Link copied!
Sign in / Sign up
23
Shares

ಸೌತೆಕಾಯಿ ಉಪಯೋಗಿಸಿಕೊಂಡು ಮೊಡವೆ ತೊಲಗಿಸಲು 4 ಹೊಸ ವಿಧಾನಗಳು!

ಸೌತೆಕಾಯಿಯು ತ್ವಚೆಯ ರಕ್ಷಣೆಯ ಒಂದು ಅವಿಭಾಜ್ಯ ಅಂಗವಾಗಿದೆ. ಹೆಂಗಸರು ಸಾಮಾನ್ಯವಾಗಿ ಇದನ್ನು ಬಳಸಿ ಫೇಸ್ ಪ್ಯಾಕ್ ಅನ್ನು ತಯಾರಿಸಿ ತಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಉಪಯೋಗಿಸುವರು. ಆದರೆ ಇದಕ್ಕೆ ಇರುವ ಮೊಡವೆಗಳ ವಿರುದ್ಧ ಶಕ್ತಿಯನ್ನು ನಾವು ಮರೆಯುವಂತಿಲ್ಲ. ಬಹಳಷ್ಟು ವಿಟಮಿನ್ A, ಪೊಟ್ಯಾಸಿಯಂ ಅಂಶ ಹೊಂದಿರುವ ಸೌತೆಕಾಯಿಯನ್ನು ನೀವು ನಿಮ್ಮ ತ್ವಚೆಯ ಪೋಷಣೆಗೆ ವಿಶ್ವಾಸದಿಂದ ಬಳಸಬಹುದು. ಈ ಲೇಖನದಲ್ಲಿ ನಾವು ನಿಮಗೆ ಸೌತೆಕಾಯಿಯನ್ನು ಯಾವೆಲ್ಲಾ ರೂಪದಲ್ಲಿ ಮತ್ತು ಹೇಗೆಲ್ಲಾ ನಿಮ್ಮ ಮೊಡವೆ ನಿವಾರಣೆಗೆ ಬಳಸಬಹುದು ಎಂಬುದನ್ನು ತಿಳಿಸುತ್ತೇವೆ.

೧. ಸೌತೆಕಾಯಿ ಫೇಶಿಯಲ್ ಜ್ಯೂಸು

ಮೊದಲನೆಯದಾಗಿ ನೀವು ಸೌತೆಕಾಯಿಯ ಸಿಪ್ಪೆ ಸುಲಿದು ಅದನ್ನು ಮಿಕ್ಸರ್ ಅಲ್ಲಿ ಹಾಕಿ ಅದರ ಪೇಸ್ಟ್ ಅನ್ನು ಲಭಿಸಿಕೊಳ್ಳಿ. ನಂತರ, ಅದಕ್ಕೆ ಸ್ವಲ್ಪ ಸಕ್ಕರೆ ಬೆರೆಸಿ. ಹತ್ತಿಯಿಂದ ಆ ಮಿಶ್ರಣವನ್ನು ಮೊಡವೆ ಆಗಿರುವ ಜಾಗಗಳ ಮೇಲೆ ಒತ್ತಿಕೊಳ್ಳಿ.. ಆನಂತರ ಆ ಮಿಶ್ರಣವು ನಿಮ್ಮ ಮುಖದ ಮೇಲೆ ಹಾಗೆಯೇ ಒಣಗಲು ಬಿಡಿ. ಒಣಗಿದ ನಂತರ ಬಟ್ಟೆಯಿಂದ ಒರೆಸಿಕೊಳ್ಳಿ.

ಇನ್ನೊಂದು ವಿಧಾನ ಎಂದರೆ ಸೌತೆಕಾಯಿ ರಸಕ್ಕೆ ಮಸೂರ್ ಬೇಳೆ ಪುಡಿಯನ್ನು ಬೆರೆಸಿ, ಅದನ್ನು ಒಂದು ಪೇಸ್ಟ್ ಮಾಡಿಕೊಳ್ಳಿ. ಅದನ್ನು ನಿಮ್ಮ ಮುಖಕ್ಕೆ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. 20-30 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ನೀರಿನಿಂದ ತೊಳೆದುಕೊಳ್ಳಿ..

ಹೀಗೆ ಮಾಡುವುದರಿಂದ ಸೌತೆಕಾಯಿಯು ನಿಮ್ಮ ಮುಖದ ಮೇಲಿನ ತೂತುಗಳನ್ನು ತೆರೆಯುತ್ತದೆ ಹಾಗು ಇದರಿಂದ ನಿಮ್ಮ ಮುಖದ ಮೇಲಿನ ಕೆಂಪು ಬಣ್ಣ ಮಾಸುತ್ತದೆ.


೨. ಸೌತೆಕಾಯಿ ಮತ್ತು ಮೊಸರು

ಸೌತೆಕಾಯಿಯು ನಿಮ್ಮ ಮುಖದ ಮೇಲಿನ ಬೇಡದ ಎಣ್ಣೆಯನ್ನು ತೆಗೆಯುತ್ತದೆ. ಹೀಗಾಗಿ ನೀವು ಸೌತೆಕಾಯಿಯ ಸಿಪ್ಪೆ ಸುಲಿದು, ಸಣ್ಣ ತುಂಡುಗಳಾಗಿ ತುಂಡರಿಸಿ ಮಿಕ್ಸರ್ ಅಲ್ಲಿ ತಿರುಗಿಸಿ. ನಂತರ ಅದಕ್ಕೆ ಮೊಸರನ್ನು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿಕೊಂಡು 20-30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆದುಕೊಳ್ಳಿ..

 

೩. ಸೌತೆಕಾಯಿ, ಜೇನುತುಪ್ಪ, ಅಡುಗೆ ಸೋಡಾ ಮತ್ತು ಸೇಬು

ಇವೆಲ್ಲಾ ಪದಾರ್ಥಗಳು ಮೊಡವೆಗಳು ವಿರುದ್ಧ ಹೋರಾಡುತ್ತಾವೆ. ಮುಖ್ಯವಾಗಿ ಅಡುಗೆ ಸೋಡಾ ಮೊಡವೆಗಳ ನಿವಾರಣೆಯಲ್ಲಿ ತುಂಬಾ ಸಹಾಯ ಮಾಡುತ್ತದೆ. ಮೊದಲಿಗೆ 3 ಚಮಚಗಳಷ್ಟು ನೀರಿಗೆ 1 ಚಮಚದಷ್ಟು ನೀರನ್ನು ಬೆರೆಸಿ. ನಂತರ ಒಂದು ಸೇಬನ್ನು ಮತ್ತು ಒಂದು ಸೌತೆಕಾಯಿಯನ್ನು ಚೆನ್ನಾಗಿ ಜೇಜ್ಜಿಕೊಂಡು ಮಿಶ್ರಣ ಮಾಡಿಕೊಳ್ಳಿ ಮತ್ತು ಈ ಮಿಶ್ರಣಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ. ನಂತರ ಈ ಮಿಶ್ರಣದೊಂಗಿಗೆ ಅಡುಗೆ ಸೋಡಾ ಪೇಸ್ಟ್ ಅನ್ನು ಚೆನ್ನಾಗಿ ಬೆರೆಸಿ ನಿಮ್ಮ ಫ್ರಿಡ್ಜ್ ಅಲ್ಲಿ ಒಂದು ಗಂಟೆಯ ಕಾಲ ಇರಿಸಿ. ನಂತರ ಅದನ್ನು ಹೊರತೆಗೆದು ನಿಮ್ಮ ಮುಖಕ್ಕೆ ಹಚ್ಚಿಕೊಂಡು 20-30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಅದನ್ನು ನೀರಿನಿಂದ ತೊಳೆದು, ಒಣ ಬಟ್ಟೆಯಿಂದ ಒತ್ತುತ್ತಾ ಒರೆಸಿಕೊಳ್ಳಿ. ಇದನ್ನು ವಾರಕ್ಕೆ 2-3 ಬಾರಿ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುವುದು.


೪. ಸೌತೆಕಾಯಿ ಮತ್ತು ನಿಂಬೆ ಹಣ್ಣು

ಒಂದು ವೇಳೆ ನೀವು ಸೌತೆಕಾಯಿ ಮತ್ತು ನಿಂಬೆರಸದ ಅದ್ಭುತ ಮೊಡವೆ ವಿರುದ್ಧ ಹೋರಾಡುವ ಶಕ್ತಿಯನ್ನು ಬಳಸದೆ ಇದ್ದರೆ, ತಪ್ಪು ನಿಮ್ಮದೇ. ನಿಂಬೆರಸವು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನ ನಾಶ ಮಾಡುತ್ತದೆ ಮತ್ತು ಮುಖದ ಮೇಲಿನ ಗುರುತುಗಳನ್ನು ತೊಳೆದು ಹಾಕುತ್ತದೆ.

ಮೊದಲಿಗೆ ನೀವು ಸೌತೆಕಾಯಿಯನ್ನು ತುರಿದುಕೊಂಡು, ಅದನ್ನು ಹಿಂಡಿ ರಸ ತೆಗೆಯಿರಿ. ಒಂದು ಚಿಕ್ಕ ಲೋಟದಷ್ಟು ಸೌತೆಕಾಯಿ ರಸಕ್ಕೆ ಕೆಲವು ಹನಿಗಳಷ್ಟು ನಿಂಬೆರಸ ಬೆರೆಸಿ. ನಂತರ ಹತ್ತಿಯಲ್ಲಿ ಅದನ್ನು ಮುಖಕ್ಕೆ, ಮುಖ್ಯವಾಗಿ ಮೊಡವೆ ಮತ್ತು ಗುರುತುಗಳು ಆಗಿರುವ ಜಾಗಗಳಲ್ಲಿ. ಅದು ಒಣಗಿದ ಮೇಲೆ ನೀರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon