Link copied!
Sign in / Sign up
5
Shares

ಒಬ್ಬೊಬ್ಬರ ಸ್ತನಗಳು ಒಂದೊಂದು ಗಾತ್ರ ಹೊಂದಿರಲು ಕಾರಣವೇನು?

ಪ್ರಕೃತಿಯಲ್ಲಿ ವೈವಿಧ್ಯತೆಗೆ ಕೊರತೆ ಏನಿಲ್ಲ. ವೈವಿಧ್ಯತೆಯೊಂದಿಗೆ ಅಸಮಾನತೆಗಳು ಕೂಡ ಕಾಣುತ್ತವೆ. ಅವುಗಳು ಸಾವಿರಾರು ವರ್ಷಗಳಿಂದ ವಿಕಾಸದ ದಾರಿಯಲ್ಲಿ ಇನ್ನಷ್ಟು ದೊಡ್ಡದಾಗಿರಬಹುದು ಅಥವಾ ಕಡಿಮೆ ಕೂಡ ಆಗಿರಬಹುದು. ಮನುಷ್ಯರ ದೇಹದ ವಿಷಯದಲ್ಲೂ ಹೀಗೆಯೇ ಆಗಿರಬಹುದು. ಕೆಲವೊಂದು ಅಂಗಗಳು, ಭಾಗಗಳು ಕೆಲವು ಪ್ರಾಂತ್ಯದ ಜನರಲ್ಲಿ ದೊಡ್ಡದಿರುತ್ತವೆ ಮತ್ತು ಇನ್ನೊಂದು ಪ್ರಾಂತ್ಯದ ಜನರಲ್ಲಿ ಚಿಕ್ಕದಿರುತ್ತವೆ. ಪ್ರಾಂತ್ಯ ಎನ್ನುವುದು ಕೂಡ ತಪ್ಪಾದೀತು, ಈಗ ನಾವು ಒಂದೇ ಜಾಗದಲ್ಲಿರುವ ಜನರಲ್ಲೇ ಹಲವಾರು ದೈಹಿಕ ಅಸಮಾನತೆಗಳು ಇರುವುದನ್ನ ಕಾಣಬಹುದು. ಅಂಥವುಗಳಲ್ಲಿ ಸ್ತನದ ಗಾತ್ರವು ಕೂಡ ಒಂದು. ಸ್ತನಗಳ ಗಾತ್ರವು ಒಂದು ಹೆಣ್ಣಿನಿಂದ ಇನ್ನೊಂದು ಹೆಣ್ಣಿಗೆ ಬೇರೆ ಆಗಿರುತ್ತದೆ. ಹೀಗೆ ಸ್ತನಗಳ ಗಾತ್ರವು ಒಬ್ಬೊಬ್ಬರಲ್ಲಿ ಒಂದೊಂದು ಇರಲು ಕಾರಣವೇನು?


ತೂಕದಲ್ಲಿ ಏರುಪೇರು, ಔಷಧಿ ಸೇವನೆ, ಪ್ರೆಗ್ನನ್ಸಿ ಮತ್ತು ಋತುಸ್ರಾವ, ಇವೆಲ್ಲವೂ ಸ್ತನಗಳ ಗಾತ್ರದ ಮೇಲೆ ಪ್ರಭಾವ ಬೀರುವಂತವು. ಆದರೆ ಇವೆಲ್ಲವುಗಳಿಗಿಂತ ಮುಖ್ಯವಾಗಿ, ಏಳು ಜೆನೆಟಿಕ್ ಮಾರ್ಕರ್ಸ್ (7 ಜೆನೆಟಿಕಲ್ ಮಾರ್ಕರ್ಸ್) ಮೇಲೆ ಸ್ತನಗಳ ಗಾತ್ರವು ಅವಲಂಬಿತವಾಗಿರುತ್ತದೆ. ಪ್ರತಿಯೊಂದು ಹೆಣ್ಣಿನ ಸ್ತನಗಳ ಗಾತ್ರವು ವಿಭಿನ್ನವಾಗಿರುತ್ತದೆ ಏಕೆಂದರೆ, ಆಕೆ ತನ್ನ ಅಪ್ಪ-ಅಮ್ಮನಿಂದ ವಿಭಿನ್ನವಾದ ಸ್ತನಗಳಿಗೆ ಸಂಬಂಧಿಸಿದ DNAಗಳ ಗುಂಪನ್ನು ಪಡೆದುಕೊಂಡಿರುತ್ತಾಳೆ.


ಆದರೆ ಈ ಗಾತ್ರದಲ್ಲಿನ ವ್ಯತ್ಯಾಸವು ಕೇವಲ ಒಂದು ಹೆಣ್ಣಿನಿಂದ ಇನ್ನೊಂದು ಹೆಣ್ಣಿಗೆ ಮಾತ್ರ ಇರುವುದಲ್ಲ. ಒಂದೇ ಹೆಣ್ಣಿನಲ್ಲಿ ಒಂದು ಸ್ತನದ ಗಾತ್ರ ದೊಡ್ಡದು ಮತ್ತು ಇನ್ನೊಂದು ಚಿಕ್ಕದು ಕೂಡ ಇರಬಹುದು. ಹೆಣ್ಣು ಪ್ರೌಢಾವಸ್ಥೆಗೆ ಕಾಲಿಟ್ಟಾಗ, ಆಕೆಯ ದೇಹದಲ್ಲಿರುವ ಈಸ್ಟ್ರೋಜೆನ್ (ಮದಜನಕ) ಎಂಬ ಹಾರ್ಮೋನ್ ಮೊದಲ ಹಂತದ ಸ್ತನದ ಬೆಳವಣಿಗೆಗೆ ಚಾಲನೆ ನೀಡುತ್ತದೆ. ಆದರೆ ಈ ಎರಡು ಬೆಳೆಯುತ್ತಿರುವ ಸ್ತನಗಳಿಗೆ ಸಮನಾಗಿ ಹಾರ್ಮೋನುಗಳು ಸಿಗಲೇ ಬೇಕು ಎಂದೇನಿಲ್ಲ. ಹೀಗಾಗಿ ಒಂದು ಸ್ತನವು ತುಂಬಾ ವೇಗವಾಗಿ ಬೆಳೆಯುತ್ತದೆ ಮತ್ತು ಇನ್ನೊಂದು ಮೆಲ್ಲನೆ ಬೆಳೆಯುತ್ತದೆ.

ಹೀಗೆ ಪ್ರೌಢಾವಸ್ಥೆಯ ಮೊದಲ ಹಂತದಲ್ಲಿಯೇ ಕಾಣಿಸಿಕೊಳ್ಳುವ ಈ ತೊಂದರೆಯು, ಹೆಂಗಸರು ಬೆಳದಂತೆ ಕಡಿಮೆ ಆಗಿ, ಅವರು ವಯಸ್ಕರರಾಗುವಷ್ಟರಲ್ಲಿ ಈ ಸಮಸ್ಯೆ ಮಾಯವಾಗುತ್ತದೆ. ಆದರೆ ಸುಮಾರು 25% ಅಷ್ಟು ಹೆಂಗಸರಿಗೆ ಈ ತೊಂದರೆ ಹಾಗೆಯೇ ಉಳಿದುಬಿಡುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon