Link copied!
Sign in / Sign up
7
Shares

ಗರ್ಭಾವಸ್ಥೆಯಲ್ಲಿ ಕಬ್ಬಿನ ರಸ ಸೇವಿಸುವುದು ನಿಮ್ಮ ಮಗುವಿಗೆ ಒಳಿತೇ? ಕೆಡಕೆ?

ಜೀವನದಲ್ಲಿ ಅತ್ಯಂತ ನಿರಾತಂಕವಾಗಿರುವ ಜೀವವು ಕೂಡಾ ತನ್ನ ಆಹಾರಕ್ರಮವನ್ನು ಬದಲಿಸುವ ಬಗ್ಗೆ ಯೋಚಿಸುವಂತೆ ಮಾಡುವ ಸಮಯ ಗರ್ಭಾವಸ್ಥೆ. ಈ ಸಮಯದಲ್ಲಿ ಪ್ರತಿಯೊಬ್ಬ ತಾಯಿ ತಾನು ಆರೋಗ್ಯವಾಗಿರಬೇಕೆಂದು ಬಯಸುತ್ತಾಳೆ. ಹಾಗಾಗಿ ಅದನ್ನು ಸಾಧಿಸಲು ಆರೋಗ್ಯಕರ ಆಹಾರವನ್ನು ಸೇವಿಸುವುದರಲ್ಲಿ ಅನುಮಾನವಿಲ್ಲ. ಗರ್ಭಾವಸ್ಥೆಯ ಆರೋಗ್ಯಕರ ಆಹಾರವೆಂದರೆ ಸಾಕಷ್ಟು ಹಣ್ಣು, ತರಕಾರಿಗಳನ್ನು ಸೇವಿಸುವುದು. ಆದರೆ ಎಲ್ಲಾ ಹಣ್ಣುಗಳು ದೇಹಕ್ಕೆ ಪ್ರಯೋಜನಾಕಾರಿಯೇ? ಕಬ್ಬಿನ ರಸ ಅಥವಾ ಗಣ್ಣೆ ಕಾ ರಸ ಗರ್ಭಿಣಿಯರಿಗೆ ಎಷ್ಟು ಒಳಿತು? ಅದರ ಪ್ರಯೋಜನಗಳೇನು ಹಾಗೂ ಅದರ ಸಂಭಾವ್ಯ ಅಡ್ಡಪರಿಣಾಮಗಳೇನು? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಪರಿವಿಡಿ:

೧. ಕಬ್ಬು ಎಂದರೇನು?

೨. ಕಬ್ಬಿನ ರಸವನ್ನು ಹೇಗೆ ತಯಾರಿಸಬೇಕು?

೩. ಕಬ್ಬಿನ ರಸದ ಪೌಷ್ಟಿಕಾಂಶ

೪. ಗರ್ಭಾವಸ್ಥೆಯಲ್ಲಿ ನೀವು ಕಬ್ಬಿನ ರಸವನ್ನು ಏಕೆ ಸೇವಿಸಬೇಕು?

೫. ಗರ್ಭಾವಸ್ಥೆಯಲ್ಲಿ ಕಬ್ಬಿನ ರಸ ಸೇವಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಕಬ್ಬು ಎಂದರೇನು?

 

ಕಬ್ಬು ದೀರ್ಘಕಾಲಿಕ ಮತ್ತು ಎತ್ತರದ ಹುಲ್ಲು ಜಾತಿಯ ಸೇರಿದ್ದು. ಸಾಮಾನ್ಯವಾಗಿ ಆಗ್ನೇಯ ಏಷ್ಯಾದ ಬೆಚ್ಚಗಿನ ವಾತಾವರಣದಲ್ಲಿ ಕಂಡುಬರುತ್ತದೆ. ಸಕ್ಕರೆ ಉತ್ಪಾದನೆಯಲ್ಲಿ ಇದು ಬಳಸಲ್ಪಡುತ್ತದೆ. ಕಬ್ಬು ಕಚ್ಚಾ ರೂಪದಲ್ಲಿ ಅಥವಾ ಕಬ್ಬಿನ ರಸದ ರೂಪದಲ್ಲಿ ಸೇವಿಸಬಹುದು. ಕಬ್ಬಿನಿಂದ ತಯಾರಿಸಲ್ಪಟ್ಟ ಸವಿಯಾದ ರಸ (ಅಥವಾ ಗನ್ನೆ ಕಾ ರಸ ಎಂದು ಕೂಡಾ ಕರೆಯಲ್ಪಡುವ) ನಿಮಗೆ ಆರೋಗ್ಯಕರ. ಕಬ್ಬಿನ ರಸದ ಆರೋಗ್ಯದ ಪ್ರಯೋಜನಗಳು ಅಸಂಖ್ಯಾತವಾಗಿವೆ. ಗರ್ಭಾವಸ್ಥೆಯಲ್ಲಿ ಕಬ್ಬಿನ ರಸ ಸೇವಿಸುವುದರಿಂದ ನಿಮಗೆ ಹಲವಾರು ಪ್ರಯೋಜನಗಳಿವೆ. ಆದರೆ ನೀವು ಮಧುಮೇಹ ಅಥವಾ ಜೆಸ್ಟೇಷನಲ್ ಡಯಾಬಿಟಿಸ್-ನಿಂದ (ಗರ್ಭವಾಸ್ಥೆಯ ಮಧುಮೇಹ) ಬಳಲುತ್ತಿದ್ದರೆ, ಕಬ್ಬು ಅಥವಾ ಕಬ್ಬಿಣ ರಸವನ್ನು ಸೇವಿಸದೇ ಇರುವುದು ಸೂಕ್ತ.

ಕಬ್ಬು ಪೌಷ್ಟಿಕವಾಗಿದ್ದು. ವಿಟಮಿನ್ B6, B5, B3, A, C ಮತ್ತು B1 ಹೊಂದಿದೆ. ಕಬ್ಬಿನಲ್ಲಿ ಮ್ಯಾಗ್ನಿಷಿಯಂ, ಐರನ್, ಕ್ಯಾಲ್ಶಿಯಂ ಕೂಡ ಇದೆ.

[Back To Top]

ಕಬ್ಬಿನ ರಸವನ್ನು ಹೇಗೆ ತಯಾರಿಸಬೇಕು?

ಕಬ್ಬಿನ ರಸವನ್ನು ತಯಾರಿಸುವುದು ಸುಲಭ ಕೆಲಸ. ಹೇಗೆ ತಯಾರಿಸಬೇಕು? ಇಲ್ಲಿದೆ ಅದರ ವಿಧಾನ. ಕಬ್ಬಿನ ಸಸ್ಯದ ದಪ್ಪವಾದ ಕಾಂಡವನ್ನು ಹಸ್ತಚಾಲಿತವಾಗಿ ಕಾರ್ಯನಿರ್ವಹಿಸುವ ಯಂತ್ರದಲ್ಲಿ ಹಾಕಿದರೆ, ಆ ಯೊಂತ್ರವು ಕಬ್ಬಿನ ಸಸ್ಯವನ್ನು ನುಜ್ಜುಗುಜ್ಜಿಸಿ, ಅದರಿಂದ ರುಚಿಕರವಾದ ರಸವನ್ನು ಹಿಂಡಿ ತೆಗೆಯುತ್ತದೆ. ಈ ರಸವನ್ನು ಸೋಸಿ, ಈ ಸುವಾಸನೆಭರಿತ ರಸವನ್ನು ಸೇವಿಸಬಹುದು.

ಈ ಗನ್ನೇ ಕಾ ರಸವನ್ನು ಏನೂ ಸೇರಿಸದೇ ಹಾಗೆಯೆ ಸೇವಿಸಬಹುದು ಅಥವಾ ಅದರೊಂದಿಗೆ ಐಸ್ ಕ್ಯೂಬ್ ಗಳನ್ನು ಸೇರಿಸಿಕೊಂಡು ಕುಡಿಯಬಹುದು. ನಿಮಗೆ ಶುಂಠಿ, ಪುದೀನಾ, ಕಪ್ಪು ಉಪ್ಪು ಇಷ್ಟವಾಗುವೆ ಹಾಗಿದ್ದರೆ, ಅವುಗಳನ್ನು ಸಹ ಸೇರಿಸಬಹುದು.

ನೈಸರ್ಗಿಕವಾಗಿ ಹಿತ ನೀಡುವ ಈ ಕಬ್ಬಿನ ರಸವನ್ನು ಅಡುಗೆಯಲ್ಲಿಯೂ ಬಳಸಬಹುದು. ಸಕ್ಕರೆ ತಯಾರಿಸಲು ಅಥವಾ ವಿವಿಧ ಭಕ್ಷ್ಯಗಳಿಗೆ ಬೇಸ್ ತಯಾರಿಸಲು ಈ ರಸವನ್ನು ಉಪಯೋಗಿಸಿಕೊಳ್ಳಬಹುದು. ತೆಂಗಿನಕಾಯಿ ಆಧಾರಿತ ಭಕ್ಷ್ಯಗಳಲ್ಲಿ ಇತರ ದ್ರವ ಪದಾರ್ಥಗಳ ಸ್ಥಾನವನ್ನು ಭರ್ತಿಮಾಡುವ ಸಾಮರ್ಥ್ಯವನ್ನು ಕಬ್ಬಿನ ರಸ ಹೊಂದಿದೆ.

ಕಬ್ಬಿನ ರಸದ ರುಚಿಯನ್ನು ಮತ್ತು ಆರೋಗ್ಯ ಪ್ರಯೋಜನಗಳನ್ನು ಪ್ರಪಂಚದಾದ್ಯಂತ ಅನುಭವಿಸುತ್ತಿದ್ದಾರೆ. ಆದರೆ, ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಮತ್ತು ಆಗ್ನೇಯ ಏಷ್ಯಾದಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.

ಕಬ್ಬಿನ ರಸದ ಪೌಷ್ಟಿಕಾಂಶ:

ಮೊದಲೇ ಹೇಳಿರುವಂತೆ ಕಬ್ಬಿನ ರಸದಲ್ಲಿ ವಿಟಮಿನ್ ಎ, ಬಿ1, ಬಿ2, ಬಿ3, ಬಿ5, ಬಿ6, ಸಿ, ಆಂಟಿಆಕ್ಸಿಡೆಂಟ್-ಗಳು, ಪ್ರೊಟೀನ್-ಗಳು ಮತ್ತು ಫೈಬರ್-ನಂತಹ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಇದು ಹೊಂದಿದೆ.ಈ ರೀತಿಯ ಪೌಷ್ಟಿಕಾಂಶದ ಪ್ರೊಫೈಲ್, ಅದರ ಮೌಲ್ಯ ಮತ್ತು ಕಬ್ಬಿನ ರಸದ ಆರೋಗ್ಯ ಪ್ರಯೋಜನಗಳನ್ನು ಹೆಚ್ಚಿಸುತ್ತದೆ.

ಪ್ರತಿ ೧೦೦ ಮಿಲಿ ಕಬ್ಬಿನ ರಸ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:

‣ ಎನರ್ಜಿ - 39 ಕ್ಯಾಲೋರಿ

‣ ಕಾರ್ಬೋಹೈಡ್ರೇಟ್ಗಳು - 9 ಗ್ರಾಂ

‣ ಫ್ಯಾಟ್ - 0 ಗ್ರಾಂ

‣ ಪ್ರೋಟೀನ್ - 0 ಗ್ರಾಂ

‣ ಕ್ಯಾಲ್ಸಿಯಂ - 10 ಮಿಗ್ರಾಂ

ಗರ್ಭಾವಸ್ಥೆಯಲ್ಲಿ ನೀವು ಕಬ್ಬಿನ ರಸವನ್ನು ಏಕೆ ಸೇವಿಸಬೇಕು?

ಆರೋಗ್ಯಕರವಾದ ಕಬ್ಬಿನ ರಸ ಕಡಿಮೆ ಕ್ಯಾಲರಿಯ ಪಾನೀಯವಾಗಿದ್ದು, ಗರ್ಭಿಣಿಯರಿಗೆ ಲಾಭದಾಯಕ. ಕಬ್ಬಿಣ ರಸದ ಆರೋಗ್ಯ ಪ್ರಯೋಜನಗಳ ವ್ಯಾಪ್ತಿ ನಿಮ್ಮ ಕಲ್ಪನೆಗೂ ಮೀರಿದ್ದು. ಗರ್ಭಾವಸ್ಥೆಯಲ್ಲಿ ಈ ಸವಿಯಾದ ರಸವನ್ನು ಏಕೆ ಸೇವಿಸಿ, ಆಸ್ವಾದಿಸಬೇಕು ಎನ್ನುವುದಕ್ಕೆ ಕಾರಣ ಇಲ್ಲಿದೆ.

1. ಕಬ್ಬಿನ ರಸದಲ್ಲಿರುವ ಪ್ರೋಟೀನ್: ಅಮೈನೊ ಆಮ್ಲಗಳು ನಿಮ್ಮ ಹಾಗೂ ನಿಮ್ಮ ಮಗುವಿನ ಜೀವಕೋಶಗಳ ಬಿಲ್ಡಿಂಗ್ ಬ್ಲಾಕ್ಸ್. ಆದ್ದರಿಂದ ನಿಮ್ಮ ಮಗುವಿನ ಆರೋಗ್ಯಕರ ಬೆಳವಣಿಗೆ ಗರ್ಭಾವಸ್ಥೆಯಲ್ಲಿ ಪ್ರೋಟೀನ್ ಅತ್ಯಗತ್ಯ. ಗರ್ಭಾವಸ್ಥೆಯಲ್ಲಿ ಕಬ್ಬಿನ ರಸವನ್ನು ಸೇವಿಸುವುದು ನಿಮ್ಮ ದೇಹದ ಅಗತ್ಯಗಳಿಗೆ ಅನುಗುಣವಾಗಿ ಸಹಾಯ ಮಾಡುತ್ತದೆ.

2. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ: ಕಬ್ಬು ರಸದಿಂದ ವಿವಿಧ ಆರೋಗ್ಯ ಪ್ರಯೋಜನಗಳಿವೆ. ಅದರಲ್ಲಿ ದೇಹದ ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಪಾತ್ರ ನಿರ್ವಹಿಸುವುದೂ ಒಂದು. ಇದು ಅತ್ಯುತ್ತಮ ಜೀರ್ಣಕಾರಿ ಚಿಕಿತ್ಸೆಯಲ್ಲಿ ಒಂದಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಸಾಮಾನ್ಯವಾಗಿ ಉಂಟಾಗುವ ತೊಂದರೆ ಮಲಬದ್ಧತೆ. ಕಬ್ಬಿನ ರಸದಲ್ಲಿನ ಪೊಟ್ಯಾಸಿಯಮ್ ಅದನ್ನು ನಿಭಾಯಿಸಲು ಮತ್ತು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಯಾವುದೇ ಸಂಭವನೀಯ ಸೋಂಕುಗಳನ್ನು ದೂರವಿಡಬಹುದು. .

3. ಬೈಲಿರುಬಿನ್ ಮಟ್ಟವನ್ನು ಸಮತೋಲನಗೊಳಿಸುತ್ತದೆ: ಗರ್ಭಾವಸ್ಥೆಯ ಸಮಯದಲ್ಲಿ ದೇಹದೊಳಗೆ ನಂಜಿನ ಅಂಶ ಸಹಜವಾಗಿ ಹೆಚ್ಚಾಗುತ್ತದೆ. ಹಾಗಾಗಿ, ದೇಹದ ನೈಸರ್ಗಿಕವಾದ ಡೇಟಾಕ್ಸಿಫೈರ್, ಯಕೃತ್ತಿಗೆ ಹೆಚ್ಚಿನ ಕೆಲಸ ಉಂಟಾಗುತ್ತದೆ. ಬಿಳಿರುಬಿನ್ ಯಕೃತ್ತಿನ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಕಬ್ಬಿನ ರಸ ದೇಹದಲ್ಲಿನ ಬಿಲಿರುಬಿನ್ ಅಂಶವನ್ನು ಅಗತ್ಯವಿರುವ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. 

4. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಗರ್ಭಾವಸ್ಥೆಯಲ್ಲಿ ಕಬ್ಬಿನ ರಸದ ಎಲ್ಲಾ ಆರೋಗ್ಯ ಪ್ರಯೋಜನಗಳಲ್ಲಿ, ಗರ್ಭಿಣಿ ಮಹಿಳೆಯರ ಪ್ರತಿರಕ್ಷೆಯನ್ನು ಉತ್ತೇಜಿಸುವುದು ಪ್ರಮುಖವಾಗಿದೆ. ಕಬ್ಬಿನ ರಸವು ಹೆಚ್ಚಿನ ಪ್ರಮಾಣದಲ್ಲಿ ಅಂಟಿಅಕ್ಸಿಡಂಟ್ಸ್ ಹೊಂದಿರುತ್ತದೆ. ಸಾಮಾನ್ಯ ಸೋಂಕಗಳ ವಿರುದ್ಧ ಹೋರಾಡುವಲ್ಲಿ ಮತ್ತು ಬಲವಾದ ಪ್ರತಿರಕ್ಷೆಯನ್ನು ಉಳಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

5. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ: ಕಬ್ಬಿನ ರಸವು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಆದರೆ ಕಡಿಮೆ ಮಟ್ಟದ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ. ಇದು ಮಧುಮೇಹ ರೋಗಿಗಳಿಗೆ ತುಲನಾತ್ಮಕವಾಗಿ ಒಳ್ಳೆಯದು. ಗ್ಲೈಸೆಮಿಕ್ ಸೂಚ್ಯಂಕದ ಕೆಳಮಟ್ಟವು ರಕ್ತದ ಸಕ್ಕರೆಯ ಮಟ್ಟದಲ್ಲಿ ಏರಿಕೆಯಾಗುವುದನ್ನು ತಡೆಗಟ್ಟುತ್ತದೆ. ಹಾಗಾಗಿ ಇದು ಗರ್ಭಿಣಿಯರಿಗೆ ಅತ್ಯಂತ ಉಪಯುಕ್ತವಾಗಿದೆ. ಗರ್ಭಾವಸ್ಥೆಯಲ್ಲಿ ಕಬ್ಬಿನ ರಸ ಸೇವಿಸುವುದು ಒಳ್ಳೆಯದಾದರೂ, ಮಿತವಾಗಿ ಸೇವಿಸುವುದು ಆರೋಗ್ಯಕರ.

6. ಗರ್ಭಿಣಿಯರಲ್ಲಿ ವಾಕರಿಕೆ ಅನುಭವವನ್ನು ಕಡಿಮೆ ಮಾಡುತ್ತದೆ: ಗರ್ಭಾವಸ್ಥೆಯಲ್ಲಿ ಬೆಳಗಿನ ಬೇನೆ ಅಥವಾ ದಿನಪೂರ್ತಿ ವಾಕರಿಕೆಯ ಅನುಭವ ಗರ್ಭಿಣಿಯರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಇದು ನಿಮ್ಮ ಮನಃಸ್ಥಿತಿ, ಉತ್ಪಾದಕತೆ ಮತ್ತು ಸ್ವಾಭಿಮಾನಕ್ಕೇ ತೊಂಡರ್ಲೆಯುಂಟು ಮಾಡಬಹುದು. ಪ್ರತಿದಿನ ಒಂದೂ ಲೋಟ ತಾಜಾ ಕಬ್ಬಿನ ರಸವನ್ನು ಸ್ವಲ್ಪ ಶುಂಠಿಯೊಂದಿಗೆ ಸೇವಿಸುವುದರಿಂದ ಬೆಳಿಗ್ಗೆ ಖಾಯಿಲೆಯ ಅನುಭವವನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು.

 

7. ಮೂತ್ರಕ್ಕೆ ಸಂಬಂಧಿತ ಸೋಂಕುಗಳು: ಉರಿಯೂತ ಮತ್ತು ಸುಡುವ ಸಂವೇದನೆಯನ್ನು ಕಡಿಮೆ ಮಾಡಲು, ಗರ್ಭಾವಸ್ಥೆಯಲ್ಲಿ ನಿಂಬೆ ರಸ ಮತ್ತು ತೆಂಗಿನ ನೀರಿನೊಂದಿಗೆ ಕಬ್ಬಿನ ರಸವನ್ನು ಕುಡಿಯುವುದು ಉತ್ತಮ. .

8. ನಿಶ್ಶಕ್ತಿಯನ್ನು ಹೋಗಲಾಡಿಸುತ್ತದೆ: ಗರ್ಭಾವಸ್ಥೆಯ ಅವಧಿಯು ಆಗಾಗ್ಗೆ ಆಯಾಸ ಮತ್ತು ದಣಿವಾಗುವುದು ಸಹಜ. ಕಬ್ಬಿನ ರಸದ ಆರೋಗ್ಯ ಪ್ರಯೋಜನಗಳಲ್ಲಿ ನಿಸಶಕ್ತಿಯನ್ನು ಹೋಗಲಾಡಿಸಿ, ತ್ವರಿತ ಶಕ್ತಿಯನ್ನು ನೀಡುವುದೂ ಒಂದು. ಈ ಸಾಮರ್ಥ್ಯವನ್ನು ಹೊಂದಿರುವ ಕಬ್ಬಿನ ರಸ ಗರ್ಭಾವಸ್ಥೆಯಲ್ಲಿ ಅಗತ್ಯವಾದ ಉನ್ನತ ಮಟ್ಟದ ಶಕ್ತಿಯನ್ನು ಒದಗಿಸುತ್ತದೆ. ಗರ್ಭಾವಸ್ಥೆಯ ಅವಧಿಯಲ್ಲಿ ಕಬ್ಬಿನ ರಸವನ್ನು ಕುಡಿಯುವುದು ಶಕ್ತಿಯ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಕಳೆದುಹೋದ ದೇಹ ದ್ರವವನ್ನು ಭರ್ತಿಮಾಡುತ್ತದೆ. 

[Back To Top]

ಗರ್ಭಾವಸ್ಥೆಯಲ್ಲಿ ಕಬ್ಬಿನ ರಸ ಸೇವಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಗರ್ಭಾವಸ್ಥೆಯ ಅವಧಿಯಲ್ಲಿ ಕಬ್ಬಿನ ರಸವನ್ನು ಸೇವಿಸುವಾಗ ಕೆಲವು ಮುನ್ನೆಚ್ಚರಿಕೆಗಳು ತೆಗೆದುಕೊಳ್ಳಬೇಕಾದ ಅಗತ್ಯವಿದೆ:

‣ ಕಬ್ಬಿನ ರಸವನ್ನು ಶುಚಿಯಾಗಿ ತಯಾರಿಸಿದಾಗ ಮತ್ತು ಅದನ್ನು ತಾಜಾವಾಗಿ ಸೇವಿಸಿದಾಗ ಅದು ಅತ್ಯುತ್ತಮವಾಗಿರುತ್ತದೆ. ಸ್ಥಬ್ದ ರಸವು ಗರ್ಭಿಣಿ ಮಹಿಳೆಯರಿಗೆ ಅರೋಗ್ಯ ತೊಂದರೆ ಉಂಟು ಮಾಡಬಹುದು.

‣ ನೀವು ಮಧುಮೇಹ ಹೊಂದಿರುವಿರಾ ಅಥವಾ ನೀವು ಗರ್ಭಧಾರಣೆಯ ಮಧುಮೇಹ ಹೊಂದಿರುವ ಸಾಧ್ಯತೆಗಳಿವೆಯೇ ಎಂದು ಖಚಿತವಾಗಿರದಿದ್ದರೆ, ನಿಮ್ಮ ವೈದ್ಯರ ಸಲಹೆಯನ್ನು ಪಡೆಯುವುದು ಉತ್ತಮ. ನಿಮಗೆ ಮಧುಮೇಹ ಇದ್ದರೆ, ಕಬ್ಬಿನ ರಸವನ್ನು ನಿಯಮಿತವಾಗಿ ಸೇವಿಸುವುದು ಉತ್ತಮ.

‣ ನಿಯಮಿತವಾಗಿ ಕಬ್ಬಿನ ರಸವನ್ನು ಸೇವಿಸುವುದು ಉತ್ತಮ. ಏಕೆಂದರೆ ಅತಿಯಾದರೆ ಅಮೃತವೂ ವಿಷ.

ಕಬ್ಬಿನ ರಸದಲ್ಲಿ ನಿಮಗೆ ಮತ್ತು ನಿಮ್ಮ ಮಗುವಿನ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು, ವಿಟಮಿನ್-ಗಳು ಇದ್ದು, ಆರೋಗ್ಯಕ್ಕೆ ಪ್ರಯೋಜನಾಕಾರಿಯಾಗಿದ್ದರೂ, ಕಬ್ಬಿನ ರಸವನ್ನು ಸೇವಿಸುವುದು ನಿಯಮಿತದಲ್ಲಿರುವುದು ಒಳಿತು. ನಿಮಗೆ ಕಬ್ಬಿನ ರಸವನ್ನು ಸೇವಿಸುವುದರ ಬಗ್ಗೆ ಯಾವುದಾದರೂ ಅನುಮಾನವಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon