Link copied!
Sign in / Sign up
0
Shares

ನಿಮಗೆ ಹೆರಿಗೆ ನೋವು ಶುರುವಾಯಿತೆಂದು ತಪ್ಪು ಭಾವಿಸುವಂತೆ ಮಾಡುವ 6 ಲಕ್ಷಣಗಳು

ಹಲವು ಬಾರಿ ಗರ್ಭಿಣಿಯರಿಗೆ, ವೈದ್ಯರು ನೀಡಿದ ಪ್ರಸವ ದಿನಾಂಕದ  ಮೊದಲೇ, ಹೆರಿಗೆಯಾಗಿಬಿಡುತ್ತದೆ ಏನೋ ಎಂಬ ಅನುಭವವಾಗುತ್ತದೆ, ಇದನ್ನು false labor/ ಹುಸಿಯಾದ ಹೆರಿಗೆಯ ಅನುಭವ ಎಂದು ಕರೆಯುತ್ತಾರೆ. ಇದು ಎಲ್ಲಾ ಗರ್ಭಿಣಿಯರಲ್ಲಿ ಕಂಡುಬರುವ ಸಾಮನ್ಯ ಲಕ್ಷಣ ಎಂದರೆ ತಪ್ಪಾಗುವುದಿಲ್ಲ. ನಿಮಗೆ ಯೋನಿಯ ಸಂಕೋಚನವಾಗಿ, ಇನ್ನೇನು ಕೆಲವೇ ಕ್ಷಣಗಳ್ಳಲ್ಲಿ ಮಗು ಹೊರಗೆ ಬರುತ್ತದೆ ಎಂಬ ಅನುಭವವಾಗಿರಬಹುದು, ಆದರೆ ಇದು ಗರ್ಭಾವಸ್ಥೆಯಲ್ಲಿ ಸಾಮನ್ಯ ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ, ಗರ್ಭಾವಸ್ಥೆಯಲ್ಲಿ, ಅಂದರೆ ೯ ತಿಂಗಳು ತುಂಬುವ ಮೊದಲೇ ಗರ್ಭಿಣಿಯರಲ್ಲಿ ಕಂಡುಬರುವ ಕೃತಕ ಹೆರಿಗೆಯ ಇತರೆ ಲಕ್ಷಣಗಳು ಯಾವುದೆಂದು ವೈದ್ಯರಿಂದ ತಿಳಿಯೋಣ ಬನ್ನಿ.


೧. ಆಯಾಸ ಹೆರಿಗೆಯ ಲಕ್ಷಣವಲ್ಲ

ಹೌದು, ಇನ್ನೇನು ಹೆರಿಗೆಯ ದಿನಗಳು ಹತ್ತಿರ ಬರುತ್ತಿದೆ ಎಂದು ತಿಳಿದಾಗ, ಕೆಲವು ಮಹಿಳೆಯರಲ್ಲಿ ಹೆಚ್ಚು ಆಯಾಸ, ನೋವು ಕಂಡುಬರುತ್ತದೆ. ಹೀಗೆ ಹೆಚ್ಚು ಆಯಾಸ ಕಂಡುಬಂದ ಕೂಡಲೇ ನೀವು ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ಇದು ನಿಮ್ಮ ಯೋನಿಯು ಪ್ರಸವಕ್ಕೆ ಸಿದ್ದವಾಗುತ್ತಿರುವ ಲಕ್ಷಣಗಳಷ್ಟೇ. ಇದನ್ನು braxton hicks ಎಂದು ವೈದ್ಯರು ಕರೆಯುತ್ತಾರೆ. ಈ ರೀತಿ ನೋವು, ಯೋನಿಯ ಸಂಕೋಚನ ಸತತವಾಗಿ ಎಡೆ-ಬಿಡದೆ ತುಂಬಾ ಹೊತ್ತು ಕಂಡುಬಂದರೆ ವೈದ್ಯರ ಬಳಿ ಪರೀಕ್ಷೆಗೆ ಹೋಗುವುದು ಒಳ್ಳಯದು.


೨. ಸ್ಥಾನ ಬದಲಾವಣೆಯಿಂದ, ಯೋನಿಯ ಸಂಕೋಚನ ಕಡಿಮೆಯಾಗುತ್ತದೆ

ಯೋನಿಯ ಸಂಕೋಚನ ಬಂದ ಕೂಡಲೇ ಅದನ್ನು ಪ್ರಸವದ ಮುನ್ಸೂಚನೆ ಎಂದು ತಿಳಿಯಬೇಡಿ. ನಿಮಗೆ ಯೋನಿಯ ಸಂಕೋಚನ/ contractions ಕಂಡುಬಂದರೆ, ನೀವು ಕುಳಿತಿರುವ ಅಥವಾ ನಿಂತಿರುವ ಸ್ಥಾನ ಬದಲಾವಣೆಯನ್ನು ಮಾಡಿ. ಹೀಗೆ ಮಾಡಿದರೆ ನಿಮ್ಮ  ಸಂಕೋಚನ ಕಡಿಮೆಯಾಗುತ್ತದೆ ಹಾಗು ಈ ರೀತಿಯ ಸಂಕೋಚನ ಬಿಟ್ಟು ಬಿಟ್ಟು ಬರುವುದರಿಂದ ಇದು ಹೆರಿಗೆಯ ಲಕ್ಷಣವಲ್ಲ ಎಂದು ತಿಳಿಯಬೇಕು. ಹೆರಿಗೆಯ ನೋವು ಎಡೆಬಿಡದೆ ನಿರಂತರವಾಗಿ ಬರುತ್ತದೆ.


೩. amniotic ದ್ರವ ಒಡೆಯದೆ ಇರುವುದು

ನಿಮಗೆ ಎಷ್ಟೇ ಯೋನಿಯ ಸಂಕೋಚ ಕಂಡುಬಂದರೂ, ಯೋನಿಯೊಳಗಿರುವ ದ್ರವ ಒಡೆಯದೆ ಇದ್ದರೆ, ನೀವು ಭಯ ಪಡುವ ಅಗತ್ಯವಿಲ್ಲ. ಹೆರಿಗೆಯಾಗುವ ಸ್ವಲ್ಪ ಸಮಯದ ಮೊದಲು, ಯೋನಿಯ ಸಂಕೋಚನವಾಗಿ ನಂತರ, ನೀರು ಒಡೆದು ಮಗು ಹೊರಗೆ ಬರುತ್ತದೆ. ಯೋನಿಯಿಂದ ಯಾವುದೇ ರೀತಿಯ ನೀರು ಹೊರಗೆ ಬಾರದೆ ಇದ್ದರೆ, ಅದು ಹೆರಿಗೆಯ ಲಕ್ಷಣವಲ್ಲ ಎಂದು ನೀವು ತಿಳಿಯಬೇಕು.


೪. braxton hicksನಿಂದ ನಿಮಗೆ ಯೋನಿಯಲ್ಲಿ ಹಿಡಿದ ಅನುಭವಗುವುದು

ಸಾಮಾನ್ಯವಾಗಿ ಗರ್ಭಿಣಿಯರ ಯೋನಿಯಲ್ಲಿ ಭಿಗಿಯಾದ ಅಥವಾ ಎಳೆದ ಅನುಭವವಾಗುವುದು ಸಹಜ. ಇದು braxton hicksನಿಂದ ಆಗುವುದೇ ಹೊರತು ಹೆರಿಗೆಯ ಲಕ್ಷಣದಿಂದಲ್ಲ ಎಂದು ನೆನಪಿನಲ್ಲಿಡಿ. ಗರ್ಭಾವಸ್ಥೆಯ ಕೊನೆಯ ತ್ರೈಮಾಸಿಕದಲ್ಲಿ ಇದು ಸಾಮನ್ಯ. ಇದರಿಂದ ಗರ್ಭಿಣಿಯರು ಗಾಬರಿಯಾಗದೆ, ನೋವಿನ ಸಮಯದಲ್ಲಿ ವಿಶ್ರಮಿಸಬೇಕು.


೫. ಸಂಕೋಚನ ಒಂದೇ ರೀತಿಯ ನೋವನ್ನು ನೀಡುತ್ತದೆ

ಯೋನಿಯ ಸಂಕೋಚನದಿಂದ, ನಿಮಗೆ ನೋವು ಹಾಗೆಯೇ ಇರುವಂತೆ ಅನುಭವವಾಗುತ್ತದೆ. ಇತ್ತ ಕಡೆ ಕಡಿಮೆಯೂ ಆಗದೆ, ಜಾಸ್ತಿಯೂ ಆಗದೆ, ಒಂದೇ ರೀತಿಯ ನೋವು ಕಂಡುಬಂದರೆ ಅದು ಸುಳ್ಳು/ಹುಸಿ ಹೆರಿಗೆಯ ಲಕ್ಷಣ ಎಂದು ನೀವು ಮನದಟ್ಟು ಮಾಡಿಕೊಳ್ಳಬೇಕು. ನೋವು ಜಾಸ್ತಿಯಾಗುತ್ತಾ ಹೋದರೆ, ಹಾಗೂ ಯೋನಿಯಿಂದ ನೀರು ಒಡೆದ ಅನುಭವ ಕಂಡು ಬಂದರೆ ಮಾತ್ರ ಅದು ಹೆರಿಗೆಯ ಲಕ್ಷಣ ಎಂದು ನೀವು ತಿಳಿಯಬೇಕು.


೬. ಕಂದು/ ಬ್ರೌನ್ ಬಣ್ಣದ ರಕ್ತ

ಗರ್ಭಾವಸ್ಥೆಯ ಕೊನೆಯ ತ್ರೈಮಾಸಿಕದಲ್ಲಿ ಕಾಫಿ/ ಕಂದು ಬಣ್ಣದ ರಕ್ತ ಕಂಡುಬಂದರೆ, ಅದು ಹೆರಿಗೆಯ ಲಕ್ಷಣವಲ್ಲ. ಅತೀ ಕೆಂಪು ಅಥವಾ ಪಿನ್ಕಿಶ್ ರೆಡ್ ಬಣ್ಣದ ರಕ್ತ ಕಂಡುಬಂದರೆ ಮಾತ್ರ ಅದು ಪ್ರಸವದ ಮುನ್ಸೂಚನೆ ಎಂದು ತಿಳಿಯಬೇಕು. ಕೆಲವೊಂದು ಬಾರಿ,  ಸಂಭೋಗ ನಡಿಸಿದ ಹಲವು ದಿನಗಳ ನಂತರ ಈ ರೀತಿ ಕಾಫಿ/ ಬ್ರೌನ್ ಬಣ್ಣದ ರಕ್ತ ಕಂಡುಬರುವ ಸಾಧ್ಯತೆಗಳಿದೆ.



ಮೇಲೆ ಹೇಳಿದ ಯಾವುದೇ ಲಕ್ಷಣಗಳು ಗರ್ಭಿಣಿಯರಲ್ಲಿ ಕಂಡುಬಂದಲ್ಲಿ, ಗಾಬರಿಯಾಗದೆ ವಿಶ್ರಾಂತಿವಹಿಸಿ. ನಿಮಗೆ ವಿಪರೀತ ನೋವು, ಯೋನಿಯ ಸಂಕೋಚನ ಕಂಡುಬಂದಲ್ಲಿ ಒಮ್ಮೆ ಪ್ರಸೂತಿ ತಜ್ಞರನ್ನು ಭೇಟಿಯಾಗುವುದು ಒಳ್ಳೆಯದು.

ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು, ಬಂಧು-ಮಿತ್ರರೊಂದಿಗೆ ಶೇರ್ ಮಾಡುವ ಮೂಲಕ ಜಾಗೃತಿ ಮೂಡಿಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon