Link copied!
Sign in / Sign up
16
Shares

ತಂದೆಯರು ಎದೆಹಾಲುಣಿಸುವ ಅಮ್ಮಂದಿರಿಗೆ ಈ ೬ ಮಾರ್ಗದಲ್ಲಿ ಬೆಂಬಲವನ್ನು ನೀಡಬಹುದು

ಎದೆಹಾಲುಣಿಸುವುದು ಒಂದು ಸವಾಲಿನ ಕೆಲಸ. ಏನು ಮಾಡಬೇಕೆಂದು ತಾಯಿಗೆ ತಿಳಿದಿದ್ದರೂ, ಅವರಿಗೆ ಸ್ವಲ್ಪ ಸಹಾಯದ ಅವಶ್ಯಕತೆ ಇರುತ್ತದೆ. ಇಲ್ಲಿ ತಂದೆಯಂದಿರು ಮೊಲೆಹಾಲುಣಿಸುವ ತಾಯಿಯರಿಗೆ ಸಹಾಯ ಮಾಡಲು ಧಾವಿಸಬಹುದು. ತಾಯಿ ಮತ್ತು ಮಗು ಇಬ್ಬರನ್ನು ಆರಾಮದಾಯಕವಾಗಿರಿಸಲು ಸಣ್ಣ ವಿಧಾನಗಳಿವೆ, ಮತ್ತು ಇದರಿಂದ ಮಗುವನ್ನು ಉತ್ತಮವಾಗಿ ಪೋಷಿಸಬಹುದು.

ಎದೆಹಾಲುಣಿಸುವ ಅಮ್ಮಂದಿರಿಗೆ, ಅಪ್ಪಂದಿರಾಗಿ  ಸಹಾಯ ಮಾಡಬಹುದಾದ 6 ವಿಧಾನಗಳು ಇಲ್ಲಿವೆ.,

೧. ದಿಂಬಿನ(ಪಿಲ್ಲೌ) ಸ್ಥಾನವನ್ನು ಸರಿಹೊಂದಿಸಿ

ಮಗುವಿಗೆ ಎದೆಹಾಲುಣಿಸುವಾಗ, ತಾಯಿಯು ವಿಶ್ರಾಂತಿ ಸ್ಥಿತಿಯಲ್ಲಿ ಕುಳಿತು ಉಣಿಸುವುದು ಸಹಜ ಮತ್ತು ಅದು ಒಳ್ಳೆಯದು, ಸರಿಯಾಗಿ ಪೋಷಿಸಲು ಸಾಧ್ಯವಾಗುವಂತೆ ತಲೆಯ ದಿಂಬನ್ನು(ಪಿಲ್ಲೌ) ಬೆಂಬಲಕ್ಕಾಗಿ ಸಾಮಾನ್ಯವಾಗಿ ತೆಗೆದುಕೊಳ್ಳುತ್ತಾರೆ. ಇದು ನೋಡಲು ಸುಲಭವಾಗಿ ಕಾಣುತ್ತದೆ, ಆದರೆ ಮಗುವನ್ನು ತನ್ನ ತೋಳಿನಲ್ಲಿರಿಸಿಕೊಂಡು ದಿಂಬನ್ನು ಸ್ಥಾನಕ್ಕೆ ಸರಿಹೊಂದಿಸಿಕೊಳ್ಳುವುದು ತಾಯಿಯಿಗೆ ಕಷ್ಟ. ಏಕಕಾಲದಲ್ಲಿ ಎರಡು ಕೆಲಸಗಳನ್ನು ಮಾಡುವುದು ತಾಯಿಗೆ ತುಂಬಾ ಕಷ್ಟದ ಕೆಲಸ. ತಂದೆಯಾಗಿ ಇಂತಹ ಸಂದರ್ಭದಲ್ಲಿ ದಿಂಬನ್ನು ಸರಿಯಾಗಿ ಹೊಂದಿಸಿಕೊಡುವಲ್ಲಿ ಸಹಾಯ ಮಾಡಿ, ಮತ್ತು ತಾಯಿ ಮತ್ತು ಮಗು ಇಬ್ಬರೂ ತಮ್ಮ ಸ್ಥಾನಗಳಲ್ಲಿ ಆರಾಮದಾಯಕರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ.

೨.ಹಾಲುಣಿಸಿದ ನಂತರ ಮಗುವನ್ನು ನೋಡಿಕೊಳ್ಳಿ

ಕೆಲವು ಮಕ್ಕಳು ಹಾಲು ಕುಡಿದ ನಂತರ ಅದನ್ನು ಸಂಪೂರ್ಣವಾಗಿ ಕುಡಿಯದೆ ಹೊರಹಾಕಬಹುದು(ಹಾಲು ಜಿನಿಗಿಸಿಕೊಳ್ಳಬಹುದು). ಅಂದರೆ ಹಾಲು ಬಾಯಿಂದ ಅನ್ನನಾಳದ ಮೂಲಕ ಜಠರ ಪ್ರವೇಶಿಸುವ ಬದಲು ಅದು ಹಿಮ್ಮುಕ ಗೊಳ್ಳಬಹುದು.ಎದೆಹಾಲುಣಿಸಿದ ನಂತರ ತಾಯಿ ಸ್ವಲ್ಪ ದಣಿದಿರಬಹುದು, ಆದ್ದರಿಂದ, ತಂದೆಯು ಮಗುವಿಗೆ ತೇಗು ಬರುವುದನ್ನು ಕಡಿಮೆಗೊಳಿಸಲು ಅಥವಾ ಹಾಲು ಹೊರ ಹಾಕುವುದನ್ನು ತಪ್ಪಿಸಲು, ಶಿಶುವಿನ ಬೆನ್ನನ್ನು ಮೆತ್ತಗೆ ಮೇಲ್ಬಾಗದಿಂದ ಕೆಳಗಡೆಗೆ ಅಂಗಮರ್ಧನ(ಸವರುವುದು) ಮಾಡುವುದು.

೩.ವಿಧಾನಗಳನ್ನು ಸೂಚಿಸುವ ಬದಲಾಗಿ ಸ್ತನ್ಯಪಾನವನ್ನು(ಮೊಲೆಹಾಲುಣಿಸಲು) ಮಾಡಿಸಲು ಪ್ರೋತ್ಸಾಹಿಸಿ

ನಿಮ್ಮ ಪ್ರೋತ್ಸಾಹದ ಮಾತುಗಳು ಅವರಲ್ಲಿ ದೀರ್ಘಕಾಲದವರೆಗೆ ದೈರ್ಯವನ್ನು ತುಂಬುತ್ತದೆ. ನಿಮ್ಮ ಶಿಶುವಿಗೆ ಎದೆಹಾಲುಣಿಸುವುದು ಸಾಮಾನ್ಯವಾದ ನೈಸರ್ಗಿಕ ಕ್ರಿಯೆ ಮತ್ತು ಆರೋಗ್ಯಕ್ಕೂ ಒಳ್ಳೆಯದು. ನಿಮ್ಮ ಪತ್ನಿ ಎದೆಹಾಲುಣಿಸಲು ನೀರ್ಧರಿಸಿದರೆ, ನೀವು ಯಾವುದೇ ಕಾರಣಕ್ಕೂ ಬಾಟಲಿ ಹಾಲು ಕುಡಿಸುವ ತಪ್ಪು ಸಲಹೆಯನ್ನು ನಿದಬೇಡಿ.ಎದೆಹಾಲುಣಿಸುತ್ತಿರುವುದಕ್ಕೆ ಅವಳಿಗೆ ಅಭಿನಂದಿಸಿ ಮತ್ತು ಇನ್ನಷ್ಟು ಪ್ರೋತ್ಸಾಹಿಸಿ.ಅವರನ್ನು ಪ್ರೇರೆಪಿಸುವುದರಿಂದ, ನೋಯುವ ಮೊಲೆತೊಟ್ಟು, ಊರಿಊತ ಮುಂತಾದ ತೊಂದರೆಗಳಿಂದ ಬೇಸರಗೊಳ್ಳದೆ ಎದೆಹಾಲುಣಿಸಲು ಪ್ರೇರೆಪಿತರಾಗುತ್ತಾರೆ.

೪.ಸಣ್ಣಪುಟ್ಟ ಮನೆಗೆಲಸವನ್ನು ಮಾಡಿಕೊಡಿ

ಹಾಲುಣಿಸುವ ಕಾರಣದಿಂದಾಗಿ ನಿಮ್ಮ ಹೆಂಡತಿಯು ದಣಿದಿರುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಅವರು ನಿದ್ರೆಯಿಂದ-ವಂಚಿತರಾಗುತ್ತಾರೆ. ಅವರಿಗೆ ಸಾಕಷ್ಟು ವಿಶ್ರಾಂತಿ ಕೊಟ್ಟು, ನೀವೇ ಮೆನೆಗೆಲಸವನ್ನು ಮಾಡುವುದು ಉತ್ತಮ. ಬಟ್ಟೆಯನ್ನು ಇಸ್ತ್ರಿಗೊಳಿಸುವುದು ಮುಂತಾದ ಕೆಲಸಗಳನ್ನು ಮಾಡಿ. ಕೆಲಸ ಮಾಡಲು ಅವರೊಡನೆ ವಾದಗಳನ್ನು ಮಾಡಬೇಡಿ. ರುಚಿಕರ ಅಡುಗೆ ಮಾಡಿ ನಿಮ್ಮ ನಡುವೆ ಆತ್ಮೀಯತೆ ಮತ್ತು ಬಾಂಧವ್ಯವನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಪತ್ನಿ ಇದನ್ನು ಖಂಡಿತವಾಗಿಯೂ ಗಮನಿಸಿ ನಿಮ್ಮನ್ನು ಅಭಿನಂದಿಸುತ್ತಾರೆ.

೫.ರಾತ್ರಿಯಲ್ಲಿ ಅವಳು ಎಚ್ಚರಗೊಂಡಾಗ ನೀವು ಅವಳ ಜೋತೆಯಿರಿ

ರಾತ್ರಿ ಅವಳು ಎಚ್ಚರಗೊಂಡಾಗಲ್ಲೆಲ್ಲಾ, ಹೊರಗಡೆ ಕೆಲಸ ಮಾಡಿ ದಣಿದು ಬಂದಿರುವ ನಿಮಗೆ ಪ್ರತಿರಾತ್ರಿ ಏಳುವುದು ಕಷ್ಟ, ಆದರೆ ಅವಳು ಮಗುವಿಗೆ ಎದೆಹಾಲುಣಿಸುವಾಗ ಕೆಲವು ರಾತ್ರಿ ಅವಳೊಡನೆ ಏಳುವುದು ಅವಳಿಗೆ ಧೈರ್ಯ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ. ಅವಳಿಗೆ ಆ ಸಮಯದಲ್ಲಿ ನೀರು, ಆಹಾರ ಅಥವಾ ಕಂಬಳಿ, ಅಥವಾ ಜೊತೆ ಇರುವುದನ್ನು ಬಯಸುತ್ತಿರುವರಾ ಎಂದು ಗಮನಿಸಿ(ಅಥವಾ ಅವರನ್ನು ಮಲಗಲು ಬಿಟ್ಟು, ನೀವು ಶಿಶುವಿಗೆ ಬಾಟಲಿ ಹಾಲನ್ನು ನೀಡಿ). ಕೆಲವು ನೈತಿಕ ಬೆಂಬಲವು ನಿಮ್ಮ ಕಠಿಣ ರಾತ್ರಿಗಳನ್ನು ಸುಲಭವಾಗಿಸಲು ಸಹಾಯ ಮಾಡುತ್ತದೆ.

೬.ಒಂದು ಸ್ತನ್ಯಪಾನದ ಸಮಾಲೋಚನೆ(/ತರಗತಿ)ಯನ್ನು ಒಟ್ಟಿಗೆ ತೆಗೆದುಕೊಳ್ಳಿ

ಎದೆಹಾಲುಣಿಸುವುದು ಮೇಲ್ನೋಟಕ್ಕೆ ಸುಲಭವಾದ ವಿಷಯ, ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಅದು ತುಂಬಾ ಕಠಿಣವಾಗಿರುತ್ತದೆ. ಅದರಲ್ಲೂ ಇದು ನಿಮ್ಮ ಮೊದಲ ಮಗುವಾಗಿದ್ದರೆ, ನೀವಿಬ್ಬರೂ ಅದರ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ನಿಮ್ಮ ಪತ್ನಿಯು ಗರ್ಭಿಣಿಯಾಗಿದ್ದ ಸಮಯದಲ್ಲಿ ನಿಮ್ಮ ಕೆಲಸದ ಯೋಗ ಎಷ್ಟು ಖುಷಿ ಇತ್ತು, ಅದನ್ನು ಇನ್ನು ಮುಂದೆ ಹೆಚ್ಚುತ್ತಾಹೊಗುತ್ತದೆ. ಇದರಿಂದ ನಿಮ್ಮ ಕುಟುಂಬದ ಬಾಂಧವ್ಯ ಹೆಚ್ಚುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon