Link copied!
Sign in / Sign up
16
Shares

ಮಗುವಿಗೆ ತರಕಾರಿ ತಿನ್ನಿಸುವ ಬಗೆ

ತರಕಾರಿಗಳು ಮಕ್ಕಳಿಗೆ ಅತ್ಯಪೂರ್ವವಾದ ಆರೋಗ್ಯವನ್ನು ನೀಡುತ್ತದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಮಾಂಸಾಹಾರಿಗಳಾದ ಮಕ್ಕಳಿಗಿಂತ, ಸಸ್ಯಾಹಾರಿಗಳು ದೃಢಕಾಯ ಹಾಗೂ ಆರೋಗ್ಯವಾಗಿರುವರೆಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಮೊತ್ತಮೊದಲಿಗೆ, ಮಕ್ಕಳಿಗೆ ಆಹಾರವನ್ನು ಹೇಗೆ ನೀಡಬೇಕೆಂದು ಪಾಲಕರು ತಿಳಿದುಕೊಳ್ಳಬೇಕು.

ಜನಿಸಿದ ಕೆಲವು ತಿಂಗಳುಗಳವರೆಗೆ ಮಗುವಿನ ಜೀರ್ಣಾಂಗವ್ಯೂಹವು, ತಾಯಿಯ ಎದೆಹಾಲನ್ನಲ್ಲದೇ ಬೇರೇನನ್ನೂ ಜೀರ್ಣಿಸಲು ಅಸಮರ್ಥವಾಗಿರುವ ಕಾರಣ ಮಗುವಿನ ಆರೋಗ್ಯಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ತಾಯಿಯ ಎದೆಹಾಲಿನಿಂದಲೇ ಲಭ್ಯವಾಗುವುದು.

೪-೬ ತಿಂಗಳುಗಳಿಗೆ ಕಾಲಿಡುತ್ತಿದ್ದಂತೆಯೇ, ಇತರ ಆಹಾರಗಳನ್ನು ನೀಡಬಹುದೆಂಬ ಮಾತ್ರಕ್ಕೆ ಎದೆಹಾಲನ್ನು ನಿಲ್ಲಿಸಬಹುದೆಂಬ ಭಾವನೆಯೇನೂ ಬೇಡ.

ಎದೆಹಾಲನ್ನು ಉಣಿಸುವುದರೊಂದಿಗೇ, ಇತರ ಆಹಾರಗಳನ್ನು ಕೂಡ ಪರಿಚಯ ಮಾಡಿಸಬಹುದು. ಮಗುವಿಗೆ ನೀಡುವ ಆಹಾರವು ಚೆನ್ನಾಗಿ ಹಿಚುಕಿ, ಪ್ಯೂರಿ ರೂಪದಲ್ಲಿ ನೀಡುವಂತೆ ಪ್ರತ್ಯೇಕವಾಗಿ ಗಮನಿಸಬೇಕು.

ಸಸ್ಯಾಹಾರಿಗಳಿಗೆ, ಚೆನ್ನಾಗಿ ಕಳಿತ ಹಣ್ಣುಗಳು ಮತ್ತು ಚೆನ್ನಾಗಿ ಬೇಯಿಸಿ, ಹಿಚುಕಿದ ತರಕಾರಿಗಳನ್ನು ಸೇವಿಸಲು ನೀಡಬಹುದು. ನೀಡಿದ ಆಹಾರದಲ್ಲಿ, ಮಗುವಿಗೆ ಅತ್ಯಗತ್ಯವಾದ ಕಬ್ಬಿಣ ಮತ್ತು ಸತುವಿನ ಸತ್ವವನ್ನು ಒಳಗೊಂಡಿದೆಯೆಂದು ಖಾತ್ರಿ ಪಡಿಸಿಕೊಳ್ಳಬೇಕು. ಇವುಗಳು ಧಾನ್ಯಗಳು, ಹಾಗೂ ಕೆಲವು ತರಕಾರಿಗಳಲ್ಲಿ ಹೇರಳವಾಗಿ ಕಾಣಲ್ಪಡುವುದು. ನೀವು ನೀಡುವ ಪ್ರಮಾಣವು ಮಗುವು ತಿನ್ನಲು ಸಮರ್ಥವಾಗಿಲ್ಲವೆಂದೆನಿಸಿದರೆ, ಅದರ ಅನುಪಾತವನ್ನು ಕಡಿಮೆಗೊಳಿಸಿರಿ.

ನಿಮ್ಮ ಮಗುವು ಖಡಾಖಂಡಿತವಾಗಿಯೂ ಸೇವಿಸಲೇಬೇಕಾದ ಪೋಷಕಾಂಶಗಳು

೧.ಶರ್ಕರಪಿಷ್ಟ

ಧಾನ್ಯಗಳು, ಬೀನ್ಸ್ ಮತ್ತು ಇತರ ತರಕಾರಿಗಳಲ್ಲಿ ಧಾರಾಳವಾಗಿ ಕಂಡುಬರುವ ಶರ್ಕರಪಿಷ್ಟವು ಶರೀರಕ್ಕೆ ಅಗತ್ಯವಾದ ಚೈತನ್ಯವನ್ನು ನೀಡುತ್ತದೆ.

೨.ನಾರು (ಫೈಬರ್)

ಬೇಳೆಗಳು, ಹಣ್ಣುಗಳು, ಬ್ರೆಡ್, ಜೋಳ ರಾಗಿ ಮತ್ತು ಇತರ ಆಹಾರಗಳಲ್ಲಿ ಹೇರಳವಾಗಿರುವ ನಾರಿನ ಅಂಶವು ಮಗುವಿನ ಜೀರ್ಣಾಂಗವ್ಯೂಹವು ಸರಿಯಾಗಿ ಪ್ರವರ್ತಿಸುವಂತೆ ಸಹಾಯ ಮಾಡಲು ಅಗತ್ಯವಾಗಿದೆ.

೩.ಪ್ರೊಟೀನ್

ಶರೀರದ ಸಾಮಾನ್ಯ ಬೆಳವಣಿಗೆಗೆ ಅಗತ್ಯವಾದರೂ ಹೆಚ್ಚಿನ ಪ್ರಮಾಣದ ಪ್ರೋಟಿನ್‍ನ ಅಗತ್ಯವಿಲ್ಲ. ಗೇರು ಬೀಜಗಳು, ನೆಲಗಡಲೆ, ಸೋಯಾ ಉತ್ಪನ್ನಗಳು, ಧಾನ್ಯಗಳು,ಜೋಳ ಮತ್ತು ಹಾಲಿನ ಉತ್ಪನ್ನಗಳ ಸೇವನೆಯಿಂದ ಹೇರಳವಾಗಿ ಪ್ರೋಟಿನ್ ಲಭ್ಯವಾಗುವುದು.

೪.ಕಬ್ಬಿಣ

ಶರೀರದಲ್ಲಿ ಆಮ್ಲಜನಕದ ಸಾಗಾಟಕ್ಕೆ ಅಗತ್ಯವಾದ ಹಿಮೋಗ್ಲೋಬಿನ್‍ನ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕಬ್ಬಿಣವು, ಹಸಿರೆಲೆ ತರಕಾರಿಗಳು, ಬೇಳೆಗಳು ಧಾನ್ಯಗಳಿಂದ ತಯಾರಿಸಿದ ಉಪಹಾರಗಳನ್ನು ನೀಡಿ ಮಗುವು ಯಥೇಚ್ಛವಾದ ಕಬ್ಬಿಣದ ಅಂಶವನ್ನು ಪಡೆದುಕೊಳ್ಳುತ್ತದೆ ಎಂದು ಖಾತರಿಪಡಿಸಿಕೊಳ್ಳಿ.

೫.ವಿಟಮಿನ್ ಬಿ-೧೨

ಕೆಂಪು ರಕ್ತಕಣಗಳ ಉತ್ಪಾದನೆ, ಆಹಾರದಿಂದ ಚೈತನ್ಯದ ಬಿಡುಗಡೆ ಮತ್ತು ಫೋಲಿಕ್ ಆ್ಯಸಿಡ್‍ನ ಉತ್ಪಾದನೆಯಲ್ಲಿ ಸಹಾಯವೆಸಗುವ ವಿಟಮಿನ್ ಬಿ ಹಾಲಿನ ಉತ್ಪನ್ನಗಳು,ಧಾನ್ಯಗಳು,ಬೇಳೆಗಳ ಸೇವನೆಯಿಂದ ಲಭ್ಯವಾಗುತ್ತದೆ.

೬.ಕೊಬ್ಬು

ಮಕ್ಕಳ ಬೆಳವಣಿಗೆಗೆ ಹಾಗೂ ಮೆದುಳಿನ ವಿಕಸನಕ್ಕೆ ಸ್ವಲ್ಪ ಪ್ರಮಾಣದ ಕೊಬ್ಬಿನ ಅಗತ್ಯವಿದೆ.ಅವಗಾಡೊ, ಸೋಯಾ ಬೀನ್ಸ್, ಚೀಸ್, ಹಾಲಿನ ಉತ್ಪನ್ನಗಳು ಪೀನಟ್ ಬಟರ್ ಮತ್ತು ಇತರ ಆಹಾರ ಪದಾರ್ಥಗಳಲ್ಲಿ ಕೊಬ್ಬಿನ ಸಂಗ್ರಹವಿದೆ.

೭.ಕ್ಯಾಲ್ಷಿಯಂ

ಎಲುಬಿನ ಬೆಳವಣಿಗೆಗೆ ಅಗತ್ಯವಾದ ಕ್ಯಾಲ್ಷಿಯಂಗಳು, ಹಾಲಿನ ಉತ್ಪನ್ನಗಳು, ಹಸಿರು ತರಕಾರಿಗಳು, ಸಿಹಿ ಗೆಣಸು, ಅಕ್ಕಿ ಮತ್ತು ಹಾಲಿನ ಸೇವನೆಯಿಂದ ಲಭಿಸುತ್ತದೆ.

ಪ್ರಾರಂಭಿಕ ಹಂತಗಳಲ್ಲಿ ಅಕ್ಕಿ, ಓಟ್ಸ್ ಮತ್ತು ಬಾರ್ಲಿಗಳಂತಹ ಧಾನ್ಯಗಳನ್ನು ಹಾಲಿನೊಂದಿಗೆ ಬೆರೆಸಿ ಮಕ್ಕಳಿಗೆ ನೀಡಬಹುದು. ನಂತರ ತರಕಾರಿಗಳು ಹಾಗೂ ಹಣ್ಣಿನ ಪ್ಯೂರಿಗಳನ್ನು ಮಗುವಿಗೆ ಪರಿಚಯಿಸಬಹುದು. ಮಗುವು ಸ್ವತಃ ತಿನ್ನಲು ಪ್ರಾರಂಭಿಸುತ್ತಿದ್ದಂತೆಯೇ, ಬ್ರೆಡ್ ಹಾಗೂ ಧಾನ್ಯಗಳನ್ನು ಸೇವಿಸಲು ನೀಡಬಹುದು ಮಗು ತನ್ನಿಂದ ತಾನೇ ಬಯಸಿ ತಿನ್ನುವವರೆಗೂ ತಾಳ್ಮೆಯಿಂದ ಕಾಯಬೇಕೆಂದು ತಾಯಿಯರಿಗೆ ಕಿವಿಮಾತು. ಮಕ್ಕಳು ತಿನ್ನಬೇಕೆಂದು ನೀವು ಬಯಸುವ ಆಹಾರವನ್ನು ಆಯ್ಕೆ ಮಾಡಿ ಅದನ್ನು ಸೇವಿಸಲಿರುವ ಸ್ವಾತಂತ್ರ್ಯವನ್ನು ಮಗುವಿಗೆ ನೀಡಿರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon