Link copied!
Sign in / Sign up
42
Shares

ಸೌಂದರ್ಯ ವರ್ಧಕಗಳನ್ನು ಬಳಸದೆ ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸಲು ಈ 10 ಸಲಹೆಗಳು

ನಿಮ್ಮನ್ನು ಸುಂದರವಾಗಿ ಕಾಣುವಂತೆ ಮಾಡಲು ಸೌಂದರ್ಯ ವರ್ಧಕಗಳನ್ನು ಬಳಸುವುದು ಮಾತ್ರ ಮಾರ್ಗವಲ್ಲ. ಖಂಡಿತವಾಗಿ, ಸೌಂದರ್ಯ ವರ್ಧಕಗಳು ಸುಂದರವಾಗಿ ಕಾಣಲು ಉಪಯೋಗಿಸುವ ಅಂಶಗಳ ಒಂದು ಭಾಗ ಮಾತ್ರ. ಸೌಂದರ್ಯ ವರ್ಧಕಗಳು ತಮ್ಮ ಕಾಂತಿಯನ್ನು ಕಳೆದುಕೊಂಡ ನಂತರವೂ ನಿಮ್ಮ ತ್ವಚೆಯ ಹೊಳಪನ್ನು ಉಳಿಸಿಕೊಳ್ಳುವುದು, ನಿಮ್ಮಗೆ ಅಗತ್ಯವಾಗಿರುತ್ತದೆ. ಸೌಂದರ್ಯ ವರ್ಧಕಗಳನ್ನು ಬಳಸದೆ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಂಡು, ಸುಂದರವಾಗಿ ಕಾಣಲು ಸಾದ್ಯವೇ?ಅದು ಹೇಗೆ?

ಸೌಂದರ್ಯ ವರ್ಧಕಗಳನ್ನು ಉಪಯೋಗಿಸದೆ, ನಿಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸಿ, ಸುಂದರವಾಗಿ ಕಾಣುವಂತೆ ಮಾಡಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

೧. ತೇವಾಂಶ

ನಿಮ್ಮ ತ್ವಚೆಯನ್ನು ಯಾವಾಗಲು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುವುದು ಮುಖ್ಯ. ನಿರ್ಜಲೀಕರಣದ ಚರ್ಮವು ನಿಮ್ಮ ತ್ವಚೆಯನ್ನು ಶುಷ್ಕವಾಗಿ ಕಾಣುವಂತೆ ಮಾಡುವುದು. ಒಣಚರ್ಮವು ಮರಳು ಕಾಗದವಿದ್ದಂತೆ(ಸ್ಯಾಂಡ್ ಪೇಪರ್). ನಿಮ್ಮ ತ್ವಚೆಯನ್ನು ತೇವಾಂಶದಿಂದ ನೋಡಿಕೊಳ್ಳುವುದರಿಂದ, ಚರ್ಮವನ್ನು ಮೆತ್ತಗೆ ಮತ್ತು ಮೃದುವಾಗಿಸುತ್ತದೆ. ನಿಮ್ಮ ತ್ವಚೆಯು ಬೆಳಕಿಗೆ ಪ್ರತಿಬಿಂಬಿಸುವಂತಾಗುತ್ತದೆ ಮತ್ತು ಅದು ನಿಮಗೆ ಬೇಕಾಗಿರುವ ಹೊಳಪನ್ನು ನೀಡುತ್ತದೆ.

೨. ಆರೋಗ್ಯಕರ ಆಹಾರ ಸೇವನೆ

ನಿಮ್ಮ ದೇಹಕ್ಕೆ ಆರೋಗ್ಯಕರ ಆಹಾರ ನೀಡಿದಷ್ಟು, ನಿಮ್ಮ ಚರ್ಮ ಆರೋಗ್ಯಕರವಾಗಿರುತ್ತದೆ. ಇದು ಸುಲಭವಾಗಿ ಕಾಣುತ್ತದೆ, ಆದರೆ ಆರೋಗ್ಯಕರ ಆಹಾರ ಸೇವನೆ, ಸುಲಭದ ಕೆಲಸವಲ್ಲ. ಎಲ್ಲಾ ತರಹದ ತ್ವರಿತ ಆಹಾರ ಮತ್ತು ಕಡಿಮೆ ಪೌಷ್ಟಿಕಾಂಶವುಳ್ಳ ಆಹಾರ(ಜಂಕ್ ಫುಡ್) ಸೇವನೆಯನ್ನು ನಿಲ್ಲಿಸುವುದರಿಂದ, ದೇಹವು ತನ್ನಷ್ಟಕ್ಕೆ ತಾನೇ ನಿಧಾನವಾಗಿ ನಿರ್ವಿಷಗೊಳ್ಳುವುದಕ್ಕೆ ಶುರುವಾಗುತ್ತದೆ. ಹೊಸ ಚರ್ಮದ ಜೀವಕೋಶಗಳನ್ನು ಸೃಷ್ಟಿಸಲು  ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳ ಅಗತ್ಯವಿದೆ, ಆರೋಗ್ಯಕರ ಆಹಾರ ಸೇವಿಸುವ ಮೂಲಕ ಈ ಅವಶ್ಯಕತೆಗಳನ್ನು ನೀವು ಪಡೆಯಬಹುದು, ಮತ್ತು ಇದು ನಿಮ್ಮ ತ್ವಚೆಯ ನೈಸರ್ಗಿಕ ಸೌಂದರ್ಯಕ್ಕೆ ಕಾರಣವಾಗುತ್ತದೆ.

೩.ವ್ಯಾಯಾಮ

ನೀವು ವೇಗವಾಗಿ ಫಲಿತಾಂಶಗಳನ್ನು ಬಯಸಿದರೆ, ಆರೋಗ್ಯಕರ ಆಹಾರ ಸೇವನೆ ಜೊತೆಗೆ, ನೀವು ಹೆಚ್ಚು ವ್ಯಾಯಾಮ ಮಾಡುವುದನ್ನು ಪ್ರಾರಂಭಿಸಬೇಕಾಗುತ್ತದೆ. ಹೆಚ್ಚಿನ ಕ್ರೀಡಾಪಟುಗಳು ಹೇಗೆ ದೋಷರಹಿತವಾಗಿರುತ್ತಾರೆ, ಎಂದು ನೀವು ಆಶ್ಚರ್ಯಗೊಂಡಿರುವಿರಾ? ಅದು ವ್ಯಾಯಾಮದಿಂದ. ನೀವು ವ್ಯಾಯಾಮ ಮಾಡುವಾಗ ನಿಮ್ಮ ದೇಹಕ್ಕೆ ಬೇಡವಾದ ಅನಗತ್ಯ ನಂಜನ್ನು ಬೆವರಿನ ಮೂಲಕ ಹೊರಹಾಕುತ್ತದೆ. ನಿಮ್ಮ ದೇಹವು ಹೆಚ್ಚು ವ್ಯಾಯಾಮದಲ್ಲಿ ಪಾಲ್ಗೊಂಡರೆ, ಹೆಚ್ಹು ನಂಜು ನಿಮ್ಮ ದೇಹದಿಂದ ಹೊರ ಹೋಗಿರುತ್ತದೆ.

೪. ಹಣ್ಣಿನ ರಸ

ಹಣ್ಣನ್ನು ತಿನ್ನುವುದಕ್ಕಿಂತ ಉತ್ತಮವಾದುದು ಏನು? ಅದನ್ನು ಕುಡಿಯುವುದು. ನೀವು ಹೊಸ ಆಹಾರ ಪಥ್ಯವನ್ನು ಹುಡುಕುತ್ತಿದ್ದರೆ, ಸಲಹೆ ಇಲ್ಲಿದೆ. ಹಣ್ಣಿನ ರಸ ಸೇವನೆ ಮಾಡುವುದು, ಅದು ನಿಮ್ಮ ದೇಹದ ತೂಕ ಕಡಿಮೆ ಮಾಡುವುದರ ಜೊತೆಗೆ, ನಿಮ್ಮ ದೇಹವನ್ನು ಸಂಪೂರ್ಣವಾಗಿ ನಿರ್ವಿಷಗೊಳಿಸುತ್ತದೆ. ಉಪವಾಸದ ಸಮಯದಲ್ಲಿ  ಹಣ್ಣಿನ ರಸಗಳು ಕೆಲಸ ನಿರ್ವಹಿಸುವುದನ್ನು ತಿಳಿದಿದೆ ಮತ್ತು ಅದರ ಪರಿಣಾಮವು ನಿಮ್ಮನ್ನು ಆರೋಗ್ಯಕರವಾಗಿ ಕಾಣುವಂತೆ ಮಾಡುವುದು.

೫. ಅತೀ ಹೆಚ್ಚು ನೀರು ಕುಡಿಯುವುದು

ನಮ್ಮ ದೇಹವು ಶೇಕಡ ೭೦ರಷ್ಟು(೭೦%) ನೀರಿನಿಂದ ಕೂಡಿದೆ. ಅದರ ಅಗತ್ಯದಂತೆ ನೀರು ಕುಡಿಯದಿರುವುದು, ನಮಗೆ ನಾಚಿಕೆಯ ವಿಷಯ. ಕುಡಿಯುವ ನೀರು ನಮ್ಮ ಚರ್ಮವನ್ನು ಆರೋಗ್ಯಕರವಾಗಿಸಲು ಸುಲಭವಾದ ಮತ್ತು ಕಡಿಮೆ ವೆಚ್ಚದಾಯಕದ ವಿಧಾನವಾಗಿದೆ. ನಿಮ್ಮ ದೇಹವು ಹೆಚ್ಚು ತೇವಾಂಶದಿಂದ ಕೂಡಿದ್ದರೆ, ನಿಮ್ಮ ತ್ವಚೆಯು ಹೆಚ್ಚು ಹೊಳಪನ್ನು ಪ್ರಕಾಶಿಸುವುದು. ಖ್ಯಾತ ರೂಪದರ್ಶಕಿ ನವೋಮಿ ಕ್ಯಾಂಪ್ಬೆಲ್ ಪ್ರಕಾರ, “ನನ್ನ ಸಮಯವನ್ನು ವ್ಯರ್ಥ ಮಾಡಬೇಡಿ, ನೀವು ಕೇಳಬೇಕಾದದ್ದು. ಏನೆಂದರೆ, ನಾನು ನಿನ್ನನ್ನು ಬಹಳಷ್ಟು ಕುಡಿಯಲು ಬಯಸುತ್ತೇನೆ, ಬಹಳಷ್ಟು ನೀರು. ಜಲಸಂಚಯನ ... ನೀರು, ನೀರು, ನೀರು ... “

೬. ಪದರ ಕಳಚು

ನಿರ್ಜೀವವಾದ ಚರ್ಮವು ಯಾರನ್ನಾದರೂ ಉತ್ತಮವಾಗಿ ಕಾಣುವಂತೆ ಮಾಡುವುದಿಲ್ಲ, ಅದು ನಿಮಗೆ ಮಂದ ಮತ್ತು ಜೀವನವನ್ನು ಬೇಸರಗೊಳ್ಳುವಂತೆ ಮಾಡುತ್ತದೆ. ಈ ಮಡಿದ ಚರ್ಮವನ್ನು ತೆಗೆದುಹಾಕುವುದಕ್ಕೆ ಪದರ ಕಳಚುವ ವಿಧಾನ ಸಹಾಯವಾಗುತ್ತದೆ. ನೀವು ಫೇಸ್ ಸ್ಕ್ರಬ್(ಮುಖ ಗುಂಜು)ಅನ್ನು ಹೊಂದಿರದಿದ್ದರೆ, ಅದನ್ನು ಖರೀದಿಸುವುದಕ್ಕೆ ಈಗ ಒಳ್ಳೆ ಸಮಯ. ಪದರ ಕಳಚುವ ವಿಧಾನ ಸತ್ತ ಚರ್ಮವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಮೊಡವೆ ಚರ್ಮವನ್ನು ಕಡಿಮೆ ಮಾಡಿ ಮತ್ತು ಮೊಡವೆಗಳನ್ನು ಕಾಣದಂತೆ ತಡೆಗಟ್ಟಲು ಸಹಾಯ ಮಾಡುತ್ತದೆ, ಇದು ನಿಮ್ಮ ಮುಖದಿಂದ ಹೆಚ್ಚಿನ ಎಣ್ಣೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

೭.ನೈಸರ್ಗಿಕ ಮುಖ ಹೊದಿಕೆ(ಮುಖವಾಡ)

ಅವು ಅಸ್ತಿತ್ವದಲ್ಲಿವೆ ಮತ್ತು ಅವನ್ನು ಅಳವಡಿಸಿಕೊಳ್ಳುವುದು ಸುಲಭ. ಮುಖದ ಹೊದಿಕೆ(ಮುಖವಾಡ)ಯನ್ನು ತಯಾರಿಸಲು ನೀವು ನೈಸರ್ಗಿಕ ಪದಾರ್ಥಗಳನ್ನು ಬಳಸಬಹುದು, ಅದು ನಿಮ್ಮ ಚರ್ಮವನ್ನು ಕಡಿಮೆ ಬೆಲೆಗೆ ನಿರ್ವಿಷಗೊಳಿಸುತ್ತದೆ. ನಿಮಗೆ ಬೇಕಾಗಿರುವುದು ಒಂದು ಚಮಚ ಸೌತೆಕಾಯಿ ರಸ, ಸ್ವಲ್ಪ ನಿಂಬೆ ರಸ, ಸ್ವಲ್ಪ ಅರಿಶಿಣ ಮತ್ತು ಸ್ವಲ್ಪ (ನೈಸರ್ಗಿಕ ಎಣ್ಣೆ)ಗ್ಲಿಸರೀನು (ಒಣ ಚರ್ಮ ಹೊಂದಿರುವವರಿಗೆ). ಸೌತೆಕಯಿಯು ನಿಮ್ಮ ತ್ವಚೆಯ ಹೊಳಪು ಹೆಚ್ಚಿಸಲು, ಮತ್ತು ಬಿಸಿಲಿನಿಂದ ಆದ ಕಲೆಗಳನ್ನು ಕಡಿಮೆ ಮಾಡುವುದರಲ್ಲಿ ಸಹಾಯಕವಾಗುತ್ತವೆ. ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಮತ್ತು ೧೫ ನಿಮಿಷಗಳ ಕಾಲ ಆ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಅನ್ವಯಿಸಿ.

೮.ಚತುರ ಪಾತ(ನೀರು ಸಿಂಪಡಿಸುವಿಕೆ)

ತಣ್ಣೀರಿನೊಂದಿಗೆ ದಿನನಿತ್ಯ ಜಳಕ ಮಾಡುವುದು ಯುದ್ದವಿದ್ದಂತೆ, ಆದರೆ ಅದು ಯಾವಾಗಲೂ ಕೆಟ್ಟ ಕೆಲಸವಲ್ಲ, ಅದರಿಂದ ತ್ವಚೆಯ ಆರೋಗ್ಯ ಶುದ್ದಿಯನ್ನು ಕಾಪಾಡಿಕೊಳ್ಳಬಹುದು. ಜಳಕದಿಂದ ನಿರ್ಗಮಿಸುವ ಮೊದಲು, ಬೆಚ್ಚಗಿನ ನೀರನ್ನು ಉಪಯೋಗಿಸುವುದನ್ನು ನಿಲ್ಲಿಸಿ, ಮತ್ತು ನಿಮ್ಮ ಚರ್ಮಕ್ಕೆ ತಂಪಾದ(ತಣ್ಣೀರಿನ) ನೀರಿನ ಸ್ಪರ್ಶವನ್ನು ಮಾಡಿರಿ, ನೀರಿನಲ್ಲಿನ ಈ ಹಠಾತ್ ಬದಲಾವಣೆಯು ನಿಮ್ಮ ಚರ್ಮಕ್ಕೆ ಅದ್ಭುತಗಳನ್ನು ಮಾಡುತ್ತದೆ. ಇದು ನಿಮ್ಮ ಚರ್ಮದ ರೋಮಕೂಪವನ್ನು ತೆರೆದುಕೊಳ್ಳುವಂತೆ ಮಾಡುತ್ತದೆ, ಮತ್ತು ಇದನ್ನು ಪ್ರತಿದಿನ ಪುನರಾವರ್ತಿಸುವುದರಿಂದ ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸಿ, ಮಿನುಗುವಂತೆ ಮಾಡುತ್ತದೆ.

೯. ರಕ್ತ ನಿರ್ವಿಶೀಕರಣ

ನಮ್ಮ ದೈನಂದಿನ ಬದುಕಿನ ವಿವಿಧ ಆಹಾರ ಕ್ರಮ, ಮಾಲಿನ್ಯ ಮತ್ತು ಒತ್ತಡದಿಂದ ನಮ್ಮ ರಕ್ತದಲ್ಲಿ ನಂಜು(ಜೀವಾಣು ವಿಷ/ಟಾಕ್ಸಿನ್ಸ್) ಶೇಕರಣೆಗೊಳ್ಳುತ್ತದೆ. ನಮ್ಮ ದೇಹದಲ್ಲಿರುವ ಅನಗತ್ಯ ನಂಜುಗಳನ್ನು ಹೊರಹಾಕುವುದು ಅಥವಾ ನಿಷ್ಕ್ರಿಯೇಗೊಳಿಸುವ ಕಾರ್ಯ ವಿಧಾನವನ್ನು ನಿರ್ವಿಶೀಕರಣ ಎನ್ನುತ್ತೇವೆ. ನಿರ್ವಿಶೀಕರಣವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ, ಚರ್ಮವನ್ನು ಸುಧಾರಿಸುತ್ತದೆ ಮತ್ತು ಆರೋಗ್ಯಕರ ಬದಲಾವಣೆಗಳನ್ನು ನಿಯಂತ್ರಿಸುತ್ತದೆ. ರಕ್ತದ ನಿರ್ವಿಶೀಕರಣಗಳು ಸಾಕಷ್ಟು ಇವೆ, ಅವು ಕೆಟ್ಟ ರುಚಿಯನ್ನು ಹೊಂದಿವೆ - ನನ್ನಲ್ಲಿ ನಂಬಿಕೆ ಇಡಿ, ಅಂತಿಮ ಫಲಿತಾಂಶಗಳು  ಸಂಪೂರ್ಣ ಯೋಗ್ಯವಾಗಿರುತ್ತದೆ.

೧೦.ಆ ನಗುವನ್ನು ಪ್ರಕಾಶಿಸು

ಅಂತಿಮವಾಗಿ, ನಿಮ್ಮ ಚರ್ಮ ಮತ್ತು ಮನೋಭಾವ ನಿಮಗೆ ಆರಾಮದಾಯಕವಾಗದಿದ್ದರೆ, ಈ ಕ್ರಮಗಳು ನಿಮ್ಮ ತ್ವಚೆಯ ಸೌಂದರ್ಯ ವೃದ್ದಿಸಲು ನಿಮಗೆ ಸಹಾಯ ಮಾಡುವುದಿಲ್ಲ. ನಿಮಗೆ ಸಹಾಯ ಮಾಡುವ ಮೂಲವು ನೀವೇ ಆಗಿರುತ್ತಿರಿ, ನಿಮ್ಮ ಸ್ವಲ್ಪ ಮುಗುಳ್ನಗೆ ನಿಮಗೆ ಅಧ್ಬುತ ಸಹಾಯಗಳನ್ನು ಮಾಡುತ್ತದೆ. ಹೆಚ್ಚು ನಗುತ್ತಿರುವುದು ನಿಮ್ಮ ಮುಖದ ಹೊಳಪನ್ನು ಹೆಚ್ಚಿಸುವುದರ ಜೊತೆಗೆ, ನಿಮ್ಮ ಸುತ್ತಮುತ್ತಲಿನ ಜನರ ನಡುವೆ ನಿಮ್ಮನ್ನು ಪ್ರಕಾಶಿಸುವಂತೆ ಮಾಡುತ್ತದೆ. ಇದು ನಿಮ್ಮ ಒತ್ತಡವನ್ನು ಕಡಿಮೆಮಾಡುತ್ತದೆ, ಮತ್ತು ನಿಮ್ಮ ದಿನವನ್ನು ಧನಾತ್ಮಕವಾಗಿ ಕರೆದೊಯುತ್ತದೆ. ನಿಮ್ಮ ದಿನವನ್ನು ನಗುವಿನಿಂದ ಆರಂಭಿಸಿದರೆ, ಅದು ನಿಮ್ಮ ಜೀವನದ ಮೇಲೆ ಧನಾತ್ಮಕ ಪ್ರಭಾವ ಬೀರಲು ಪ್ರಾರಂಭಿಸುತ್ತದೆ.

Click here for the best in baby advice
What do you think?
0%
Wow!
0%
Like
100%
Not bad
0%
What?
scroll up icon