Link copied!
Sign in / Sign up
9
Shares

ತಾಯಿ ಆದ ಮೇಲೆ ನಮಗೆ ಸಿಗುವ 9 ರೋಚಕ ಅನುಭವಗಳೆಂದರೆ ಇವೆ!

ತಾಯಿಯಾಗುವುದು ಒಂದು ವರವೇ ಹೌದು..!! ಸಂತೋಷಕರ ಅನುಭವ..! ನಿಮ್ಮ ಪ್ರಪಂಚವೇ ಬದಲಾಗುವುದು. ಅವನ/ಳ ಮುದ್ದು ಮುಖವನ್ನು ನೋಡಿದಾಗ, ಪ್ರಪಂಚದ ಎಲ್ಲಾ ಪ್ರೀತಿಯೂ, ನಿಮ್ಮ ಕಡೆಗೇ ಹರಿದು ಬರುವಂತೆ ತೋರುವುದು. “ ಕಾಗೆಗೆ ತನ್ನ ಮರಿಯೇ ಚಿನ್ನದ ಗೊಂಬೆ”- ಎಂದ ಹಾಗೆ ನಿಮ್ಮ ಮಗುವಿನ ಬಗ್ಗೆ ಯಾರೂ ಹಗುರವಾಗಿ ಮಾತನಾಡುವುದನ್ನು ನೀವು ಸಹಿಸಲಾರಿರಿ.ಯಾವುದೇ ಅಸಮಾಧಾನದಲ್ಲಿ ಇದ್ದರೂ,ಆ ಬೊಚ್ಚುಬಾಯಿಯ ಮುಗ್ಧ ನಗು ನಿಮ್ಮನ್ನು ಸಂತೋಷಗಡಲಲ್ಲಿ ತೇಲಿಸುವುದು.

ತಾಯಿಯಾದ ಪ್ರತಿಯೊಬ್ಬ ಸ್ತ್ರೀಯರ ಆರು ಸ್ವರ್ಗಾನುಭವಗಳ ಬಗ್ಗೆ ತಿಳಿದುಕೊಳ್ಳೋಣ.

(೧) ಮಗುವಿನ ನೋಟ

ನಿಮ್ಮತ್ತ ನೋಡುವಾಗಿನ ಮಗುವಿನ ಆ ಮುಖಭಾವ...! ಕೆಲವೇ ವಾರಗಳ ಪ್ರಾಯವಾದ ಮಗುವು ಇಡೀ ದಿನವೂ ನಿಮ್ಮ ಮುಖದ ಪ್ರತಿಯೊಂದು ಹಾವ ಭಾವಗಳನ್ನು ತನ್ನ ಮನಸ್ಸಿನಲ್ಲಿ ಅಚ್ಚೊತ್ತಿಕೊಳ್ಳುವುದು. ನಿಮ್ಮ ನಗು ಮುಖವನ್ನು ಕಂಡು ಮಗು ಪುಳಕಿತವಾಗಿದೆಯೆಂದು, ಅದರ ಹಾವಭಾವಗಳಿಂದಲೇ ತಿಳಿಯಬಹುದು.

 

(೨) ಬಿಡುವಿನ ಆನಂದ

ಮಗುವಿನ ಜನನದ ಬಳಿಕ ಒಮ್ಮೆಲೆ ಗುಡ್ಡೆ ಭಾರದ ಕೆಲಸವು ನಿಮ್ಮ ತಲೆ ಮೇಲೆ ಬಿದ್ದಂತೆ ಭಾಸವಾಗುವುದು ಮಗುವಿನ ಮೂತ್ರದ ವಸ್ತ್ರಗಳನ್ನು ಬದಲಿಸುವುದು, ಮಗುವು ಉಗಿದ ಆಹಾರಗಳನ್ನು ಶುಚಿಗೊಳಿಸುವುದು ಹಾಗೂ ತಿನ್ನಿಸುವುದು. ಈ ಮೂರು ಕಾರ್ಯಗಳಲ್ಲಿ ದಿನವಿಡೀ ನಿರತರಾಗಿರುವಾಗಲೂ, ನೀವಲ್ಲದೇ ನಿಮ್ಮ ಮಗುವನ್ನು ನೋಡಿಕೊಳ್ಳಲು ಇನ್ಯಾರಿಂದಲೂ ಸಾಧ್ಯವಿಲ್ಲ ಎಂಬುದರ ಅರಿವು ನಿಮ್ಮನ್ನು ನಿರಾತಂಕವಾಗಿಸುವುದು. ಮಗುವು ಸ್ವಲ್ಪ ದೊಡ್ಡವರಾಗುತ್ತಿರುವಂತೆಯೇ, ನಿಮ್ಮ ಕೆಲಸಗಳಲ್ಲಿ ಸ್ವಲ್ಪ ಬಿಡುವು ಲಭಿಸಿದಂತೆ ನಿಮಗನಿಸುವುದು. ನಿಮ್ಮ ತಾಯ್ತನದ ಆನಂದವನ್ನು ನೀವು ಅನುಭವಿಸುತ್ತಿದ್ದೀರೆಂದರ್ಥ.

 

(೩) ಪತಿಯಲ್ಲೂ ಬದಲಾವಣೆಗಳು

“ ಇವರ ಹಣೆಬರಹವೇ ಇಷ್ಟು”- ಎಂದು ನೀವು ಅಂದುಕೊಳ್ಳುತ್ತಿರುವಾಗಲೇ, ಅವರು ನಿಮ್ಮ ಮಗುವನ್ನೆತ್ತಿಕೊಳ್ಳುವುದನ್ನು ನೀವು ಗಮನಿಸಬಹುದು. ಹೌದು, ಮಗುವನ್ನೆತ್ತಿ ಹೊರಗಡೆ ಸುತ್ತಾಡಿಸುವುದನ್ನೂ, ಅವರೊಂದಿಗೆ ಆಟವಾಡುವುದನ್ನೂ,ಇನ್ನು ಮಾತನಾಡಲು ಕಲಿಯದ ಪುಟ್ಟ ಮನುಷ್ಯನೊಂದಿಗೆ ಮಾತನ್ನಾಡುವ ನಿಮ್ಮ ಪತಿಯೊಂದಿಗಿನ ಬಾಂಧವ್ಯವನ್ನು ಹೆಚ್ಚಿಸುವುದು.ತನ್ನ ಮಗುವಿನೊಂದಿಗೆ ಮಾತ್ರವಲ್ಲ ತನ್ನ ಪ್ರಿಯ ಪತ್ನಿಯೊಂದಿಗೂ ಹೆಚ್ಚಿನ ಸಮಯವನ್ನು ಕಳೆಯ ಬಯಸುವ ನಿಮ್ಮ ಪತಿಯು ತನ್ನ ತಂದೆಯಾದ ಕ್ಷಣಗಳನ್ನು ಇಷ್ಟಪಡುತ್ತಿದ್ದಾರೆಂದು ತಿಳಿದುಕೊಳ್ಳಬಹುದು.

 

(೪) ನೀವು ವ್ಯಾಮೊಹಪೀಡಿತರಾಗುವಿರಿ

ತಾಯಿಯಾದ ನೀವು ನಿಮ್ಮ ಮಕ್ಕಳ ಬಗ್ಗೆ ಅತೀವ ಕಾಳಜಿ ತೋರುವುದು ಸಹಜ. ನೀವು ಮಗುವಿನ ಎಲ್ಲಾ ಕಾರ್ಯಗಳ ಬಗ್ಗೆಯೂ ಹೆಚ್ಚು ವ್ಯಾಮೋಹಿತರಾಗಿದ್ದರೂ ಯಾವುದೇ ಅಚ್ಚರಿಯಿಲ್ಲ. ಮಕ್ಕಳನ್ನು ನೋಡಿಕೊಳ್ಳಲು ಎಷ್ಟು ಜನರು ಮನೆಯಲ್ಲಿದ್ದರೂ, ಮಗು ನಿಮ್ಮ ಕಣ್ಮುಂದೆ ಇದ್ದರೆ ಮಾತ್ರ ನಿಮಗೆ ನಿರಾಳವೆನಿಸುವುದು. ಯಾವುದೇ ಕೆಲಸದಲ್ಲಿ ನಿರತರಾಗಿದ್ದರೂ, ಕೆಲವೊಮ್ಮೆ ಮಗುವಿನ ತಂದೆಯು ಡಯಪರನ್ನು ಬದಲಾಯಿಸುತ್ತಿದ್ದರೂ, ನೀವು ಅದನ್ನು ಬದಲಾಯಿಸಲು ಓಡಿಬರುವಿರಿ.

 

(೫) ನೀವು ನಿಮ್ಮ ತಾಯಿಯಂತಾಗುವಿರಿ

ಪ್ರತಿ ತಾಯಿಯರು ಈ ಕ್ಷಣಗಳನ್ನು ಖಂಡಿತವಾಗಿಯೂ ಅನುಭವಿಸಿರುತ್ತಾರೆ. ಐದು ನಿಮಿಷಗಳಿಗಿಂತಲೂ ಹೆಚ್ಚಾಗಿ ಮಗುವು ಅಳುತ್ತಿದ್ದರೆ “ಮಗುವಿಗೆ ಏನೋ ಅಸೌಖ್ಯವಿದೆ”- ಎಂದು ನೀವು ಅರಿತುಕೊಳ್ಳುವಿರಿ. ಗಾಬರಿಯಾದ ನೀವು ವೈದ್ಯರನ್ನು ಕರೆಯುವಿರಿ. ಒಂದೆರಡು ಪ್ರಶ್ನೆ ಕೇಳಿದ ವೈದ್ಯರು ಮಗುವಿಗೆ ಹಲ್ಲು ಬೆಳೆಯುವ ಸಮಯವಾಗಿರಬಹುದು ಅಥವಾ ನಿಮ್ಮ ಅತೀವ ಕಾಳಜಿಯಿಂದ ಮಗುವು ಕಸಿವಿಸಿಗೊಂಡಿದೆಯೆಂದೋ ತಿಳಿಹೇಳುವರು. ‘ಅತಿ ಹೆಚ್ಚಿನ ಕಾಳಜಿ’- ಹೌದು..! ನೀವು ನಿಮ್ಮ ತಾಯಿಯ ಬಗ್ಗೆ ಅಂದುಕೊಂಡ ಅದೇ ಭಾವನೆಗಳು ಅಲ್ಲವೇ... ಹೌದು, ನಿಜ...!!ನೀವು ನಿಮ್ಮ ತಾಯಿಯರಂತಾಗುತ್ತಿದ್ದೀರಿ.

 

(೬) ಮಗುವೇ ಪ್ರಪಂಚ

ಬಹಳಷ್ಟು ಕಾಲಗಳ ನಂತರ ನಿಮ್ಮ ಗೆಳತಿಯರನ್ನು ಕಂಡಾಗ, ಅವರು ಆಹಾರ,ಬಟ್ಟೆ, ಫ್ಯಾಷನ್,ಪ್ರಯಾಣ ,ಉದ್ಯೋಗ,ಆರೋಗ್ಯ ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾತನಾಡುತ್ತಿರುವಾಗ ನೀವು ಮಾತ್ರ ನಿಮ್ಮ ಮಗುವಿನ ಬಗ್ಗೆ ವಾಚಾಳಿಯಾಗುವಿರಿ. ಪತಿಯೊಂದಿಗೆ ಹೊರಗಡೆ ಸುತ್ತಾಡಲು ಹೊರಟಾಗಲೂ ಪ್ರತಿ ಹತ್ತು ನಿಮಿಷಗಳಿಗೊಮ್ಮೆ, ಮನೆಗೆ ಫೋನಾಯಿಸಿ ಮಗುವಿನ ಬಗ್ಗೆ ತಿಳಿದುಕೊಳ್ಳುವಿರಿ. ಶಾಪಿಂಗ್ ಎಂದು ಹೊರಟಾಗಲೂ ಹೆಚ್ಚಾಗಿ ಮಗುವಿಗೆಂದೂ ಸಾಧನಗಳನ್ನು ಖರೀದಿಸುವಿರಿ. ಬಾಕಿಯೆಲ್ಲವೂ ಆಹಾರಪದಾರ್ಥಗಳಾಗಿರಬಹುದು.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon