Link copied!
Sign in / Sign up
0
Shares

ತಲೆನೋವು ಉಂಟುಮಾಡುವ 3 ಸಂಗತಿಗಳು ಮತ್ತು ಅದನ್ನು ನಿಭಾಯಿಸುವ ಬಗೆ

ಮಾನವನನ್ನು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಕುಗ್ಗಿಸುವ ಮತ್ತು ಅತ್ಯಂತ ಬೇಸರ ಮೂಡುವಂತೆ ಮಾಡುವ ಕಾಯಿಲೆ ಎಂದರೆ ತಲೆನೋವು. ಇದು ಬರಿ ನೋವಲ್ಲ, ಸಮಸ್ಯೆ, ತಲೆನೋವು ಅಥವಾ ಮೈಗ್ರೇನ್ಸ್ ನಿಮ್ಮ ಚಿತ್ತಗಳನ್ನು ಕಳೆದುಕೊಳ್ಳುವಂತೆ ಮಾಡುವುದು ಮತ್ತು ನೀವು ಯಾವುದೇ ಕಾರಣವಿಲ್ಲದೆ ಅನಾವಶ್ಯಕವಾಗಿ ಕೋಪಗೊಳ್ಳುವಂತೆ ಮಾಡುವುದು. ಆದ್ದರಿಂದ ಅದಕ್ಕೆ ಕಾರಣ ಏನು ಎಂಬುದನ್ನು ತಿಳಿದುಕೊಂಡು ಸರಿಯಾಗಿ ನಿವಾರಿಸಿಕೊಳ್ಳುವುದು ಒಳ್ಳೆಯದು.

ಉತ್ತಮ ಮತ್ತು ಆರೋಗ್ಯಕರವಾಗಿರಲು, ನಿಮಗೆ ಸಹಾಯ ಮಾಡಲು, ನಾವು ತಲೆನೋವುಗಳಿಗೆ ಸಂಬಂಧಿಸಿದ ಕೆಲವು ಮೂಲ ಕಾರಣಗಳನ್ನು ಮತ್ತು ಅವುಗಳನ್ನು ತಡೆಗಟ್ಟುವ ಕ್ರಮಗಳನ್ನು ನಿಮಗಾಗಿ ಈ ಲೇಖನದಲ್ಲಿ ಬರೆದಿದ್ದೇವೆ.

೧.ನರಸಂವಾಹಕ ಅಸಮತೋಲನ

ಸೆರೊಟೋನಿನ್, ಡೋಪಮೈನ್ ಮತ್ತು GABA ಗಳು ಮೆದುಳಿನ ಸಂದೇಶವಾಹಕಗಳೆಂದು ಕರೆಯಲ್ಪಡುವ ಕೆಲವು ಪ್ರಸಿದ್ಧ ನರಸಂವಾಹಕಗಳಾಗಿವೆ. ಮೈಗ್ರೇನ್ ಗೆ ಈ ನರಸಂವಾಹಕಗಳು ಕಡಿಮೆ ಮಟ್ಟದಲ್ಲಿರುವುದು ಮೂಲ ಕಾರಣ ಎಂದು ಕೆಲವು ಅಧ್ಯಯನಗಳು ಹೇಳಿವೆ. ಕಡಿಮೆ ಮಟ್ಟದಲ್ಲಿ ಸೆರೊಟೋನಿನ್, ಡೋಪಮೈನ್ ಹೃದಯ ಸಂಭಂದಿ ಕಾಯಿಲೆ, ಹೃದಯಾಘಾತ, ಆಕ್ರಮಣಶೀಲತೆ, ಮೈಗ್ರೇನ್ಸ್,  ಮತ್ತು ಖಿನ್ನತೆಯಂತಹ ಮಾನಸಿಕ ಪರಿಣಾಮಗಳನ್ನು ಬೀರುತ್ತದೆ.

ಈ ನರಸಂವಾಹಕಗಳನ್ನು ಗರಿಷ್ಟ ಮಟ್ಟದಲ್ಲಿ ಅಥವಾ ಸರಿಯಾದ ಪ್ರಶಸ್ತ ಮಟ್ಟದಲ್ಲಿ ಇರಿಸಿಕೊಳ್ಳುವುದು ತುಂಬಾ ಮುಖ್ಯ, ಮತ್ತು ಇದನ್ನು ಗರಿಷ್ಟ ಮಟ್ಟದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುವುದು ಅಮೈನೊ ಆಸಿಡ್. ಅಮೈನೊ ಆಸಿಡ್ ಅನ್ನು ತೆಗೆದುಕೊಳ್ಳುವುದರಿಂದ ಇವುಗಳ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಅಮೈನೊ ಆಸಿಡ್ ಅನ್ನು ಹೊಂದಿರುವ ಆಹಾರ ಪದಾರ್ಥಗಳೆಂದರೆ, ಮಾಂಸ, ಮೊಟ್ಟೆ, ಹಾಲಿನ ಉತ್ಪನ್ನಗಳು, ಮತ್ತು ಪ್ರೊಟೀನ್ ಇರುವ ಆಹಾರಗಳ ಸೇವನೆ.

೨.ಹಾರ್ಮೋನುಗಳಲ್ಲಿ ಅಸಮತೋಲನ

ಹಲವು ಮಹಿಳೆಯರು ಮೈಗ್ರೇನ್ ಮತ್ತು ತಲೆನೋವುಗಳನ್ನು ಆವರ್ತಕ ರೀತಿಯಲ್ಲಿ ಅನುಭವಿಸುತ್ತಾರೆ ಅಂದರೆ, ತಿಂಗಳಿನ ಕೆಲವು ನಿರ್ಧಿಷ್ಟ ಸಮಯಗಳಲ್ಲಿ ನೋವನ್ನು ಅನುಭವಿಸುತ್ತಾರೆ, ಮತ್ತು ಕ್ರಮೇಣ ಕಡಿಮೆಯಾಗುತ್ತದೆ, ಮತ್ತು ಇದು ಪದೇ ಪದೇ ಹಾಗೆ ಆಗುವುದು. ಇದು ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟೆರೋನ್ ಹಾರ್ಮೋನುಗಳ ಅಸಮತೋಲನದಿಂದ ಆಗುವುದು ಸಹಜ. ಇವು ಕಡಿಮೆ ಅಥವಾ ಹೆಚ್ಚು ಆದರೂ ತಲೆನೋವನ್ನು ಉಂಟುಮಾಡುತ್ತವೆ.

ಆದರೆ ನೀವು ಹಾರ್ಮೋನುಗಳ ಸಮತೋಲನಕ್ಕಾಗಿ ಔಷಧಗಳನ್ನು ತೆಗೆದುಕೊಳ್ಳುವ ಮೊದಲು, ನಿಮ್ಮ ದೇಹದಲ್ಲಿ ಹಾರ್ಮೋನುಗಳ ಸಮತೋಲನವನ್ನು ಪರೀಕ್ಷಿಸಿ ನಂತರ ವೈದ್ಯರ ಸಲಹೆ ಮೇರೆಗೆ ಔಷಧಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

೩.ಯಕೃತ್ತು ಹಂತದ ಅಸಮತೋಲನ

ಕೆಲವು ನಿರ್ಧಿಷ್ಟ ಆಹಾರ ಸೇವನೆ ಮಾಡಿದಾಗ ಅಥವಾ ಸುಗಂಧ ದ್ರವ್ಯ ವಾಸನೆಯನ್ನು ಮಾಡಿದಾಗ ನಿಮಗೆ ತಲೆನೋವು ಬರುತ್ತದೆಯೇ? ಹಾಗಿದ್ದರೆ, ನಿಮಗೆ ಯಕೃತ್ತು(ಲಿವರ್) ಹಂತದ ಅಸಮತೋಲನದಿಂದ ಈ ನೋವು ಬರುವುದಕ್ಕೆ ಕಾರಣ. ಮೂಲಭೂತವಾಗಿ, ಯಕೃತ್ತು ೨ ಹಂತದ ನಿರ್ವಿಶೀಕರಣವನ್ನು(detoxification) ಹೊಂದಿದೆ. ಹಂತ ೧ ಜೀವಾಣು ವಿಷವನ್ನು ಹಂತ ೨ಕ್ಕೆ ತಯಾರಿಸುತ್ತದೆ, ಮತ್ತು ಹಂತ ೧ ನಡೆಯುವಾಗ, ಜೀವಾಣುಗಳು ಹೆಚ್ಚು ವಿಷವಾಗುತ್ತವೆ. ಆದರೆ ಹಂತ ೨ ಹಂತ ೧ ರೊಂದಿಗೆ ಮುಂದುವರಿಸಲು ಸಾಧ್ಯವಾಗದಿದ್ದರೆ ಎಲ್ಲಾ ಜೀವಾಣುಗಳು ದೇಹದೊಳಗೆ ಚೆಲ್ಲುತ್ತವೆ ಮತ್ತು ಇದರಿಂದಾಗಿ ಅನೇಕ ಆಹಾರಗಳು ಮತ್ತು ವಾಸನೆ ಸೂಕ್ಷ್ಮತೆಗಳನ್ನು ಉಂಟುಮಾಡುತ್ತದೆ.

ಹಂತ ೨ ಹೆಚ್ಚು ಕೆಲಸ ಮಾಡುವಾಗ ಹಂತ ೧ ಅನ್ನು ವಿಳಂಬಗೊಳಿಸುವ ಮೂಲಕ, ಹಂತ ೨ ಅನ್ನು ನಾವು ಅದಕ್ಕೆ ಬೇಕಾದ ಸಮಯವನ್ನು ನೀಡಬಹುದು ಮತ್ತು ಅದರ ಮೂಲಕ ಸೂಕ್ಷ್ಮತೆಯನ್ನು ಕಡಿಮೆಗೊಳಿಸಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon