Link copied!
Sign in / Sign up
1
Shares

ಮೊದಲ ಬಾರಿ ತಾಯಿಯಾದವರ ಪ್ರಶ್ನಗಳಿಗೆ ಉತ್ತರ !

ಪಾಲಕರಾಗುವುದು ಜೀವನದ ಸುವರ್ಣ ಗಳಿಗೆ.ತಮ್ಮ ಅನುಭವ ಹಾಗೂ ವಿಚಾರಗಳನ್ನೆಲ್ಲ ಮಕ್ಕಳಿಗೆ ಧಾರೆ ಎರೆದು, ಅವರನ್ನು ಜೀವನದಲ್ಲಿ ಅದ್ಭುತ ಪ್ರಗತಿ ಪಥದತ್ತ ಮುನ್ನಡೆಸುವ ಸಮಯ. ಆದರೆ ಪಾಲಕರಾಗುವುದೆಂದರೆ, ಬಾಳೆ ಹಣ್ಣು ತಿನ್ನುವಷ್ಟು ಸುಲಭವಲ್ಲ.ಅವಿರತ ಪ್ರಯತ್ನ ಹಾಗೂ ಪರಿಶ್ರಮಗಳನ್ನು ಬೇಡುವ ಕಾಲ. ಅನುಭವ ಜ್ಞಾನವಿಲ್ಲದ ಕಾರಣ ಧುತ್ತನೆ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವುದು ಹೇಗೆಂದು ಅರಿಯಬೇಕಾದ ಕಾಲವೂ ಹೌದು. ಮಗುವು ಜನಿಸಿದ ಕೂಡಲೇ ಮನದಲ್ಲಿ ಹಲವಾರು ಪ್ರಶ್ನೆಗಳು ಮೂಡುತ್ತದೆ. ಸರಳ ಪ್ರಶ್ನೆಗಳಾದರೂ ಕೆಲವೊಮ್ಮೆ ಉತ್ತರ ಸಿಗುವುದೇ ಸಮಸ್ಯೆಯಾಗಿರುವುದರಿಂದ, ನಿಮ್ಮ ಪ್ರಶ್ನೆಗಳಿಗೆ ಇದರ ಅಮ್ಮಂದಿರು ಹೇಗೆ ಪರಿಹರಿಸಿದರೆಂದು ತಿಳಿಯೋಣ ಬನ್ನಿ.

೧.ಪ್ರತೀ ಬಳಕೆಯ ಬಳಿಕವೂ ಬಾಟಲಿಯನ್ನು ಸ್ಟಿರ್ಲೈಸ್ ಮಾಡಬೇಕೇ ?

ಬಾಟಲಿಯ ಒಳಗೂ ಹೊರಗೂ ಕಾಣಿಸಿಕೊಳ್ಳಬಹುದಾದ ಬ್ಯಾಕ್ಟೀರಿಯಾಗಳನ್ನು ಪೂರ್ಣ ರೂಪದಲ್ಲಿ ನಿಷ್ಕ್ರಿಯಗೊಳಿಸಲು ಸ್ಟೆರಿಲೈಸ್‍ನ ಅಗತ್ಯವಿದೆ.ಆದ ಕಾರಣ ಮಗುವಿನ ಹಾಲಿನ ಬಾಟಲಿಯನ್ನು ಪ್ರತಿ ಬಾರಿಯೂ ಸ್ಟಿರ್ಲೈಸ್ ಮಾಡಬೇಕೆಂದು ಉಪದೇಶಿಸಲಾಗಿದೆ. ಆದರೆ ಅದು ಅಷ್ಟೊಂದು ಕಾರ್ಯಸಾಧ್ಯವಲ್ಲದ ಕಾರಣ, ಹಗಲು ಹೊತ್ತಲ್ಲಿ ಸೋಪ್ ಉಪಯೋಗಿಸಿ ತೊಳೆಯಿರಿ; ಹಾಗೂ ರಾತ್ರಿಯಲ್ಲಿ ಸ್ಟೆರಿಲೈಸ್ ಮಾಡಿರಿ. ಇದರಿಂದ ರಾತ್ರಿ ವೇಳೆಯಲ್ಲಿ ಬಾಟಲಿಗಳ‍ಲ್ಲ ಬೆಳೆಯಬಹುದಾದ ಮೈಕ್ರೋಬ್‍ಗಳನ್ನು ತಡೆಯಬಹುದು.

೩.ಹಸುರು ಬಣ್ಣದ ವಿಸರ್ಜನೆ ಸಾಧಾರಣವೇ ?

ಮಗುವಿನ ಮಲವಿಸರ್ಜನೆಯ ಬಣ್ಣವೂ ತಾಯಿಯರಿಗೆ ಆತಂಕವನ್ನುಂಟು ಮಾಡುವಂತಹವುಗಳೇ.... ತಾಯಿಯರೇ ನಿರಾತಂಕವಾಗಿರಿ...! ಹಸಿರು ಬಣ್ಣದ ವಿಸರ್ಜನೆಯೂ ಅತ್ಯಂತ ಮಾಮೂಲು. ಮೊಲೆ ಹಾಲಿಗೆ ಅಥವಾ ಡಬ್ಬಿ ಹಾಲಿಗೆ ಅನುಗುಣವಾಗಿ ವಿಸರ್ಜನೆಯ ಬಣ್ಣದ ವ್ಯತಿಯಾನವೂ ಬದಲಾಗುವುದು. ಬಿಳಿ, ಕಪ್ಪು ಅಥವಾ ಕೆಂಪು ಬಣ್ಣಗಳಲ್ಲಿ ವಿಸರ್ಜಿಸುತ್ತಿದ್ದರೆ, ನೀವು ಮಗುವಿನ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರ ವಹಿಸಬೇಕೆಂಬ ಸೂಚನೆಯಾಗಿರುವುದು.

೩.ಹಗಲು ರಾತ್ರಿಯ ಬದಲಾವಣೆ ಮಗುವಿಗೆ ತಿಳಿಯುವುದೇ ?

ಹಗಲು ರಾತ್ರಿಯ ಬದಲಾವಣೆ ಅರಿಯದ ಮಗುವು ರಾತ್ರಿಯಿಡೀ ಜಾಗರಣೆ ಮಾಡಿ ಹಗಲು ಹೊತ್ತಿನಲ್ಲಿ ಕುಂಭಕರ್ಣನಂತೆ ನಿದ್ರೆ ಮಾಡುವುದಿದೆ. ಮಗುವು ತನ್ನ ಸುತ್ತಲ ಪ್ರಪಂಚವನ್ನು ಇನ್ನೂ ಅರಿಯಬೇಕಿದೆ. ಆದ ಕಾರಣ, ಹಗಲು ಹೊತ್ತಲ್ಲಿ ಮಗುವಿಗೆ ಬೆಳಗಿನ ಪರಿಚಯ ನೀಡಿ; ಮಗುವಿನೊಂದಿಗೆ ಆಟವಾಡಿ ರಾತ್ರಿ ಹೊತ್ತಲ್ಲಿ ಮಗುವನ್ನು ಮಲಗಿಸಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ಮಗುವಿನ ಶರೀರವು ಪ್ರಕೃತಿಗೆ ಹೊಂದಿಕೊಳ್ಳುವುದು.

೪.“ಮಲಗಿದ ಮಗುವನ್ನು ಎಚ್ಚರಗೊಳಿಸಬಹುದೇ ?”

ಯಾವ ಕಾರಣಕ್ಕಾಗಿ ನೀವು ಮಗುವನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದೀರಿ-ಎನ್ನುವುದಕ್ಕೆ ಅನುಗುಣವಾಗಿ ಈ ಪ್ರಶ್ನೆಯ ಉತ್ತರ ಬದಲಾಗುತ್ತದೆ. ಮಗುವಿಗೆ ಇರುಸುಮುರಿಸಾಗುವಂತಹ ಇಂತಹ ಪ್ರವೃತ್ತಿಗಳಿಂದ ಮಗುವು ದಿನವಿಡೀ ಕಿರಿಕಿರಿಯನ್ನು ಅನುಭವಿಸುವುದು.ಆದರೆ ಮಗುವಿಗೆ ಉಣಿಸಲಿರುವ ಸಮಯವಾದರೆ ಎಬ್ಬಿಸಲೇ ಬೇಕಲ್ಲವೇ...?

೫.“ದಿನವಿಡೀ ಮಗುವನ್ನು ಎತ್ತಿಕೊಂಡಿರಬೇಕೇ ?”

ವಿಕಾಸವಾದದ ಅನುಗುಣವಾಗಿ ಮಕ್ಕಳು ಎತ್ತಿ ಕೊಳ್ಳಬೇಕಾದವರೆ...! ಹಾಗಾಗಿ ಅಲ್ಲವೇ ಅವರು ಅಷ್ಟೊಂದು ಮುದ್ದಾಗಿರುವುದು. ದಿನವಿಡೀ ಮಗುವನ್ನು ಎತ್ತಿಕೊಳ್ಳುವುದರಿಂದ ಯಾವುದೇ ಹಾನಿ ಇಲ್ಲ ಬದಲಿಗೆ ಮಗುವು ನಿಮ್ಮಲ್ಲಿ ಭಾವನಾತ್ಮಕವಾಗಿ ಬಂಧಿಸಲ್ಪಡುವುದು. ಆದರೆ ರಾತ್ರಿಯಲ್ಲಿ ಮಗುವನ್ನು ತಬ್ಬಿಕೊಂಡು ಮಲಗಿದರೆ ಮುಂದೆ ಮಗುವಿಗೆ ತನ್ನಷ್ಟಕ್ಕೆ ಮಲಗಲು ತೊಂದರೆಯಾಗುತ್ತದೆ. ಹಗಲಿಡೀ ಮಗುವನ್ನು ಎತ್ತಿಕೊಂಡಿದ್ದರೂ ರಾತ್ರಿಯಾಗುತ್ತಿದ್ದಂತೆಯೇ ಮಗುವನ್ನು ತನ್ನಷ್ಟಕ್ಕೆ ತಾವೇ ಮಲಗಲು ಅನುಮತಿಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon