Link copied!
Sign in / Sign up
8
Shares

ಸರಳ ಮತ್ತು ಸುಲಭವಾದ ಗೋಧಿ ಮತ್ತು ಬಾಳೆಹಣ್ಣು ಬಿಸ್ಕತ್

ಈ ಚಳಿಗಾಲದಲ್ಲಿ ಮಗುವು ಶಾಲೆಯಿಂದ ಮನೆಗೆ ಬಂದ ತಕ್ಷಣ ಕೇಳುವುದು ತಿನ್ನಲು ಏನಾದರು ಕೊಡು ಎಂದು. ನೀವು ನಿಮ್ಮ ಮಗುವಿಗೆ ಅಂಗಡಿ ತಿನಿಸುಗಳನ್ನು ತಿನಿಸುವ ಬದಲು ನಿಮ್ಮ ಮನೆಯಲ್ಲೇ ಸುಲಭವಾಗಿ ತಯಾರಿಸಿ ನಿಮ್ಮ ಕೈರುಚಿಯ ಬಿಸ್ಕತ್ ಅನ್ನು ಕೊಡಿ. ಇದನ್ನು ಒಮ್ಮೆ ಮಾಡಿ ನೀವು ಹಲವು ದಿನಗಳವರೆಗೆ ಶೇಖರಿಸಿ ಇಟ್ಟುಕೊಂಡು ತಿನ್ನಬಹುದು. ಮಕ್ಕಳು ಇದನ್ನು ಇಷ್ಟ ಪಡುವರು. ಇಂದೇ ನಿಮ್ಮ ಮನೆಯಲ್ಲಿ ತಯಾರಿಸಲು ಸುಲಭ ಬಿಸ್ಕತ್ ಗಳು.

೧.ಗೋಧಿ ಬಿಸ್ಕತ್

ನಿಮಗೆ ಬೇಕಾಗಿರುವುದು

೧.೩೦೦ ಗ್ರಾಂ ಗೋಧಿ ಹಿಟ್ಟು

೨.೨೫೦ ಗ್ರಾಂ ಮೃದುಗೊಳಿಸಿದ ಬೆಣ್ಣೆ

೩.೧೪೦ ಗ್ರಾಂ ಸಕ್ಕರೆ

೪.೨ ಚಮಚ ವೆನಿಲ್ಲಾ ಸಾರ

೫.೧ ಮೊಟ್ಟೆಯ ಹಳದಿ ಭಾಗ

ತಯಾರಿಸುವುದು ಹೇಗೆ

೧.ಸಕ್ಕರೆಯನ್ನು ಪುಡಿಮಾಡಿಕೊಂಡು ಒಂದು ಬಟ್ಟಲಿನಲ್ಲಿ ಬೆಣ್ಣೆಯ ಜೊತೆಗೆ ಮಿಶ್ರಿಸಿ.

೨.ಮೊಟ್ಟೆಯ ಹಳದಿ ಭಾಗ ಮತ್ತು ವೆನಿಲ್ಲಾವನ್ನು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಬೆಣ್ಣೆಯ ಜೊತೆ ಮಿಶ್ರಿಸಿ.

೩.ಗೋಧಿ ಹಿಟ್ಟನ್ನು ಜಾಲರಿ ಆಡಿಸಿಕೊಂಡು, ಸಕ್ಕರೆ ಮತ್ತು ಮೊಟ್ಟೆ ಇರುವ ಬಟ್ಟಲಿಗೆ ಹಾಕಿರಿ.

೪.ಎಲ್ಲವನ್ನು ಒಂದು ಬಟ್ಟಲಿಗೆ ಹಾಕಿದ ನಂತರ ಇವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟಿನ ಹದಕ್ಕೆ ಬರಲಿ.

೫.ನಿಮಗೆ ಬೇಕಾದ ಆಕಾರಕ್ಕೆ ಹಿಟ್ಟನ್ನು ಕತ್ತರಿಸಿ, ೩೫೦ಡಿಗ್ರಿ ಯಲ್ಲಿ ೮ರಿಂದ ೧೦ ನಿಮಿಷಗಳ ಕಾಲ ಓವೆನ್ ನಲ್ಲಿ ಬೇಯಿಸಿ.

೬.ಓವೆನ್ ಇಲ್ಲದಿದ್ದರೆ, ಇಡ್ಲಿ ಪಾತ್ರೆಯಲ್ಲಿ ಇಡ್ಲಿ ಬೇಯಿಸುವ ಹಾಗೆ ಎಣ್ಣೆಯನ್ನು ಹಚ್ಚಿ ಬೇಯಿಸಿ. ಇಲ್ಲವಾದರೆ ನೀವು ತವಾದಲ್ಲಿ ಸ್ವಲ್ಪ ತುಪ್ಪಹಾಕಿ ಬೇಯಿಸಬಹುದು.

೨.ಬಾಳೆಹಣ್ಣು ಬಿಸ್ಕತ್

ನಿಮಗೆ ಬೇಕಾಗಿರುವುದು

೧.ಒಂದು ಬಟ್ಟಲು ಕೊಬ್ಬರಿ ತುರಿ

೨.೧/೩ ಓಟ್ಸ್/ತೊಕ್ಕೆ ಗೋಧಿ

೩.೨ ಬಾಳೆಹಣ್ಣು

ತಯಾರಿಸುವುದು ಹೇಗೆ

೧.ಕೊಬ್ಬರಿ ತುರಿ ಮತ್ತು ತೊಕ್ಕೆ ಗೋಧಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.

೨.ಬಾಳೆಹಣ್ಣನ್ನು ಕತ್ತರಿಸಿ ಅದನ್ನು ಸೇರಿಸಿ ರುಬ್ಬಿಕೊಳ್ಳಿ. ಪೇಸ್ಟ್ ತರಹ ಆಗುವವರೆಗೂ ಅದನ್ನು ರುಬ್ಬಿಕೊಳ್ಳಿ.

೩.ಇದನ್ನು ಬಿಸ್ಕತ್ ಆಕಾರದಲ್ಲಿ ಅಥವಾ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ.

೪.ಇದನ್ನು ೨೦ ನಿಮಿಷಗಳ ಅಥವಾ ಅದು ಕಂದು ಬಣ್ಣ ಬರುವವರೆಗು ಬೇಯಿಸಿ.

೫.ಬೆಂದ ನಂತರ ೫ ನಿಮಿಷಗಳ ಕಾಲ ಆರಲು ಬಿಡಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon