Link copied!
Sign in / Sign up
10
Shares

ಕಾಮಸೂತ್ರದ ಬಗ್ಗೆ ನಿಮಗೆ ತಿಳಿದಿರದ 7 ಚಿತ್ತಾಕರ್ಷಕ ಸಂಗತಿಗಳು

ಕಾಮಸೂತ್ರ ಅನ್ನುವುದು ಆರೋಗ್ಯಕರ ಜೀವನದ ಮಾರ್ಗದರ್ಶಿ ಆಗಿದ್ದು ಇದು ನಮ್ಮ ದೇಶದಲ್ಲಿ ಸುಮಾರು ೨೫೦೦ ವರ್ಷಗಳಿಂದ ಇದೆ. ವಾತ್ಸ್ಯಾಯನ ಎಂಬ ಒಬ್ಬ ಪಂಡಿತನು ಬಹಳಷ್ಟು ಅಧ್ಯಯನ, ಸಂಶೋಧನೆ ಹಾಗು ಪ್ರಯೋಗಗಳನ್ನ ಮಾಡಿ ಕಾಮ ಮತ್ತು ಸಾಂಸಾರಿಕ ಜೀವನದ ಎಲ್ಲಾ ಅಂಶಗಳ ಬಗ್ಗೆ ಈ ಹೊತ್ತಿಗೆಯಲ್ಲಿ ದಾಖಲಿಸಿದ್ದಾನೆ. ಆದರೆ ಬಹಳಷ್ಟು ಜನರು ಈ ಕಾಮಸೂತ್ರವು ಕೇವಲ ಸಂಭೋಗದ ಭಂಗಿಗಳನ್ನ ತೋರಿಸುವ ಪುಸ್ತಕವೆಂದೇ ತಿಳಿದಿದ್ದಾರೆ. ಆದರೆ ವಾಸ್ತವದಲ್ಲಿ ಈ ಪುಸ್ತಕದಲ್ಲಿ ಕೇವಲ ೨೦% ಅಷ್ಟು ಮಾತ್ರ ಸಂಭೋಗದ ಭಂಗಿಗಳ ಬಗ್ಗೆ ಇದ್ದರೆ, ಉಳಿದ ೮೦% ಅಷ್ಟು ವಿವಿಧ ವಿಷಯಗಳಾದ ಸಮಾಜ, ಮದುವೆ, ಪ್ರಣಯದ ಜೀವನ, ಮಾನವ ನಾಗರಿಕತೆ ಮತ್ತು ಇನ್ನಷ್ಟು ವಿಷಯಗಳ ಬಗ್ಗೆ ಇದೆ.

ಇಂತಹ ಕಾಮಸೂತ್ರದ ಬಗ್ಗೆ ನಿಮಗೆ ಗೊತ್ತಿರದ ೯ ಅಪರೂಪದ ಸಂಗತಿಗಳನ್ನ ನಾವು ತಿಳಿಸಲಿದ್ದೇವೆ, ಓದಿ :

೧.  ಗೂಢಲಿಪಿಶಾಸ್ತ್ರ (ಕ್ರಿಪ್ಟೋಗ್ರಾಫಿ )

ದೈನಂದಿನ ಜೀವನದಲ್ಲಿ ಕ್ರಿಪ್ಟೋಗ್ರಾಫಿ ಬಳಸಿದ ಮೊದಲ ಪುಸ್ತಕ ಎಂದರೆ ಅದು ಕಾಮಸೂತ್ರ. ಇದರಲ್ಲಿ ಕೋಡ್ ಮೂಲಕ ಅಡಗಿಸಿಟ್ಟ ಸಂದೇಶಗಳು ಇದ್ದು, ಇವುಗಳನ್ನ ನಾವ ಓದಲು ಆಗುವುದಿಲ್ಲ. ಈ ಕಾಮಸೂತ್ರವು ಕ್ರಿಪ್ಟೋಗ್ರಾಫಿ ಎನ್ನುವುದನ್ನ ಪ್ರತಿಯೊಂದು ಹೆಣ್ಣು ಕಲಿಯಬೇಕು ಎಂದು ಪ್ರಸ್ತಾಪಿಸಿದೆ.

ಕಾಮಸೂತ್ರದ ಪ್ರಕಾರ ಹೆಂಗಸರು “ಪದಗಳ ರೂಪವನ್ನ ಬದಲಾಯಿಸಿ ಮಾತಾಡುವ ಕಲೆಯನ್ನು ಬೆಳೆಸಿಕೊಳ್ಳಬೇಕು. ಇದು ಬೇರೆ ಬೇರೆ ರೀತಿಯದ್ದು ಆಗಿರುತ್ತದೆ. ಕೆಲವರು ಪದಗಳ ಆರಂಭ ಮತ್ತು ಅಂತ್ಯವನ್ನ ಬದಲಾಯಿಸಿ ಮಾತನಾಡುತ್ತಾರೆ. ಇನ್ನೂ ಕೆಲವರು ಉಚ್ಚಾರಗಳ ಮಧ್ಯೆ ಅನಾವಶ್ಯಕ ಅಕ್ಷರಗಳನ್ನ ಸೇರಿಸಿ ಮಾತನಾಡುತ್ತಾರೆ ಹಾಗು ಇತ್ಯಾದಿ”.

೨. ವೈಯಾಗ್ರ

ವೈಯಾಗ್ರ  ತಾಯಾರಿಸಲು ಬೇಕಾದ ಸಾಮಗ್ರಿಗಳ ಪಟ್ಟಿ ನೀಡಿದ ಜಗತ್ತಿನ ಅತ್ಯಂತ ಹಳೆಯ ಹಾಗು ಮೊದಲ ಪುಸ್ತಕ ಎಂದರೆ ಅದು ಕಾಮಸೂತ್ರ. ಈಗಿನ ಕಾಲದ ಔಷಧಿಗಳು ಬರುವ ೨೦೦೦ ವರ್ಷಗಳ ಹಿಂದೆಯೇ ಇದರಲ್ಲಿ ಉಲ್ಲೇಖ ಆಗಿತ್ತು.

ಅದು ಏನೆಂದರೆ, ವೈಯಾಗ್ರ  = ಹಾಲಲ್ಲಿ ಬೇಯಿಸಿದ ಗುಬ್ಬಿಯ ಮೊಟ್ಟೆ  + ತಿಳಿಯಾದ ತುಪ್ಪ + ಜೇನುತುಪ್ಪ

೩. ಮುಕ್ತ ಹಾಗು ಸಹಿಷ್ಣು ಸಮಾಜ

ಕಾಮಸೂತ್ರವು ಬೇರೆ ದೇಶದಿಂದ ದಂಗೆದ್ದು ಬಂದ  ರಾಜರ ಆಳ್ವಿಕೆ ಮುನ್ನ ಭಾರತ ಹೇಗಿತ್ತು ಎಂಬುದರ ಬಗ್ಗೆ ಹೇಳುತ್ತದೆ. ಇಲ್ಲಿನ ಜನರು ಮುಕ್ತ ಮತ್ತು ಸಹಿಷ್ಣು ಸಮಾಜ ಹುಟ್ಟು ಹಾಕಿದ್ದರು ಎಂದು ಹೇಳುತ್ತದೆ.

ವಿಧವೆಯರು ಮರುಮದುವೆಯಾಗಿ ಸಮಾಜದ ಯಾವುದೇ ಕಳಂಕಗಳಿಗೆ ಒಳಪಡದೆ ಸಹಜ ಜೀವನ ನಡೆಸಬಹುದಿತ್ತು. ಕಾಮಸೂತ್ರವು “ಗಂಡನಿಗೆ ಪ್ರಾಮಾಣಿಕಳಾದ  ಹೆಣ್ಣು, ಧರ್ಮ, ಹಣ, ಕಾಮ ಪಡೆದು ಉತ್ತುಂಗದ ಸ್ಥಾನದಲ್ಲಿ ಇರುತ್ತಾಳೆ” ಎಂದು ಹೇಳುತ್ತದೆ.

೪. ಸಂಪತ್ತು : ಗುರಿಯ ಮೇಲೇ ದೃಷ್ಟಿ

ಇಂದಿನ ಕಾಲದಲ್ಲಿ ತಜ್ಞರು ಹೇಳುವುದು ಒಂದೇ “ನೀವು ಸಂಪತ್ತು ಕೂಡಿ ಹಾಕುವುದರ ಮೇಲೆ ಗಮನವಿಡಿ, ಫಲಿತಾಂಶದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ” ಎಂದು.

ವಾತ್ಸ್ಯಾಯನ ಕೂಡ ಕಾಮಸೂತ್ರದಲ್ಲಿ ಸರಿಯಾದ ವಿಧಾನಗಳ ಅಳವಡಿಕೆ ಮತ್ತು ಸಂಪತ್ತು ಬೆಳೆಸಿಕೊಳ್ಳುವ ಸರಿಯಾದ ಪ್ರಕ್ರಿಯೆಗಳ ಬಗ್ಗೆ  ಬಹಳಷ್ಟು ಒತ್ತು ನೀಡಿದ್ದಾನೆ.

೫. ಮಿತಿವಾಗಿ, ಹಿತವಾಗಿ

ಜಗತ್ತಿನ ಇತರ ನಾಗರಿಕತೆಗಳು ಇನ್ನೂ ಅನಾಗರಿಕತೆಯ ಮಡುವಿನಲ್ಲಿಯೇ ಇದ್ದಾಗಲೇ, ವಾತ್ಸ್ಯಾಯನನು ಮಿತಿಯಲ್ಲಿ ಇರುವುದರ ಬಗ್ಗೆ  ಕಾಮಸೂತ್ರದಲ್ಲಿ ಹೇಳಿದ್ದಾನೆ.

“ಸುಖಗಳು, ಮಿತಿಯಲ್ಲಿ ಮತ್ತು ಎಚ್ಚರಿಕೆಯಿಂದ ಅನುಭವಿಸಬೇಕು. ಹೊರಗಡೆ ಭಿಕ್ಷುಕರು ಊಟಕ್ಕೆ ಬೇಡುವುರೆಂದು ಯಾರು ಅಡುಗೆ ಮಾಡುವುದು ನಿಲ್ಲಿಸುವುದಿಲ್ಲ ಅಥವಾ ಜಿಂಕೆ ಸಸಿಗಳನ್ನ ಹಾಳು ಮಾಡಿ ಬಿಡಬಹುದೆಂದು ಯಾರು ಬೀಜಗಳನ್ನ ಬಿತ್ತದೆ ಇರಲಾರರು” ಎಂದು ಹೇಳುತ್ತದೆ ಕಾಮಸೂತ್ರ.

೬. ಹೆಂಗಸರಿಗೆ ವೃತ್ತಿಪರ ಶಿಕ್ಷಣ

ಹೆಂಗಸರಿಗೆ ವೃತ್ತಿಪರ ಶಿಕ್ಷಣ ನೀಡುವುದರ ಪ್ರಾಮುಖ್ಯತೆ ಬಗ್ಗೆ ಕಾಮಸೂತ್ರವು ಬಹಳ ಎಳೆಎಳೆಯಾಗಿ ತಿಳಿಸುತ್ತದೆ. ಆಗಿನ ಕಾಲದ ಸಮಾಜದಲ್ಲಿಯೂ ಜನರು ಹೆಣ್ಣು ಮಕ್ಕಳಿಗೂ ವಿದ್ಯಾಭ್ಯಾಸ ಮತ್ತು ವೃತ್ತಿಪರ ಶಿಕ್ಷಣ ನೀಡುತ್ತಿದ್ದ ಪ್ರಗತಿಪರ ಮನಸ್ಥಿತಿ ಹೊಂದಿದ್ದರು. ಉದಾಹರಣೆಗೆ :

ಬರವಣಿಗೆ  ಮತ್ತು ಚಿತ್ರಕಲೆ

ಮಳೆ ನೀರನ್ನು ಕೊಳಗಳಲ್ಲಿ ಶೇಖರಿಸಿ ಇಡುವುದು

ಕಿವಿಯ ಆಭರಣಗಳನ್ನ ಮಾಡುವ ಕಲೆ

ಸುಗಂಧ ದ್ರವ್ಯಗಳನ್ನ ತಯಾರು ಮಾಡುವ ಕಲೆ

ಮರಗೆಲಸ

೭. ಲೈಂಗಿಕ ಭಂಗಿಗಳು, ಚುಂಬನ ಮತ್ತು ಸಂಭೋಗ

ವಾತ್ಸ್ಯಾಯನ ಪ್ರಕಾರ ಲೈಂಗಿಕ ಕ್ರಿಯೆ ನಡೆಸಲು ೮ ವಿಧಾನಗಳು ಇದ್ದು, ಪ್ರತಿಯೊಂದು ವಿಧಾನಗಳನ್ನು ೮ ರೀತಿಗಳಲ್ಲಿ ಮಾಡಬಹುದು. ಹೀಗಾಗಿ ವಾತ್ಸ್ಯಾಯನನು ಕಾಮಸೂತ್ರದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಇರುವ 64 ವಿಭಿನ್ನ ವಿಶಿಷ್ಟ ದಾರಿಗಳ ಬಗ್ಗೆ ಬರೆದು ವಿಶ್ಲೇಷಿಸಿದ್ದಾನೆ. ಲೈಂಗಿಕತೆ ಬಗ್ಗೆ  ಈ ರೀತಿಯ ಅಧ್ಯಯನ ಮತ್ತು ವಿಶ್ಲೇಷಣೆ ಮಾನವ ಇತಿಹಾಸದಲ್ಲಿ ಇಲ್ಲಿಯವರೆಗೂ ಯಾರು ಮಾಡಿಲ್ಲ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon