Link copied!
Sign in / Sign up
44
Shares

ಸ್ಟ್ರೆಚ್ ಮಾರ್ಕ್ಸ್ ಗಳಿಗೆ ೩ ನೈಸರ್ಗಿಕ ಪರಿಹಾರಗಳು

ಸ್ಟ್ರೆಚ್ ಮಾರ್ಕ್ಸ್ ಗಳು ಚರ್ಮದ ಮೇಲೆ ಆಗುವ ಕಿರಿದಾದ ಉದ್ದ ಗುರುತುಗಳು. ಅವು ಬಿಳಿ ವರ್ಣದಲ್ಲಿ, ತುಸು ಅಸಭ್ಯವಾಗಿ ಕಾಣಿಸುತ್ತವೆ. ಪ್ರಧಾನವಾಗಿ ಅವು ಕಿಬ್ಬೊಟ್ಟೆಯ ಭಾಗದಲ್ಲಿ ಉದ್ದವಾಗಿ ಕಂಡುಬಂದರೂ, ನಿಮ್ಮ ತೊಡೆಗಳು, ತೋಳುಗಳು, ಪೃಷ್ಠ ಮತ್ತು ಸ್ತನಗಳು ಕೂಡ ಇದಕ್ಕೆ ಒಳಗಾಗುತ್ತವೆ. ಹೆಚ್ಚಿನ ಜನರು ಅವುಗಳನ್ನು ತೊಡೆದುಹಾಕಲು ಬಯಸುತ್ತಾರೆ ಮತ್ತು ನೀವು ಇದನ್ನು ಮಾಡಲು ಬಯಸಿದರೆ, ನಿಮ್ಮ ಸ್ಟ್ರೆಚ್ ಮಾರ್ಕ್ಸ್ ಗಳನ್ನು ಮನೆಯಲ್ಲಿಯೇ ಕಡಿಮೆ ಮಾಡಿಕೊಳ್ಳಲು 3 ನೈಸರ್ಗಿಕ ಮತ್ತು ಸಾವಯವ ವಿಧಾನಗಳು ಇಲ್ಲಿವೆ.

ಸಕ್ಕರೆ ಸ್ಕ್ರಬ್

ಇದಕ್ಕೆ ಬೇಕಾದಾದ್ದು:

೧.ಒಂದು ಚಮಚ ಸಕ್ಕರೆ

೨.ಒಂದೆರಡು ಹನಿ ಬಾದಾಮಿ ಎಣ್ಣೆ

೩.ಒಂದೆರಡು ಹನಿ ನಿಂಬೆರಸ

ನೀವು ಏನು ಮಾಡಬೇಕು?

೧.ಧಾನ್ಯಗಳ ರಚನೆಯಂತೆ ತರಿಯಾಗುವವರೆಗೆ ಎಲ್ಲಾ ಪದಾರ್ಥಗಳನ್ನು ಮಿಶ್ರಿಸಿ.

೨.ನಿಮ್ಮ ಚರ್ಮದ ಮೇಲೆ ಇದರಿಂದ ೮-೧೦ ನಿಮಿಷಗಳ ವರೆಗೆ ಅಂಗ ಮರ್ಧನ ಮಾಡಿ.

೩.ಬೆಚ್ಚನೆಯ ನೀರಿನಿಂದ ತೊಳೆಯಿರಿ ಮತ್ತು ತೇವಾಂಶದಿಂದ ಇರುವಂತೆ ನೋಡಿಕೊಳ್ಳಿ.

ಇದನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಮಾಡಿ.

ಇದು ಕೆಲಸ ಮಾಡುತ್ತದೆ., ಏಕೆಂದರೆ ಸಕ್ಕರೆ ಅದ್ಭುತವಾದ ಪದರಕಳುಚುವ ಗುಣ ಹೊಂದಿದೆ ಮತ್ತು ಧಾನ್ಯದ ರಚನೆ ರಕ್ತವು ಸರಾಗವಾಗಿ ಹರಿಯಲು ಸಹಾಯ ಮಾಡುತ್ತದೆ ಮತ್ತು ಸ್ಟ್ರೆಚ್ ಮಾರ್ಕ್ಸ್ ಗಳನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಹರಳೆಣ್ಣೆ

ಏನು ಬೇಕು?

೧.ಹರಳೆಣ್ಣೆ

ನೀವು ಏನು ಮಾಡಬೇಕು?

೧.ಹರಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು, ೧೫-೨೦ನಿಮಿಷಗಳ ಕಾಲ ಸ್ಟ್ರೆಚ್ ಮಾರ್ಕ್ಸ್ (ಕಲೆಗಳು)ಗಳು ಇರುವ ಜಾಗದಲ್ಲಿ ಅಂಗ ಮರ್ಧನ ಮಾಡಿರಿ.

ಅಥವಾ

೧.ಹರಳೆಣ್ಣೆಯನ್ನು ಸ್ಟ್ರೆಚ್ ಮಾರ್ಕ್ಸ್ ಗಳ ಮೇಲೆ ಅನ್ವಯಿಸಿ ಮತ್ತು ೫ ರಿಂದ ೧೦ ನಿಮಿಷಗಳ ಕಾಲ ವೃತ್ತಾಕಾರದ ಚಲನೆಯಲ್ಲಿ ಮೃದುವಾಗಿ ಮಸಾಜ್(ಅಂಗ ಮರ್ಧನ) ಮಾಡಿ.

೨.ಆ ಜಾಗವನ್ನು ತೆಳುವಾದ ಹತ್ತಿ ಬಟ್ಟೆಯಿಂದ ಸುತ್ತಿರಿ, ಮತ್ತು ಬಿಸಿ ನೀರಿನ ಸೀಸದಿಂದ ಅಥವಾ ಉಪ್ಪನ್ನು ಉರಿದು ಒಂದು ಬಟ್ಟೆಯಲ್ಲಿ ಸುತ್ತಿ ಅದರ ಶಾಖವನ್ನು ಕನಿಷ್ಠ ಅರ್ಧ ಗಂಟೆಗಳ ಕಾಲ ನೀಡಿರಿ.

ದಿನಕ್ಕೆ ಒಂದು ಬಾರಿ ಇದನ್ನು ಮಾಡಿರಿ. ಮತ್ತು ಒಂದು ತಿಂಗಳವರೆಗೆ ಇದನ್ನು ನಿರಂತರವಾಗಿ ಮಾಡಿ ಧನಾತ್ಮಕ ಫಲಿತಾಂಶವನ್ನು ಕಾಣಿರಿ.

ಹರಳೆಣ್ಣೆಯಲ್ಲಿ ರಿಕೊನೊಲಿಕ್ ಆಮ್ಲ ಇದೆ, ಇದು ಚರ್ಮ ನಿಯಂತ್ರಣ ದಲ್ಲಾಳಿಯಾಗಿ ಕೆಲಸ ಮಾಡುತ್ತದೆ, ಮತ್ತು ಸ್ಟ್ರೆಚ್ ಮಾರ್ಕ್ಸ್ ಗಳನ್ನು ಗುಣ ಪಡಿಸುತ್ತದೆ, ಮತ್ತು ಇದು ಸ್ಟ್ರೆಚ್ ಮಾರ್ಕ್ಸ್ ಗಳು ತೀರಾ ಹಗುರವಾಗಿ ಕಾಣುವಂತೆ ಮಾಡುತ್ತದೆ.

ಲೋಗಸರ(ಆಲೋವೆರಾ)

ಏನೇನು ಬೇಕು?

೧.ತಾಜಾ ಲೋಗಸರದ ಲೋಳೆ

೨.೫ ವಿಟಮಿನ್ ಎ(A) ಗುಳಿಗೆಗಳು

೩.೧೦ ವಿಟಮಿನ್ ಇ(E) ಗುಳಿಗೆಗಳು

ನೀವು ಏನು ಮಾಡಬೇಕು?

೧.ಲೋಗಸರದ ಎಲೆಯಿಂದ ತಾಜಾ ಲೋಳೆಯನ್ನು ತೆಗೆದುಕೊಳ್ಳಿ, ಮತ್ತು ವಿಟಮಿನ್ ಎ(A), ವಿಟಮಿನ್ ಇ(E) ಗುಳಿಗೆಗಳಿಂದ ಎಣ್ಣೆಯನ್ನು ತೆಗೆದುಕೊಂಡು, ಎಲ್ಲವನ್ನು ಚೆನ್ನಾಗಿ ಮಿಶ್ರಿಸಿ.

೨.ಇದನ್ನು ಚರ್ಮದ ಮೇಲೆ ಅನ್ವಯಿಸಿ, ಸಂಪೂರ್ಣವಾಗಿ ಗುರುತುಗಳು ಹೀರಿಕೊಳ್ಳುವವರೆಗೆ ಅಂಗ ಮರ್ಧನ(ಮಸಾಜ್) ಮಾಡಿರಿ.

೩.ಹೆಚ್ಚು ಇದರಿಂದ ನೆನಸಬೇಡಿ/ತೊಳೆಯಬೇಡಿ.

ದಿನಕ್ಕೆ ಇದನ್ನು ಒಂದು ಅಥವಾ ಎರಡು ಬಾರಿ ಅನ್ವಯಿಸಿ.

ಲೋಗಸರ ಚರ್ಮಕ್ಕೆ ಹಿತವಾದ ಅನುಭವವನ್ನು ಕೊಡುತ್ತದೆ ಮತ್ತು ಬೇಗನೆ ಗುರುತುಗಳ ನಿವಾರಣೆಯನ್ನು ಮಾಡುತ್ತದೆ. ಇದಕ್ಕೆ ಲೋಗಸರದದಲ್ಲಿನ ಸಂಯುಕ್ತಳಾದ ಗ್ಲುಕೋಮನ್ನನ್ ಮತ್ತು ಗಿಬ್ಬೆರೆಲ್ಲಿನ್ ಕಾರಣ. ಇದು ಕೊಲ್ಯಾಜನ್ ಸಂಖ್ಯೆಯನ್ನು ಹೆಚ್ಚಿಸಿ ಸ್ಟ್ರೆಚ್ ಮಾರ್ಕ್ಸ್ ಗಳ ಕಲೆಯನ್ನು ಕಡಿಮೆಮಾಡುತ್ತದೆ.

ಪ್ರತಿಯೊಬ್ಬ ವ್ಯಕ್ತಿಯ ಚರ್ಮವು ವಿಭಿನ್ನವಾಗಿದೆ ಎಂದು ನೆನಪಿಡುವುದು ಮುಖ್ಯ. ಆದ್ದರಿಂದ ಈ ಸಲಹೆಗಳು ನಿಮಗೆ ಉಪಯೋಗವಾಗದಿದ್ದರೆ, ಚಿಂತಿಸಬೇಡಿ!, ಇದಕ್ಕೆ ಹಲವು ಮನೆಮದ್ದು ಪರಿಹಾರಗಳಿವೆ, ಇವು ಅವುಗಳಲ್ಲಿ ಮೊದಲ ೩ ಪರಿಹಾರಗಳು ಮಾತ್ರ.

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon