾನ ಬೆಳೆಸುವತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಕೆಲವರು ಹವ್ಯಾಸಕ್ಕಾಗಿ ಕಣ್ಣಿಗೆ ಮುದ ನೀಡುವ ವಿವಿಧ ರೀತಿಯ ಹೂವಿನ ಗಿಡಗಳನ್ನು ಬೆಳೆಸಿದರೆ, ಮತ್ತೆ ಕೆಲವರು ರಾಸಾಯನಿಕ ಮುಕ್ತ ತರಕಾರಿ, ಹಣ್ಣುಗಳ  ಬಳಕೆಯ ಉದ್ದೇಶ ದಿಂದ ಮನೆಯ ಸುತ್ತ ಕೈತೋಟ ಬೆಳೆಸುತ್ತಾರೆ.
 
ಕೈತೋಟ ಬೆಳೆಸುವವರಿಗೆ ಅದರ ಬೆಳವಣಿಗೆ ಪ್ರಕ್ರಿಯೆ, ನೀರುಣಿಸುವುದು ರಕ್ಷಣೆ ಹೇಗೆ ಮಾಡುವುದೆಂಬುದರ ವಿವರ ಇಲ್ಲಿದೆ. ಭಾರತದಲ್ಲಿ ಹೆಚ್ಚಿನ ಜನರು ಹಾನಿಕಾರಕ ಟಾಕ್ಸಿನ್ ಮತ್ತು ಕೀಟನಾಶಕಗಳನ್ನು  ಬಳಸದೆ ಇರುವ ಕಾರಣ ಜೈವಿಕ ಆಹಾರದ ಕಡೆಗೆ ಹೋಗುತ್ತಿದ್ದಾರೆ. ಆದರೆ, ಈ ಸಾವಯವ ಆಹಾರಗಳು ಹೆಚ್ಚು ದರದಲ್ಲಿ ಮತ್ತು ಸ್ಟಾಕ್ ಆಗಿರುವುದಿಲ್ಲ . ಇಲ್ಲಿ ನೀವು ನಿಮ್ಮ ಸ್ವಂತ ಸಾವಯವ ಅಡುಗೆ ಉದ್ಯಾನವನ್ನು ರಚಿಸಲು ಕೆಲವು ಸರಳ ಸಲಹೆಗಳನ್ನು ನೀಡುತ್ತೇನೆ . ಇಡೀ ಪ್ರಕ್ರಿಯೆಯು ತುಂಬಾ ವೆಚ್ಚವಿಲ್ಲದೆ ಮತ್ತು ಹೆಚ್ಚು ನಿರ್ವಹಣೆಯ ಅಗತ್ಯವಿಲ್ಲದೆ, ಇದನ್ನು ಮಾಡಲು ತಾಳ್ಮೆ ಹಾಗೂ ಶ್ರಮಿಸಬೇಕು .ನೀವು ನಿಮ್ಮ ಟೆರೇಸ್, ಕಿಟಕಿ ಅಥವಾ ಬಾಲ್ಕನಿಯನ್ನು ಬಳಸಬಹುದು. ಏಕೆಂದರೆ ಪ್ರಮುಖ ಅವಶ್ಯಕತೆಯು ತರಕಾರಿಗಳನ್ನು ಬೆಳೆಯಲು ಸೂರ್ಯನ ಬೆಳಕನ್ನು ಹೊಂದಿರಬೇಕು.
 
 
ಹಂತ 1:- ಮಡಿಕೆಗಳು
 
● ಮಣ್ಣಿನ ಅಥವಾ ಪ್ಲಾಸ್ಟಿಕ್ ಮಡಿಕೆಗಳಿಗೆ ಹೂಡಿಕೆ ಮಾಡಬೇಕಿಲ್ಲ. ಪ್ಲಾಸ್ಟಿಕ್ ಬಾಟಲ್, ಬಕೆಟ್ ಗಳು, ಗೋಣಿ ಚೀಲಗಳು,ಸವೆದು ಹೋಗಿರುವ ಟಯರ್ ಗಳನ್ನು ಉಪಯೋಗಿಸಿ ತರಕಾರಿಗಳನ್ನು ಬೆಳಸಬಹುದು . ಅಂತಹ  ಒಂದು ವಸ್ತು ತೆಗೆದುಕೊಳ್ಳಿ.
 
 
 
 
ಹಂತ 2:- ಮಣ್ಣು ಮತ್ತು ಗೊಬ್ಬರ
 
●ಪೌಷ್ಟಿಕಾಂಶದ ಸಮೃದ್ಧ ಮಣ್ಣು, ಗೊಬ್ಬರ ತಯಾರಿಸುವುದು ಮುಂದಿನ ಹಂತವಾಗಿದೆ. ಇದು ಆರೋಗ್ಯಕರ ಸಸ್ಯ ಬೆಳವಣಿಗೆಯನ್ನು ಬೆಂಬಲಿಸುತ್ತದೆ.  ಮನೆಯಲ್ಲಿ ನಾವೇ ಸಾವಯವ ಗೊಬ್ಬರವನ್ನು ತಯಾರಿಸಬಹುದು.
 
 
ಅಡುಗೆಯ ತ್ಯಾಜ್ಯವನ್ನು ಮುಖ್ಯ ಸಂಪನ್ಮೂಲಗಳನ್ನಾಗಿ ಪರಿವರ್ತಿಸಬೇಕು, ತರಕಾರಿ, ಹಣ್ಣುಗಳ ಸಿಪ್ಪೆಯನ್ನು, ಕೊಳೆತ ತರಕಾರಿ, ಹಣ್ಣುಗಳನ್ನು ಗೊಬ್ಬರಕ್ಕೆ ಉಪಯೋಗಿಸಬೇಕು.  ನಂತರ ಒಣಗಲು ಬಿಡಬೇಕು ನಿಯಮಿತ ಮಧ್ಯದಲ್ಲಿ ಕೆಂಪು ಮಣ್ಣನ್ನು ಸೇರಿಸಿಕೊಳ್ಳಬೇಕು. 
 
ಹಂತ 3:-ಮಡಿಕೆಗಳಲ್ಲಿ ಮಣ್ಣಿನ ಆರೋಗ್ಯಕರ ಪದರವನ್ನು  ರಚಿಸುವುದು

 

●ಮಡಿಕೆಯಲ್ಲಿ ರಂದ್ರವಿರುವುದನ್ನು ಖಚಿತ ಪಡಿಸಿಕೊಂಡು ಆ ರಂದ್ರಕ್ಕೆ ಒಡೆದ ಮಡಿಕೆಯಚೂರನ್ನು ಅಥವಾ ಚಿಕ್ಕ ಕಲ್ಲುಗಳನ್ನು  ಅಳವಡಿಸಬೇಕು.

 
ನಂತರ ಕೆಂಪು ಮಣ್ಣು ಗೊಬ್ಬರವನ್ನು ಮಿಶ್ರಣ ಮಾಡಿ ನೀವು ಯಾವ ವಸ್ತುವಿನಲ್ಲಿ ತುಂಬಲು ಇಚ್ಚಿಸುವಿರೋ ಅದರಲ್ಲಿ ತುಂಬ ಬೇಕು. ಎಲ್ಲಾ ಸಮಯದಲ್ಲೂ ನಿಮ್ಮ ಮಣ್ಣು ಒಣಗಿದ ಎಲೆಗಳನ್ನು ಅಥವಾ ನಾರಿನಾಂಶವುಳ್ಳ ಕಬ್ಬಿನ ಬ್ಯಾಗ್ಗೇಸ್ಗಳಿಂದ ಮುಚ್ಚಲ್ಪಟ್ಟಿದೆ ಎಂದು ಖಚಿತಪಡಿಸಿಕೊಳ್ಳಿ ಇದು ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಸೂಕ್ಷ್ಮಜೀವಿಗಳನ್ನು ನೇರ ಶಾಖದಿಂದ ನಿರೋಧಿಸುತ್ತದೆ ಮತ್ತು ಕಳೆ ಬೆಳವಣಿಗೆಯನ್ನು ನಿಗ್ರಹಿಸುತ್ತದೆ ಮತ್ತು ಅದಕ್ಕೆ ಆಹಾರವನ್ನು ಒದಗಿಸುತ್ತದೆ.
 
 
 
 
ಹಂತ 4:- ದ್ರವ ಸಾವಯದ ರಸಗೊಬ್ಬರ
 
●ಇದು ಹಸುವಿನ ಮೂತ್ರ , ಒಣಗಿದ ಸಗಣಿ , ಸಾವಯವದ ಕಪ್ಪು ಬೆಲ್ಲ  ಮತ್ತು ನೀರನ್ನು  ಒಳಗೊಂಡಿದೆ .ಇದನ್ನು ನಿಯಮಿತ ಮಧ್ಯಂತರದಲ್ಲಿ , ಪ್ರತಿ 15 ಅಥವಾ 20 ದಿನಗಳಲ್ಲಿ ಗಿಡದ ಬುಡಕ್ಕೆ ಹಾಕಬೇಕು .ನಂತರ ಪ್ರತಿ 3 ತಿಂಗಳಿಗೊಮ್ಮೆ  ಮರದ ಬೂದಿಯನ್ನು ಮಣ್ಣಿಗೆ ಬೆರಸಬೇಕು . ಆರೋಗ್ಯಕರವಾದ ಮಣ್ಣು ಗೊಬ್ಬರ ಮಿಶ್ರಿತ ಸಿಧ್ಧ.
 
 
 
 
 
 
ಹಂತ 5 :-ಬೆಳೆಯುವ ಹಣ್ಣು ,ತರಕಾರಿ ,ಹೂವಿನ ಬೀಜಗಳು ಅಥವಾ ಗಿಡಗಳು 
 
●ಬೀಜಗಳನ್ನು ಕೊಳ್ಳುವಾಗ ಪರಾಗಸ್ಪರ್ಶ ಬೀಜಗಳನ್ನು ಕೊಳ್ಳಿ , ಹೈಬ್ರೀಡ್  ಬೀಜಗಳನ್ನು ಕೊಳ್ಳಬೇಡಿ . ಮೊದಲಿಗೆ ತರಕಾರಿಗಳ ಬದಲು ತುಳಸಿ ,ಪುದೀನಾ ,ಕೊತ್ತುಂಬರಿ ,ಮೆಂತ್ಯ , ಪಾಲಕ್ ಸೊಪ್ಪುಗಳನ್ನು ಬೆಳಸಿ. ಏಕೆಂದರೆ ಇದಕ್ಕೆ ಹೆಚ್ಚು ಸೂರ್ಯನ ಬೆಳಕಿನ ಅವಶ್ಯಕ ವಿರುವುದಿಲ್ಲ .
 
 
ಮೂಲಭೂತವಾಗಿ ಇದನ್ನು  ಪ್ರಾರಂಬಿಸಿದ ಮೇಲೆ ,ಹಸಿ ತರಕಾರಿಗಳಾದ  ಎಲೆಕೋಸು , ಮೂಲಂಗಿ ,ಕ್ಯಾರೆಟ್ , ಬದನೆಕಾಯಿ , ಈರುಳ್ಳಿ , ಟಮೆಟೊ , ಬೀನ್ಸ್ ನಂತಹ ತರಕಾರಿಗಳನ್ನು  ಪ್ರಯತ್ನಿಸಬಹುದು . ನಾವು ನಮ್ಮ ಮನೆಯ ತೋಟದಲ್ಲಿ ಬೆಳದಿರುವ ತರಕಾರಿಗಳನ್ನು ಉಪಯೋಗಿಸುವಾಗ  ಸಂತೋಷ ,ಹೆಮ್ಮೆ ಎನಿಸುತ್ತದೆ.
 
 
ಹಂತ 6 :-ನಮ್ಮ ಮನೆಯಲ್ಲಿ ಬೆಳದಿರುವ ತರಕಾರಿ ಹಣ್ಣುಗಳನ್ನು ಉಪಯೋಗಿಸಿ ಆನಂದಿಸಿ .ಬೇರೆಯವರಿಗೂ ಇದರ ಬಗ್ಗೆ ಅರಿವು ಮೂಡಿಸಿ, ಪರಿಸರ ಸ್ನೇಹಿ ಆಗಿ

ಈ ಲೇಖನ ನಿಮಗೆ ಇಷ್ಟವಾಗಿದ್ದರೆ, ಇದನ್ನ ಇತರರಿಗೂ ತಿಳಿಯುವಂತೆ ಶೇರ್ ಮಾಡಿ, ಸಾಮಾಜಿಕ ಕಳಕಳಿ ಮೆರೆಯಿರಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon