Link copied!
Sign in / Sign up
4
Shares

ತಾಯಿಯಾಗಿ ನೀವು ಈ ೭ ವಿಷಯಗಳ ಬಗ್ಗೆ ಪಾಪಪ್ರಜ್ಞೆ ಇರಬೇಕಿಲ್ಲ

ನಿಮ್ಮ ಭಾವನೆಗಳ ಜೊತೆಗೆ ಅಪರಾಧ ಮನೋಭಾವವನ್ನು ಸೇರಿಸದೆ ತಾಯಿಯಾಗಿ ಮುಂದುವರೆಸಲು ನಿಮಗೆ ಬಹಳಷ್ಟಿದೆ. “ಪರಿಪೂರ್ಣ ತಾಯಿ”ಯಾಗುವ ಪ್ರಯತ್ನದಲ್ಲಿ ನೀವು ಮಾಡದ ಅಥವಾ ಮಾಡಿರುವ ಸಣ್ಣ ವಿಷಯಗಳ ಬಗ್ಗೆ ನೀವು ತಲೆ ತಗ್ಗಿಸಬೇಕಿಲ್ಲ.

ಇಲ್ಲಿರುವ ೭ ವಿಷಯಗಳ ಬಗ್ಗೆ ನೀವು ಪಾಪಪ್ರಜ್ಞೆ ಪಡಬೇಕಿಲ್ಲ

೧.ನಿಮ್ಮ ಕೆಲಸವನ್ನು ಪ್ರೀತಿಸುವುದು

ನಿಮ್ಮ ಮಗುವಿಗೆ ಕೇವಲ ೫ ತಿಂಗಳು ಅಥವಾ ೫ ವರ್ಷವಾಗಿರಲಿ ನಿಮ್ಮ ಭಾವನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ನೀವು ಮತ್ತೆ ಕೆಲಸಕ್ಕೆ ಹೋಗಬೇಕೆಂದು ತೀರ್ಮಾನಿಸಿದಾಗ ಪಾಪಪ್ರಜ್ಞೆ ಕಾಡಬಹುದು. ಇದು ಯಾವಾಗಲು ನಿಮ್ಮ ಕುಟುಂಬ ಮತ್ತು ನಿಮ್ಮ ಕೆಲಸ ನಡುವೆ ಆಯ್ಕೆಯ ಭಾವನೆ ಬರುತ್ತದೆ. ನೀವು ಕುಟುಂಬಕ್ಕಾಗಿ ಕೆಲಸ ಮಾಡುತ್ತಿರುವುದು, ನಿಮ್ಮ ಮಗುವಿನ ಉತ್ತಮ ಭವಿಷ್ಯಕ್ಕಾಗಿ, ಅಂದ ಮೇಲೆ ಪ್ರತಿ ಕ್ಷಣವೂ ನಿಮ್ಮ ಮಗುವಿನ ಜೊತೆ ಕಾಲ ಕಳೆಯಬೇಕು ಎಂಬುದಿಲ್ಲ. ನಿಮ್ಮ ನಿರ್ಧಾರವನ್ನು ಒಪ್ಪಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಿ. ಆದರೆ ಅದರಲ್ಲೇ ಮುಳುಗಿ ಹೋಗದೆ ನಿಮ್ಮ ಮಗುವನ್ನು ಎಂದಿನಂತೆ ನೋಡಿಕೊಳ್ಳಿ.

೨.ಸ್ವಲ್ಪ ಸಮಯ ತೆಗೆದುಕೊಳ್ಳಿ

ನೀವು ನಿಮ್ಮ ಮಗುವಿನ ರಕ್ಷಣೆ ಮತ್ತು ಮನೆಯ ಕೆಲಸವನ್ನು ನಿರಂತರವಾಗಿ ಮಾಡುತ್ತಿರುತ್ತೀರಿ, ಮತ್ತು ಇದರ ಮದ್ಯೆ ವಿರಮಿಸುವುದು ಕಷ್ಟ ಮತ್ತು ನಿಮಗೆ ನೀವು ಸಮಯ ಕೊಡುವುದಿಲ್ಲ. ಮತ್ತು ಹಾಗೂ ಸ್ವಲ್ಪ ಸಮಯ ವಿಶ್ರಮಿಸಿದರೆ ನಾನು ಸಮಯ ವ್ಯರ್ಥ ಮಾಡುತ್ತಿರುವೆ ಎಂಬ ಪಾಪಪ್ರಜ್ಞೆಯನ್ನು ಭಾವಿಸುತ್ತೀರಿ.

ಪುಸ್ತಕವನ್ನು ಓದಲು ಅಥವಾ ನಿಮ್ಮ ಸ್ನೇಹಿತರನ್ನು ಭೇಟಿ ಮಾಡಲು ಸ್ವಲ್ಪ ಸಮಯ ಕಳೆಯುವುದು ನಿಮ್ಮ ಸ್ವಾರ್ಥವಲ್ಲ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಮ್ಮ ಮೊದಲ ಹಂತ ನಿಮ್ಮ ಕುಟುಂಬವನ್ನು ನೋಡಿಕೊಂಡ ನಂತರ ನಿಮ್ಮನ್ನು ನೀವು ನೋಡಿಕೊಳ್ಳುವುದು ಮುಖ್ಯ.

೩.ನಿಮ್ಮ ಮಗುವನ್ನು ಗದರಿಸುವುದು

ನೀವು ನಿಮ್ಮ ತಾಳ್ಮೆಯನ್ನು ಕಳೆದುಕೊಂಡು ನಿಮ್ಮ ಮಗುವಿಗೆ ಬೈಯುವ ಅಥವಾ ಗದರಿಸುವ ಪರಿಸ್ಥಿತಿ ಬರುತ್ತದೆ. ನಿಮ್ಮ ಮಗು ನೀವು ಗದರಿದ ಮೇಲೆ ಬೇಸರವಾಗುತ್ತದೋ ಅಥವಾ ಮತ್ತೆ ಖುಷಿಯಿಂದ ಇರುತ್ತದೆಯೋ ಗೊತ್ತಿಲ್ಲ ಆದರೆ ನೀವು ಮಾತ್ರ ಮಗುವಿನ ಮೇಲೆ ರೇಗಿದ ಕಾರಣ ಮರುಗುತ್ತೀರಿ. ಕೆಲವೊಮ್ಮೆ, ನಿಮ್ಮ ಮಗುವನ್ನು ಶಿಸ್ತುಬದ್ಧಗೊಳಿಸುವುದು ಉತ್ತಮ ಔಷಧವಾಗಿದೆ.ನೀವು ತಾಯಿ, ನಿಮಗೆ ಹಲವು ಜವಾಬ್ದಾರಿಗಳು ಮತ್ತು ಒತ್ತಡವಿರುತ್ತದೆ. ಆದ್ದರಿಂದ ನೀವು ಪ್ರತಿ ಪರಿಸ್ಥಿತಿಯನ್ನು ಶಾಂತ ರೀತಿಯಲ್ಲಿ ನಿರ್ವಹಿಸುವಿರಿ ಎಂದು ನಿರೀಕ್ಷಿಸುವುದಕ್ಕೆ ಅವಾಸ್ತವಿಕವಾಗಿದೆ.

೪.ಸರಿಯಾಗಿ ವ್ಯಾವ್ಯಾಮ ಮಾಡದಿರುವುದು

ನೀವು ಯಾವಾಗಲು ಮುಂಚೆ ನಿಮ್ಮ ದೇಹ ಎಷ್ಟು ಚೆನ್ನಾಗಿತ್ತು ಎಂದು ನೆನೆಸಿಕೊಳ್ಳುತ್ತಾ ಕೊರಗಿಕೊಂಡು ಕೂರುತ್ತೀರ? ತಾಯಿಯಾದ ಮೇಲೆ ವ್ಯಾಯಾಮ ಮಾಡುವುದಿರಲಿ, ನಿಮಿಗೋಸ್ಕರ ಎಂದು ಏನು ಮಾಡುವುದು ಕೂಡ ಕಷ್ಟ ಆಗುತ್ತದೆ. ಹಾಗಾಗಿ ಅದರ ಬಗ್ಗೆ ಚಿಂತಿಸಬೇಡಿ. ನೀವು ನಂಬುತ್ತಿರೋ ಇಲ್ಲವೋ, ನಿಮ್ಮ ಮಕ್ಕಳ ಹಿಂದೆ ಓಡುವುದರಿಂದಲೇ ನಿಮಗೆ ಬೇಕಾಗಿರುವುದಕ್ಕಿಂತ ಹೆಚ್ಚು ವ್ಯಾಯಾಮ ಆಗುತ್ತದೆ.

೫.ನಿಮ್ಮ ಮಕ್ಕಳಿಗೆ ಕುರುಕಲು ತಿನಿಸುಗಳು ಕೊಡಿಸುವುದು

ನೀವು ಮುಂಚೆಯೇ ಎಲ್ಲಾದನ್ನು ಮುಂಚೆಯೇ ಪ್ಲಾನ್ ಮಾಡಿರುತ್ತೀರ - ತಿಂಡಿಗೆ ಚಪಾತಿ ಜೊತೆ ಧಾನ್ಯಗಳ ಪಲ್ಯ, ಸ್ನಾಕ್ಸ್ ಆಗಿ ಹಣ್ಣುಗಳು ಮತ್ತು ತರಕಾರಿ ಸಲಾಡ್ ಎಂದು. ಆದರೆ ನಿಮ್ಮ ಮಗುವು ಪಿಜ್ಜಾ, ಬರ್ಗರ್ ಅಥವಾ ಇನ್ನ್ಯಾವುದೋ ಬೇಕರಿ ತಿನಿಸುಗಳನ್ನು ಕೇಳಿದರೆ ನೀವು ಬಹಳ ಹೊತ್ತು ಇಲ್ಲ ಎನ್ನಲು ಆಗುವುದಿಲ್ಲ. ಕೆಲವೊಂದು ಬಾರಿ ಅವರ ಹಠಕ್ಕೆ ಮಣಿದು ಸೋಲುವುದರಲ್ಲಿ ತಪ್ಪಿಲ್ಲ. ಒಂದು ಪಿಜ್ಜಾ ತಿಂದರೆ ನಿಮ್ಮ ಮಗುವೇನು ದಪ್ಪವಾಗಲ್ಲ !

೬.ನಿಮ್ಮ ಪತ್ನಿ ಜೊತೆ ಸಮಯ ಕಳೆಯಬೇಕೆಂಬ ಆಸೆ

ನಿಮ್ಮ ಮಗು ಎಂದರೆ ನಿಮಗೆ ಪಂಚಪ್ರಾಣ, ಆದರೆ ಹಾಗೆಂದ ಮಾತ್ರಕ್ಕೆ ನಿಮ್ಮ ಜಗತ್ತೆಲ್ಲಾ ನಿಮ್ಮ ಮಗುವಿನ ಸುತ್ತಲೇ ಸುತ್ತಬೇಕು ಎಂದೇನಿಲ್ಲ. ನಿಮ್ಮ ಪತಿಯೊಂದಿಗು ಸಮಯ ಕಳೆಯಬೇಕೆಂದು ನೀವು ಆಸೆ ಪಡುವುದರಲ್ಲಿ ತಪ್ಪೇನಿಲ್ಲ. ವಾಸ್ತವದಲ್ಲಿ, ಹೀಗೆ ಮಾಡುವುದು ಆರೋಗ್ಯಕರವಾದದ್ದು, ಏಕೆಂದರೆ ಮಗುವಾದ ಮೇಲೆ ನಿಮ್ಮ ಹಾಗು ನಿಮ್ಮ ಪತಿಯ ನಡುವಿನ ಸಂಬಂಧ ಬಹಳಷ್ಟು ಬದಲಾಗಿರುತ್ತದೆ. ಈ ಸಮಯ ನಿಮ್ಮಿಬ್ಬರ ಸಂಬಂಧ ಗಟ್ಟಿ ಮಾಡುವಂತದ್ದು.

೭.ನಿಮ್ಮ ಮಗುವಿನ ಬೆನ್ನ ಹಿಂದೆಯೇ ಸದಾಕಾಲ ಇರದಿರುವುದು

ಬಹುಶಃ ನೀವು ಕೆಲಸ ಮಾಡುತ್ತಿರಬಹುದು ಅಥವ ನೀವು ಬಹಳ ದಿನಗಳಿಂದ ಅಂದುಕೊಂಡಿದ್ದ ಹಾಗೆ ನಿಮಗೆಂದೇ ಸ್ವಲ್ಪ ಸಮಯ ಬಿಡುವು ಮಾಡಿಕೊಂಡಿರಬಹುದು. ಕಾರಣ ಏನಾದರು ಇರಬಹುದು, ನೀವು ನಿಮ್ಮ ಮಗುವಿಗೆ ಸಂಬಂಧಪಟ್ಟ ಯಾವುದಾದರು ವಿಷಯವನ್ನು ಮಿಸ್ ಮಾಡಿರಬಹುದು. ನಿಮಗೆ ಇದರಿಂದ ಬೇಜಾರೆನಿಸಬಹುದು, ಆದರೆ ಬಹಳಷ್ಟು ಸಲ ಪರಿಸ್ತಿಥಿ ಮೇಲೆ ಹಿಡಿತ ನಿಮ್ಮ ಕೈಗಳಲ್ಲಿ ಇರುವುದಿಲ್ಲ. ನಿಮ್ಮ ಮಗುವಿನ ಸಣ್ಣ ಸಣ್ಣ ವಿಷಯಗಳಲ್ಲಿಯೂ ನೀವು ಜೊತೆಗಿರಲಿಲ್ಲ ಎಂದು ನಿಮ್ಮನ್ನು ನೀವು ದೂಷಿಸುತ್ತಾ ಕುಳಿತುಕೊಳ್ಳ ಬೇಡಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon