Link copied!
Sign in / Sign up
4
Shares

ಹೆಂಗಸರೇ ಹುಷಾರ್! : ಸುಂದರವಾದ ಕೇಶರಾಶಿಯೇ ಈ ಹೆಣ್ಣಿನ ಸಾವಿಗೆ ಕಾರಣ ಆಯಿತು!

ಹರ್ಯಾಣದ ಅಮ್ಯೂಸ್ಮೆಂಟ್ ಪಾರ್ಕ್ ಒಂದರಲ್ಲಿ ನಡೆದ ಒಂದು ಹೃದಯ ವಿದ್ರಾವಕ ಘಟನೆಯಲ್ಲಿ, ಹೆಂಗಸಿನೊಬ್ಬಳ ಉದ್ದನೆಯ ಕೇಶ ರಾಶಿಯೇ ಆಕೆಯ ಸಾವಿಗೆ ಕಾರಣವಾಗಿದೆ. ಹೆಂಗಸರು ತಮ್ಮ ಕೇಶ ರಾಶಿಯ ಬಗ್ಗೆ ತುಂಬಾನೇ ಕಾಳಜಿ ವಹಿಸಿ, ಅದನ್ನ ಹೆಮ್ಮೆಯಿಂದ ತಮ್ಮ ಸೌಂದರ್ಯದ ಪ್ರತೀಕವಾಗಿ ಪ್ರದರ್ಶಿಸುತ್ತಾರೆ. ಆದರೆ, ಹೀಗೆ ಪ್ರೀತಿಯಿಂದ ಕಾಪಾಡಿಕೊಂಡು ಬಂದ ಕೇಶರಾಶಿಯು ಒಂದು ಹೆಣ್ಣಿನ ಸಾವಿಗೆ ಕಾರಣ ಆಗಿದ್ದಾದರೂ ಹೇಗೆ ಎಂದರೆ, ಅದೊಂದು ನಿಜಕ್ಕೂ ಮನಕಲಕುವ ಘಟನೆ.

ಹರ್ಯಾಣದ ಪಿಂಜೋರ್ ನಗರದ ಅಮ್ಯೂಸ್ಮೆಂಟ್ ಪಾರ್ಕ್ ಒಂದಕ್ಕೆ 28 ವರ್ಷದ ಪುನೀತ್ ಕೌರ್ ತನ್ನ ಪತಿ, 2 ವರ್ಷದ ಒಂದು ಮಗು ಮತ್ತು ಕೆಲವು ಸಂಬಂಧಿಕರೊಂದಿಗೆ ತೆರೆಳಿದ್ದಳು. ಭಟಿಂಡಾ ನಗರವಾಸಿಗಳಾದ ಈ ಕುಟುಂಬವು ರಜಾದಿನಗಳು ಸಿಕ್ಕವೆಂದು ಪ್ರವಾಸಕ್ಕೆ ತೆರೆಳಿದ್ದಾರೆ. ಪ್ರವಾಸ ಮುಗಿಸಿ ಮನೆಗೆ ವಾಪಸ್ ಆಗುವಾಗ ಹಾದಿಯ ಮಧ್ಯದಲ್ಲಿ ಸಿಕ್ಕಿದ ಪಿಂಜೋರ್ ಗಾರ್ಡನ್ಸ್ ಅಲ್ಲಿನ ಅಮ್ಯೂಸ್ಮೆಂಟ್ ಪಾರ್ಕ್ ಒಂದಕ್ಕೆ ಇವರೆಲ್ಲರೂ ಹೋಗಿದ್ದಾರೆ.


6 ಜನರಿಗೆಂದು ನಾಲ್ಕು ಗೋ-ಕಾರ್ಟ್ ಗಾಡಿಗಳನ್ನ ಬುಕ್ ಮಾಡಲಾಗಿತ್ತು. ಪುನೀತ್ ಕೌರ್ ಒಂದು ಗಾಡಿಯಲ್ಲಿ ತನ್ನ ಗಂಡನೊಂದಿಗೆ ಕೂತಿದ್ದರೆ, ಇನ್ನೊಂದು ಗಾಡಿಯಲ್ಲಿ ಪುನೀತ್ ಕೌರ್ ಮಗ ಮತ್ತು ಅವನ ಅಜ್ಜಿ ಕೂತಿದ್ದರು. ಇನ್ನೇನು ಆ ಗಾಡಿಯಲ್ಲಿ ಅವರು ಆ ಟ್ರ್ಯಾಕ್ ಮೇಲೆ ಒಂದು ಮುಗಿಸುವಷ್ಟರಲ್ಲಿ ಪುನೀತ್ ಕೌರ್ ಕೂದಲು ಆಕೆಯು ಸಡಿಲವಾಗಿ ಕಟ್ಟಿದ್ದ ಬನ್ ಇಂದ ಬಿಡಿಸಿಕೊಂಡು ಗಾಳಿಯಲ್ಲಿ ಹಾರಾಡಿವೆ. ಅನಂತರ ಆ ಕೂದಲು ಕೆಳಗಿಳಿದು ಗಾಡಿಯ ಗಾಳಿಗೆ ಸಿಲುಕಿ ಹಾಕಿಕೊಂಡಿವೆ. ಆಕೆ ಹೆಲ್ಮೆಟ್ ಅನ್ನು ಕೂಡ ಧರಿಸಿದ್ದಳು. ಗೋ-ಕಾರ್ಟ್ ಗಾಡಿಗಳು ಕ್ಷಿಪ್ರ ವೇಗದಲ್ಲಿ ಚಲಿಸುತ್ತಿದ್ದರಿಂದ, ಕೆಲವೇ ಕ್ಷಣಗಳಲ್ಲಿ ಆಕೆಯ ನೆತ್ತಿಯು ಆಕೆಯ ತಲೆಯಿಂದ ಕಿತ್ತು ಬಂದಿದೆ. ಪಕ್ಕದಲ್ಲಿ ಕೂತಿದ್ದ ಆಕೆಯ ಪತಿಗೆ ಅವಳ ಕಿರುಚಾಟ ಮಾತ್ರ ಕೇಳಿಸಿದೆ. ಅಲ್ಲಿ ಏನಾಗಿದೆ ಎಂಬುದು ಆತನಿಗೂ ಅರಿವಾಗಲು ಕೆಲವು ಕ್ಷಣಗಳು ಬೇಕಾಗಿವೆ.


ಪುನೀತ್ ಕೌರ್ ಗಂಭೀರ ಸ್ಥಿತಿಯಲ್ಲಿದ್ದಾಗ ಆಕೆಯನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಯಲ್ಲಿ ಆಕೆ ಈಗಾಗಲೇ ಸಾವನ್ನಪ್ಪಿದ್ದಾಳೆ ಎಂಬುದನ್ನ ಸಿಬ್ಬಂದಿ ದೃಢಪಡಿಸಿದ್ದಾರೆ. ಅಮ್ಯೂಸ್ಮೆಂಟ್ ಪಾರ್ಕ್ ಸಿಬ್ಬಂದಿಗಳ ಮೇಲೆ FIR ದಾಖಲಿಸಿಕೊಂಡು ಸೂಕ್ತ ಶಿಕ್ಷೆ ವಿಧಿಸುವಂತೆ ಪುನೀತ್ ಕೌರ್ ಆಗ್ರಹಿಸಿದ್ದಾರೆ.

ಅಮ್ಯೂಸ್ಮೆಂಟ್ ಪಾರ್ಕಿನ ಮುಖ್ಯಸ್ಥರಿಗೆ ಈ ಬಗ್ಗೆ ಕೇಳಿದಾಗ, ಪಾರ್ಕಿನಲ್ಲಿ ಗೋ-ಕಾರ್ಟ್ ಮಾಡಲು ಬರುವ ಎಲ್ಲರಿಗೂ ಸರಿಯಾದ ಕಿಟ್ ನೀಡಲು ಮತ್ತು ಸುರಕ್ಷತಾ ಕ್ರಮಗಳನ್ನ ಪಾಲಿಸಲೆಂದೇ ಓರ್ವ ಸಿಬ್ಬಂದಿ ಇದ್ದೇ ಇರುತ್ತಾನೆ ಎಂದು ಮತ್ತು ಇದೊಂದು ಅಪಘಾತ ಎಂದು ತಳ್ಳಿ ಹಾಕಿದರು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon