Link copied!
Sign in / Sign up
0
Shares

ಪ್ರೆಗ್ನನ್ಸಿಯಲ್ಲಿ ಸ್ತನದ ಬೆವರು! : ಪರಿಹಾರಗಳು

ಅರ್ಧರಾತ್ರಿಯಲ್ಲಿ ಎದ್ದು ಬಾತ್ರೂಮ್ ಕಡೆ ಓಡುವುದು, ವಿಚಿತ್ರ ಬಯಕೆಗಳು ಉಂಟಾಗುವುದರಿಂದ ಹಿಡಿದು, ಅಂದುಕೊಳ್ಳದ ಜಾಗದಲೆಲ್ಲಾ ಮೊಡವೆಗಳು ಉಂಟಾಗುವುದರವರೆಗೆ, ಪ್ರೆಗ್ನನ್ಸಿ ಎನ್ನುವುದು ಹಲವಾರು ಅಚ್ಚರಿಗಳಿಂದ ಕೂಡಿರುತ್ತದೆ. ಆದರೆ ಈ ಅಚ್ಚರಿಗಳು ಒಂದು ಕಾರಣಕ್ಕಾಗಿಯೇ ಉಂಟಾದರೂ, ಇವುಗಳು ಬಹಳಷ್ಟು ಅಹಿತಕರವಾಗಿರುತ್ತವೆ. ಇಂತಹ ಹೊಸ ವಿಷಯಗಳಲ್ಲಿ ಒಂದು ಎಂದರೆ ಅದು ಸ್ತನಗಳು ಬೆವರುವುದು. ಇದು ಕೇವಲ ನಿಮ್ಮನ್ನು ಸಾರ್ವಜನಿಕ ಸ್ಥಳಗಳಲ್ಲಿ ಮುಜುಗರಕ್ಕೆ ಈಡು ಮಾಡುವುದಷ್ಟೇ ಅಲ್ಲದೆ, ತ್ವಚೆಯ ಮೇಲೆ ರಾಷೆಸ್ ಕೂಡ ಉಂಟು ಮಾಡುತ್ತದೆ. ಒಂದು ವೇಳೆ ನೀವು ನಿವಾರಣಾ ಕ್ರಮಗಳನ್ನ ತೆಗೆದುಕೊಳ್ಳಲು ಇಚ್ಛಿಸಿದರೆ, ನೀವು ಈ ಸ್ತನದ ಬೆವರನ್ನು ದೂರವಿಡಲು ಕೆಲವೊಂದು ವಿಷಯಗಳನ್ನ ಪಾಲಿಸಬಹುದು.

ನೀವು ಏನು ಮಾಡಬಹುದು, ಏನು ಬಳಸಬಹುದು, ಹೇಗೆ ಬಳಸಬಹುದು ಎಂದು ಈ ಕೆಳಗೆ ನಾವು ತಿಳಿಸಿದ್ದೇವೆ ಓದಿ :


೧. ಪೌಡರ್


ಬೆವರನ್ನ ದೂರವಿಡುವ ಪೌಡರ್ ಬೇಕೆಂದರೆ, ನಿಮಗೆ ಮಾರುಕಟ್ಟೆಯಲ್ಲಿ ನೂರಾರು ಆಯ್ಕೆಗಳು ಲಭ್ಯವಿವೆ. ಆದರೆ, ಒಂದು ವೇಳೆ ನೀವು ಮೆಡಿಕೇಟೆಡ್ ಪೌಡರ್ ಅನ್ನು ಬಳಸಬೇಕು ಎಂದರೆ, ಮೊದಲು ನಿಮ್ಮ ವೈದ್ಯರ ಬಳಿ ಕೇಳಿ ಒಪ್ಪಿಗೆ ಪಡೆದುಕೊಳ್ಳಿ.


೨. ಉತ್ತಮವಾದ ಬ್ರಾ


ಕೆಲವರು ಪ್ರೆಗ್ನನ್ಸಿಯ ವೇಳೆ ಮಟರ್ನಲ್ ಬ್ರಾ ಬಳಸಲು ಹೇಳುತ್ತಾರೆ. ಅದು ತಪ್ಪೇನಲ್ಲ, ಆದರೆ ಅದು ಕಡಿಮೆ ದಪ್ಪ (ಕಡಿಮೆ ಪ್ಯಾಡೆಡ್) ಇರಬೇಕು. ಸಾಧಾರಣವಾದ ಪ್ಯಾಡೆಡ್ ಬ್ರಾ ಅಂತೂ ಧರಿಸಲೇಬೇಡಿ. ಈ ರೀತಿಯ ಬ್ರಾಗಳು ಹೆಚ್ಚು ಸೂರ್ಯ ಶಾಖವನ್ನ ಹಿಡಿಟ್ಟುಕೊಳ್ಳುತ್ತವೆ. ಇದರಿಂದ ನೀವು ಆ ಭಾಗದಲ್ಲಿ ಮತ್ತಷ್ಟು ಬೆವರುತ್ತೀರಿ.

ಅಲ್ಲದೆ ನೀವು ನಿಮ್ಮ ಹಿಗ್ಗುತ್ತಿರುವ ಸ್ತನಗಳನ್ನ ಸಂಪೂರ್ಣವಾಗಿ ಹಿಡಿಟ್ಟುಕೊಳ್ಳುವಂತ, ನಿಮ್ಮ ಗಾತ್ರಕ್ಕೆ ಸರಿ ಹೊಂದುವಂತ ಬ್ರಾ ಅನ್ನೇ ಧರಿಸಿ. ಟೈಟ್ ಇರುವ ಬ್ರಾ ಅನ್ನು ಬಳಸಲೇಬೇಡಿ. ಇಷ್ಟಲ್ಲದೆ ಇನ್ನೊಂದು ಮುಖ್ಯ ವಿಷಯ ಎಂದರೆ, ನೀವು ಸಿಂಥೆಟಿಕ್ ಮೆಟೀರಿಯಲ್ ಇಂದ ಮಾಡಿರುವ ಬ್ರಾ ಧರಿಸಬಾರದು.


೩. ವಸ್ತುಗಳನ್ನ ತುಂಬಿಕೊಳ್ಳುವುದು


ನೀವು ಪ್ರಯತ್ನಿಸಲು ಸಿದ್ಧರಿದ್ದರೆ, ನಿಮ್ಮ ಸ್ತನದ ತೇವಾಂಶ ಹೀರಲು ನೀವು ನಿಮ್ಮ ಬ್ರಾ ಒಳಗೆ ಹಲವಾರು ವಸ್ತುಗಳನ್ನ ತುಂಬಿಕೊಳ್ಳಬಹುದು. ಬ್ರಾ ಲೈನರ್, ಟಿಶ್ಯೂ ಪೇಪರ್, ಟಾಯ್ಲೆಟ್ ಪೇಪರ್ ಅಥವಾ ಪೇಪರ್ ಟವೆಲ್ ಅಥವಾ ಚಿಕ್ಕ ಬಟ್ಟೆಯ ತುಂಡುಗಳನ್ನ ಕೂಡ ತುಂಬಿಕೊಳ್ಳಬಹುದು. ಇದು ಮೊದಮೊದಲಿಗೆ ನಿಮಗೆ ವಿಚಿತ್ರ ಎಣಿಸಬಹುದು, ಆದರೆ ನಿಮ್ಮ ಸ್ತನಗಳು ಬೆವರದಂತೆ ಇದು ಕಾಪಾಡುತ್ತದೆ. ಇದಕ್ಕಾದರೂ ನೀವು ಇದನ್ನು ಪ್ರಯೋಗಿಸಬಹುದು.


೪. ಅರ್ಗಾನ್ ಎಣ್ಣೆ


ಅರ್ಗಾನ್ ಎಣ್ಣೆಯು ಸಕಲ ಕೆಲಸಗಳನ್ನೂ ಮಾಡುವ ತೈಲಗಳಲ್ಲಿ ಒಂದು. ಇದು ಕೀಟಾಣು-ವಿರೋಧಿ, ತ್ವಚೆಗೆ ಪುನಶ್ಚೇತನ ನೀಡುತ್ತದೆ. ಅಷ್ಟೇ ಅಲ್ಲದೆ, ಇದು ಒಂದು ಅದ್ಭುತ ಕಾರ್ಸಿನೊಜೆನ್-ವಿರೋಧಿ ಆಗಿದೆ. ಈ ಎಣ್ಣೆಯು ಸೂರ್ಯನ ಬಿಸಿಲಿಗೆ ತೆರೆದುಕೊಳ್ಳುವ ನಿಮ್ಮ ಚರ್ಮದ ಭಾಗಕ್ಕೆ ರಕ್ಷಣೆ ನೀಡುತ್ತದೆ. ಒಂದು ವೇಳೆ ನೀವೇನಾದರೂ ನೈಸರ್ಗಿಕ ವಿಧಾನವನ್ನೇ ಹುಡುಕುತ್ತಿದ್ದರೆ, ಇದನ್ನ ಬಳಸಬಹುದು. ಇದೇನಪಾ, ಆಗಲೇ ಬೆವರನಿಂದ ವದ್ದೆ ಆಗಿರುವ ಭಾಗಕ್ಕೆ ಪುನಃ ಎಣ್ಣೆ ಹಚ್ಚಬೇಕಾ? ಎಂದು ನೀವು ಕೇಳಬಹುದು, ಆದರೆ ಒಮ್ಮೆ ನೀವೇ ಪ್ರಯತ್ನಿಸಿ ನೋಡಿ. ಕಳೆದುಕೊಳ್ಳುವುದು ಏನಿದೆ?

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon