Link copied!
Sign in / Sign up
12
Shares

ನಿಮ್ಮ ಸ್ತನದಲ್ಲಿ ಈ ಲಕ್ಷಣಗಳು ಕಂಡರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ!

ಮಹಿಳೆಯ ದೇಹವು ಹಲವು ಆಕರ್ಷಕ ಸಂಗತಿಗಳಿಂದ ಕೂಡಿದ್ದು, ಅವಳ ದೇಹದ ಬಗ್ಗೆ ಹೆಚ್ಚು ಅವಳಿಗೆ ತಿಳಿದೇ ಇರುವುದಿಲ್ಲ. ನಿಮ್ಮ ದೇಹದ ಕೆಲವು ಲಕ್ಷಣಗಳು ನಿಮ್ಮ ದೇಹದ ಆರೋಗ್ಯದ ಬಗ್ಗೆ ತಿಳಿಸುತ್ತವೆ, ಇವುಗಳನ್ನು ನೀವು ಗಮನಿಸಿ ಮುಂಜಾಗ್ರತೆ ತಗೆದುಕೊಂಡರೆ ಮುಂದೆ ಬರಬಹುದಾದ ಅನಾರೋಗ್ಯದಿಂದ ತಪ್ಪಿಸಿಕೊಳ್ಳಬಹುದು.

ಮಹಿಳೆಯು ತನ್ನ ದೇಹದ ಅನೇಕ ಭಾಗಗಳ ಬಗ್ಗೆ ಮಾತನಾಡಲು ಸಹ ಮುಜುಗರ ಪಡುತ್ತಾಳೆ. ಅದರಲ್ಲಿ ಸ್ತನವು ಕೂಡ, ಸ್ತನದ ಬಗ್ಗೆ ಮಹಿಳೆಯು ಈ ಮಾಹಿತಿಯನ್ನು ತಿಳಿದಿರಲೇ ಬೇಕು. ನಿಮ್ಮ ಸ್ತನದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಸ್ತನವು ಮಹಿಳೆಯಿಂದ ಮಹಿಳೆಯಗೆ ವಿಭಿನ್ನವಾಗಿರುತ್ತದೆ. ಕೆಲವರಿಗೆ ಕೆಲವು ಆಹಾರ ಸೇವನೆ ಇಂದ ಅಲರ್ಜಿಯಾಗಬಹುದು ಅಥವಾ ಅವರ ದೇಹದ ಬೆವರಿನಿಂದ ಸ್ತನದಲ್ಲಿ ಕಡಿತ ಅಥವಾ ನವೆ ಉಂಟಾಗಬಹುದು ನಾವು ಇಲ್ಲಿ ಅದರ ಬಗ್ಗೆ ಹೇಳುತ್ತಿಲ್ಲ. ಇದು ನೀವು ತುಂಬಾ ಎಚ್ಚರಿಕೆಯಿಂದ ಇರಬೇಕಾದ ಲಕ್ಷಣಗಳು.

ಈ ಕೆಳಗಿನ ಲಕ್ಷಣಗಳನ್ನು ನಿಮ್ಮ ಸ್ತನದಲ್ಲಿ ಕಂಡರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

೧.ನಿಮ್ಮ ಮೊಲೆಯ ತ್ವಚೆ(ಚರ್ಮ)ಯಲ್ಲಿ ಏನಾದರು ಬದಲಾವಣೆ ಕಂಡರೆ (ಅದರಲ್ಲೂ ಮೊಲೆಯ ತೊಟ್ಟು ಮತ್ತು ಅದರ ಸುತ್ತಲಿನ ಜಗದಲ್ಲಿ).

೨.ನಿಮ್ಮ ಸ್ತನದಲ್ಲಿ ಗಂಟು ಅಥವಾ ಗುಳ್ಳೆಗಳನ್ನು ಕಂಡರೆ ಅಥವಾ ನಿಮ್ಮ ಕಂಕುಳಿನಲ್ಲಿ (ತೋಳಿನ ಕೆಳಗೆ) ಗಂಟು ಅಥವಾ ಗುಳ್ಳೆ ಕಂಡು ಬಂದರೆ.

೩.ನಿಮ್ಮ ತೊಟ್ಟಿನಲ್ಲಿ ಏನಾದರು ಬದಲಾವಣೆ ಆಗುತ್ತಿದ್ದರೆ.

೪.ನಿಮ್ಮ ತೊಟ್ಟಿನಿಂದ ದ್ರವರೂಪದ ವಸ್ತು ವಿಸರ್ಜನೆ ಆಗುತ್ತಿದ್ದರೆ ಅಥವಾ ನಿಮ್ಮ ತೊಟ್ಟಿನಲ್ಲಿ ರಕ್ತ ಬಣ್ಣದ ದ್ರವ ಅಥವಾ ತಿಳಿ ರಕ್ತ ಬಂದರೆ.

ಈ ಮೇಲಿನ ಯಾವುದೇ ಲಕ್ಷಣಗಳನ್ನು ನೀವು ಅನುಭವಿಸುತ್ತಿದ್ದರೆ ಕೂಡಲೇ ವೈದ್ಯರ ಬಳಿ ಇದನ್ನು ಸಮಾಲೋಚಿಸಿ, ಮತ್ತು ಆ ಜಾಗದಲ್ಲಿ ನಿಮಗೆ ನೋವು ಇದೆಯೇ ಅಥವಾ ಆಗಾಗ ಅಲ್ಲಿ ನೋವು ಕಾಣಿಸಿಕೊಳ್ಳುತ್ತದೆಯೇ ಎಂಬುದನ್ನು ಹೇಳಿ. ಇವು ನಿಮ್ಮಲ್ಲಿ ಸ್ತನ ಕ್ಯಾನ್ಸರ್ ಬರುವ ಸೂಚನೆಯನ್ನು ನೀಡುತ್ತಿರಬಹುದು. ಈ ಲಕ್ಷಣಗಳು ನಿಮಗೆ ಸ್ವಲ್ಪ ಕಾಣಿಸಲು ಶುರುಮಾಡಿದ ತಕ್ಷಣವೇ ನಿರ್ಲಕ್ಷಿಸದೆ ವೈದ್ಯರ ಬಳಿ ಹೋಗುವುದು ಒಳ್ಳೆಯದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon