Link copied!
Sign in / Sign up
1
Shares

ನಿಮ್ಮ ಸ್ತನಗಳಲ್ಲಿನ ನೋವನ್ನು ಕಡಿಮೆ ಮಾಡಿಕೊಳ್ಳಲು ಸುಲಭ ಉಪಾಯಗಳು

ಮಾಸ್ಟಾಲ್ಜಿಯಾ, ಅಥವಾ ಸುಲಭವಾಗಿ ಹೇಳಬೇಕೆಂದರೆ ಸ್ತನಗಳ ನೋವು. ಇದು ನಮ್ಮಲ್ಲಿ ಕೆಲವರನ್ನು ಆತಂಕಕ್ಕೆ ಈಡು ಮಾಡುವುದು. ಆದರೆ ಎಲ್ಲಾ ರೀತಿಯ ಸ್ತನಗಳ ನೋವುಗಳು ಸ್ತನ ಕ್ಯಾನ್ಸರ್ ಗೆ ಸಂಬಂಧಪಟ್ಟಿರುವುದಿಲ್ಲ. ಸ್ತನಗಳ ನೋವಿನಲ್ಲಿ ಎರಡು ವಿಧಗಳಿವೆ - ಒಂದು ಸೈಕ್ಲಿಕ್ಕಲ್ ನೋವು ಮತ್ತು ಇನ್ನೊಂದು ನಾನ್-ಸೈಕ್ಲಿಕ್ಕಲ್. ಈ ಸೈಕ್ಲಿಕ್ಕಲ್ ಸ್ತನ ನೋವು ಅನ್ನುವುದು ಋತುಚಕ್ರಕ್ಕೆ ಸಂಬಂಧ ಪಟ್ಟಿದ್ದು. ಇದು ನಿಮ್ಮ ಋತುಚಕ್ರದ ಮಧ್ಯದಲ್ಲಿ ಕಾಣಿಸಿಕೊಳ್ಳಬಹುದು ಅಥವಾ ನಿಮ್ಮ ಪಿರಿಯಡ್ ಶುರು ಆಗುವ ಒಂದು ವಾರದ ಮುಂಚೆ ಕಾಣಿಸಿಕೊಳ್ಳಬಹುದು. ಇದು ನಿಮಗೆ ಪಿರಿಯಡ್ ಆಗುವ ಸಮಯದಲ್ಲಿ ಮಾಯವಾಗುತ್ತದೆ.

ಋತುಚಕ್ರವನ್ನು ಪಾಲಿಸದೆ ಕಾಣಿಸಿಕೊಳ್ಳುವ ಸ್ತನಗಳ ನೋವು ಎಂದರೆ ಅದು ನಾನ್-ಸೈಕ್ಲಿಕ್ಕಲ್ ನೋವು. ಈ ನೋವು ನಿಮಗೆ ತಿಂಗಳು ಪೂರ್ತಿ ಕಾಣಿಸಿಕೊಳ್ಳುತ್ತದೆ, ನೀವು ಪಿರಿಯಡ್ ಮೇಲೆ ಇದ್ದರೂ ಅಥವಾ ಇಲ್ಲದಿದ್ದರೂ. ಈ ನೋವು ಸರ್ಜರಿ, ಸೋಂಕು, ಗಾಯಗಳು ಮತ್ತು ಗಡ್ಡೆಗಳ ಬೆಳವಣಿಗೆ ಇಂದ ಆಗುವಂತದ್ದು. ಸೈಕ್ಲಿಕ್ ನೋವಿಗೂ ಸ್ತನ ಕ್ಯಾನ್ಸರ್ ಗೂ ಯಾವುದೇ ಸಂಬಂಧ ಇಲ್ಲ ಆದರೆ ಕೆಲವೊಮ್ಮೆ ನಾನ್-ಸೈಕ್ಲಿಕ್ ನೋವು ಸ್ತನ ಕ್ಯಾನ್ಸರ್ ನ ಒಂದು ಲಕ್ಷಣ ಆಗಿದ್ದರು ಆಗಿರಬಹುದು.

ನಿಮ್ಮ ಸ್ತನಗಳಲ್ಲಿ ಗಂಟುಗಳು ಅಥವಾ ಗಡ್ಡೆಗಳು ಕಾಣಿಸಿಕೊಂಡರೆ, ಕೂಡಲೇ ವೈದ್ಯರನ್ನ ಸಂಪರ್ಕಿಸಿ. ಕಾರಣವನ್ನ ನಿಖರವಾಗಿ ತಿಳಿಯಲಿಕ್ಕೆ ನೀವು ಸರಿಯಾದ ಮತ್ತು ಸಂಪೂರ್ಣವಾದ ದೈಹಿಕ ಪರೀಕ್ಷೆಗೆ ಒಳಗೊಳ್ಳಬೇಕು. ಒಂದೇ ಜಾಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ, ನೀವು ಅಲ್ಟ್ರಾಸೌಂಡ್ ಪರೀಕ್ಷೆಯ ಮೊರೆ ಹೋಗಬೇಕು.

ನಿಮ್ಮ ನೋವನ್ನು ಕಡಿಮೆ ಮಾಡಲು ಕೆಲವು ದಾರಿಗಳು ಇಲ್ಲಿವೆ :

ಮಸಾಜ್

ಪಿರಿಯಡ್ ಮುಂಚೆ ಕಾಣಿಸಿಕೊಳ್ಳುವ ನೋವನ್ನು ನೀವು ಸ್ತನಗಳನ್ನ ಮಸಾಜ್ ಮಾಡುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಹರಳೆಣ್ಣೆ ಅನ್ನು ಸ್ವಲ್ಪ ತಿಳಿ ಎಣ್ಣೆಗಳೊಂದಿಗೆ (ಬಾದಾಮಿ ಎಣ್ಣೆ ಅಥವಾ ಆಲಿವ್ ಎಣ್ಣೆ) ಬೆರೆಸಿ ಅದರಿಂದ ಸ್ತನಗಳ ಮಸಾಜ್ ಮಾಡಿಕೊಳ್ಳಿ. ಇನ್ನೂ ಉತ್ತಮ ಫಲಿತಾಂಶಕ್ಕೆ ಆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ನಂತರ ಅದರಲ್ಲಿ ಮಸಾಜ್ ಮಾಡಿಕೊಳ್ಳಿ. ನೀವು ಸ್ನಾನ ಮಾಡಿಕೊಳ್ಳುವಾಗ ಕೂಡ ನಿಮ್ಮ ಸೋಪ್ ಅನ್ನು ಬಳಸಿ ಮೃದುವಾಗಿ ಮಸಾಜ್ ಮಾಡಿಕೊಳ್ಳಬಹುದು. ಸ್ತನಗಳ ಮಧ್ಯ ಭಾಗದಿಂದ ಮಸಾಜ್ ಶುರು ಮಾಡಿಕೊಂಡು ನಂತರ ಉಳಿದ ಭಾಗಗಳ ಕಡೆ ಹೋಗಿ. ನೀವು ಎದೆಹಾಲು ನೀಡುತ್ತಿದ್ದರೆ, ಮೊಲೆತೊಟ್ಟುಗಳಿಗೆ ಸೋಪ್ ಅನ್ನು ಹಚ್ಚಬೇಡಿ.

ಕಾಡುಸೇವಂತಿಗೆ

ಕಾಡುಸೇವಂತಿಗೆ ಒಂದು ನೈಸರ್ಗಿಕ ಮೂತ್ರವರ್ಧಕ ಆಗಿದ್ದು ಇದು ನಿಮ್ಮ ಸ್ತನಗಳ ನೋವು ಕಡಿಮೆ ಮಾಡುವುದರಲ್ಲಿ ಸಹಾಯ ಮಾಡುತ್ತದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಸಿಯಂ ಅನ್ನು ಒಳಗೊಂಡಿದ್ದು, ಇದು ದೇಹದಲ್ಲಿನ ಹೆಚ್ಚುವರಿ ನೀರನ್ನು ಹೊರ ಹಾಕುತ್ತದೆ. ಈ ಕಾಡುಸೇವಂತಿಗೆ ಅಂದರೆ ದಾಂಡೇಲಿಯನ್ ಚಹಾ ತಯಾರಿಸಿ ಮತ್ತು ಅದಕ್ಕೆ ಒಂದೆರೆಡು ಹನಿ ಜೇನುತುಪ್ಪ ಬೆರೆಸಿ. ಇದನ್ನು ದಿನಕ್ಕೆ ಎರಡು ಬಾರಿ ಸೇವಿಸಿ ನಂತರ ಬದಲಾವಣೆಗಳನ್ನ ಗುರುತಿಸಿ.

ಪ್ರಿಂರೋಸ್ (ಗುಲಾಬಿ) ಎಣ್ಣೆ

ಇದನ್ನು ನೀವು ನಿಮ್ಮ ಸ್ತನಗಳಿಗೆ ಮಸಾಜ್ ಮಾಡಲು ಆದರು ಬಳಸಬಹುದು ಅಥವಾ ಇದನ್ನು ಸೇವಿಸಲೂಬಹುದು. ಇದು ನಿಮ್ಮ ದೇಹದಲ್ಲಿನ ಹಾರ್ಮೋನ್ ಬದಲಾವಣೆಗಳಿಗೆ ನಿಮ್ಮ ದೇಹವು ಬೇಗನೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸ್ತನಗಳಲ್ಲಿನ ನೋವನ್ನು ಕಮ್ಮಿ ಮಾಡುತ್ತದೆ.

ಉಪ್ಪಿನ ಚೀಲ

ನೀವು ನಿಮ್ಮ ಮನೆಯಲ್ಲಿನ ಫ್ರಿಡ್ಜ್ ಅಲ್ಲಿ ಇರುವ ಐಸ್ ಕ್ಯೂಬ್ ಗಳನ್ನು ಒಂದು ಸೋರದಿರದಂತಹ ಚೀಲದಲ್ಲಿ ಹಾಕಿಕೊಂಡು, ಆ ಚೀಲದಿಂದ ನಿಮ್ಮ ಸ್ತನಗಳ ಮೇಲೆ 10 ನಿಮಿಷಗಳು ಇಟ್ಟುಕೊಳ್ಳಿ. ಇದನ್ನು ನೀವು ಬೆಚ್ಚನೆ ಚೀಲದೊಂದಿಗೂ ಮಾಡಿಕೊಳ್ಳಬಹುದು. ಐಸ್ ಕ್ಯೂಬ್ ಬದಲು ಸ್ವಲ್ಪ ಉಪ್ಪನ್ನು ಕಾಯಿಸಿ, ಅದನ್ನು ಒಂದು ಚೀಲದಲ್ಲಿ ಹಾಕಿ ಸ್ತನಗಳ ಮೇಲೆ ಇಟ್ಟುಕೊಳ್ಳಿ.

ಔಷಧಿಗಳು

ನೀವು ನಿಮ್ಮ ವೈದ್ಯರನ್ನು ಭೇಟಿ ಮಾಡಿ, ನಿಮ್ಮ ಸ್ತನಗಳ ನೋವನ್ನು ಕಡಿಮೆ ಆಗಿಸಿಕೊಳ್ಳಲು ಔಷದಿಗಳನ್ನ ಪಡೆದುಕೊಳ್ಳಬಹುದು. ಅವರ ಸಹಜವಾಗಿ ನಿಮಗೆ ಆಸ್ಪಿರಿನ್ ಅಥವಾ ಐಬುಪ್ರೊಫೇನ್ ಸೂಚಿಸಬಹುದು. ತೀವ್ರವಾದ ಸ್ತನಗಳ ನೋವಿನ ಶಮನಕ್ಕೆ ಕೆಲವೊಂದು ಔಷಧಿಗಳು ಇವೆ, ಆದರೆ ಅವುಗಳೊಂದಿಗೆ ಕೆಲವು ಅಡ್ಡಪರಿಣಾಮಗಳು ಕೂಡ ಇವೆ. ಹೀಗಾಗಿ ನೀವು ಎಚ್ಚರದಿಂದ ಅವುಗಳನ್ನ ಬಳಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon