Link copied!
Sign in / Sign up
7
Shares

ತಾಯಿಯಾದವಳು ಖರಿದಿಸಲೇ ಬೇಕಾದ ೭ ವಸ್ತುಗಳು

ನೀವು ಅಂದುಕೊಂಡಂತೆ ಅಥವಾ ನಿಮ್ಮ ಪೂರ್ವ ಯೋಜನೆಯಂತೆಯೇ, ಗರ್ಭಧಾರಣೆ, ಮಗುವಿನ ಹೆಸರು, ಇತ್ಯಾದಿಗಳೇಲ್ಲವೂ ಆಯಿತು, ಆದರೆ ಈ ವಸ್ತುಗಳು ಇಲ್ಲದೆ ಇದ್ದರೆ, ನೀವು ಖಂಡಿತವಾಗಿಯೂ ನಿಮ್ಮ ಜೀವನದ ಅಮೂಲ್ಯ ಕ್ಷಣಗಳಲ್ಲಿ ಏನನ್ನೋ ಕಳೆದುಕೊಂಡಂತೆ. ಪ್ರಸವದ ನಂತರ ಮೊದಲ ಕೆಲವು ತಿಂಗಳುಗಳನ್ನು ಖುಷಿಯಾಗಿಸಲು ಮತ್ತು ಸುಲಭವಾಗಿಸಲು, ಈ ಉತ್ಪನ್ನಗಳನ್ನು ನೀವು ಖರೀದಿಸಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ಈ ವಸ್ತುಗಳಿಂದ ನಿಮ್ಮ ಜೀವನವನ್ನು ಸರಳವಾಗಿಸಬಹುದು.

೧. ಛಾಯಚಿತ್ರ ಸೆರೆ ವಸ್ತು(ಕ್ಯಾಮೆರಾ)

ಇದು ನಿಮ್ಮ ಮೊದಲ ಅಥವಾ ನಿಮ್ಮ ಎರಡನೆಯ ಅಥವಾ ನಿಮ್ಮ ಮೂರನೇ ಮಗು ಆಗಿರಲಿ, ಶಿಶುವಿನ ಜೊತೆ ನಿಮ್ಮ ಅಥವಾ ಶಿಶುವಿನ ಪ್ರಮುಖ ಕ್ಷಣಗಳನ್ನು ಪುನಃ ನೋಡಲು ಅದನ್ನು ಸೆರೆಹಿಡಿಯುವುದು ಒಂದು ಉತ್ತಮ ಯೋಚನೆಯಾಗಿದೆ. ಅಧ್ಬುತ  ಕ್ಷಣಗಳು ಯಾವಾಗಲೂ ಅನಿರೀಕ್ಷಿತವಾಗಿರುವುದರಿಂದ ಕ್ಯಾಮೆರಾವನ್ನು ನಿಮ್ಮ ಬಳಿ ಇಟ್ಟುಕೊಂಡಿರುವುದು ಆ ಅಧ್ಬುತ ಕ್ಷಣಗಳನ್ನು ಸೆರೆಹಿಡಿದು ಮುಂದಿನ ಭವಿಷ್ಯದಲ್ಲಿ ನೋಡಿ ಆನಂದಿಸಲು ಸಹಕಾರಿಯಾಗುತ್ತವೆ.

೨. ಡೈಪರ್

ನಿಮ್ಮ ಮಗುವಿಗಾಗಿ ಮತ್ತು ಅದರ ಆರೋಗ್ಯ ದೃಷ್ಟಿಯಿಂದಲೂ ಕೊಳ್ಳಬೇಕಾದ ವಸ್ತುವೆಂದರೆ, ಅದು ಡೈಪರ್. ನಿಮ್ಮ ಮನೆಯು ನಿಮ್ಮ ಮಗುವಿನ ಮೂತ್ರದಿಂದ ಕೊಳಚೆ ಗುಂಡಿಯಾಗಬಾರದೆಂದು ಖಾತರಿಮಾಡಿಕೊಳ್ಳಲು ನಿಮ್ಮ ಮಗುವಿಗಾಗಿ ಡೈಪರ್ ಗಳನ್ನು ಖರೀದಿಸುವುದು ಅತ್ಯಗತ್ಯವಾದ ಸಂಗತಿಗಳಲ್ಲಿ ಒಂದಾಗಿದೆ. ಬಟ್ಟೆ ಅಥವಾ ಒರೆಸಿ ಎಸೆಯುವ ಬಟ್ಟೆಗಳನ್ನು ಬಳಸುವುದರಿಂದ ಮನೆಯ ಶುಚಿತ್ವವನ್ನು ಕಾಪಾಡಿಕೊಳ್ಳುವ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮತ್ತು ಇದರಿಂದ ನಿಮಗೆ ಪದೆ ಪದೆ ಮನೆ ಅಥವಾ ಶಿಶು ಮೂತ್ರ ಮಾಡಿದ ಜಾಗವನ್ನು ಒರೆಸುವುದು ತಪ್ಪುತ್ತದೆ.

೩. ಮಗುವಿನ ಆಸನ

ಮಗುವನ್ನು ಹೊಂದಿರುವುದಕ್ಕಾಗಿ ನಿಮ್ಮ ಹೊರಗಡೆ ಪ್ರವಾಸವನ್ನು ನಿಲ್ಲಿಸಬೇಕೆಂದು ಅರ್ಥವಲ್ಲ. ಅದಕ್ಕಾಗಿ ಶಿಶು ಆಸನವನ್ನು ನಿಮ್ಮ ಕಾರಿನಲ್ಲಿ ಅಳವಡಿಸುವುದು ಮಗುವಿನ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು. ನೀವು ಎಲ್ಲಿಯಾದರೂ ಪ್ರವಾಸಕ್ಕೆ ತೆರಳುವಾಗ ನಿಮ್ಮ ಮಗುವನ್ನು ಶಿಶು ಆಸನದಲ್ಲಿ  ಬೀಳದಂತೆ ಅಥವಾ ಜಾರದಂತೆ  ಕೂರಿಸಿ ಕರೆದೊಯ್ಯಬಹುದು. ನಿಮ್ಮ ಕಾರಿನ ಆಸನದ ಪಟ್ಟಿಗೆ ಕಟ್ಟುವ ಪರ್ಯಾಯವಾಗಿ ಇದನ್ನು ಮಾಡಬಹುದು.

೪. ಶಿಶು ವಾಹಕ(ಬೇಬಿ ಕ್ಯಾರಿಯರ್)

ಇದು ನೀವು ಮತ್ತೆ ನಿಮ್ಮ ಶಾಲಾಚೀಲವನ್ನು(ಸ್ಕೂಲ್ ಬ್ಯಾಗ್) ಹೊತ್ತಿಕೊಂಡು ನಡೆದಂತೆ.  ಇದನ್ನು ಹೊರತುಪಡಿಸಿದರೆ, ನಿಮ್ಮ ಶಾಲಾಚೀಲವನ್ನು(ಸ್ಕೂಲ್ ಬ್ಯಾಗ್) ಹೊತ್ತಿರುವುದು, ಕೆಲವೊಮ್ಮೆ ಬೇಸರಗೊಳ್ಳುವಂತೆ ಮಾಡುತ್ತದೆ, ಅಥವಾ ನಿದ್ರೆ ಬರಬಹುದು. ನಿಮ್ಮ ಮಗುವಿನ ಹೆಸರಲ್ಲಿ ನಿಮ್ಮ ಮಹತ್ವದ ಕೆಲಸಗಳನ್ನು ಮುಂದುಡಬೇಡಿ, ಅಥವಾ ನಿಮ್ಮ ಮಗುವನ್ನು ನಿರ್ಲಕ್ಷಿಸ ಬೇಡಿ. ಬೇಬಿ ಕ್ಯಾರಿಯರ್ ಅನ್ನು ತಂದೆ ಮತ್ತು ತಾಯಿ ಇಬ್ಬರೂ ಉಪಯೋಗಿಸಬಹುದು, ಮತ್ತು ಇದರಿಂದ ನಿಮ್ಮ ಪ್ರಮುಖ ಕ್ಷಣಗಳನ್ನು ಆನಂದಿಸಬಹುದು.

೫. ಸ್ಟ್ರೋಲ್ಲರ್ (ಸಂಚಾರಿ ವಸ್ತು)

ನಿಮ್ಮ ಮಗುವನ್ನು ಎಲ್ಲೆಡೆ ಹೊತ್ತುಕೊಂಡು ಹೋಗುವುದು ಅಷ್ಟು ಹಿತಕರವಲ್ಲ ಎಂದು ನೀವು ಭಾವಿಸಿದರೆ, ಅದು ಸಂಪೂರ್ಣವಾಗಿ ಸರಿಯಾಗಿದೆ. ಒಂದು ಉತ್ತಮ ಸ್ಟ್ರೋಲ್ಲರ್ (ಸಂಚಾರಿ ವಸ್ತು), ನೀವು ಬೀದಿಗಳಲ್ಲಿ ಸಂಚರಿಸುವಾಗ ಅಥವಾ ದೈನಂದಿನ ಚಟುವಟಿಕೆಗಳನ್ನು ಪೂರೈಸುವಾಗ ನಿಮ್ಮ ಮಗುವು ಆರಾಮವಾಗಿ ನಿದ್ರಿಸಲು ಅಥವಾ ಕುಳಿತುಕೊಳ್ಳಲು ಸಹಾಯ ಮಾಡುತ್ತದೆ. ಯಾವುದೇ ಹಂತದಲ್ಲಿ ಸ್ಟ್ರೋಲ್ಲರ್ (ಸಂಚಾರಿ ವಸ್ತು)ಅನ್ನು ನಿರ್ಲಕ್ಷಿಸಬಾರದು ಅಥವಾ ಮರೆಯಬಾರದೆಂದು ಗಮನದಲ್ಲಿಟ್ಟುಕೊಳ್ಳಿ.

೬. ತೊಟ್ಟಿಲು

ನೀವು ಬಯಸುವ ಗಾಡ ನಿದ್ರೆಗೆ ಜಾರಲು ಬಹುಶಃ ಪ್ರತಿ ತಾಯಿಯೂ, ಅದರಲ್ಲೂ ಪ್ರಸವದ ನಂತರದ ಸಮಯದಲ್ಲಿ ಹೆಚ್ಚು ಬಯಸುತ್ತಾರೆ. ಆದರೆ ನೀವು ಮತ್ತು ನಿಮ್ಮ ಪತಿ ನಡುವೆ ನಿಮ್ಮ ಮುದ್ದು ಕಂದಮ್ಮ ಇರುವುದು ನಿಮಗೆ ಅದನ್ನು ಪಡೆಯಲು ಸ್ವಲ್ಪ ಕಷ್ಟವಾಗುತ್ತದೆ. ಒಂದು ತೊಟ್ಟಿಲು ಖರೀದಿಸಿ, ನಿಮ್ಮ ಮಗುವನ್ನು ಅದರಲ್ಲಿ ಮಲಗಿಸುವುದರಿಂದ, ಶಿಶುವು ನಿದ್ದೆಯಲ್ಲಿ ಕೆಳಗೆ ಬೀಳಬಹುದು, ಅಥವಾ ನೀವು ನಿದ್ರೆಯಲ್ಲಿ ಮಗು ಮೇಲೆ ಬೀಳಬಹುದು ಎಂಬ ಆತಂಕ ಇರುವುದಿಲ್ಲ, ಮತ್ತು ಆಕಸ್ಮಿಕವಾಗಿ ಮಗುವಿಗೆ ಯಾವುದೇ ತೊಂದರೆ ಆಗುವುದಿಲ್ಲವೆಂದು ನೆಮ್ಮದಿಯಿಂದ ನಿದ್ರಿಸಬಹುದು.

೭. ಶಿಶು ಒರೆಸು ಬಟ್ಟೆಗಳು(ಶುಭ್ರ ಬಟ್ಟೆ)

ನಿಮ್ಮ ಮಗುವನ್ನು ನೀರಿನಿಂದ ಶುಚಿ(ಜಳಕ) ಮಾಡಿಸುವುದು ಬಹಳಷ್ಟು ಸ್ಥಳಗಳಲ್ಲಿ ಮತ್ತು ಬಹಳಷ್ಟು ಸಂದರ್ಭಗಳಲ್ಲಿ ಅನುಕೂಲಕರವಾಗಿರುವುದಿಲ್ಲ. ಮತ್ತು ಮಗುವು ಆಹಾರ ಮಾಡುವಾಗ ತನ್ನ ಮೈ ಮೇಲೆ ಚೆಲ್ಲಿಕೊಳ್ಳಬಹುದು, ಇಂತಹ ಸಂದರ್ಭಗಳಲ್ಲಿ ಮಗುವನ್ನು ಶುಚಿ ಮಾಡಲು ಒರೆಸುವ ಬಟ್ಟೆಗಳನ್ನು ಯಾವಾಗಲೂ ನಿಮ್ಮ ಬಳಿ ಇರಿಸಿಕೊಂಡಿರುವುದು ಉತ್ತಮ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon