Link copied!
Sign in / Sign up
0
Shares

ಸ್ತನ್ಯಪಾನದ ಬಗೆಗಿನ ಈ 5 ಅಪನಂಬಿಕೆಗಳನ್ನು ನಿಮ್ಮ ಒಳಿತಿಗಾಗಿ ಈಗಲೇ ಬಿಟ್ಟು ಬಿಡಿ!

ಮೊಲೆಯೂಡಿಸುವುದರ ಬಗ್ಗೆ ಸಾರ್ವತ್ರಿಕವಾಗಿ ಚರ್ಚಿಸಲ್ಪಡದಿದ್ದರೂ, ಬಹಳ ಮೋಜೆನಿಸುವ ಹಲವಾರು ಕಥೆಗಳು ನಮ್ಮ ಸುತ್ತಲೂ ಬಾಯಿಯಿಂದ ಬಾಯಿಗೆ ಹರಡುತ್ತಿರುತ್ತವೆ. ಕೆಲವು ವಿಚಿತ್ರವಾದ ಕತೆಗಳನ್ನು ಕೇಳಿದ ತಾಯಿಯು ಯಾವುದನ್ನು ನಂಬಬೇಕು? ಯಾವುದನ್ನು ಬಿಡಬೇಕು? ಎಂದು ಸಂದೇಹಕ್ಕೆ ಒಳಗಾಗಿರಬಹುದು. ಇನ್ನು ಮಕ್ಕಳ ವಿಷಯಕ್ಕೆ ಬಂದಾಗಲಂತೂ ಚಾನ್ಸ್ ತೆಗೆಯುವ ಪ್ರಮೇಯವೇ ಇಲ್ಲ. ಪೂರ್ಣ ಪ್ರಮಾಣದಲ್ಲಿ ಹುಚ್ಚುತನವೆನಿಸುವ ಕೆಲವು ಮಿಥ್ಯಾ ಧಾರಣೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

೧.ಸಣ್ಣ ಸ್ತನವೆಂದರೆ ಕಡಿಮೆ ಹಾಲು

ಇದು ೧೦೦% ವೂ ತಪ್ಪು ಕಲ್ಪನೆ. ಗರ್ಭಧಾರಣೆಯ ಸಮಯದಲ್ಲಿ ಹಾಲುಣಿಸಲು ಅಗತ್ಯವಾದ ಕೋಶಗಳು (ಬ್ರೆಸ್ಟ್ ಸೆಲ್ಗಳು) ಅಭಿವೃದ್ಧಿಗೊಳ್ಳುತ್ತವೆ. ಸ್ತನದ ಗಾತ್ರಕ್ಕೆ ಕಾರಣವಾದ ಕೊಬ್ಬಿನ ಅಂಗಾಂಶಗಳಲ್ಲಿ ಹಾಲು ಗ್ರಂಥಿಗಳು ಅಡಕವಾಗಿಲ್ಲ. ಗರ್ಭಿಣಿಯರಲ್ಲಿ, ಹಾಲನ್ನು ಸೂಸುವ ಗ್ರಂಥಿಗಳು ಅದಾಗಲೇ ಬೆಳೆಯಲ್ಪಟ್ಟಿರುತ್ತದೆ. ಆದ ಕಾರಣ, ಸ್ತನದ ಗಾತ್ರ ಹೇಗೇ ಇರಲಿ, ಮಗುವಿಗೆ ಹೊಟ್ಟೆ ತುಂಬಿಸಿಕೊಳ್ಳಲು ಅಗತ್ಯವಾದ ಹಾಲು ನಿಮ್ಮ ಸ್ತನಗಳಿಂದ ಲಭ್ಯವಾಗುತ್ತದೆ.

೨.ಪ್ಲಾಸ್ಟಿಕ್ ಸರ್ಜರಿಗಳು ಎದೆ ಹಾಲುಣಿಸುವಲ್ಲಿ ಪ್ರತಿಕೂಲವಾಗಿ ಪರಿಣಮಿಸುತ್ತದೆ

ಇದಂತೂ ನಿಜ. ಆದರೆ ಸ್ಥಾನ ಸರ್ಜರಿ ಮಾಡಿಸಿಕೊಂಡ ಎಲ್ಲಾ ಮಹಿಳೆಯರು ಹಾಲೂಡಿಸಲು ಅಸರ್ಥರು ಎನ್ನುವ ಮಾತುಕೂಡ ನಿಜವಲ್ಲ. ನೀವು ಮಾಡಿಸಿಕೊಂಡ ಶಸ್ತ್ರಕ್ರಿಯೆಗೆ ಅವಲಂಬಿಸಿ, ನೀವು ಮಗುವಿಗೆ ಹಾಲೂಡಿಸಬಹುದೇ ಎಂದು ನಿರ್ಧರಿಸಬಹುದು. ನಿಮ್ಮ ಸ್ತನದ ಗಾತ್ರ ಹೆಚ್ಚಿಸುವ ಚಿಕಿತ್ಸೆಯಲ್ಲಿ ಸಿಲಿಕಾನ್ ಕಪ್ಗಳು, ಕಂಕುಳದ ಹತ್ತಿರ ಅಥವಾ ಸ್ತನದ ಅಡಿಭಾಗದಲ್ಲಿ ಅಂಟಿಸಿದ್ದೇ ಆದರೆ ಅದು ಸ್ತನದ ನಾಳಗಳಿಗೆ(ಮಿಲ್ಕ್ ಡಕ್ಟ್) ಹಾನಿಯನ್ನುಂಟು ಮಾಡುವ ಪ್ರಮೇಯವೇ ಇಲ್ಲ. ಆದರೆ ನಿಪ್ಪಲ್ ಅಥವಾ ಮೊಲೆ ತೊಟ್ಟನ್ನು ಬೇರ್ಪಡಿಸಿ ತೆಗೆದು ನಂತರ ಪುನಃ ಸೇರಿಸಿದ್ದರೆ ಕೆಲವೊಮ್ಮೆ ಹಾಲು ಒಸರಲು ಕಷ್ಟವಾಗಬಹುದು. ಯಾಕೆಂದರೆ ಇಂತಹ ಶಸ್ತ್ರಕ್ರಿಯೆ ನಡೆಯುವಾಗ ಮಾಂಸಪೇಶಿಗಳು ಹಾಗೂ ದುಗ್ಧ ನಾಳಗಳು ಹಾನಿಗೊಳಗಾಗಿರುತ್ತದೆ. ಇದರ ಬಗ್ಗೆ ನಿಮ್ಮ ತಜ್ಞರಲ್ಲಿ ಕೇಳಿ ತಿಳಿದುಕೊಳ್ಳುವುದು ಒಳ್ಳೆಯದು.

೩.ಎದೆ ಹಾಲುಣಿಸುವುದರಿಂದ ಸ್ತನವು ಜೋತು ಬೀಳುವುದು

ಗರ್ಭಧಾರಣೆಯಾದ ಅಥವಾ ಪ್ರಸವದ ಬಳಿಕ ಸ್ತನದ ಆಕಾರ ಬದಲಾವಣೆಯಾಗುವುದರೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದಕ್ಕೂ ಮಳೆ ಗುಡಿಸುವುದಕ್ಕೆ ಯಾವುದೇ ಸಂಬಂಧವಿಲ್ಲ. ಗರ್ಭ ಧರಿಸಿದ ಮಾತ್ರಕ್ಕೆ ನಿಮ್ಮ ಸ್ತನದ ಗಾತ್ರವೂ ದೊಡ್ಡದಾಗುವುದು. ನೀವು ಮೊಲೆಯುಣಿಸಿದರೂ, ಬಿಟ್ಟರೂ ನಿಮ್ಮ ಸ್ತನದ ಆಕಾರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.ಸ್ತನದ ಗಾತ್ರವು ದೊಡ್ಡದಾಗುವುದರಿಂದ ಸ್ತನದ ಭಾರವನ್ನು ತಾಳಿಕೊಳ್ಳಲು ಲಿಗಾಮೆಂಟುಗಳಿಗೆ ಸಾಧ್ಯವಾಗದ ಕಾರಣ ಸ್ತನಗಳು ಜೋತುಬೀಳುತ್ತದೆ. 

೪.ಮೊಲೆಯೂಡಿಸುವ ಅವಧಿಗಳಲ್ಲಿ ತಾಯಿಯು ಗರ್ಭಧರಿಸುವುದಿಲ್ಲ

ಸಾಮಾನ್ಯವಾಗಿ ತಾಯಿಯು ಮೊಲೆಯೂಡಿಸುವ ಅವಧಿಯಲ್ಲಿ ಋತುಸ್ರಾವವಾಗುವುದಿಲ್ಲ. ಆದಕಾರಣ ಗರ್ಭಧರಿಸುವ ಸಾಧ್ಯತೆಯೂ ಕಡಿಮೆ.ಆದರೆ, ಇದು ೧೦೦% ವೂ ವಿಶ್ವಾಸಾರ್ಹವಲ್ಲ. ಗರ್ಭಧಾರಣೆಯನ್ನು ತಡೆಯುವ ಪರ್ಯಾಯ ಮಾರ್ಗವೂ ಅಲ್ಲ.

೫.ಎದೆ ಹಾಲಿಲ್ಲವೆಂದಾದರೆ ಮಗುವಿಗೆ ಮೊಲೆಯೂಡಿಸದಿರಬಹುದು

ಸತ್ಯಕ್ಕೆ ವಿರುದ್ಧವಾದ ಹೇಳಿಕೆಯಿದು. ಮಗುವಿಗೆ ಸರಿಯಾಗಿ ಹಾಲುಣಿಸಿದರೆ,ಎದೆಹಾಲು ಒಸರಲು ಪ್ರಾರಂಭಿಸುವುದು. ಹಾಲು ಕುಡಿಯದೇ ಮಗುವು ತುಂಬಾ ಹೊತ್ತು ನಿದ್ದ್ರಿಸಿದ್ದರೆ, ಸ್ತನಗಳಿಂದ ತನ್ನಿಂದ ತಾನೇ ಹಾಲು ಜಿನುಗಲು ಪ್ರಾರಂಭಿಸುವುದು. ಸ್ತನಗಳಲ್ಲಿ ಹಾಲಿಲ್ಲವೆಂದಾದರೆ, ಮಗುವಿಗೆ ಹೆಚ್ಚು ಸಮಯಗಳ ಕಾಲ ಹಾಲೂಡಿಸಿದರೆ, ಮುಂದೆ ಅಗತ್ಯಕ್ಕೆ ತಕ್ಕಂತೆ ಹಾಲು ತುಂಬಿಕೊಳ್ಳುತ್ತದೆ. ಧರಿಸಿರುವ ಬ್ರಾ ಕೂಡಾ ತುಂಬಾ ಬಿಗಿಯಾಗಿರದಂತೆ ಗಮನಿಸಬೇಕು. ಬಿಗಿಯಾದ ಬ್ರಾಗಳು ಹಾಲಿನ ಒಸರುವಿಕೆಯಲ್ಲಿ ಪ್ರತಿಕೂಲವಾಗಿ ವರ್ತಿಸುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon