Link copied!
Sign in / Sign up
6
Shares

G-ಸ್ಪಾಟ್ ಎಂದರೇನು? ಅತ್ಯದ್ಭುತ ಲೈಂಗಿಕ ಸುಖಕ್ಕೆ ಇದರ ಪ್ರಚೋದನೆಯೇ ಬೇಕು! ಹೇಗೆ ಮತ್ತು ಏಕೆ?

G-ಸ್ಪಾಟ್ ಅನ್ನುವುದು ಬಹಳ ದಿನಗಳಿಂದಲೂ ಒಂದು ಬಿಸಿ ಬಿಸಿ ಚರ್ಚಾಸ್ಪದ ವಿಷಯವೇ ಆಗಿದೆ. ಕೆಲವರು ಇದು ಇರುವಿಕೆಯಲ್ಲೇ ಇಲ್ಲ ಎಂದರೆ, ಕೆಲವರು ಇದೇ ಬೇರೆ ಅಂಗ ಎನ್ನುತ್ತಾರೆ. ಆದರೆ, ಇನ್ನೂ ಕೆಲವರು ಮಾತ್ರ ಸರಿಯಾಗಿ ಇದನ್ನು ಚಂದ್ರನಾಡಿ (ಕ್ಲಿಟೋರಿಸ್/ಯೋನಿಯ ಶಿಶ್ನಿಕೆ)ಯ ಬೇರು, ಬುಡ ಎಂದು ಸರಿಯಾಗಿ ಹೇಳುತ್ತಾರೆ. ಅದೇನೇ ಇರಲಿ, G-ಸ್ಪಾಟ್ ನಿಜಕ್ಕೂ ಮುದ ನೀಡುವಂತದ್ದು !

G-ಸ್ಪಾಟ್ ಎಂದರೆ ಯೋನಿಯ ಮುಂಭಾಗದ ಗೋಡೆ. ಇದು ಸುಮಾರು 2 ಇಂಚಿನಷ್ಟು ಯೋನಿಯ ಒಳಗಡೆ ಇರುತ್ತದೆ. ಇದು ಮುಟ್ಟಲಿಕ್ಕೆ ಅಡಿಕೆಯ ಮೇಲ್ಮೈ ರೀತಿ ಇರುತ್ತದೆ ಮತ್ತು ಇದು ಪ್ಯೂಬಿಕ್ ಮೂಳೆಯ ಕೆಳಗಿರುತ್ತದೆ. ಇದು ಪ್ರಚೋದನೆಗೆ ಒಳಗಾದಾಗ ಇದು ರಕ್ತ ಕೂಡಿಸಿಕೊಂಡು ಊದಿಕೊಳ್ಳುತ್ತದೆ. ಇದರಿಂದ ಅತ್ಯದ್ಭುತ ಲೈಂಗಿಕ ಸುಖ ಸಿಗುತ್ತದೆ.

ಇಂತಹ ಅತ್ಯದ್ಭುತ ಲೈಂಗಿಕ ಸುಖ ನೀಡುವ G-ಸ್ಪಾಟ್ ಒರ್ಗ್ಯಾಸಮ್ (ಲೈಂಗಿಕ ಪರಾಕಾಷ್ಠೆ) ನಾವೆಲ್ಲರೂ ಬಯಸುವುದು. ಆದರೆ ಅದನ್ನು ಗಳಿಸುವುದು ಹೇಗೆ ಎಂಬುದು ನಮಗೆ ತಿಳಿದಿಲ್ಲ. ನೀವು ಇಂತಹ ಅದ್ಭುತ ಲೈಂಗಿಕ ಸುಖ ಹೊಂದಬೇಕು ಎಂದರೆ ಕೆಲವು ಸಲಹೆಗಳನ್ನ ಪಾಲಿಸಬೇಕಾಗುತ್ತದೆ.

೧. ಆ ಪ್ರದೇಶವನ್ನ ಕಂಡು ಹಿಡಿಯಿರಿ

ಮೊದಲ ಹೆಜ್ಜೆ ಈ G-ಸ್ಪಾಟ್ ಎಲ್ಲಿದೆ ಎಂದು ತಿಳಿದುಕೊಳ್ಳುವುದು. ಶಿಶ್ನ ಅಥವಾ ಬೆರಳನ್ನು ಸೀದಾ ಯೋನಿಯ ಒಳಗಡೆ ನುಗ್ಗಿಸಿದರೆ, ಈ G-ಸ್ಪಾಟ್ ಅನ್ನು ಅವುಗಳು ಮುಟ್ಟಲು ಆಗುವುದಿಲ್ಲ ಮತ್ತು G-ಸ್ಪಾಟ್ ಒರ್ಗ್ಯಾಸಮ್ ಹೊಂದಲು ಆಗುವುದಿಲ್ಲ. ವಾಸ್ತವದಲ್ಲಿ, ಕೇವಲ 25% ಹೆಂಗಸರು ಮಾತ್ರ ಕೇವಲ ಶಿಶ್ನ ಪ್ರವೇಶದಿಂದ ಒರ್ಗ್ಯಾಸಮ್ ಹೊಂದುತ್ತಾರೆ.

ನೀವು ಬೆರಳು ಅಥವಾ ಶಿಶ್ನದಿಂದ ಯೋನಿಯ ಒಳಗೋಡೆಯನ್ನು ಸವರುತ್ತಾ ಹೊಕ್ಕಳಿನ ದಿಕ್ಕಿನ ಕಡೆ ಹೋದರೆ, ನಿಮಗೆ ಈ ಸ್ಪಾಟ್ ಸಿಗುತ್ತದೆ. ಒಂದೇ ಸಮನೆ ಶಿಶ್ನವನ್ನ ನುಗ್ಗಿಸುವುದರಿಂದ ಮತ್ತು ಹೊರತೆಗೆಯುವುದರಿಂದ ಈ ಸ್ಪಾಟ್ ಲಭಿಸುವುದಿಲ್ಲ.

ನಿಮ್ಮ ಒಂದು ಅಥವಾ ಎರಡು ಬೆರಳುಗಳನ್ನು ಹುಕ್ ರೀತಿ ಮಡಚಿ, ನಿಮ್ಮ ಯೋನಿಯ ಒಳಗೋಡೆಯನ್ನು ಸವರಿ. ಒಂದು ಜಾಗದಲ್ಲಿ ನಿಮಗೆ ಅಡಿಕೆಯನ್ನು ಮುಟ್ಟಿದ ರೀತಿ ಅನುಭವ ಆಗುತ್ತದೆ. ಅದುವೇ G-ಸ್ಪಾಟ್.

ಯೋನಿಯ ಮೇಲೆ ಎರಡು ಬದಿಯಲ್ಲಿ ಇರುವ V-ಆಕಾರದ ಮೂಳೆಗಳೇ ಪ್ಯೂಬಿಕ್ ಮೂಳೆಗಳು. ಆ ಸ್ಪಾಟ್ ಅಲ್ಲಿ ಬೆರಳಾಡಿಸಿ, ಯಾವ ರೀತಿಯ ಅನುಭವ ಆಗುತ್ತಿದೆ ಎಂಬುದನ್ನ ಪರೀಕ್ಷಿಸಿ. ಕೆಲವರಿಗೆ ಈ G-ಸ್ಪಾಟಿನ ಪ್ರಚೋದನೆಯು ಮೂತ್ರ ವಿಸರ್ಜನೆ ಮಾಡುವಂತೆ ಅನಿಸುವ ಅನುಭವ ನೀಡಿದರೆ, ಇನ್ನೂ ಕೆಲವರಿಗೆ ಬಿಸಿಯ ನೀರು ಹರಿದು ಬಂದಂತೆ ಅನಿಸುವುದು. ಪ್ರತಿಯೊಂದು ಹೆಣ್ಣಿಗೂ ಈ ಅನುಭವ ವಿಭಿನ್ನ ಆಗಿರಬಹುದು.

೨. ಯಾವುದು ಹಿತ ಎನಿಸುವುದು ಎಂಬುದನ್ನು ಗುರುತಿಸಿ

ಬೆರಳುಗಳಿಂದ ಬೇರೆ ಬೇರೆ ಪ್ರಮಾಣದ ಒತ್ತಡ ಹೇರಿ ಮತ್ತು ಬೇರೆ ಬೇರೆ ರೀತಿಯ ಚಲನೆಗಳೊಂದಿಗೆ ಪ್ರಯೋಗ ಮಾಡಿ. ವೃತ್ತಾಕಾರದ ಚಲನೆ, ಮೇಲೆ ಕೆಳಗೆ ಮಾಡುವುದು ಮತ್ತು ನಿಮಗೆ ಯಾವ ರೀತಿ ಹಿತ ಅನಿಸುವುದೋ ಅಂತಹ ಬೆರಳಿನ ಚಲನೆ ಮಾಡಿ.

ಈ G-ಸ್ಪಾಟ್ ಅನ್ನುವುದು ಒಂದು ಬಹುಆಯಾಮದ ಪ್ರದೇಶ ಆಗಿದ್ದು, ಬೇರೆ ಬೇರೆ ಚಲನೆಗಳು, ಬೇರೆ ಬೇರೆ ಅನುಭವಗಳನ್ನ ನೀಡಬಹುದು. ಕೇವಲ G-ಸ್ಪಾಟ್ ಪ್ರಚೋದನೆ ಒಂದೇ ಒರ್ಗ್ಯಾಸಮ್ ನೀಡುವುದಿಲ್ಲ. ಕ್ಲಿಟೋರಿಸ್ ಗೆ  ನಿಮ್ಮ ಬೆರಳುಗಳ ಮೂಲಕ ಬಾಹ್ಯ ಪ್ರಚೋದನೆ ನೀಡಿರಿ.

೩. ಸರಿಯಾದ ಭಂಗಿಗಳನ್ನ ಆಯ್ದುಕೊಳ್ಳಿ

ಈ G-ಸ್ಪಾಟ್ ಅನ್ನು ಸಂಭೋಗದ ವೇಳೆ ಸರಿಯಾಗಿ ಪ್ರಚೋದಿಸಲು ಅತ್ಯಂತ ಸೂಕ್ತವಾದ ಭಂಗಿಗಳು ಎಂದರೆ ಒಂದು ಹೆಂಗಸು ಗಂಡಸಿನ ಮೇಲೆ ಕೂತುಕೊಳ್ಳುವುದು ಮತ್ತು ಎರಡನೆಯದು ನಿಮ್ಮ ಹಿಂಬಂದಿಯಿಂದ ಶಿಶ್ನವನ್ನ ಒಳ ನುಗ್ಗಿಸುವುದು.

೪. ಕೆಲವು ಹೆಂಗಸರಿಗೆ ಇದು ಇರುವುದಿಲ್ಲ …. ಆದರೆ ತೊಂದರೆ ಇಲ್ಲ !

ಲೈಂಗಿಕ ತಜ್ಞರ ಪ್ರಕಾರ ಎಲ್ಲಾ ಹೆಂಗಸರ ದೇಹದಲ್ಲೂ G-ಸ್ಪಾಟ್ ಇರುತ್ತದೆ, ಆದರೆ ಆ ಪ್ರದೇಶದ ಪ್ರಚೋದನೆಯಿಂದ ಒರ್ಗ್ಯಾಸಮ್ (ಲೈಂಗಿಕ ಪರಾಕಾಷ್ಠೆ) ಹೊಂದುವ ದೈಹಿಕ ಸಾಮರ್ಥ್ಯ ಎಲ್ಲರಲ್ಲೂ ಇರುವುದಿಲ್ಲ. ಎಲ್ಲರ ದೇಹವು ಬೇರೆ ಬೇರೆ ರೀತಿಯಲ್ಲೇ ಪ್ರತಿಕ್ರಿಯಿಸುವುದರಿಂದ, ಪ್ರತಿಯೊಬ್ಬರು ಅನುಭವಿಸುವ ಸುಖವು ಬೇರೆ ಆಗಿರುತ್ತದೆ. ಒಂದು ವೇಳೆ ನಿಮಗೆ G-ಸ್ಪಾಟ್ ಮುಟ್ಟಿಸಿಕೊಳ್ಳುವುದು ಇಷ್ಟವಾಗದಿದ್ದಲ್ಲಿ ಆಗಲಿ ಅಥವಾ ಅದರಿಂದ ನಿಮಗೆ ಅಷ್ಟೊಂದು ಸುಖ ಸಿಗುತ್ತಿಲ್ಲ, ಅದರಲ್ಲಿ ತಪ್ಪೇನಿಲ್ಲ. ಅದು ಕೂಡ ಸಹಜ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon