Link copied!
Sign in / Sign up
23
Shares

ಸ್ಟ್ರೆಚ್ ಮಾರ್ಕ್ಸ್ ಗಳನ್ನು ತೊಲಗಿಸಲು ೭ ನೈಸರ್ಗಿಕ ಪರಿಹಾರಗಳು

ನಿಸರ್ಗವು ನಮಗೆ ಬೇಕಾದಷ್ಟು ಉಡುಗೊರೆಗಳನ್ನು ಕೊಟ್ಟಿದೆ, ಅದರಂತೆ ಈ ಸ್ಟ್ರೆಚ್ ಮಾರ್ಕ್ಸ್ ಕೂಡ ಈ ಅನೇಕ ಉಡುಗೊರೆಗಳಲ್ಲಿ ಪ್ರಕೃತಿಯು ನಮಗೆ ದಯಪಾಲಿಸಿರುವ ಒಂದು ಉಡುಗೊರೆಯಾಗಿದೆ. ನಿಮ್ಮ ಸಣ್ಣ ಹೊಟ್ಟೆಯಲ್ಲಿ ಚಿಕ್ಕ ಮನುಷ್ಯ ಬೆಳೆಯಲು ಪ್ರಾರಂಭಿಸಿದಾಗ, ದೇಹವು ಅದಕ್ಕೆ ಸರಿಹೊಂದಿಕೊಳ್ಳಲು ವಿಸ್ತಾರವಾಗುತ್ತದೆ, ಮತ್ತು ನಿಮ್ಮ ಉದರ ವಿಸ್ತಾರವಾಗಿತ್ತು ಎಂಬುದಕ್ಕೆ ಪುರಾವೆಗಾಗಿ ಅವು ಬರುತ್ತವೆ- ಅದೇ ಸ್ಟ್ರೆಚ್ ಮಾರ್ಕ್ಸ್! ಆದಾಗ್ಯೂ ಸ್ಟ್ರೆಚ್ ಮಾರ್ಕ್ಸ್ ಗಳನ್ನು ತಡೆಯಲು ಕೆಲವು ಮಾರ್ಗಗಳಿವೆ. ಈ ಪ್ರಪಂಚದಲ್ಲಿ ಕಾಯಿಲೆಯನ್ನು ಬಂದ ಮೇಲೆ ಅದನ್ನು ಎದುರಿಸುವ ಬದಲು ಅದನ್ನು ಬರುವ ಮುಂಚೆಯೇ ತಡೆಯುವುದು ಒಳ್ಳೆಯದು. ಸ್ಟ್ರೆಚ್ ಮಾರ್ಕ್ಸ್ ಗಳಲ್ಲೂ ಅದನ್ನೇ ಮಾಡಿ.

ಆದರೆ ಈ ಸಲಹೆಯನ್ನು ತಡವಾಗಿ ಹೇಳಿದ್ದಿರಿ?, ನನಗೆ ಈಗಾಗಲೇ ಸ್ಟ್ರೆಚ್ ಮಾರ್ಕ್ಸ್ ಬಂದಿದೆ, ನಾನು ಏನು ಮಾಡಲಿ?

ಸರಿ. ಚಿಂತಿಸದಿರಿ ನಮ್ಮ ಬಳಿ ಅದಕ್ಕೆ ಪರಿಹಾರವಿದೆ, ಅವುಗಳನ್ನು ಕಡಿಮೆ ಮಾಡಲು(ನಿಯಂತ್ರಿಸಲು) ನೀವು ಪ್ರಯತ್ನಿಸಬಹುದಾದ ಕೆಲವು ವಿಷಯಗಳಿವೆ.

೧. ಲೋಗಸರ(ಆಲೋವೆರ)

ವಿವಿಧ ಸಮಸ್ಯೆಗಳಿಗೆ ಪರಿಹಾರವಾಗಿ, ಅದರಲ್ಲೂ ತ್ವಚೆಯ ಸಮಸ್ಯೆಗೆ ಹೆಚ್ಚು ಸಹಾಯವಾಗುವ ನೈಸರ್ಗಿಕ ಔಷದ ಲೋಗಸರ. ಇದು ತ್ವಚೆಯ ಸಮಸ್ಯೆಯನ್ನು ಗುಣಪಡಿಸುವ ಗುಣಲಕ್ಷಣವನ್ನು ಹೊಂದಿದ್ದು, ಸ್ಟ್ರೆಚ್ ಮಾರ್ಕ್ಸ್ ಗಳನ್ನು ದೂರವಾಗಿಸಲು ಇದು ಸಹಾಯ ಮಾಡುತ್ತದೆ. ಇದನ್ನು ನಿರಂತರವಾಗಿ ಉಪಯೋಗಿಸುತ್ತಾ ಬಂದರೆ ನೀವು ಧನಾತ್ಮಕ ಪಲಿತಾಂಶವನ್ನು ಕಾಣಬಹುದು. ಇದನ್ನು ಎರಡು ರೀತಿಯಲ್ಲಿ ಉಪಯೋಗಿಸಬಹುದು. ಒಂದು ಗಿಡದ ಎಲೆಯ ಲೋಳೆಯನ್ನು ನೇರವಾಗಿ ಕಲೆಗಾಳಗಿರುವ ಜಾಗಕ್ಕೆ ಹಚ್ಚುವುದು ಮತ್ತು ಸ್ವಲ್ಪ ಸಮಯದ ನಂತರ ತೊಳೆದುಕೊಳ್ಳುವುದು. ಮತ್ತೊಂದು ಲೋಗಸರ ಗಿಡದ ಲೋಳೆಯನ್ನು ವಿಟಮಿನ್ ಇ ಮತ್ತು ಎ(vitamins A and E)ಯನ್ನು ಹೊರ ತೆಗೆದ ಎಣ್ಣೆಯೊಂದಿಗೆ ಮಿಶ್ರಿಸಿ ಹಚ್ಚುವುದು.

೨. ಎಣ್ಣೆ

ಎಣ್ಣೆಯಲ್ಲಿ ಹಲವು ಬಗೆಗಳಿವೆ ಸ್ಟ್ರೆಚ್ ಮಾರ್ಕ್ಸ್ ಗಳ ಗೋಚರವನ್ನು ಕಡಿಮೆ ಮಾಡಲು ಯಾವ ಎಣ್ಣೆಯನ್ನು ಬಳಸಬೇಕು. ಇದು ಹರಳೆಣ್ಣೆ(ಕ್ಯಾಸ್ಟರ್ ಎಣ್ಣೆ), ಆಲಿವ್ ಎಣ್ಣೆ, ಕೊಬ್ಬರಿ ಎಣ್ಣೆ ಮುಂತಾದವುಗಳನ್ನು ಒಳಗೊಂಡಿದೆ. ಕಲೆಯಾಗಿರುವ ಜಾಗವನ್ನು ಮೃದುವಾಗಿ ನಿಮ್ಮ ಆಯ್ಕೆಯ ಎಣ್ಣೆಯಿಂದ ಕೆಲವು ನಿಮಿಷಗಳ ಅಂಗಮರ್ಧನ ಮಾಡಿ(ಮಾಸಾಜ್). ಮತ್ತು ಹರಳೆಣ್ಣೆ ಉಪಯೋಗಿಸಿದ್ದಲ್ಲಿ, ಬಿಸಿ ಪ್ಯಾಡ್(ಹೀಟ್ ಪ್ಯಾಡ್)  ಅನ್ನು ಇರಿಸಿ(ಎಣ್ಣೆ ಹಾಕಿ ಅದನ್ನು ಬಟ್ಟೆಯಿಂದ ಸುತ್ತಿದ ನಂತರ).

೩. ಕೋಕೋ ಬೆಣ್ಣೆ(cocoa butter)

ಇದು ಚರ್ಮಕ್ಕೆ ನೈಸರ್ಗಿಕವಾಗಿ ತೇವಾಂಶವನ್ನು ಒದಗಿಸುವ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ಇದನ್ನು ಹೆಚ್ಚು ದ್ರವಲೇಪ(ಲೋಷನ್) ಮತ್ತು ಚರ್ಮ ಕ್ರೀಂಗಳಲ್ಲಿ ಉಪಯೋಗಿಸುತ್ತಾರೆ. ಇದು ಮೊಡವೆ ವಿರೋಧಿ ಗುಣಗಳನ್ನು ಹೊಂದಿದೆ, ಮತ್ತು ಇದು ರಕ್ತ ಪರಿಚಲನೆಯನ್ನು ಸರಾಗವಾಗಿ ಆಗುವಂತೆ ಮಾಡುತ್ತದೆ. ಇದು ಆಲಿವ್ ಎಣ್ಣೆಯಂತೆ ಸ್ಟ್ರೆಚ್ ಮಾರ್ಕ್ಸ್ ಗಳನ್ನು ದೂರಮಾಡುತ್ತವೆ. ದಿನಕ್ಕೆ ಎರಡು ಬಾರಿಯಂತೆ ಕೆಲವು ತಿಂಗಳು ಹಚ್ಚುವುದರಿಂದ ಬೇಗನೆ ಪಲಿತಾಂಶವನ್ನು ಪಡೆಯಬಹುದು.

೪. ನಿಂಬೆ ಹಣ್ಣಿನ ರಸ

ನಿಂಬೆ ಹಣ್ಣು ಸಿಟ್ರಿಕ್ ಆಮ್ಲವನ್ನು ಹೊಂದಿದೆ. ಆಮ್ಲ ಗುಣ ಹೊಂದಿರುವ ನಿಂಬೆ ಹಣ್ಣು ಸ್ಟ್ರೆಚ್ ಮಾರ್ಕ್ಸ್ ಮೊಡವೆ ಮತ್ತು ಇತರೆ ಕಲೆಗಳನ್ನು ಕಡಿಮೆ ಮಾಡಲು ಮತ್ತು ನಿವಾರಿಸಲು ಸಹಾಯ ಮಾಡುತ್ತದೆ. ನಿಂಬೆ ರಸದಿಂದ ಕಲೆ ಇರುವ ಜಾಗವನ್ನು ಮೃದುವಾಗಿ ಸವರಿ ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆಯಿರಿ.

೫. ಆಲೂಗೆಡ್ಡೆ ರಸ

ಹಲವು ವಿಟಮಿನ್ ಮತ್ತು ಖನಿಜಗಳನ್ನು ಆಲೂಗಡ್ಡೆ ತನ್ನಲ್ಲಿರಿಸಿಕೊಂಡಿದೆ. ಜೀವಕೋಶಗಳನ್ನು ಸರಿಪಡಿಸಲು ಮತ್ತು ಪುನಃಸ್ಥಾಪಿಸಲು ಸಹಾಯ ಮಾಡುವ ಪ್ರಮುಖ ವಸ್ತುಗಳು ಇವುಗಳಾಗಿವೆ. ಆಲೂಗಡ್ಡೆ ರಸ ಈ ಅಂಶಗಳನ್ನು ಬಹಳಷ್ಟು ಹೊಂದಿದೆ ಇದು ಚರ್ಮದ ಜೀವಕೋಶಗಳನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಆದ್ದರಿಂದ ಸ್ಟ್ರೆಚ್ ಮಾರ್ಕ್ಸ್ ಗಳನ್ನು ತೆಗೆದುಹಾಕಬಹುದು. ಆಲೂಗಡ್ಡೆಯನ್ನು ಕತ್ತರಿಸಿ, ಕತ್ತರಿಸಿದ ತುಂಡಿನಿಂದ ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗವನ್ನು ಮೃದುವಾಗಿ ಕೆಲ ನಿಮಿಷಗಳ ಕಾಲ ತಿಕ್ಕಿರಿ, ಇದನ್ನು ನಿರಂತರವಾಗಿ ಮಾಡುವುದರಿಂದ ಬೇಗನೆ ನೀವು ಪಲಿತಾಂಶವನ್ನು ಕಾಣಬಹುದು.

೬. ಸಕ್ಕರೆ

ಇದು ಒರಟಾದ ಮತ್ತು ಪಕ್ವವಾದ ಕಾರಣ, ಒಣ ಚರ್ಮವನ್ನು ನಿರ್ಮೂಲನೆ ಮಾಡಲು ಸಹಾಯವಾಗುತ್ತದೆ. ಬಾದಾಮಿ ಎಣ್ಣೆ, ನಿಂಬೆರಸ, ನೀರು ಮತ್ತು ಒಂದು ಚಮಚ ಸಕ್ಕರೆಯನ್ನು ಮಿಶ್ರಿಸಿ. ಸಕ್ಕರೆ ಕರಗುವವರೆಗೆ ಮಿಶ್ರಿಸಿ, ಇದನ್ನು ಸ್ಟ್ರೆಚ್ ಮಾರ್ಕ್ಸ್ ಗಳಿರುವ ಜಾಗದಲ್ಲಿ ಬಳಸಿ ನಂತರ ನೀರಿನಿಂದ ತೊಳೆಯಿರಿ. ಇದನ್ನು ಕೆಲವು ತಿಂಗಳುಗಳ ವರೆಗೆ ನಿರಂತರವಾಗಿ ಮಾಡಿದಲ್ಲಿ ಸ್ಟ್ರೆಚ್ ಮಾರ್ಕ್ಸ್ ಗಳ ಕಲೆ ಕಡಿಮೆಯಾಗುತ್ತದೆ.

೭. ಆಲ್ಫಾಲ್ಫ

ಆಲ್ಫಾಲ್ಫ ಎಲೆಗಳು ಅಮಿನೋ ಆಮ್ಲವನ್ನು ಹೊಂದಿವೆ. ಸಮಾನ್ಯ ತ್ವಚೆ ಆರೋಗ್ಯಕ್ಕೆ ಇದು ಅಗತ್ಯವಾದದ್ದು. ಇದು ಹಸಿರು ಎಲೆಗಳಾಗಿರುವುದರಿಂದ ಇದರಲ್ಲಿ ವಿಟಮಿನ್ ಇ ಮತ್ತು ಕೆ (E and K) ಹಾಗೂ ಪ್ರೋಟಿನ್ ಗಳನ್ನು ಸಮೃದ್ದವಾಗಿ ತನ್ನಲ್ಲಿ ಇರಿಸಿಕೊಂಡಿದೆ. ಇದನ್ನು ಪೇಸ್ಟ್ ಮಾಡಿಕೊಂಡು ದಿನಕ್ಕೆ ೩ ಬಾರಿಯಂತೆ ಕೆಲವು ತಿಂಗಳು ನಿರಂತರವಾಗಿ ಉಪಯೋಗಿಸುವುದರಿಂದ ಕಲೆಗಳನ್ನು ಮಾಯವಾಗಿಸಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon