Link copied!
Sign in / Sign up
7
Shares

ನಿಮಗೆ ಸ್ಟ್ರೆಚ್ ಮಾರ್ಕುಗಳ ವಿಭಿನ್ನ ಹಂತಗಳ ಬಗ್ಗೆ ತಿಳಿದಿದೆಯೇ ?

ಗರ್ಭಾವಸ್ಥೆಯಲ್ಲಿ ಚರ್ಮವು  ವ್ಯಾಪಕವಾಗಿ ಹರಡಿಕೊಂಡಾಗ ಚರ್ಮದ ಮೇಲ್ಮೈಯಲ್ಲಿ ಕಂಡುಬರುವ ಅನಿಯಮಿತ ಗುರುತುಗಳನ್ನು ಸ್ಟ್ರೆಚ್ ಮಾರ್ಕ್ಸ್ ಅಥವಾ ಹಿಗ್ಗಿದ ಗುರುತು ಎಂದು ಕರೆಯಲ್ಪಡುತ್ತದೆ .ಚರ್ಮದ ಹಠಾತ್ ಸಡಿಲತೆಯಿಂದಾಗಿ ಹರಿದ ಅಂಗಾಂಶಗಳಾಗಳನ್ನು ಸ್ಟ್ರೆಚ್ ಮಾರ್ಕ್ಸ್ ಎಂದು ಕರೆಯುತ್ತೇವೆ .

ಮಹಿಳೆಯರು ಕೆನ್ನೇರಳೆ ಬಣ್ಣದಿಂದ ಕೆಂಪು ಮತ್ತು ಬಿಳಿ ಬಣ್ಣಕ್ಕೆ ಹರಡಿದ ಸ್ಟ್ರೆಚ್ ಮಾರ್ಕ್ ಗಳನ್ನು ಹೊಂದುತ್ತಾರೆ .ಗರ್ಭಿಣಿ ಮಹಿಳೆಯರಲ್ಲಿ ಇದು ತುಂಬಾ ಸಾಮಾನ್ಯವಾಗಿದೆ, ಏಕೆಂದರೆ ಅವರು ಅಗಾಧವಾಗಿ ವಿಸ್ತರಿಸಿದ ಹೊಟ್ಟೆಯನ್ನು ಹೊಂದುತ್ತಾರೆ .ಅಂಕಿ ಅಂಶಗಳ ಪ್ರಕಾರ  10 ಗರ್ಭಿಣಿಯರಲ್ಲಿ 9 ಮಂದಿ ತಮ್ಮ ದೇಹದಲ್ಲಿ ಹಿಗ್ಗಿಸಲಾದ ಗುರುತುಗಳನ್ನು  ಹೊಂದಿರುತ್ತಾರೆ ಎಂದು ಸಾಬೀತುಪಡಿಸಿದ್ದಾರೆ.

ಕೆಲವೊಮ್ಮೆ ಹಿಗ್ಗಿದ  ಗುರುತುಗಳು ಗರ್ಭಿಣಿಯಾಗದೆ ಇದ್ದರೂ ಸಹ ಕಾಣಿಸಿಕೊಳ್ಳುತ್ತವೆ.ಇದು ಗಂಭೀರ ಸ್ಥಿತಿಯಲ್ಲಿಲ್ಲದಿದ್ದರೂ, ಇದು ನಿಮಗೆ ಮಧುಮೇಹ ಅಥವಾ 'ಕಶಿಂಗ್ ಸಿಂಡ್ರೋಮ್' ಎಂಬ ಸ್ಥಿತಿಯನ್ನು ಹೊಂದಿರುವ ಒಂದು ಚಿಹ್ನೆಯಾಗಿರಬಹುದು.

ನಿಮಗೆ  ಗೊತ್ತೆ?

ಗರ್ಭಿಣಿ ಮಹಿಳೆಯರು ಮತ್ತು ಹದಿಹರೆಯದ ಮಕ್ಕಳು ಹೆಚ್ಚಿನ ಹಿಗ್ಗಿದ ಗುರುತುಗಳನ್ನು ಪಡೆಯುವ ಸಾಧ್ಯತೆಗಳಿವೆ. ಸ್ವಲ್ಪ ದೈಹಿಕ ಸ್ಥಿರತೆಯನ್ನು ತಲುಪುವ ಮೊದಲು ಅವರ ದೇಹವು ಇದಕ್ಕೆ ಒಳಗಾಗಬೇಕಾಗುತ್ತದೆ.

ಮಹಿಳೆಯರ ಮನಸ್ಸಿನಲ್ಲಿ ಏನಿದೆ ?

ಮಹಿಳೆಗೆ, ತನ್ನ ಮಗುವು  ಅತ್ಯಂತ ಮುಖ್ಯವಾದುದಾಗಿದೆ .ದೈಹಿಕ ಸೌಂದರ್ಯದ ಮಾನದಂಡಗಳನ್ನು ಮೀರಿ  ಮಹಿಳೆಯರು ಆ ಹಿಗ್ಗಿದ ಗುರುತುಗಳೊಂದಿಗೆ ಅಳವಡಿಸಿಕೊಳ್ಳಲು ಕಲಿಯಬೇಕಾಗುತ್ತದೆ . ಖಂಡಿತವಾಗಿ! ಹಿಗ್ಗಿಸಲಾದ ಗುರುತುಗಳನ್ನು ತಡೆಯಲು ಮಹಿಳೆಯರು ಸಂಪೂರ್ಣ  'ಪ್ರತಿಬಂಧಗಳನ್ನು ' ಅಳವಡಿಸಿಕೊಳ್ಳಲು ದಾಪುಗಾಲು ಹಾಕುತ್ತಾರೆ .ನಾವು ಆ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುವುದರಿಂದ ಅವುಗಳನ್ನು ತಪ್ಪಿಸಲು ಮನುಷ್ಯರಾಗಿ  ಅಸಾಧ್ಯವಾಗಿದೆ.

ಮಹಿಳೆಯರು ಮಾಡುವ ಮುಂದಿನ ವಿಷಯವೆಂದರೆ 'ನಿರಾಕರಣೆ'. ಅವರು ಸಾಕಷ್ಟು ಸಂಶೋಧನೆಗಳನ್ನು ಮಾಡುತ್ತಾರೆ ಮತ್ತು ತಮ್ಮ ಹಿಗ್ಗಿಸಲಾದ ಗುರುತುಗಳೊಂದಿಗೆ  ವ್ಯವಹರಿಸಬಹುದಾದ ವಿಧಾನಗಳ ಬಗ್ಗೆ ಹಿರಿಯರ ಜೊತೆ  ಮಾತನಾಡುತ್ತಾರೆ. ಆದರೆ ಅದು ಸಂಭವಿಸದಂತೆ ತಡೆಯಲು ಸಾಧ್ಯವಿಲ್ಲವೆಂದು ಅವರು ತಿಳಿದುಕೊಂಡಾಗ, ಅವರು 'ಸ್ವೀಕಾರ'ದ ವಿಷಯದಲ್ಲಿ ಬರಬೇಕಾಗುತ್ತದೆ. ಅಂತಿಮವಾಗಿ ಇದು ಅನಿವಾರ್ಯ ಎಂದು ತಿಳಿದುಕೊಂಡಿರುವ ಅಂತಿಮ ಹಂತವಾಗಿದೆ. ಇದನ್ನು ತಪ್ಪಿಸಲು ಪ್ರಯತ್ನಿಸುವ ಬದಲು, ಮಹಿಳೆಯರು ತಮ್ಮ ಹಿಗ್ಗಿಸಲಾದ ಮಡಿಕೆಗಳ ಬಗ್ಗೆ ಹೆಚ್ಚು  ಸಕಾರಾತ್ಮಕವಾಗಬೇಕು ಮತ್ತು  ಮತ್ತು ಅದು ಅವರ ಸುಂದರ ದೇಹದ  ಒಂದು ಭಾಗದಂತೆ ಅದನ್ನು ಅಪ್ಪಿಕೊಳ್ಳಬೇಕು .

ಹಿಗ್ಗಿಸಲಾದ ಗುರುತುಗಳ ವಿವಿಧ ಹಂತಗಳು ಯಾವುವು ?

ಸ್ಟ್ರೆಚ್ ಮಾರ್ಕ್ಸ್ ಗಳನ್ನು ಕಡಿಮೆ ಮಾಡಲು ಸಹಾಯ ಮಾಡುವ ವಿವಿಧ ಉತ್ಪನ್ನಗಳನ್ನು ಮಹಿಳೆಯರು ಪಡೆದುಕೊಂಡು ಪ್ರಯತ್ನಿಸುತ್ತಾರೆ .ಯಾವ ಹಂತದಲ್ಲಿ ಯಾವ ರೀತಿಯ ಕೆನೆ (ಕ್ರೀಮ್ ) ಅಥವಾ ಮುಲಾಮುಗಳನ್ನು  ಬಳಸಬೇಕೆಂದು ಅವರು ಸ್ವಲ್ಪ ಮಾತ್ರ ತಿಳಿದಿರುತ್ತಾರೆ. ವಾಸ್ತವವಾಗಿ, ಅನೇಕ ಮಹಿಳೆಯರಿಗೆ ವಿಸ್ತಾರವಾದ ಗುರುತುಗಳು ಇರುವ ಬಗ್ಗೆ ತಿಳಿದಿಲ್ಲ!

ಹಂತ ೧ :

ಮೊದಲಿಗೆ ಹಿಗ್ಗಿಸಲಾದ ಗುರುತುಗಳು ಬರಲಾರಂಭಿಸಿದಾಗ, ಅವುಗಳು ಗುಲಾಬಿ ಬಣ್ಣದಲ್ಲಿರುತ್ತವೆ ಮತ್ತು ಅವುಗಳು ತುಂಬಾ ತುರಿಕೆಯನ್ನೂ ಸಹ ಒಳಗೊಂಡಿರಬಹುದು .ನಿಮ್ಮ ದೇಹವು ತುಂಬಾ ಹಿಗ್ಗಿಕೊಳ್ಳುವುದಕ್ಕೆ ಒಗ್ಗಿಕೊಂಡಿಲ್ಲದ ಕಾರಣ ಹಿಗ್ಗಿಸಲಾದ ಗುರುತುಗಳನ್ನು  ಸುತ್ತುವರೆದಿರುವ ಪ್ರದೇಶವು ತೆಳುವಾಗುತ್ತದೆ ಮತ್ತು ಸಮತಲವಾಗುತ್ತದೆ .

ಹಂತ ೨:

ಈ ಹಂತದಲ್ಲಿ, ನಿಮ್ಮ ಹಿಗ್ಗಿಸಲಾದ ಗುರುತುಗಳು ಅದರ ಉದ್ದ ಮತ್ತು ಅಗಲದಲ್ಲಿ ಬೆಳೆಯುತ್ತವೆ. ಇದು ನಿಮ್ಮ ದೇಹವನ್ನು ಅವಲಂಬಿಸಿ ಅದರ ಬಣ್ಣವನ್ನು ಕೆಂಪು ಅಥವಾ ನೇರಳೆ ಬಣ್ಣಕ್ಕೆ ಬದಲಾಯಿಸುತ್ತದೆ.

ಹಂತ ೩ :

ಹಿಗ್ಗಿದ ಗುರುತುಗಳು ಪ್ರೌಢಾವಸ್ಥೆಯನ್ನು ತಲುಪುವುದು ಅವುಗಳ ಅಂತಿಮ ಹಂತವಾಗಿದೆ ,ಇಲ್ಲಿ ಅವು ತಮ್ಮ ಗುಲಾಬಿ / ಕೆಂಪು ಬಣ್ಣದ ಬಣ್ಣವನ್ನು ಕಳೆದುಕೊಳ್ಳುತ್ತೇವೆ .ನಿಮ್ಮ ಮಗು ಜನಿಸಿದ ನಂತರ, ಗುರುತುಗಳು ಬೆಳ್ಳಿಯಂತೆ ಅಥವಾ ಬಣ್ಣದಲ್ಲಿ ಬಿಳಿಯಾಗಿರುತ್ತವೆ ಮತ್ತು ಅವುಗಳು ಮಸುಕಾಗಲು ಶುರು ಮಾಡಿ , ಶುಷ್ಕವಾಗುತ್ತವೆ.

ಈ ಹಂತದಲ್ಲಿ, ಅವು ಹೆಚ್ಚು ಅಸಮತೋಲನವನ್ನು ಹೊಂದಿದ್ದು ಅಸಮವಾದ  ಆಕಾರವನ್ನು ಹೊಂದುತ್ತವೆ .

ಸ್ಟ್ರೆಚ್ ಮಾರ್ಕ್ಸ್ ಮಾನವನ ದೇಹದಲ್ಲಿ ಒಂದು ಒಳ್ಳೆಯ ವಿಷ್ಯದ ಶಾಶ್ವತವಾದ ಗುರುತಾಗಿದೆ .ಒಂದು ಮಹಿಳೆ ಹೇಗೆ ನಿಸ್ವಾರ್ಥವಾಗಬಹುದು ಎಂಬುದನ್ನು ಇದು ತೋರಿಸುತ್ತದೆ! ಒಂದು ಕಾಲದಲ್ಲಿ ಗಾಯಗಳಿಂದ ಮುಕ್ತವಾಗಿದ್ದ ದೇಹವು ಎಂದಿಗೂ ಮಾಯದ ಹಲವಾರು ಗುರುತುಗಳನ್ನು ಹೊಂದುತ್ತದೆ .

ಇದರಿಂದ ನಾನು ಏನನ್ನು ಕಲಿಯಬಲ್ಲೆ?

ಕೊನೆಯಲ್ಲಿ, ಅದು ಸಂಭವಿಸಿದ ಬದಲಾವಣೆಗಳಿಗೆ ಸಮ್ಮತಿಸುವಂತೆ ಎಲ್ಲ ಕುದಿತವೂ ತಣ್ಣಗಾಗಿ ನಿರಾಳವಾಗುತ್ತದೆ .ಸೌಂದರ್ಯ ಅನ್ನುವುದು ಮನದಲ್ಲಿರುತ್ತದೆ ಮತ್ತು ಕಣ್ಣುಗಳು ಅದನ್ನು ಸೆರೆ ಹಿಡಿಯುವ ಮಾಧ್ಯಮ ಮಾತ್ರವಾಗಿದೆ .ನಿಮ್ಮ ದೇಹದ ಪ್ರಮುಖ  ಬದಲಾವಣೆಗಳು ನಿಮ್ಮ ಗಣನೆಗೆ ಬಂದಿದ್ದರೂ ನೀವು ಅದನ್ನು ಪರಿಗಣಿಸದೆ ಜೀವನದಲ್ಲಿ ಎಷ್ಟು ನಿಸ್ವಾರ್ಥರಾದ ಅದ್ಭುತ ಮಹಿಳೆಯಾಗಿದ್ದೀರಿ.

ಪ್ರಿಯ  ಸ್ತ್ರೀ ..ನೀನೊಂದು ಅದ್ಭುತವಾಗಿರುವೆ ...

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon