Link copied!
Sign in / Sign up
1
Shares

ಒಂದು ತಾಯಿಯಾಗಿ ನಾನು ನಿಮಗೆ ಸ್ತನ್ಯಪಾನ ಮಾಡಿಸುವ ನಂತರ ಸ್ತನಗಳಿಗೆ ಆಗುವ 7ಕಹಿ ವಿಷಯಗಳನ್ನ ಹೇಳುತ್ತೇನೆ

ನೀವು ಈಗಾಗಲೇ ಸ್ತನ್ಯಪಾನ ಮಾಡಿಸುತ್ತಿದ್ದರೆ, ನೀವು ಎಲ್ಲವನ್ನೂ ಹೇಳಿ, ಮಾಡಿದ ಮೇಲೆ ನಿಮ್ಮ ಸ್ತನಗಳಿಗೆ ಏನೆಲ್ಲಾ ಆಗುತ್ತದೆ ಎಂಬುದರ ಬಗ್ಗೆ ನಿಮ್ಮ ಅರಿವಿರಬಹುದು. ಆದರೆ ನೀವು ಈಗ ತಾನೇ ಸ್ತನ್ಯಪಾನ ಮಾಡಿಸಲು ಶುರು ಮಾಡಿದ್ದರೆ ಅಥವಾ ಇದ್ದದ್ದು ಇದ್ದ ಹಾಗೆ ಹೇಳುವ ತಾಯಂದಿರು ನಿಮ್ಮೊಂದಿಗೆ ಇರದಿದ್ದರೆ, ಸ್ತನ್ಯಪಾನ ಮಾಡಿಸಿದ ನಂತರ ಏನಾಗುತ್ತದೆ ಎಂಬುದು ನಿಮಗೆ ಒಂದು ರಹಸ್ಯವಾಗಿಯೇ ಉಳಿದಿರುತ್ತದೆ. ಆದರೆ ಏಕೆ? ಏಕೆಂದರೆ, ಸ್ತನ್ಯಪಾನ ಮಾಡಿಸುವುದರ ನಂತರ ಸ್ತನಗಳಲ್ಲಿ ಆಗುವ ಬದಲಾವಣೆಗಳ ಬಗ್ಗೆ ಯಾರು ತಿಳಿಸುವುದಿಲ್ಲ. ಹೀಗಾಗಿ, ನೀವು ಇವುಗಳನ್ನ ತಿಳಿದಿರಬೇಕೆಂದು ನಾನು ನನ್ನ ಅನುಭವದ ಮಾತುಗಳನ್ನ ಹಂಚಿಕೊಂಡಿದ್ದೇನೆ ಓದಿ :

೧. ಅವುಗಳು ಏರುಪೇರಾಗಿರುತ್ತವೆ

ಎಂದೆಂದಿಗೂ. ಹೌದು ! ಎರಡು ಸ್ತನಗಳ ಗಾತ್ರ ಬೇರೆ ಬೇರೆ ಆಗುತ್ತದೆ ಹಾಗು ಈ ಏರುಪೇರು ಎಂದಿಗೂ ಸರಿ ಹೋಗುವುದಿಲ್ಲ. ಎಂದಿಗೂ!

೨. ಅವುಗಳು ಇನ್ನು ಮುಂದೆ ಸಂವೇದನೆ ಹೊಂದುವುದೇ ಇಲ್ಲ

ಹೌದು, ಅದನ್ನು ಸರಿಯಾಗಿಯೇ ಓದಿದಿರಿ. ಸ್ತನ್ಯಪಾನ ಮಾಡಿಸುವ ನಂತರ ನಿಮ್ಮ ಸ್ತನಗಳು ತಮ್ಮ ಸೂಕ್ಷ್ಮತೆಯನ್ನೇ ಕಳೆದುಕೊಳ್ಳುತ್ತವೆ. ಆದರೆ ಇದ್ದು ಕೆಟ್ಟ ವಿಷಯ ಅಲ್ಲವೇ ಅಲ್ಲ. ಕಡೆ ಪಕ್ಷ ನನಿಗಾದರೂ ಇದು ಒಳ್ಳೆಯ ವಿಷಯವೇ ಆಗಿತ್ತು. ಆದರೂ, ಎಲ್ಲರಿಗೂ ಹೀಗೆಯೇ ಅನಿಸಬೇಕು ಎಂದೇನಿಲ್ಲ. ಹೀಗಾಗಿ ನಿಮ್ಮ ಸ್ತನಗಳ ಸೂಕ್ಷ್ಮತೆಯ ಅನುಭವ ಪಡೆದುಕೊಳ್ಳಲು ಇದೇ ಕೊನೆಯ ಅವಕಾಶ ಎಂದು ತಿಳಿದುಕೊಳ್ಳಿ.

೩. ಇವುಗಳು ಯಾವಾಗ್ಲೂ ಹಾಲನ್ನು ಸ್ರವಿಸುತ್ತವೆ

ಹೀಗೆಂದರೆ ನೀವು ಓಡಾಡುವಾಗಲೆಲ್ಲ ಹಾಲನ್ನ ಸುರಿಸಿಕೊಂಡೆ ಓಡಾಡುತ್ತೀರಾ ಎಂದಲ್ಲ. ಆದರೆ, ಹಾಲನ್ನ ಉತ್ಪತ್ತಿ ಮಾಡುವ ಶಕ್ತಿ, ನೀವು ಒಮ್ಮೆ ಪಡೆದುಕೊಂಡರೆ, ಅದು ಯಾವಾಗಲೂ ಇದ್ದೇ ಇರುತ್ತದೆ. ಇದಕ್ಕೆ ನೀವು ತಯಾರಾಗಿರದಿದ್ದರೆ ನಿಮಗೆ ಸ್ವಲ್ಪ ಮುಜುಗರ ಉಂಟಾಗಬಹುದು, ಹೀಗಾಗಿ ಈ ವಿಷಯವನ್ನ ನೀವು ಮೊದಲೇ ತಿಳಿದಿರಬೇಕು.

೪. ಅವುಗಳು ಯಾವಾಗಲೂ ಬೇರೆ ರೀತಿಯೇ ಕಾಣುತ್ತವೆ

ಒಂದು ಸಮಯದಲ್ಲಿ ನನಗೆ ಇದು ತುಂಬಾ ಕಾಡುತಿತ್ತು, ಆದರೆ ಇವಾಗಲ್ಲ. ನಿಜ ಹೇಳಬೇಕೆಂದರೆ, ಈಗ ಬೇರೆ ರೀತಿ ಕಾಣುವ ನನ್ನ ಸ್ತನಗಳ ಬಗ್ಗೆ ನನಗೆ ಯಾವುದೇ ತಕರಾರಿಲ್ಲ. ಇದರೊಂದಿಗೆ ಒಗ್ಗಿಕೊಳ್ಳುವುದು ನಿಮಗೆ ಕಷ್ಟವೆನಿಸಿದರೆ, ಈಗಲಿನಿಂದಲೇ ಒಗ್ಗಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿ.

೫. ಅವುಗಳು ನಿಮಗೆ ಹೊಸ ವಸ್ತ್ರಗಳನ್ನ ಖರೀದಿಸಲು ತಾಕೀತು ಮಾಡುತ್ತವೆ

ಏಕೆಂದರೆ, ನಿಮ್ಮ ಹಳೆಯ ಬಟ್ಟೆಗಳು ನಿಮ್ಮ ಏರುಪೇರಾದ ಸ್ತನಗಳ ಮೇಲೆ ನಿಜವಾಗಿಯೂ ಕೆಟ್ಟದಾಗಿ ಕಾಣುತ್ತವೆ.

೬. ಅವುಗಳು ನಿಮ್ಮ ದೇಹದ ಚಿತ್ರಣವನ್ನೇ ಬದಲಿಸುತ್ತವೆ

ಇದು ಕೇವಲ ಸ್ತನಗಳು ಏರುಪೇರಾಗುವ ವಿಷಯ ಒಂದೇ ಅಲ್ಲ. ಇದು ಸಂಪೂರ್ಣ ದೇಹದ ಬಗೆಗಿನ ವಿಷಯ. ಗರ್ಭಧಾರಣೆ, ಹೆರಿಗೆ ಮತ್ತು ಸ್ತನ್ಯಪಾನ, ಇವೆಲ್ಲವೂ ನಿಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳನ್ನ ತರುತ್ತವೆ. ಬೇರೆಯವರು ನಿಮ್ಮ ದೇಹವನ್ನ ನೋಡುವ ರೀತಿ, ನೀವು ನಿಮ್ಮ ದೇಹದ ಬಗ್ಗೆ ಯೋಚಿಸುವ ರೀತಿ, ಎಲ್ಲವನ್ನೂ ಬದಲಾಯಿಸುತ್ತವೆ.

೭. ಇವುಗಳು ಸ್ತನ್ಯಪಾನ ಮಾಡಿಸುವ ಮುಂಚಿನ ನಿಮ್ಮ ಸ್ತನಗಳ ನೆನಪನ್ನೇ ಅಳಿಸಿ ಹಾಕುತ್ತವೆ

ಕಾಲಕ್ರಮೇಣ, ಇವೆಲ್ಲವೂ ಸಹಜವಾಗುತ್ತವೆ. ಏಕೆಂದರೆ, ಸ್ತನ್ಯಪಾನದ ಮುಂಚಿನ ನಿಮ್ಮ ಸ್ತನಗಳ ಬಗ್ಗೆ ನಿಮಗೆ ನೆನಪು ಕೂಡ ಇರುವುದಿಲ್ಲ. ಇನ್ನೊಂದು ವಿಷಯ ಏನು ಗೊತ್ತಾ? ಇದಕ್ಕೆ ನನ್ನ ಎಲ್ಲಾ ಸಮ್ಮತಿಯೂ ಇದೆ. ಇದು ನಿಮಗೆ ಸರಿ ಅನಿಸದೇ ಇದ್ದರೂ ತೊಂದರೆ ಇಲ್ಲ. ಏಕೆಂದರೆ ನಿಮ್ಮ ದೇಹದ ವಿಷಯ ಎಂದು ಬಂದಾಗ, ಅದು ಕೇವಲ ನಿಮ್ಮ ವಿಷಯ. ನಿಮ್ಮ ವಿಷಯ ಮಾತ್ರ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon