Link copied!
Sign in / Sign up
8
Shares

ನಿಮ್ಮ ಸ್ತನಗಳು ದೊಡ್ದಾಗಿ ಕಾಣುವಂತೆ ಮಾಡುವ 5 ವಿಷಯಗಳು

ನಮ್ಮ ದೇಹ ಹೇಗಿದ್ದರೂ ಅದನ್ನ ನಾವು ಪ್ರೀತಿಸಬೇಕು ಮತ್ತು ಅದರ ಬಗ್ಗೆ ಹೆಮ್ಮೆ ಪಡಬೇಕು. ಆದರೆ ಅದರೊಂದಿಗೆ ನಮಗೆ ನಮ್ಮ ದೇಹದಲ್ಲಿ ಏನಾದರು ಬದಲಾವಣೆ ಬೇಕೆಂದು ನಮಗೆ ಅನಿಸಿದರೆ ಅದರಲ್ಲಿ ತಪ್ಪಿಲ್ಲ. ಏಕೆಂದರೆ ನಿಮ್ಮ ದೇಹ ನಿಮ್ಮದು ಮತ್ತು ಅದಕ್ಕೆ ಏನು ಮಾಡಬೇಕೆಂಬ ನಿರ್ಧಾರ ಸಂಪೂರ್ಣ ನಿಮಗೆ ಬಿಟ್ಟದ್ದು. ಒಂದು ವೇಳೆ ನಿಮಗೆ ನಿಮ್ಮ ಸ್ತನಗಳು ಇನ್ನಷ್ಟು ದೊಡ್ಡದಾಗಿ ಕಾಣಿಸಬೇಕು ಎಂಬ ಇಚ್ಛೆ ನಿಮ್ಮದಾಗಿದ್ದರೆ, ಅವುಗಳನ್ನ ಪಡೆಯುವುದು ಹೇಗೆ ಎಂದು ಈ ಲೇಖನದಲ್ಲಿ ನಾವು ಹೇಳುತ್ತೇವೆ ನೋಡಿ.

೧. ನಿಮ್ಮ ಎದೆಯ ಗೋಡೆಯನ್ನ ಅಗಲವಾಗಿಸಿ

ನೀವು ನಿಮ್ಮ ಸ್ತನಗಳು ಉಬ್ಬುವಂತಹ ವ್ಯಾಯಾಮಗಳನ್ನ ಮಾಡಿದರೆ ನೀವೇ ಆಶ್ಚರ್ಯ ಪಡುವ ವೇಗದಲ್ಲಿ ಫಲಿತಾಂಶ ದೊರೆಯುತ್ತದೆ. ವ್ಯಾಯಾಮಗಳು ನಿಮ್ಮ ಸ್ತನಗಳ ಅಂಗಾಂಶಗಳನ್ನ ಹೆಚ್ಚಿಸುವುದಿಲ್ಲ. ಆದರೆ ಅವುಗಳು ಸ್ನಾಯುಗಳ ಗೋಡೆಯನ್ನ ಬೆಳೆಸಿ, ನಿಮ್ಮ ಸ್ನಾಯುಗಳು ದೊಡ್ಡದಾಗಿ ಕಾಣುವಂತೆ ಮಾಡುತ್ತವೆ. ಅಂತಹ ವ್ಯಾಯಾಮಗಳು ಯಾವುದೆಂಬ ಮಾಹಿತಿ ಈ ಕೆಳಗಿದೆ ನೋಡಿ


ಪುಶ್-ಅಪ್


ಮುಂದಿನ ಬಾರಿ ನೀವು ಜಿಮ್ ಅಥವಾ ಮನೆಯಲ್ಲೇ ವ್ಯಾಯಾಮ ಮಾಡುವಾಗ ಪುಶ್ ಅಪ್ ಹೆಚ್ಚಾಗಿ ಮಾಡಿ. ಇವುಗಳು ನಿಮ್ಮ ಎದೆಯ ಸ್ನಾಯುಗಳಿಗೆ ಕೆಲಸ ನೀಡಿ ನಿಮ್ಮ ಎದೆಯ ಗೋಡೆಯನ್ನ ಅಗಲವಾಗಿಸುತ್ತವೆ.


ಚೆಸ್ಟ್ ಫ್ಲೈ


ಒಂದು ಬಾಗಿದ ಬೆಂಚಿನ ಮೇಲೆ ಒರಗಿಕೊಂಡು ನಿಮ್ಮ ಕಾಲುಗಳನ್ನ ನೆಲದ ಮೇಲೆ ಇಡಿ. ನಂತರ ಕೈಯಲ್ಲಿ ಡಂಬೆಲ್ಲ್ ಹಿಡಿದು ಎರಡೂ ಕೈಗಳನ್ನು ನಿಮ್ಮ ಸೈಡಿಗೆ ಚಾಚಿ. ಹೀಗೆ ದಿನಕ್ಕೆ 15 ಬಾರಿ ಮಾಡಿ. ಡಂಬೆಲ್ಲ್ ತೂಕ ಎಷ್ಟಿರಬೇಕು ಎಂದರೆ ನಿಮಗೆ 15 ಬಾರಿಗಿಂತ ಹೆಚ್ಚು ಮಾಡಲು ಸಾಧ್ಯವಾಗಬಾರದು, ಅಷ್ಟಿರಬೇಕು.


ಚೆಸ್ಟ್ ಪ್ರೆಸ್


ಒಂದು ಸಮವಾದ ಬೆಂಚಿನ ಮೇಲೆ ಒರಗಿಕೊಂಡು ನಿಮ್ಮ ಕಾಲುಗಳನ್ನ ನೆಲದ ಮೇಲೆ ಇಡಿ. ನಂತರ ಒಂದು ಬಾರ್ಬೆಲ್ ಅನ್ನು ನಿಮ್ಮ ಎದೆಯ ಹತ್ತಿರಕ್ಕೆ ಇಳಿಸಿ ಮತ್ತು ಅದನ್ನು ನಿಮ್ಮ ಕೈ ಎಷ್ಟು ಚಾಚಲು ಆಗುತ್ತೋ ಅಲ್ಲಿಯವರೆಗೆ ಮೇಲೆತ್ತಿ. ಹೀಗೆ ದಿನಕ್ಕೆ 15 ಬಾರಿ ಮಾಡಿ. ಇದಕ್ಕೂ ಕೂಡ ತೂಕವು ನಿಮಗೆ 15 ಬಾರಿಗಿಂತ ಹೆಚ್ಚು ಬಾರಿ ಮಾಡಲು ಆಗದಷ್ಟು ಇರಬೇಕು.


೨. ಸೆಕ್ಸ್ ಅಥವಾ ಹಸ್ತಮೈಥುನದಲ್ಲಿ ತೊಡಗುವುದು

ಹಸ್ತಮೈಥುನವು ಕೇವಲ ನಿಮ್ಮ ಲೈಂಗಿಕ ಪರಾಕಾಷ್ಠೆ ಅಷ್ಟನ್ನೇ ಉತ್ತಮವಾಗಿಸೋಲ್ಲ - ನಿಮ್ಮ ಸ್ತನಗಳನ್ನೂ ಉತ್ತಮವಾಗಿಸುತ್ತದೆ. ಲೈಂಗಿಕ ಪ್ರಚೋದನೆಯು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಇದು ದೇಹದ ಎಲ್ಲಾ ಭಾಗಗಳಿಗೂ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ಸ್ತನಗಳನ್ನ ಉಬ್ಬಿದಂತೆ ಕಾಣುವಂತೆ ಮಾಡುತ್ತದೆ. ಅದು ಯಾವುದೇ ರೀತಿಯ ಪ್ರಚೋದನೆಯಾದರೂ ಆಗಿರಬಹುದು. ಹಸ್ತಮೈಥುನವೂ ಕೂಡ. ಆದರೆ ಇದು ಕೇವಲ ತಾತ್ಕಾಲಿಕ ಬದಲಾವಣೆ ಆಗಿದ್ದು, ನಿಮ್ಮ ಚಿತ್ತವು ಮೊದಲಿನ ಸ್ಥಿತಿಗೆ ಬಂದರೆ, ನಿಮ್ಮ ಸ್ತನಗಳು ಕೂಡ ಮೊದಲ ಸ್ಥಿತಿಗೆ ಮರಳುತ್ತವೆ.


೩. ಫೈಟೋ-ಈಸ್ಟ್ರೋಜೆನ್ ಆಹಾರ ಸೇವಿಸುವುದು

ತಜ್ಞರ ಪ್ರಕಾರ ಕೆಲವು ಆಹಾರ ಪದಾರ್ಥಗಳು ಸ್ತನಗಳ ಗಾತ್ರ ಹೆಚ್ಚಿಸಲಿಕ್ಕೆ ಸಹಾಯ ಮಾಡುತ್ತವೆ. ಹೆಣ್ಣು ಮಕ್ಕಳು ಪ್ರಾಯ ತಲುಪಿದಾಗ ಅವರ ಈಸ್ಟ್ರೋಜೆನ್ (ಮದಜನಕ) ಹಾರ್ಮೋನ್ ಪ್ರಮಾಣ ಹೆಚ್ಚುತ್ತದೆ ಮತ್ತು ಇದರಿಂದ ಅವರ ಸ್ತನಗಳ ಗಾತ್ರ ಕೂಡ ಹೆಚ್ಚುತ್ತದೆ. ಆದರೆ ಪ್ರಾಯ ದಾಟಿ ಮುಂದುವರೆದಂತೆಲ್ಲಾ ಈಸ್ಟ್ರೋಜೆನ್ ಪ್ರಮಾಣ ಕಡಿಮೆ ಆಗುತ್ತಾ ಹೋಗುತ್ತದೆ, ಹೀಗಾಗಿ ಸ್ತನಗಳ ಗಾತ್ರ ಹೆಂಗಸರಲ್ಲಿ ಕೊನೆಯವರೆಗೂ ಅಷ್ಟೇ ಉಳಿಯುತ್ತದೆ. ಹೀಗಾಗಿ ನಾವು ಈಸ್ಟ್ರೋಜೆನ್ ನೀಡುವ ಆಹಾರವನ್ನ ಸೇವಿಸಿದರೆ ನಮ್ಮ ಸ್ತನಗಳನ್ನ ಬೆಳೆಸಿಕೊಳ್ಳಬಹುದು. ಫೈಟೋ-ಈಸ್ಟ್ರೋಜೆನ್ ನೀಡುವ ಆಹಾರಗಳು ಎಂದರೆ ಅಗಸೆ ಬೀಜ, ಸೋಯಾ ಕಾಳು,ಓಟ್ಸ್, ಕಾಳುಗಳು. ಆದರೆ ಇದನ್ನು ಮಿತವಾಗಿ ಸೇವಿಸಿ.


೪. ಹಾರ್ಮೋನ್ ಏರುಪೇರು

ಮೊದಲೇ ಹೇಳಿದಂತೆ ಈಸ್ಟ್ರೋಜೆನ್ ಹೆಚ್ಚಿದರೆ ಸ್ತನಗಳ ಗಾತ್ರ ಹೆಚ್ಚುತ್ತದೆ. ಈಸ್ಟ್ರೋಜೆನ್ ಅನ್ನು ಗರ್ಭಧಾರಣೆ ಹೆಚ್ಚಿಸುವಂತೆ ಮತ್ತ್ಯಾವುದೂ ಹೆಚ್ಚಿಸುವುದಿಲ್ಲ. ಗರ್ಭಧಾರಣೆಯ ಒಂದು ಉಪಯೋಗ ಎಂದರೆ ಅದು ದೊಡ್ಡ ಸ್ತನಗಳು. ಈಸ್ಟ್ರೋಜೆನ್ ಹಾಲಿನ ಗ್ರಂಥಿಗಳು ಮತ್ತು ನಾಳಗಳು ಬೆಳೆಯಲು ಉತ್ತೇಜನ ನೀಡುತ್ತದೆ. ಆದರೆ ಗರ್ಭಧಾರಣೆ ವೇಳೆ ಪರಿಣಾಮ ಬೀರುವುದು ಕೇವಲ ಈಸ್ಟ್ರೋಜೆನ್ ಹಾರ್ಮೋನ್ ಒಂದೇ ಅಲ್ಲ. ಅದರೊಂದಿಗೆ ಇತರೆ ಹಾರ್ಮೋನುಗಳಾದ ಪ್ರೊಜೆಸ್ಟರಾನ್ ಮತ್ತು ಪ್ರೊಲಾಕ್ಟಿನ್ ಕೂಡ ಭಾಗವಹಿಸುತ್ತವೆ.


೫. ಉತ್ತಮ ದೇಹಸ್ಥಿತಿ

ಇದನ್ನು ನೀವಾಗಲೇ ಕೇಳಿಯೇ ಇರುತ್ತೀರಾ. ಆದರೆ ಉತ್ತಮ ದೇಹಸ್ಥಿತಿ ಅಂದರೆ ಪೋಶ್ಚರ್ ಕಾಯ್ದುಕೊಳ್ಳುವ ಮೂಲಕ ನಿಮ್ಮ ಸ್ತನಗಳು ದೊಡ್ಡದಾಗಿ ಮತ್ತು ಚೂಪಾಗಿ ಕಾಣುವಂತೆ ಮಾಡಿಕೊಳ್ಳಬಹುದು. ನಿಮ್ಮ ನಡುಭಾಗವು ಗಟ್ಟಿ ಇದ್ದರೆ ಎಲ್ಲವೂ ತಾನಾಗೇ ಸರಿ ಹೋಗುತ್ತವೆ. ನಿಮ್ಮ ಬೆನ್ನಿಗೆ ಸರಿಯಾದ ಬೆಂಬಲ ದೊರಕುತ್ತದೆ, ಹೀಗಾಗಿ ನೀವು ಮುಂದಕ್ಕೆ ವಾಲುವುದಿಲ್ಲ ಮತ್ತು ನಿಮ್ಮ ಭುಜಗಳನ್ನ ಒಳಗೆ ಮಡಚಿಕೊಳ್ಳುವ ಬದಲು ಹೊರಗೆ ಚಾಚಿಕೊಳ್ಳುತ್ತವೆ. ಇದು ನಿಮ್ಮ ಸ್ತನಗಳು ದೊಡ್ದಾಗಿ ಕಾಣುವಂತೆ ಮಾಡುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon