Link copied!
Sign in / Sign up
1
Shares

ಹೊಸ ಅಮ್ಮಂದಿರ ಸುಸ್ತಿಗೆ ಕಾರಣ ನಿದ್ದೆಗೆಡುವುದಲ್ಲ! ಅಸಲಿ ಕಾರಣ ಈ ಅಧ್ಯಯನದಲ್ಲಿದೆ ನೋಡಿ!

ಎದೆಹಾಲುಣಿಸುವುದು ಹೆಂಗಸರಲ್ಲಿ ಕಂಡು ಕೇಳರಿಯದಂತಹ ಬದಲಾವಣೆಗಳನ್ನ ತರುತ್ತದೆ. ಅತಿಯಾದ ಬಾಯಾರಿಕೆ, ಎದೆನೋವಿನಿಂದ ಹಿಡಿದು ಅತಿಯಾದ ಮಮತೆ ಉಕ್ಕಿ ಹರಿಯುವಂತಹ ಭಾವನೆ ಹುಟ್ಟುವವರೆಗೂ, ಎದೆಹಾಲು ನೀಡುವಿಕೆಯು ಹೊಸ ತಾಯಿಯ ಇಂದ್ರಿಯಗಳೊಂದಿಗೆ ಚೆಲ್ಲಾಟ ಆಡುತ್ತದೆ. ನಾನೂ ನನ್ನ ಮಗುವಿಗೆ ಎದೆಹಾಲು ನೀಡುವಾಗ, ಒಂದು ತೀವ್ರವಾದ ಅನುಭವದಿಂದ ಇನ್ನೊಂದು ತೀವ್ರವಾದ ಅನುಭವದ ಕಡೆಗೆ ತೂಗಾಡುತ್ತಿದ್ದೆ.

ನಾವು ನಮ್ಮ ನಿದ್ರಾಹೀನತೆಗೆ ಆಯಾಸದ ಮೇಲೆ ಅಥವಾ ಹೊತ್ತಲ್ಲದ ಹೊತ್ತಲ್ಲಿ ಮಗುವಿನ ಅಳುವಿಗೆ ನಿದ್ದೆಗೆಟ್ಟು ಎದ್ದೇಳಬೇಕಾದ ಪರಿಸ್ಥಿತಿಗಳ ಮೇಲೆ ಗೂಬೆ ಕೂರಿಸಿದರೂ ಸಹ, ಮಗುವಿಗೆ ಎದೆಹಾಲು ನೀಡುವುದು ತಾಯಿಗೆ ಹೆಚ್ಚು ನಿದ್ದೆ ಬರಿಸುತ್ತದೆ ಎಂಬ ವಿಶಯಕ್ಕೇನೇ ನಾವು ಹೆಚ್ಚು ವೈಜ್ಞಾನಿಕ ಪುರಾವೆಗಳನ್ನ ಒದಗಿಸಬಹುದು. ತಾಯಿಯ ದೇಹದಲ್ಲಿ ಮಮತೆ ಮತ್ತು ಬಾಂಧವ್ಯದ ಭಾವನೆಯನ್ನ ಹುಟ್ಟುಹಾಕುವ ಹಾರ್ಮೋನ್ ಆದ ಆಕ್ಸಿಟೋಸಿನ್ನೇ, ಎದೆಹಾಲು ಕುಡಿಸುವಾಗಲೂ ದೇಹದಲ್ಲಿ ಬಿಡುಗಡೆ ಹೊಂದುವುದು.

ಈ ಹಾರ್ಮೋನ್ ಕೇವಲ ಮಮತೆ ಮತ್ತು ಬಾಂಧವ್ಯವನ್ನ ಗಟ್ಟಿಯಾಗಿಸುವಂತಹ ಭಾವನೆಗಳನ್ನ ಹುಟ್ಟು ಹಾಕುವುದಷ್ಟೇ ಅಲ್ಲದೆ, ಇದು ಒತ್ತಡವನ್ನ ಕಡಿಮೆ ಮಾಡಿ, ತಾಯಿಗೆ ಆರಾಮ ನೀಡುತ್ತದೆ. ಈ ಆರಾಮವನ್ನ ಕೆಲವೊಮ್ಮೆ ಆಯಾಸ ಎಂದು ಅರ್ಥೈಸಿಕೊಳ್ಳಲಾಗಿ ಬಿಡುತ್ತದೆ. ಆಕ್ಸಿಟೋಸಿನ್ ಹೊರತಾಗಿ, ಡೆಲಿವೆರಿ ನಂತರ ದೇಹದಲ್ಲಿ ಬಿಡುಗಡೆ ಹೊಂದುವ ಇನ್ನೊಂದು ಹಾರ್ಮೋನ್ ಆದ ಪ್ರೊಲಾಕ್ಟಿನ್ ಕೂಡ ಅಮ್ಮಂದಿರಿಗೆ ನಿದ್ದೆ ಬರಸಬಹುದು.

ಈಗಷ್ಟೇ ಜನ್ಮ ನೀಡಿರುವ ಹೊಸ ತಾಯಂದಿರಿಗೆ ಪ್ರೊಲಾಕ್ಟಿನ್ ಹಾರ್ಮೋನ್ ತುಂಬಾನೇ ನಿದ್ದೆ ಬರಿಸಬಹುದು. ಈ ಹಾರ್ಮೋನ್ ಎದೆಹಾಲಿನ ಉತ್ಪತ್ತಿಯಲ್ಲೂ ಪಾತ್ರ ವಹಿಸುವುದರಿಂದ, ಹೊಸದಾಗಿ ತಾಯಿ ಆದವರಿಗೆ ಮತ್ತು ಎದೆಹಾಲು ನೀಡುತ್ತಿರುವವರಿಗೆ ಹೆಚ್ಚು ಆಯಾಸ  ಅಥವಾ ನಿದ್ದೆ ಉಂಟಾಗುತ್ತದೆ ಎನ್ನುವುದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತದೆ.

ಹೀಗಾಗಿ ಅಮ್ಮಂದಿರೆ, ಒಂದು ವೇಳೆ ನೀವು ಹಿಂದೆಂದಿಗಿಂತಲೂ ಹೆಚ್ಚು ಆಯಾಸ ಏಕೆ ಅನುಭವಿಸುತ್ತಿದ್ದೀರಾ ಎಂದು ಯೋಚಿಸುತ್ತಿದ್ದರೆ, ಅದು ಕೇವಲ ನೀವು ಕಡಿಮೆ ಹೊತ್ತು ನಿದ್ದೆ ಮಾಡುತ್ತೀರಾ ಎನ್ನುವ ಕಾರಣಕ್ಕೆ ಮಾತ್ರವಲ್ಲ. ಎದೆಹಾಲು ನೀಡುವುದು ಕೂಡ ನಿಮ್ಮನ್ನು ತುಂಬಾನೇ ಸುಸ್ತಾಗಿಸಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon