Link copied!
Sign in / Sign up
18
Shares

ಕೇವಲ ಕೆಲವು ಪಾಯಿಂಟ್ಸ್ ಮೇಲೆ ತಟ್ಟುವ ಮೂಲಕ ಶಕ್ತಿ, ಏಕಾಗ್ರತೆ, ಸಂಕಲ್ಪ ಹೆಚ್ಚಿಸಿಕೊಳ್ಳಿ ಹೀಗೆ !

ಇದನ್ನ ಎಮೋಷನಲ್ ಫ್ರೀಡಂ ಟೆಕ್ನಿಕ್ (EFT) ಅಥವಾ ಭಾವನಾತ್ಮಕ ಸ್ವಾತಂತ್ರ್ಯ ತಂತ್ರ ಎನ್ನುತ್ತಾರೆ. ಇದು ತುಂಬಾ ಸರಳ ಮತ್ತು ತುಂಬಾ ಪರಿಣಾಮಕಾರಿ. ಆದರೆ ಇದು ಹೇಗೆ ಕೆಲಸ ಮಾಡುತ್ತದೆ? ಬಹುಷಃ ನೀವು ಆರೋಗ್ಯದ ಸಮಸ್ಯೆಗಳಿಗೆ ಆಕ್ಯುಪಂಕ್ಚರ್ ಮಾಡಿಸುವುದನ್ನ ಕೇಳಿರುತ್ತೀರಾ. ಆದರೆ ನೀವು ಸೂಜಿಗಳನ್ನ ಕಂಡರೆ ಬೆಚ್ಚಿ ಬೀಳುತ್ತೀರ ಎಂದರೆ, ನಿಮಗೆ ಇದು ಒಂದು ವರದಾನವೇ. ನೀವು ಕೇವಲ ನಿಮ್ಮ ಬೆರಳುಗಳ ಅಂಚಿನಿಂದ ತಟ್ಟಿಕೊಳ್ಳುವುದರಿಂದ ನೀವು ಆಕ್ಯುಪಂಕ್ಚರ್ ಇಂದ ಪಡೆಯುತ್ತಿದ್ದ ಒತ್ತಡ-ನಿವಾರಕ, ಅರೋಗ್ಯ-ವೃಧ್ಹಿಸುವ ಉಪಯೋಗಗಳನ್ನೇ ಪಡೆದುಕೊಳ್ಳುತ್ತೀರ.


ಹೀಗಾಗಿ ನಿಮಗೆ ಮುಂದಿನ ಬಾರಿ ಸುಸ್ತು, ಒತ್ತಡ, ಜಡತ್ವ ಅನುಭವ ಆದರೆ, ನೀವು ಈ EFTಯನ್ನ ಪ್ರಯೋಗಿಸಬೇಕು. ಕೆಲವೇ ಕೆಲವು ನಿಮಿಷಗಳ ನಂತರ ನಿಮಗೆ ತುಂಬಾ ಉತ್ತಮವೆನಿಸುತ್ತದೆ, ಅದು ಕೂಡ ಹೆಚ್ಚು ಶ್ರಮ ಇಲ್ಲದೆಯೇ. ಅಷ್ಟೇ ಅಲ್ಲದೆ, ಆತಂಕ ಆದಾಗ ಅದನ್ನ ನಿಭಾಯಿಸಲು ನೀವು ನಿಮ್ಮ ಜೀವನದಲ್ಲಿ ಮತ್ತೊಂದು ಆಯುಧವನ್ನ ಪಡೆದುಕೊಂಡಂತೆ ಆಗುತ್ತದೆ.


೧. ಆತಂಕಕ್ಕೆ ಒಳಗಾದಾಗ ಕಣ್ಣಿನ ಕೆಳಗಡೆ ಬೆರಳಿನಿಂದ ತಟ್ಟಿಕೊಳ್ಳಿ

ಯಾವುದಾದರು ತುಂಬಾ ಒತ್ತಡದ ಸನ್ನಿವೇಶವನ್ನ ಎದುರಿಸುತ್ತಿದ್ದೀರಾ? ಉದಾಹರಣೆಗೆ ಕೆಲಸದ ಇಂಟರ್ವ್ಯೂ ಅಥವಾ ಯಾರನ್ನೋ ಮಾತಾಡಿಸುವಾಗ ಒತ್ತಡಕ್ಕೆ ಸಿಲುಕಬಹುದು. ಅಂತಹ ಸಮಯದಲ್ಲಿ ನೀವು ನಿಮ್ಮ ಕಣ್ಣಿನ ಕೆಳಗಡೆಯೇ ಇರುವ ಮೂಳೆಯ ಅಂಚನ್ನು ತಟ್ಟಿಕೊಳ್ಳಿ. ಸುಮಾರು 80% ಅಷ್ಟು ಜನರು ಇದನ್ನ ಮಾಡುವುದರ ಮೂಲಕ ತ್ವರಿತ ಆರಾಮ ಪಡೆದುಕೊಳ್ಳುತ್ತಾರೆ. ಈ ಭಾಗವು ಹೊಟ್ಟೆಯೊಂದಿಗೆ ವ್ಯವಹರಿಸುತ್ತದೆ. ಆತಂಕಕ್ಕೆ ಸಂಬಂಧಪಟ್ಟ ಬಹುತೇಕ ಲಕ್ಷಣಗಳು ದೈಹಿಕವಾಗಿ ಅನುಭವವಾಗುವುದು ಹೊಟ್ಟೆಯಲ್ಲೇ. ಹೀಗಾಗಿ ನೀವು ಆ ಕಣ್ಣಿನ ಕೆಳಗಿನ ಮೂಳೆಯ ಅಂಚಿನ ಮೇಲೆ ತಟ್ಟಬೇಕು.


೨. ಶಕ್ತಿಗಾಗಿ ಮೂಗಿನ ಕೆಳಗಿನ ಭಾಗವನ್ನ ಬೆರಳುಗಳಿಂದ ತಟ್ಟಿಕೊಳ್ಳಿ

ನಿಮ್ಮ ಮೂಗು ಮತ್ತು ಮೇಲಿನ ತುಟಿಯ ನಡುವಿನ ಜಾಗವನ್ನ (ಈ ಜಾಗವನ್ನ ರಿವೈವಲ್ ಪಾಯಿಂಟ್ ಎನ್ನುವರು) ತಟ್ಟಿಕೊಳ್ಳುವುದರಿಂದ ಮೆದುಳಿಗೆ ರಕ್ತ ಮತ್ತು ಆಮ್ಲಜನಕದ ಹರಿವು ಹೆಚ್ಚಾಗಿ, ನಿಮಗೆ ದಿಢೀರ್ ಆಗಿ ಶಕ್ತಿ ನೀಡುತ್ತದೆ. ಕೇವಲ ಶಕ್ತಿ ಒಂದೇ ನೀಡುತ್ತದೆ ಎಂಬ ಕಾರಣಕ್ಕೆ ಆ ಜಾಗಕ್ಕೆ ರಿವೈವಲ್ ಪಾಯಿಂಟ್ ಎಂದು ಕರೆಯುವುದಿಲ್ಲ. ಅದಕ್ಕೆ ಇನ್ನೊಂದು ಕಾರಣ ಇದೆ, ಅದೇನೆಂದರೆ, ಯಾರಾದರೂ ಪ್ರಜ್ಞೆ ತಪ್ಪಿ ಬಿದ್ದರೆ ಅವರಿಗೆ ಪುನಃ ಪ್ರಜ್ಞೆ ವಾಪಸ್ ತರಿಸಲು ಪ್ರಥಮ ಚಿಕಿತ್ಸಾ ತಂತ್ರವಾಗಿ ಈ ಜಾಗವನ್ನ ಒತ್ತುತ್ತಾರೆ.


೩. ನಿಮ್ಮ ಏಕಾಗ್ರತೆ ಹೆಚ್ಚಿಸಿಕೊಳ್ಳಲು ಹುಬ್ಬಿನ ಮೇಲೆ ತಟ್ಟಿಕೊಳ್ಳಿ

ನಿಮ್ಮ ಕಣ್ಣಿನ ಮೇಲೆಯೇ, ಅಂದರೆ ನಿಮ್ಮ ಹುಬ್ಬಿನ ಕೆಳ ಅಂಚಿನ ಜಾಗವು ಕಣ್ಣು ಮತ್ತು ಮೆದುಳು ನಡುವೆ ಹರಿದಾಡುವ ನರಗಳ ಮೇಲೆ ಪ್ರಭಾವ ಬೀರುತ್ತದೆ. ಸಂಶೋಧಕರ ಪ್ರಕಾರ ನೀವು ಆ ಜಾಗವನ್ನ ತಟ್ಟುವುದರ ಮೂಲಕ ನಿಮ್ಮ ಕಣ್ಣಿನ ನೋವು, ತಲೆನೋವು ಶಮನ ಮಾಡುತ್ತದೆ ಮತ್ತು ಅದರೊಂದಿಗೆ ನಿಮ್ಮ ಏಕಾಗ್ರತೆ ಮತ್ತು ಮಾನಸಿಕ ಚಟುವಟಿಕೆಗಳನ್ನ ವೃದ್ಧಿಸುತ್ತದೆ. ಇಷ್ಟೇ ಅಲ್ಲ, ಜಪಾನ್ ದೇಶದಲ್ಲಿ ನಡೆದ ಒಂದು ಅಧ್ಯಯನದಲ್ಲಿ ಈ ಜಾಗವನ್ನ ತಟ್ಟುವುದರ ಮೂಲಕ ಬುದ್ಧಿಮಾಂದ್ಯತೆ ಹೊಂದಿರುವ ರೋಗಿಗಗಳಲ್ಲೂ ಅಲ್ಪಾವಧಿ ನೆನಪಿನ ಶಕ್ತಿಯನ್ನ ಹೆಚ್ಚಿಸಬಹುದು ಎಂಬುದು ತಿಳಿದು ಬಂದಿದೆ.


೪. ನಿಮ್ಮ ಕಾಲರ್ ಮೂಳೆ (ಜತ್ರು) ಮೇಲೆ ತಟ್ಟಿಕೊಂಡು ಇಚ್ಛಾಶಕ್ತಿ ಹೆಚ್ಚಿಸಿಕೊಳ್ಳಿ

ನಿಮ್ಮ ಕಾಲರ್ ಮೂಳೆಯ ಕೆಳಗಿರುವ ಮಾಂಸ ತುಂಬಿದ ಭಾಗವು ಮೆದುಳಿನ ಹೈಪೊಥಾಲಮಸ್ ಅನ್ನು ಸಕ್ರಿಯಗೊಳಿಸುತ್ತದೆ. ಈ ಭಾಗವೇ ಮೆದುಳಲ್ಲಿ ಭಾವನೆಗಳನ್ನ ನಿಯಂತ್ರಿಸುವ ಕೇಂದ್ರ. ಇದುವೇ ನಿಮ್ಮ ಆಸೆ, ಬಯಕೆಗಳು, ಚಟಗಳು - ಚಾಕಲೇಟ್ ಇಂದ ಹಿಡಿದು ಸಿಗರೆಟ್ ವರೆಗೆ ನಿಯಂತ್ರಿಸುವುದು. ನೀವು ತೂಕ ಕಳೆದುಕೊಳ್ಳಬೇಕು ಎಂದುಕೊಂಡಾಗ ನಿಮ್ಮ ಮುಂದೆ ಯಾರಾದರೂ ಚಾಕಲೇಟ್ ಅಥವಾ ಇನ್ಯಾವುದೋ ಫಾಸ್ಟ್ ಫುಡ್ ತಂದು ಇಟ್ಟರೆ, ನೀವು ನಿಮ್ಮ ನಿಯಂತ್ರಣ ಕಳೆದುಕೊಂಡು ತಿನ್ನಬಾರದು ಎಂದರೆ ಮೇಲೆ ಹೇಳಿದಂತೆ ತಟ್ಟಿಕೊಳ್ಳಿ. ಇದು ನಿಮ್ಮ ಇಚ್ಛಾಶಕ್ತಿಯನ್ನ ಹೆಚ್ಚಿಸುತ್ತದೆ.


೫. ಸೆಳೆತವನ್ನ ಕಡಿಮೆ ಮಾಡಲು ಕೆಳಗಿನ ತುಟಿಯ ಕೆಳಗೆ ಒತ್ತಿಕೊಳ್ಳಿ

ನರಗಳು ಗಂಟಿಕ್ಕಿವೆಯೇ? ಕತ್ತು ಹಿಡಿದುಕೊಂಡಿದೆಯೇ? ನಿಮ್ಮ ಕೆಳಗಿನ ತುಟಿಯ ಕೆಳಗೆ ಅಂದರೆ ಗಲ್ಲದ ಮೇಲ್ಭಾಗದಲ್ಲಿ ತಟ್ಟುವುದರ ಮೂಲಕ, ನಿಮಗೆ ಕ್ಷಣಗಳಲ್ಲಿಯೇ ಆರಾಮ ಸಿಗುತ್ತದೆ. ಈ ಪಾಯಿಂಟ್ ಅಲ್ಲಿ ಒತ್ತುವುದರ ಮೂಲಕ ನೀವು ಮುಖ ಮತ್ತು ಕತ್ತಿನ ಸ್ನಾಯುಗಳು ಗಂಟಿಕ್ಕಿಕೊಂಡಿರುವುದನ್ನ ಬಿಡಿಸಬಹುದು. ನಾವು ಈ ಸ್ನಾಯುಗಳಲ್ಲೇ ಹೆಚ್ಚು ಒತ್ತಡ ಮತ್ತು ಟೆನ್ಶನ್ ಅನ್ನು ಶೇಖರಿಸಿ ಇಡುವುದು. ಅಷ್ಟೇ ಅಲ್ಲದೆ ನಿಮಗೆ ನೋವು ಆಗುತ್ತಿದೆ ಎಂದು ನಿಮ್ಮ ಮೆದುಳಿಗೆ ತಿಳಿಸುವ ನರಗಳನ್ನೇ ಇದು ತಡೆಗಟ್ಟುತ್ತದೆ ಮತ್ತು ಆರಾಮ ನೀಡುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon