Link copied!
Sign in / Sign up
150
Shares

ವೀಕ್ಷಿಸಿ : ಹುಟ್ಟಿದೊಡನೆ ಈ ಮಗು ಮಾಡಿದ್ದು ತೋರಿಸುತ್ತದೆ ಮಗು-ತಾಯಿಯ ಸಂಬಂಧ ಎಂತದ್ದು ಎಂದು

ತಾಯಿ ಮತ್ತು ಮಗುವಿನ ನಡುವಿನ ಬಂಧವು ಪದಗಳಲ್ಲಿ ಬಣ್ಣಿಸಲಾಗದಂತಹ ಒಂದು ಅಮೋಘ ಬಂಧ. ಈ ಬಾಂಧವ್ಯವು ಎಂತದ್ದು ಎಂದು ಈ ವೀಡಿಯೊ ನಿಮಗೆ ತೋರಿಸುತ್ತದೆ. ತನ್ನ ಪುಟ್ಟ ಮಗುವನ್ನ ತನ್ನ ಮಡಿಲಲ್ಲಿ ಅಪ್ಪಿಕೊಂಡು ತಾನೇ ಸೃಷ್ಟಿಸಿದ ಅದರ ಪುಟ್ಟ ಪುಟ್ಟ ಕಾಲುಗಳನ್ನ, ಕೈಗಳನ್ನ, ಮೂಗು, ಕಣ್ಣುಗಳನ್ನ ನೋಡಿ ಕಣ್ಣು ತುಂಬಿಕೊಳ್ಳುವುದಕ್ಕಿಂತ ಒಂದು ತಾಯಿಗೆ ಬೇರೇ ದೊಡ್ಡ ಭಾಗ್ಯ ಏನಿದೆ. ನೀವು ನಿಮ್ಮ ಮಗುವಿನೊಂದಿಗೆ ಬಾಂಧವ್ಯವನ್ನ ಹೇಗೆ ಹೆಚ್ಚಿಸಿಕೊಳ್ಳಬಹುದು ಎಂಬುದರ ಬಗ್ಗೆ ಓದಿರುತ್ತೀರ, ಆದರೆ ಈ ಬಂಧವು ನೀವು ಅಂದುಕೊಂಡಿರುವುದಕ್ಕಿಂತ ಮುಂಚಿನಿಂದಲೇ ಆರಂಭ ಆಗಿರುತ್ತದೆ ಮತ್ತು ಇದು ಉಸಿರಿರುವವರೆಗೂ ಗಟ್ಟಿಯಾಗಿ ಇರುತ್ತದೆ.

9 ತಿಂಗಳುಗಳ ಕಾಲ ನಿಮ್ಮ ಮಗುವು ಬೆಳವಣಿಗೆ ಹೊಂದಲಿಕ್ಕೆ ನೀವು ಪೋಷಕಾಂಶಗಳನ್ನು ಮತ್ತು ಆಮ್ಲಜನಕವನ್ನ ನೀಡಿದ್ದೀರಿ. ಮಗು ಜನಿಸಿದ ನಂತರವೂ ಅದಕ್ಕೆ ೨-೩ ವರ್ಷಗಳು ತುಂಬುವವರೆಗೂ ತನ್ನ ಆಹಾರಕ್ಕೆ ನಿಮ್ಮ ಮೇಲೆಯೇ ಅವಲಂಬಿತ ಆಗಿರುತ್ತದೆ. ನಿಮ್ಮ ಮಗುವು ಬೆಳೆದ ಹಾಗೆ, ನಿಮ್ಮ ನಡುವಿನ ಬಾಂಧವ್ಯ ಮೊದಲಿನಂತೆ ಇರುವುದಿಲ್ಲ ಎಂದು ನೀವು ಭಯ ಪಟ್ಟುಕೊಳ್ಳಬಹುದು, ಆದರೆ ಇದು ನಿಜವಲ್ಲ. ಬದಲಿಗೆ ಇದು ಮತ್ತಷ್ಟು ತೀವ್ರವಾಗುತ್ತಾ, ಹೆಚ್ಚು ಗಟ್ಟಿಯಾಗುತ್ತಾ ಹೋಗುತ್ತದೆ.  

ಈ ಮೇಲಿನ ವೀಡಿಯೊ ಅನ್ನು ಫೇಸ್ಬುಕ್ ಅಲ್ಲಿ ಮಟರ್ನೀಡದೆ ಡಿ ರೋಸ ಎಂಬುವರ ಪೋಸ್ಟ್ ಮಾಡಿದ್ದು ಇದು ವೈರಲ್ ಆಗಿದೆ. ಮಗು ಜನಿಸಿದ ತಕ್ಷಣ ಮಗುವು ಚರ್ಮ-ಚರ್ಮ ಸ್ಪರ್ಶದಿಂದ ಅಮ್ಮನೊಂದಿಗೆ ಬೆಸುಗೆ ಬೆಳೆಯಲಿ ಎಂದು ಅಮ್ಮನ ಎದೆ ಮೇಲೆ ಮಗುವನ್ನ ಒರಗಿಸುವರು. ಬ್ರೆಂಡಾಳ ಮಗುವನ್ನ ವೈದ್ಯರು ಅವಳ ಎದೆಯ ಬಳಿ ತಂದೊಡನೆ, ಮಗುವು ಪ್ರೀತಿಯಿಂದ ತನ್ನ ಅಮ್ಮನ್ನನ್ನ ಅಪ್ಪಿ ಹಿಡಿಯಲು ಮುಂದಾಯಿತು. ಇಷ್ಟೇ ಅಲ್ಲದೆ, ಮಗುವು ತನ್ನ ಅಮ್ಮನನ್ನ ಎಲ್ಲಾರು ಆಶ್ಚರ್ಯಗೊಳ್ಳುವಂತೆ ಸವರಿ ಮುದ್ದಿಸಿತು. ಅಲ್ಲಿದ್ದವರೆಲ್ಲ ಚಕಿತರದಾರು.

ಈ ವೀಡಿಯೊ ಒಂದು ಮಗು ಮತ್ತು ತಾಯಿ ನಡುವಿನ ಅಪೂರ್ವ ಬಾಂಧವ್ಯವನ್ನ ಯಾವುದೇ ಮಾತುಗಳಿಲ್ಲದೆ ವರ್ಣಿಸುತ್ತದೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon