ಸುಂದರ ಕೂದಲು ಕಾಪಾಡಿಕೊಳ್ಳಲು ಸಹಾಯ ಮಾಡುವ ಈ ಸಂಗತಿಗಳು ನಿಮಗ್ಯಾರು ತಿಳಿಸುವುದಿಲ್ಲ
ಪ್ರತಿ ಹೆಂಗಳೆಯರು ಬಯಸುವುದು ವೇಗವಾಗಿ ಕೂದಲು ಬೆಳೆಯಬೇಕು, ಮತ್ತು ಅದು ದಪ್ಪವಾಗಿ ಆರೋಗ್ಯವಾಗಿರಬೇಕು, ತನ್ನ ಮೌಲ್ಯವನ್ನು ಕಳೆದುಕೊಳಬಾರದು ಎಂದು. ಕೆಲವು ವಿಧಾನಗಳನ್ನು ಮಾಡುವುದರಿಂದ ವೇಗವಾಗಿ ನಿಮ್ಮ ಕೂದಲ ಬೆಳವಣಿಗೆಯನ್ನು ಕಾಣಬಹುದು. ಕೂದಲು ಉತ್ತಮವಾಗಿರಲು ಕೂದಲಿನ ಆರೋಗ್ಯ ಕಾಪಾಡುವುದು ತುಂಬಾ ಮುಖ್ಯ. ಕೂದಲ ಬಗೆಗಿನ ನಿಮಗೆ ತಿಳಿದಿರದ ಕೆಲವು ವಿಷಯಗಳನ್ನು ಇಲ್ಲಿ ನೀವು ಕಂಡುಕೊಳ್ಳಬಹುದು.
೧.ಕೂದಲನ್ನು ಕತ್ತರಿಸುವುದು ಸಹಾಯವಾಗುತ್ತದೆ
ಕೂದಲನ್ನು ಕತ್ತರಿಸುವುದು ಕೂದಲ ಬೆಳವಣಿಗೆಗೆ ಸಹಾಯವಾಗುತ್ತದೆ. ಕೂದಲಿನ ತುದಿಯನ್ನು ಕತ್ತರಿಸುವುದರಿಂದ, ಹಾನಿಯಾಗಿರುವ, ಬಿರುಕು ಬಿಟ್ಟಿರುವ, ಸೀಳಿರುವ ಕೂದಲು ಹೋಗಿ ಕೂದಲು ನೇರವಾಗಿ ಬೆಳೆಯಲು ಸಹಾಯವಾಗುತ್ತದೆ. ಹಾಗೆಂದು ಇದನ್ನು ನೀವು ಪದೇ ಪದೇ ಮಾಡುವ ಅವಶ್ಯಕತೆ ಇಲ್ಲ, ೩ ತಿಂಗಳಿಗೊಮ್ಮೆ ಕೂದಲ ತುದಿಯನ್ನು ಕತ್ತರಿಸಿದರೆ ಸಾಕು. ವರ್ಷಕ್ಕೆ ಗರಿಷ್ಟ ೩ ಬಾರಿ ಕತ್ತರಿಸಿದರೆ ಸಾಕು.
೨.ನಿಮ್ಮ ಆಹಾರ ಕ್ರಮ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ
ಇದು ಕಟ್ಟು ಕಥೆ ಅಥವಾ ಮೂಢನಂಬಿಕೆಯಲ್ಲ, ಕೆಲವು ಆಹಾರಗಳು ನಿಜವಾಗಲೂ ನಿಮ್ಮ ಕೂದಲು ಬೆಳೆಯಲು ಸಹಾಯ ಮಾಡುತ್ತವೆ. ಮತ್ತು ಅವು ನಿಮ್ಮ ಕೂದಲಿನ ಪೋಷಣೆಯನ್ನು ಮಾಡುತ್ತವೆ.
೩.ಶಾಖವನ್ನು ತಪ್ಪಿಸಿ
ಇತ್ತೀಚಿಗೆ ಕೂದಲಿನ ಶೈಲಿಯನ್ನು ಬಗೆ ಬಗೆಯಲ್ಲಿ ಮಾಡಿಸುವುದು ರೂಢಿಯಾಗಿದೆ, ಹಾಗೆಂದು ಎಲ್ಲಾ ತರಹದ ಶೈಲಿಗಳು ನಿಮ್ಮ ಕೂದಲಿಗೆ ಹೊಂದಿಕೊಳ್ಳುವುದಿಲ್ಲ. ಮತ್ತು ಶಾಖವನ್ನು ಉಪಯೋಗಿಸಿ ಮಾಡುವ ಶೈಲಿಯನ್ನು ಆದಷ್ಟು ತಪ್ಪಿಸುವುದು ನಿಮ್ಮ ಕೂದಲು ಉತ್ತಮವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಹೇರ್ ಡ್ರೈಯರ್ (ಕೂದಲನ್ನು ಒಣಗಿಸಲು ಶಾಖ ನೀಡುವುದು), ಮುಂತಾದವುಗಳು ಕೂದಲಿಗೆ ಹಾನಿಯನ್ನು ಮಾಡುತ್ತವೆ.
೪.ದಿನ ತೊಳೆಯುವುದು ಅಗತ್ಯವಿಲ್ಲ
ಕೆಲವರು ಪ್ರತಿದಿನ ತಲೆ ಸ್ನಾನ ಮಾಡುವರು, ಅದು ಕೂದಲು ಆರೋಗ್ಯವಾಗಿರಲಿ ಎಂದು ಪ್ರತಿದಿನ ಸ್ನಾನ ಮಾಡುವರು, ನೆನೆಪಿರಲಿ ಪ್ರತಿದಿನ ತಲೆಸ್ನಾನ ಮಾಡುವುದು ಕೂದಲಿಗೆ ಒಳೆಯದಲ್ಲ. ಒಂದು ದಿನ ಬಿಟ್ಟು ಒಂದು ದಿನ ತಲೆಸ್ನಾನ ಮಾಡುವುದು ಕೂದಲ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
೫.ನಿಮ್ಮ ತಲೆಬುರುಡೆಯನ್ನು ಗಮನಿಸಿ
ನೀವು ಸ್ನಾನ ಮಾಡುವಾಗ ನಿಮ್ಮ ತಲೆಬುರುಡೆಯನ್ನು ನಿಮ್ಮ ಬೆರಳಿನಿಂದ ಮೂರು ನಿಮಿಷಗಳ ಕಾಲ ಮಸಾಜ್ ಮಾಡುವುದು ಕೂದಲ ಬೇರು ಉತ್ತಮವಾಗಲು ಮತ್ತು ಉತ್ತಮವಾಗಿ ಬೆಳೆಯಲು ಸಹಾಯವಾಗುತ್ತದೆ. ಕೂದಲಿಗೆಂದು ನೀವು ಬಳಸುವ ರಾಸಾಯನಿಕ ಉತ್ಪನ್ನಗಳ ಮೇಲೆ ನಿಗಾವಹಿಸಿ, ಇವುಗಳು ನಿಮ್ಮ ಕೂದಲಿಗೆ ಹಾನಿ ಮಾಡಬಹುದು.
