Link copied!
Sign in / Sign up
15
Shares

ಯೌವ್ವನದ ತ್ವಚೆ ಪಡೆಯಲು ಅಮ್ಮಂದಿರಿಗೆ ೯ ಸುಲಭ ಪರಿಣಾಮಕಾರಿ ಮಾರ್ಗಗಳು

ವಯಸ್ಸಾಗುವುದು, ಮಹಿಳೆಯರ ಜೀವನದಲ್ಲಿ ದೊಡ್ಡ ಜಿಗಿತವಿದ್ದಂತೆ. ಅವಳ ಮುಖದಲ್ಲಿ ಕಲೆಗಳು ಅಥವಾ ಸುಕ್ಕುಗಳು ಕಾಣಿಸಿಕೊಂಡ ಸಮಯ ಅವಳ ದುಃಸ್ವಪ್ನ ನಿಜವಾದಂತೆ ಭಾವಿಸುತ್ತಾರೆ. ಬಹುತೇಕ ಮಹಿಳೆಯರು ಕೃತಕ ಮುಖಧಾರಣೆ ಮಾಡುವುದನ್ನು ತಡೆಯುತ್ತಾರೆ, ಏಕೆಂದರೆ ಪದೆ ಪದೆ ಅದನ್ನು ಮಾಡಿಕೊಳ್ಳುವುದು ಅವರಿಗೆ ಬೇಸರವನ್ನುಂಟುಮಾಡುತ್ತದೆ. ವಯಸ್ಸಾಗುವುದು ಯಾವಾಗಲೂ ನಮ್ಮ ಉತ್ಸಾಹವನ್ನು ಕಡಿಮೆಮಾಡುವುದು ಎಂದು ಅರ್ಥವಲ್ಲ, ಆದರೆ ಇದು ನಮಗೆ ದೈಹಿಕವಾಗಿ ವಯಸ್ಸಾಗುತ್ತಿದೆ ಎಂದು ತೋರಿಸಿಕೊಡುತ್ತದೆ. ಕೆಲವೊಮ್ಮೆ ತಾರುಣ್ಯರು ಹೆಚ್ಚು ವಯಸ್ಸಾದವರಂತೆ ಕಾಣಿಸಲು ಕಾರಣ ಅವರ ಅಪೌಷ್ಟಿಕಾಂಶದ ಆಹಾರ ಸೇವನೆ. ನಿಮಗೆ ದೈಹಿಕವಾಗಿ ವಯಸ್ಸಾದರೂ ತಾರುಣ್ಯರಾಗಿ ಕಾಣಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

೧. ಪ್ರತಿ ದಿನ ಅತಿ ಹೆಚ್ಚು ನೀರನ್ನು ಸೇವಿಸಿ

ಆಶ್ಚರ್ಯವೆಂಬಂತೆ ಹಲವು ಸಮಸ್ಯೆಗಳಿಗೆ, ನೀರು ಒಂದು ಅದ್ಭುತ ಪರಿಹಾರ. ನಿಮ್ಮ ತ್ವಚೆಯಲ್ಲಿರುವ ಕಲ್ಮಶಗಳನ್ನು ತೆಗೆದು ನಿಮ್ಮ ತ್ವಚೆಯ ಹೊಳಪನ್ನು ಆರೋಗ್ಯವಾಗಿ ಹೆಚ್ಚಿಸಲು ಸಹಕಾರಿಯಾಗುತ್ತದೆ. ನೀರು ನಿಮಗೆ ವಯಸ್ಸಾದವರಂತೆ ಕಾಣುವುದನ್ನು ಕಡಿಮೆ ಮಾಡುತ್ತದೆ. ನೀರು ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುವುದರಿಂದ ನಿಮ್ಮ ನಿಜವಾದ ವಯಸ್ಸಿಗಿಂತ ಯೌವ್ವನದವರಾಗಿ ಕಾಣುವಂತೆ ಮಾಡುತ್ತದೆ.

೨. ತ್ವಚೆಯನ್ನು ತೇವಾಂಶದಿಂದ ಇರಿಸಿ

ನೀವು ಮಲಗುವ ಮುನ್ನ ಮುಖ ತೊಳೆಯುದರಿಂದ, ಇಡಿ ದಿನ ನಿಮ್ಮ ಮುಖದ ಮೇಲೆ ಕುಳಿತಿದ್ದ ಕೊಳೆಯನ್ನು ತೆಗೆದುಹಾಕಬಹುದು, ನಿಮ್ಮ ಮುಖವನ್ನು ಶುಚಿಗೊಳಿಸಿದಂತೆ ಆಗುತ್ತದೆ, ಮತ್ತು ನಿಮ್ಮ ತ್ವಚೆಯನ್ನು ತೆವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಒಣ ಚರ್ಮ ಹೊಂದಿರುವವರು, ಚಿಕ್ಕ ವಯಸ್ಸಿನವರಾಗಿದ್ದರು, ಹೆಚ್ಚು ವಯಸ್ಸಾಗಿರುವವರಂತೆ ಕಾಣುತ್ತಾರೆ, ಅದರಲ್ಲೂ ಮಹಿಳೆಯರು ಇದು ಹೆಚ್ಚು. ನೀವು ಬಿಸಿಲಿನಲ್ಲಿ ಇರಬೇಕಾದರೆ, ಉತ್ತಮ ಸನ್ಕ್ರೀಮ್ಅನ್ನು ಬಳಸುವುದು ಒಳಿತು, ಯಾಕೆಂದರೆ, ಬಿಸಿಲಿಗೆ ನಿಮ್ಮ ತ್ವಚೆ ತೇವಾಂಶ ಕಳೆದುಕೊಂಡು, ಬಿರುಕು ಬಿಡಬಹುದು, ಸುಟ್ಟ ಕಲೆಗಳಾಗಬಹುದು, ಅಥವಾ ಬಿಸಿಲಿಗೆ ನಿಮ್ಮ ತ್ವಚೆ ಕಪ್ಪಾಗಬಹುದು. ಮತ್ತು ಇದನ್ನು ಬಳಸುವುದರಿಂದ ಸೂರ್ಯನಿಂದ ಬರುವ ಯು.ವಿ. ಕಿರಣಗಳಿಂದ ರಕ್ಷಣೆ ಒದಗಿಸುತ್ತದೆ.

೩. ಆಹಾರ ಪಟ್ಟಿಯಲ್ಲಿ ಮೀನು ಇರಲಿ

ವಯಸ್ಸಾದವರಂತೆ ಕಾಣುವುದನ್ನು ನಿಧಾನಗೊಳಿಸಲು ಮತ್ತೊಂದು ವಿಧಾನವೆಂದರೆ, ಅದು ಒಳ್ಳೆಯ ಆಹಾರವನ್ನು ಸೇವನೆ ಮಾಡುವುದು. ನೈಸರ್ಗಿಕವಾದ ಎಣ್ಣೆಯುಕ್ತ ಮೀನನ್ನು ನಿಮ್ಮ ಆಹಾರ ಪಟ್ಟಿಯಲ್ಲಿ ಸೇರಿಸುವುದರಿಂದ, ಮೀನಿನಲ್ಲಿರುವ ಎಣ್ಣೆ ನಿಮ್ಮ ತ್ವಚೆಗೆ ನೈಸರ್ಗಿಕವಾಗಿ ತೇವಾಂಶವನ್ನು ನೀಡುತ್ತದೆ.ಇದರಿದ ನಿಮ್ಮ ದೇಹವನ್ನು ಆರೋಗ್ಯವಾಗಿ ವಿನ್ಯಾಸಗೋಳಿಸಬಹುದು. ಇದರ ಜೊತೆಗೆ ಹಸಿರು ತರಕಾರಿ, ಸೊಪ್ಪುಗಳನ್ನು ಸೇವಿಸುವುದು ಒಳ್ಳೆಯದು. ಹಸಿರು ಸೊಪ್ಪುಗಳನ್ನು ಸೇವಿಸುವುದರಿಂದ, ನಿಮ್ಮ ರಕ್ತದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸುತ್ತದೆ, ಇದರಿಂದ ರಕ್ತಪರಿಚಲನೆಯು ದೇಹದ ಎಲ್ಲಾಕಡೆ ಸರಾಗವಾಗಿ ಆಗುತ್ತದೆ. ದ್ರಾಕ್ಷಿಯಲ್ಲಿರುವ ಸಾರ್ಬಿಟೋಲ್ ಅಂಶವು ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುವುದರಲ್ಲಿ ಸಹಾಯ ಮಾಡುತ್ತದೆ.

೪. ಸಕ್ಕರೆ ಸೇವನೆಯನ್ನು ನಿಲ್ಲಿಸಿ

ಸಕ್ಕರೆಯು ಹಲವು ಶಾಶ್ವತ ಕಾಯಿಲೆಗಳಿಗೆ ಕಾರಣವಾಗುತ್ತದೆ. ಸಕ್ಕರೆಯ ಬದಲು ಸಪೋಟದಂತಹ ಹಣ್ಣುಗಳನ್ನು ಉಪಯೋಗಿಸುವುದು ತ್ವಚೆಯ ಯೌವ್ವನದ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ವಯಸ್ಸಾದವರಂತೆ ಕಾಣಲು ಸಕ್ಕರೆ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಸೇವನೆ ನಿಲ್ಲಿಸಿದ ಸ್ವಲ್ಪ ಸಮಯದ ನಂತರವೇ ನಿಮ್ಮ ತ್ವಚೆಯಲ್ಲಿ ಬದಲಾವಣೆ ಕಾಣಬಹುದು.

೫. ಆರಾಮದಾಯಕ ನಿದ್ರೆ

ಅವಶ್ಯಕತೆ ಇರುವ ನಿದ್ರೆ ಮಾಡುವುದರಿಂದ ಮನಸ್ಸಿಗೆ ಹೊಸ ಚೈತನ್ಯ ಸಿಗುವುದರ ಜೊತೆಗೆ, ನಿಮ್ಮ ತ್ವಚೆಯ ಕಾಂತಿಯುತ ಹೊಳಪನ್ನು ಹೆಚ್ಚಿಸುತ್ತದೆ. ರೇಷ್ಮೆ ಅಥವಾ ಸ್ಯಾಟಿನ್ ಬಟ್ಟೆಯ ದಿಂಬುಗಳು, ಒರಟಾಗಿರುವುದಿಲ್ಲ, ಇದರಿಂದ ನಿಮ್ಮ ಒರಟು ದಿಂಬಿನಿಂದ ಉದುರಬಹುದಾದ ಕೂದಲುಗಳನ್ನು ಕಡಿಮೆಮಾಡಬಹುದು.

೬. ಕಡಿಮೆ ಸೌಂದರ್ಯ ವರ್ಧಕ ಹೆಚ್ಚು ಯೌವ್ವನ

ನಿಮ್ಮ ತ್ವಚೆಯ ಸೌಂದರ್ಯ ಹೆಚ್ಚಿಸಲು ಬಳಸುವ ಸೌಂದರ್ಯ ವರ್ಧಕಗಳ ಬಳಕೆಯನ್ನು ಕಡಿಮೆ ಮಾಡಿ. ಈ ಉತ್ಪನ್ನಗಳನ್ನು ಅನೇಕ ರಾಸಾಯನಿಕಗಳನ್ನು ಬಳಸಿ ತಯಾರಿಸಿರುತ್ತಾರೆ, ಇದರಿಂದ ನಿಮ್ಮ ತ್ವಚೆಗೆ ಅಪಾಯವಾಗಬಹುದು. ಇದರ ಬದಲು ನೈಸರ್ಗಿಕವಾಗಿ ಹಸಿರು ತರಕಾರಿ, ಸೊಪ್ಪುಗಳನ್ನು ಸೇವಿಸುವುದು ಅಥವಾ ಲೋಗಸರ(ಆಲೋವೆರಾ)ವನ್ನು ಮುಖಕ್ಕೆ ಹಚ್ಚುವುದರಿಂದ ಮುಖದ ತ್ವಚೆಯು ನಾಜೂಕಾಗುತ್ತದೆ.

೭. ಹುಬ್ಬುಗಳ ಆಕಾರವನ್ನು ವಿನ್ಯಾಸಗೊಳಿಸಿ

ಹುಬ್ಬುಗಳನ್ನು ಸರಿಯಾದ ಆಕಾರಗಳಿಗೆ ಹೊಂದಿಸುವುದು, ನಿಮ್ಮ ಸೌಂದರ್ಯದಲ್ಲಿ ವ್ಯತ್ಯಾಸ ಕಾಣುವಂತೆ ಮಾಡಬಹುದು. ನಿಮ್ಮ ಮುಖಕ್ಕೆ ಸರಿಹೊಂದುವಂತೆ ಹುಬ್ಬುಗಳ ಆಕಾರವನ್ನು ಮಾಡಿಕೊಳ್ಳಿ, ಇದರಿಂದ ತುಂಬಾ ವಯಸ್ಸಾಗಿರುವ ಹಾಗೆ ಅಥವಾ ತುಂಬಾ ಚಿಕ್ಕವರಂತೆ ಕಾಣಬಾರದು. ನೀವು ಹದಿಹರೆಯದವರಂತೆ ಕಾಣಲು ಎಷ್ಟು ಬೇಕು ಅಷ್ಟು ಆಕಾರಗೊಳಿಸಿದರೆ ಸಾಕು. ನಿಮ್ಮ ಚರ್ಮಶಾಸ್ತ್ರಜ್ಞರ ಸಲಹೆ ಪಡೆಯಿರಿ.

೮. ಮುಗುಳ್ನಗುತ್ತಿರಿ

ಹೆಚ್ಚು ನಗುವು ನೀವು ಚಿಕ್ಕವರಾಗಿ ಕಾಣುವಂತೆ ಮಾಡುತ್ತದೆ. ಇದು ಚಿಕ್ಕವರಂತೆ ಇರಲು ಮತ್ತು ಕಾಣಲು ಅತ್ಯಂತ ಪರಿಣಾಮಕಾರಿ ಚಿಕಿತ್ಸೆ. ನೀವು ಮುಗುಳ್ನಗುವ ಅವಕಾಶವನ್ನು ಕಳೆದುಕೊಳ್ಳಬೇಡಿ.

೯. ವ್ಯಾಯಾಮ ಮಾಡಿ

ದಿನಕ್ಕೆ ಒಂದು ಬಾರಿಯಾದರೂ ವ್ಯಾಯಾಮ ಮಾಡಿ. ಇದು ನಿಮ್ಮ ದೇಹರಚನೆಯನ್ನು ಸರಿಯಾಗಿ ಹೊಂದಿಸುತ್ತದೆ, ಮತ್ತು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಸ್ವಲ್ಪ ದೂರ ಅಡ್ಡಾಡಿಕೊಂಡು ಬರುವುದು(ಜಾಗಿಂಗ್), ನಂತರ ಸ್ವಚನೆಯ ಗಾಳಿಯ ಸೇವನೆ ಮಾಡುವುದು ಆ ದಿನ ನಿಮ್ಮ ಮನಸ್ಸು ಮತ್ತು ದೇಹವನ್ನು ಹೊಸ ಚೈತನ್ಯದಿಂದ ಇರಿಸುತ್ತದೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon