Link copied!
Sign in / Sign up
8
Shares

ಸ್ಟ್ರೆಚ್ ಮಾರ್ಕ್ ಗಳ ನಿವಾರಣೆ ಮಾಡಲು ತಂತ್ರಗಳು ಇಲ್ಲಿವೆ

ಸ್ಟ್ರೆಚ್ ಮಾರ್ಕ್ಸ್! ಅದೊಂದು ಹೀನ, ಕೆಟ್ಟ ಅಂಶವೊಂದು ನಿಮ್ಮ ದೇಹದ ಮೇಲೆಲ್ಲಾ ಚಿಗರೊಡೆಯುತ್ತೆ, ಅದು ಕೂಡ ಯಾವಾಗ ಬೇಕೋ ಅವಾಗೆಲ್ಲಾ! ನೀವು ಗರ್ಭಿಣಿಯಾಗಿದ್ದಕ್ಕೆ ಇದೇನಾ ನಿಮಗೆ ಸಿಗ್ತಿರೋ ಶಿಕ್ಷೆ? ಇದೆಲ್ಲಾ ನಮಗೆ ತಿಳಿದಿರದ ವಿಷಯ ಆದರೆ ನಮಗೆ ತಿಳಿದಿರುವುದು ಏನೆಂದರೆ ಈ ಕೆಳಗಡೆ ಹೇಳಿರುವ ಅಂಶಗಳನ್ನು ನೀವು ಗಮನದಲ್ಲಿರಿಸಿಕೊಂಡರೆ ಈ ವಿಕಾರವಾದ ಪಟ್ಟಿಗಳನ್ನು ನೀವು ನಿವಾರಿಸಬಹುದು!

೧. ಆರೋಗ್ಯವೇ ಭಾಗ್ಯ

ನಿಮ್ಮ ಜೀವನಶೈಲಿ ಅಲ್ಲಿ ಬದಲಾವಣೆ ತನ್ನಿ! ಹೌದು, ದೇಹದ ಯುಕ್ತತೆಗೆ ಅಂದರೆ ಫಿಟ್ನೆಸ್ ಗೆ ಬದಲಿ ಯಾವುದು ಇಲ್ಲ. ನೀವು ನಿಮ್ಮ ಮಗುವಿಗಾಗಿ ಸೇವಿಸುವ ಪೌಷ್ಟಿಕಾಂಶ ಉಳ್ಳ ಅನೇಕ ಆಹಾರಗಳೊಂದಿಗೆ, ನಿಮಗಾಗಿಯೂ ಸ್ವಲ್ಪ ಸೇವಿಸಿ. ವಿಟಮಿನ್ A, E ಹಾಗು ಒಮೇಗಾ 3 ಹೆಚ್ಚಿರುವ ಆಹಾರಗಳನ್ನು ಸೇವಿಸಿ. ಇವುಗಳು ನಿಮ್ಮ ತ್ವಚೆಯ ಪುನಶ್ಚೈತನ್ಯ (elasticity) ಯನ್ನು ಹೆಚ್ಚಿಸಿ ಸ್ಟ್ರೆಚ್ ಮಾರ್ಕ್ ಗಳು ಉದ್ಭವವಾಗುವುದನ್ನೇ ನಿವಾರಿಸುತ್ತವೆ. ಮೀನು, ಮೀನಿನ ಎಣ್ಣೆ, ಕ್ಯಾರಟ್. ಮೊಟ್ಟೆ, ಆಕ್ರೋಡು ಹಾಗು ಸಿಂಪಿ- ಇವುಗಳು ಈ ಕೆಲಸಕ್ಕೆ ತುಂಬಾ ಉಪಯುಕ್ತವಾಗುತ್ತವೆ.

೨. ನಿಮ್ಮ ದೇಹಕ್ಕೆ ನೀರು ಹಾಕಿ

ನಿಮ್ಮ ದೇಹವನ್ನು ಸೂರ್ಯನೆಡೆಗೆ ಮುಖ ಮಾಡಿರುವ, ನೀರಿಗಾಗಿ ಹಪಹಪಿಸುವ, ಚಿಗುರೊಡೆಯುತ್ತಿರುವ ಸಸಿ ಎಂದು ಭಾವಿಸಿ. ಯಾವಾಗಲು ನಿಮ್ಮ ದೇಹದಲ್ಲಿ ನೀರು ತುಂಬಿರಲಿ ಹಾಗು ಆ ಹೆಚ್ಚುವರಿ ನೀರು ನಿಮಗೆ ನೀಡುವ ಹೆಚ್ಚುವರಿ ಚೈತನ್ಯವನ್ನು ಕಡೆಗಣಿಸಬೇಡಿ. ಬಹಳ ನೀರು ಕುಡಿದಾಗ ನಿಮ್ಮ ದೇಹವು ನಿರ್ವಿಷಗೊಳ್ಳುತ್ತದೆ ಹಾಗು ಮೆದುವಾಗುವಂತೆ ಮಾಡುತ್ತದೆ. ಇದು ಮಾಡುವುದರಿಂದ ನಿಮ್ಮ ಉದರದಲ್ಲಿರುವ ಮಗುವಿನಿಂದ ನಿಮ್ಮ ಗಾತ್ರ ಹೆಚ್ಚಿ ಚರ್ಮ ಹಿಗ್ಗಿದಾಗ, ನಿಮ್ಮ ತ್ವಚೆಗೆ ಚೇತರಿಸಿಕೊಳ್ಳಲು ಶಕ್ತಿ ನೀಡುತ್ತದೆ. ಇನ್ನು ಸುಲಭವಾಗಿ ಹೇಳಬೇಕೆಂದರೆ, ಸ್ಟ್ರೆಚ್ ಮಾರ್ಕ್ ಗಳು ಇರುವುದಿಲ್ಲ !

೩. ವ್ಯಾಯಾಮವು ಪರಿಪೂರ್ಣ ಮಾಡುತ್ತದೆ

ವ್ಯಾಯಾಮವು ನಿಮ್ಮ ದೇಹದಲ್ಲಿ ರಕ್ತ ಸಂಚಾರ ವೃದ್ಧಿಸುವುದು ಅಲ್ಲದೆ ನಿಮ್ಮ ನಮ್ರತೆ(ಫ್ಲೆಕ್ಷಿಬಿಲಿಟಿ) ಕೂಡ ಹೆಚ್ಚಿಸುತ್ತದೆ. ಇದು ನಿಮ್ಮನ್ನು ಸ್ವಲ್ಪವೇ ಸಮಯದಲ್ಲಿ ತುಂಬಾ ಗಾತ್ರ ಹೆಚ್ಚುವುದನ್ನು ಕಮ್ಮಿ ಮಾಡುತ್ತದೆ. ಇದರರ್ಥ ಇದು ಸ್ಟ್ರೆಚ್ ಮಾರ್ಕ್ ಗಳು ಎದುರು ಹೋರಾಡುತ್ತವೆ.  ದೈಹಿಕ ಚಟುವಟಿಕೆಗಳು ಕೇವಲ ಸ್ಟ್ರೆಚ್ ಮಾರ್ಕ್ ಗಳ ವಿರುಧ ಹೋರಾಡುವುದಷ್ಟೇ ಅಲ್ಲದೆ ಇದು ನೋವಿಲ್ಲದ, ಸರಾಗವಾದ ಹೆರಿಗೆಗೆ ಎಡೆ ಮಾಡಿಕೊಡುತ್ತದೆ.

೪. ನಿಮಗೆ ಮೊದಲ ಆದ್ಯತೆ ನೀಡಿಕೊಳ್ಳಿ

ನವೆ ಉಂಟಾಗಿ ಕೆರೆಯಬೇಕೆನಿಸಿದರೆ, ಅದಕ್ಕೆ ಉತ್ತರ ಕೆರೆಯುವುದು ಅಲ್ಲ! ನಿಮ್ಮ ತ್ವಚೆಯ ಬಗ್ಗೆ ಕಾಳಜಿ ವಹಿಸಿ. ಅದನ್ನು ಯಾವಾಗಲು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಿ. ನಿಮ್ಮ ಚರ್ಮ ಎಂದಿಗೂ ಒಣಗದಂತೆ ಕಾಪಾಡಿಕೊಳ್ಳಿ ಹಾಗು ಯಾವುದೇ ರೀತಿಯ ಕೆಂಪು ಗುರುತುಗಳ ಬಗ್ಗೆ ಹದ್ದಿನಕಣ್ಣು ಇಟ್ಟಿರಿ. ನಿಮ್ಮ ಉದರದ ಮೇಲೆ ಹಾಗು ಪ್ರುಷ್ಟಗಳ ಮೇಲೆ ತೆಂಗಿನ ಎಣ್ಣೆ ಲೇಪಿಸುತ್ತಾ ಇರಿ. ಏಕೆಂದರೆ ಈ ಸ್ಟ್ರೆಚ್ ಮಾರ್ಕ್ ಗಳಿಗೆ ಈಡಾಗುವ ಭಾಗಗಳು ಅಂದರೆ ಇವೆ.

೫. ಹೋದದ್ದೆಲ್ಲಾ ಹೋಗಲಿ

ಯಾವುದಾದರು ಸ್ಟ್ರೆಚ್ ಮಾರ್ಕ್ ಗಳು ನಿಮ್ಮ ಅರಿವಿಗೆ ಬಾರದಂತೆ ಉದ್ಭವಿಸಿದ್ದರೆ, ಅವುಗಳು ಕೊನೆವರೆಗೂ ಉಳಿಯುವಂತಹ ಗುರುತುಗಳನ್ನು ಬಿಡದಂತೆ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಿ. ವೈದ್ಯರ ಸಲಹೆ ಪಡೆದು, ರೆಟಿನಾಯ್ಡ್ (retinoid)ಗಳು ಅಥವಾ ಗ್ಲೈಕಾಲಿಕ್ ಆಸಿಡ್(glycolic acid)ಗಳು ಇರುವಂತಹ ಕ್ರೀಂಗಳನ್ನ ಬಳಸಿ. ಈ ಕ್ರೀಂಗಳನ್ನ ಮೃದುವಾಗಿ ಮಾರ್ಕ್ ಗಳು ಆಗಿರುವ ಭಾಗದ ಮೇಲೆ ಲೇಪಿಸಿ. ಇದು ಅವುಗಳನ್ನು ಸರಿ ಮಾಡುತ್ತವೆ, ಇಲ್ಲವಾದಲ್ಲಿ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ನೀವು ತಾಯ್ತನದ ಸವಾಲೆದುರಿಸಿ ದಕ್ಕಿಸಿಕೊಂಡ ಪಟ್ಟಿಗಳು ಅವು, ನೀವು ಇವಾಗ ಒಂದು ಹೆಣ್ಣು ಹುಲಿ!

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon