Link copied!
Sign in / Sign up
9
Shares

ಸುಂದರ ಮತ್ತು ಬುದ್ದಿವಂತ ಮಗು ಪಡೆಯಲು ಸಲಹೆಗಳು

ಮಗುವಿನ ಆರೋಗ್ಯ ಮಾತ್ರವಲ್ಲ ಮಗುವಿನ ಬುದ್ಧಿಶಕ್ತಿ ಮತ್ತು ಮೈಬಣ್ಣ ಕೂಡ ಗರ್ಭಾವಸ್ಥೆಯಲ್ಲಿ ನೀವು ಸೇವಿಸುವ ಆಹಾರದ ಮೇಲೆ ಅವಲಂಭಿತವಾಗಿದೆ. ಇವುಗಳನ್ನು ಸೇವಿಸುವುದರಿಂದ ನಿಮ್ಮ ಮಗುವಿನ ಮೈಬಣ್ಣ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸಬಹುದು. ಗರ್ಭಾವಸ್ಥೆಯಲ್ಲಿ ನೀವು ಯಾವುದನ್ನು ಸೇವಿಸದರೆ ಈ ಲಾಭಗಳನ್ನು ಪಡೆಯಬಹುದು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳಿ.

೧.ಫೋಲಿಕ್ ಆಮ್ಲ ಮತ್ತು ವಿಟಮಿನ್

ಮೆದುಳಿನ ನರಗಳನ್ನು ರಚಿಸುವ ಕಾರ್ಯದಲ್ಲಿ ಫೋಲಿಕ್ ಆಮ್ಲವು ಪ್ರಮುಖ ಪಾತ್ರವಹಿಸುತ್ತದೆ. ಗರ್ಭಾವಸ್ಥೆಯ ೪ವಾರಗಳ ಮುಂಚೆ ಮತ್ತು ಗರ್ಭಾವಸ್ಥೆಯ ೮ವಾರಗಳ ನಂತರ ಫೋಲಿಕ್ ಆಮ್ಲವನ್ನು ತೆಗೆದುಕೊಳ್ಳುವುದರಿಂದ ಮಗುವಿನಲ್ಲಿ ಆಟಿಸಂ ಶೇಕಡಾ ೪೦ರಷ್ಟು ಕಡಿಮೆಯಾಗುತ್ತದೆ. ಗರ್ಭಧರಿಸುವ ಮುಂಚೆಯೇ ನೀವು ದಿನವು ಇದನ್ನು ಸೇವಿಸುವುದು ಉತ್ತಮ ಎಂದು ಶಿಫಾರಸ್ಸು ಮಾಡಲಾಗುತ್ತದೆ. ಇದನ್ನು ನೀವು ಹಸಿರು ಸೊಪ್ಪು ಮತ್ತು ತರಕಾರಿಗಳನ್ನು ಹಾಗು ಕೆಂಪು ಅಥವಾ ಮಾಸೂರು ಬೆಳೆಗಳನ್ನು ಸೇವಿಸುವ ಮೂಲಕ ಪಡೆಯಬಹುದು.

೨.ಒಮೇಗಾ ೩ ಕೊಬ್ಬಿನಾಮ್ಲಗಳು

ಇದು ಮಗುವಿನ ನರಗಳ ಬೆಳವಣಿಗೆಗೆ ತುಂಬಾ ಅವಶ್ಯವಾಗಿರುವಂತದ್ದು. ಇದನ್ನು ನೀವು ನೈಸರ್ಗಿಕವಾಗಿ ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಪಡೆದುಕೊಳ್ಳಬಹುದು ಅವುಗಳೆಂದರೆ, ಮೊಟ್ಟೆ, ಮೀನು(ಪಾದರಸ ಇಲ್ಲದ್ದು), ಮಾಂಸ, ಬೀನ್ಸ್, ಅಗಸೆ ಬೀಜಗಳು, ಪಾಲಕ್ ಮುಂತಾದುವುಗಳು.

೩.ಹಣ್ಣು ಮತ್ತು ತರಕಾರಿಗಳು

ನಿಮ್ಮ ಮಗುವಿಗೆ ಮೆದುಳಿನ ಅಂಗಾಂಶಗಳನ್ನು ಹಾನಿ ಮಾಡುವ ರಾಡಿಕಲ್ ಗಳ ವಿರುದ್ಧ ಹೋರಾಡಲು ಆಂಟಿಯಾಕ್ಸಿಡಂಟ್ ನ ಅವಶ್ಯಕತೆ ಇದೆ. ಆದ್ದರಿಂದ ನೀವು ಸರಿಯಾದ ಆರೋಗ್ಯಕರ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಹಸಿರು ಎಲೆಯುಳ್ಳ ತರಕಾರಿಗಳು, ಟಮೋಟ, ಬ್ಲೂಬೆರ್ರಿ, ಪರಂಗಿ ಮುಂತಾದವುಗಳು ಆಂಟಿಯಾಕ್ಸಿಡಂಟ್ ಅನ್ನು ನೀಡುವಲ್ಲಿ ಸಹಾಯ ಮಾಡುತ್ತವೆ. ಗಟ್ಟಿಯಾಗಿರುವ ಹಣ್ಣು ಅಥವಾ ತರಕಾರಿಯನ್ನು ಬೇಯಿಸಿಕೊಂಡು ತಿನ್ನುವುದು ಉತ್ತಮ.

೪.ಹೆಚ್ಚು ಕಬ್ಬಿಣಾಂಶ ಇರುವ ಪದಾರ್ಥಗಳು

ಕಬ್ಬಿಣಾಂಶ ನಿಮ್ಮ ದೇಹದಲ್ಲಿ ಆಮ್ಲಜನಕ ಸರಾಗವಾಗಿ ಮಗುವಿಗೆ ಪೂರೈಕೆ ಮಾಡಲು ಅವಶ್ಯವಿರುವುದು. ಗರ್ಭಾವಸ್ಥೆಯಲ್ಲಿ ಹಲವು ಮಹಿಳೆಯರು ಕಬ್ಬಿಣಾಂಶದ ಕೊರತೆಯನ್ನು ಎದುರಿಸುವರು. ಇದು ನಿಮ್ಮ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಪಾಲಕ್, ಬೀಟ್ರೂಟ್, ಕೋಳಿ ಮುಂತಾದವುಗಳನ್ನು ಸೇವಿಸುವುದರಿಂದ ನೀವು ಕಬ್ಬಿಣಾಂಶವನ್ನು ನೈಸರ್ಗಿಕವಾಗಿ ಪಡೆಯಬಹುದು.

೫.ಹೆಚ್ಚು ಪ್ರೊಟೀನ್ ಇರುವ ಆಹಾರಗಳು

ಮಗುವು ಹೊಸ ಕೋಶಗಳನ್ನು ಮತ್ತು ಹಾರ್ಮೋನುಗಳನ್ನು ಬೆಳೆಸಿಕೊಳ್ಳಲು ಪ್ರೊಟೀನ್ ಸಹಾಯ ಮಾಡುತ್ತದೆ, ಮತ್ತು ಇದು ಮಗುವಿನ ಸಂಪೂರ್ಣ ಬೆಳವಣಿಗೆಯನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ. ನೀವು ನಿಮ್ಮ ಸಾಮಾನ್ಯ ದಿನಗಳಿಗಿಂತ ಗರ್ಭಾವಸ್ಥೆಯಲ್ಲಿ ಹೆಚ್ಚು ಪ್ರೊಟೀನ್ ಸೇವಿಸುವುದು ಒಳ್ಳೆಯದು. ದ್ವಿಧಳ ಧಾನ್ಯಗಳು, ಮಾಂಸ, ಹಾಲಿನ ಉತ್ಪನ್ನಗಳಲ್ಲಿ ಪ್ರೊಟೀನ್ ಹೆಚ್ಚಿರುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon