Link copied!
Sign in / Sign up
51
Shares

ತನ್ನ ಮಗು ಹುಟ್ಟಿದಾಗ ಈ ತಂದೆಯು ಮಾಡಿದ್ದು ನೋಡಿದರೆ ನಿಮ್ಮ ಹೃದಯ ಕರಗುತ್ತದೆ

ಜನ್ಮ ನೀಡುವುದು ಎಂದೊಡನೆ, ಎಲ್ಲಾ ವೈಭವವು ತಾಯಿಯ ಪಾಲಾಗುತ್ತದೆ. ಆದರೆ ಅದಕ್ಕೆ ಸರಿಯಾದ ಕಾರಣವೂ ಇದೆ. ಅವರು ಆ ವೈಭವವನ್ನ ದಕ್ಕಿಸಿಕೊಂಡಿದ್ದಾರೆ. ಆದರೆ ಆಗಾಗ್ಗೆ ಒಮ್ಮೆ ನಾವು ನಮ್ಮ ದೃಷ್ಟಿಯನ್ನ ಬೇರೆಡ ಹರಿಸಿ, ತಂದೆಯರ ಕಡೆ ಗಮನ ನೀಡಬೇಕು.

ಜಾಯ್ಡೇನ್ ಫ್ರಯುಂಡ್ ಎಂಬ ಛಾಯಾಗ್ರಾಹಕ ಮಾಡಿದ್ದು ಇದನ್ನೇ! ಈಕೆಯು ಮಗುವಿನ ದೃಶ್ಯವನ್ನ ಸೆರೆಹಿಡಿಯಬೇಕೆಂದು ಕೆನಡಾದ ಒಂದು ಆಸ್ಪತ್ರೆಗೆ ಭೇಟಿ ನೀಡುತ್ತಾಳೆ. ಅಲ್ಲಿ ಜನ್ಮ ನೀಡುತ್ತಿದ್ದ ತಾಯಿಯು ಆಕೆಯ ಬದಲಿಗೆ ಆಕೆಯ ಪತಿಯ ಕಡೆ ಕ್ಯಾಮೆರಾವನ್ನ ತಿರುಗಿಸಲು ಕೇಳಿಕೊಂಡಳು. ನಂತರ ದೊರೆತ ಫಲಿತಾಂಶವೇ ಅದ್ಭುತ!

ಕಾರ್ಯಚರಣೆ ಯಶಸ್ವಿಯಾಯಿತೆ? ಬಹಳಷ್ಟು ಹೆರಿಗೆಗಳನ್ನ ಸೆರೆಹಿಡಿದಿರುವ ಜಾಯ್ಡೇನ್ ಹೇಳುವ ಪ್ರಕಾರ ಪ್ರತಿಯೊಂದು ತಾಯಿ ಹೇಗೆ ತನ್ನ ಹೆರಿಗೆಯನ್ನ ವಿಭಿನ್ನವಾಗಿ ಎದುರಿಸುತ್ತಾಳೋ, ಹಾಗೆಯೇ ಪ್ರತಿ ತಂದೆಯೂ ಪ್ರತಿಯೊಂದು ಮಗುವಿನ ಜನನವನ್ನ ವಿಭಿನ್ನವಾಗಿ ಅನುಭವಿಸುತ್ತಾರೆ. “ಕೆಲವೊಂದು ಬಾರಿ ತಮ್ಮ ಸಂಗಾತಿಯು ಅಷ್ಟೊಂದು ನೋವಿನಲ್ಲಿ ಇದ್ದರೂ ತನ್ನ ಕೈಯಿಂದ ಏನು ಮಾಡಲು ಆಗುತ್ತಿಲ್ಲವಲ್ಲ ಎಂದು ಅನಿಸಿದಾಗ, ಅವರು ಮಂಕಾಗಿ ಒಂದು ಮೂಲೆಯಲ್ಲಿ ಕೂತುಬಿಡುವರು” ಎಂದು ಆಕೆಯು ಹೇಳುತ್ತಾಳೆ. ಇನ್ನೂ ಕೆಲವೊಮ್ಮೆ ಅವರು ಪರಿಸ್ತಿತಿಗೆ ಹೆದರದೆ, ಧೃತಿಗೆಡದೆ ಅವರ ಸಂಗಾತಿಗೆ ಬೇಕಿರುವ ಬೆಂಬಲ ನೀಡಲು ಮುಂದಾಗುತ್ತಾರೆ ಎನ್ನುತ್ತಾರೆ.

ನಿಮ್ಮ ಮಗುವಿನ ಹೆರಿಗೆಯನ್ನ ನೀವೇ ಮುಂದೆ ನಿಂತು ಮಾಡಿಸುವುದಕ್ಕಿಂತ ಸ್ಥೈರ್ಯ ತುಂಬುವಂತ ಕೆಲಸ ಬೇರೇ ಇಲ್ಲ ಎನ್ನುತ್ತಾಳೆ ಜಾಯ್ಡೇನ್.

ಬಹುತೇಕ ಹೊಸ ತಾಯಂದಿರು ತಮ್ಮ ಪತಿಯು ತಮ್ಮ ದೇಹದಿಂದ ಮಗುವು ಹೊರಬರುವುದನ್ನು ನೋಡಲು ಅಸಹ್ಯ ಪಟ್ಟುಕೊಳ್ಳುವರು ಎಂದುಕೊಳ್ಳುತ್ತಾರೆ. ಆದರೆ ಜಾಯ್ಡೇನ್ ಹೇಳುವ ಪ್ರಕಾರ ಬಹಳಷ್ಟು ತಂದೆಯರು ಆ ದೃಶ್ಯವನ್ನ ನೋಡಿ ಮನಸೋತು ಮೂಕವಿಸ್ಮಿತ ಆಗುತ್ತಾರೆ ಎಂದು.

ಜಾಯ್ಡೇನ್ ಅಪ್ಪಂದಿರು ತಮ್ಮ ಮಕ್ಕಳ ಹೆರಿಗೆಯಲ್ಲಿ ಹೆಚ್ಚು ಭಾಗವಹಿಸುವದನ್ನು ನೋಡಲು ಇಷ್ಟ ಎನ್ನುತ್ತಾಳೆ. ಹಾಗೆಂದ ಮಾತ್ರಕ್ಕೆ ಆಕೆಯು ತಾಯಿಯನ್ನು ಬಿಟ್ಟಿದ್ದಾಳೆ ಎಂದಲ್ಲ, ಈ ಮಗುವು ತನ್ನ ತಂದೆಯನ್ನ ಭೇಟಿ ಮಾಡಿದ ಕ್ಷಣವನ್ನ ಕ್ಲಿಕ್ಕಿಸಿದ ನಂತರ ಆಕೆ ಕ್ಯಾಮೆರಾ ತಿರುಗಿಸಿದ್ದು ತಾಯಿಯ ಕಡೆ.

ತಾಯಿಯು ಮೊದಲ ಬಾರಿ ತನ್ನ ಮಗುವನ್ನು ಎದೆಯ ಮೇಲೆ ಇಟ್ಟುಕೊಂಡು ಚರ್ಮ-ಚರ್ಮ ಸ್ಪರ್ಶ ಮಾಡುವ ಅತ್ಯದ್ಭುತ ಕ್ಷಣವನ್ನ ತನ್ನ ಕ್ಯಾಮೆರಾ ಕಣ್ಣಿನ ಮೂಲಕ ಸೆರೆಹಿಡಿದಿದ್ದಾಳೆ. “ತಮ್ಮ ಮಗುವು ಈ ಭೂಮಿಯ ಮೇಲೆ ಸುಗಮವಾಗಿ ಕಾಲಿಡುವಂತೆ ಮಾಡಲು ಒಟ್ಟಾಗಿ ಶ್ರಮಿಸುತ್ತಿರುವುದು ನನಗೆ ತುಂಬಾ ಖುಷಿ ನೀಡಿತು ಎನ್ನುತ್ತಾಳೆ”.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon