Link copied!
Sign in / Sign up
2
Shares

ಈ 5 ಸೌಂದರ್ಯ ರಹಸ್ಯಗಳು ನಿಮ್ಮದಾಗಿಸಿಕೊಂಡರೆ ಎಲ್ಲಾ ಅಂದವು ನಿಮ್ಮದಾಗುತ್ತದೆ

ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಇರುವ ಸೌಂದರ್ಯವನ್ನು ಉಳಿಸಿಕೊಳ್ಳಲು ಹೆಂಗಳೆಯರು ಹಲವು ವಿಧಾನಗಳನ್ನು ಅನುಸರಿಸುವರು ಮತ್ತು ರಾಸಾಯನಿಕ ಕ್ರೀಮ್ ಅಥವಾ ಲೋಷನ್ ಬಳಸುವರು ಇದು ತ್ವಚೆಯ ಆರೋಗ್ಯಕ್ಕೆ ಹಾನಿ ಮಾಡಬಹುದು.

ಸೌಂದರ್ಯಕ್ಕೆ ತಮ್ಮದೇ ಆದ ನೈಸರ್ಗಿಕ ಪದಾರ್ಥಗಳನ್ನು ಉಪಯೋಗಿಸಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದ ಪ್ರಾಚೀನ ಮಹಿಳೆಯರ ಕೆಲವು ಸೌಂದರ್ಯ ರಹಸ್ಯಗಳನ್ನು ಇಲ್ಲಿ ನಾವು ತಿಳಿದುಕೊಳ್ಳುವ ಬನ್ನಿ. ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲದ ಕಾರಣ ಇದನ್ನು ನಾವು ಚಿಂತಿಸದೆ ಉಪಯೋಗುಸಬಹುದು ಮತ್ತು ಇವು ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ.

೧.ಮೆಂತ್ಯೆ

ಇದರ ಬೀಜಗಳಿಂದ ಪೇಸ್ಟ್ ತಯಾರಿಸಿ, ಅದನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆದುಕೊಳ್ಳುವುದರಿಂದ ತ್ವಚೆಯು ಮೃದುವಾಗುತ್ತದೆ ಮತ್ತು ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ. ಜೊತೆಗೆ ಇದು ಬ್ಯಾಕ್ಟಿರಿಯಾ ಮತ್ತು ಶಿಲಿಂಧ್ರಗಳ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವುದರಿಂದ ಚರ್ಮದ ಮೇಲೆ ಉಂಟಾಗುವ ಅದರಲ್ಲೂ ಮುಖದ ಮೇಲೆ ಕಾಣಿಸಿಕೊಳ್ಳುವ ಮೊಡವೆ, ಉರಿಯೂತ, ಕಪ್ಪುಕಲೆಗಳು ಮತ್ತು ಸುಕ್ಕುಗಟ್ಟಿದ ತ್ವಚೆಯನ್ನು ನಿವಾರಿಸಲು ಇದು ಉತ್ತಮ ಮಾರ್ಗವಾಗಿದೆ.


೨.ಸಕ್ಕರೆ

ಮಹಿಳೆಯರ ದೇಹದ ಮೇಲಿನ ಬೇಡವಾದ ಅಥವಾ ದೇಹದ ಬೇಡದ ಭಾಗಗಳಲ್ಲಿ ಬೆಳೆದಿರುವ ಕೂದಲನ್ನು ತೆಗೆಯಲು ಇದು ಒಂದು ಉತ್ತಮ ನೈಸರ್ಗಿಕ ವಿಧಾನವಾಗಿದೆ. ಸಕ್ಕರೆಯನ್ನು ನೀರಿನಲ್ಲಿ ಕರಗಿಸಿ ಪೇಸ್ಟ್ ತರಹ ಅಥವಾ ಪಾಕದ ರೀತಿ ಮಾಡಿ ಕೂದಲನ್ನು ತೆಗೆಯುದರಿಂದ ನೋವು ಕಡಿಮೆ ಮತ್ತು ತ್ವಚೆಯು ಕೋಮಲತೆಯನ್ನು ಪಡೆಯುವುದು.


೩.ಬಾದಾಮಿ ಎಣ್ಣೆ

ಪೂರ್ವ ಈಜಿಪ್ಟ್ ಮಹಿಳೆಯರು ಸೌಂದರ್ಯಕ್ಕೆ ಹೆಸರುವಾಸಿ, ಇವರು ಸ್ನಾನದ ನಂತರ ಬಾದಾಮಿ ಎಣ್ಣೆಯನ್ನು ತಮ್ಮ ತ್ವಚೆಗೆ ಹಚ್ಚಿಕೊಳ್ಳುತ್ತಿದ್ದರು, ಇದರಿಂದ ಅವರ ತ್ವಚೆ ಬಿಗಿಯಾಗಿ, ಮೃದುವಾಗಿ, ಸುಂದರವಾಗಿ ಹೊಲಪಿನಿಂದ ಕೂಡಿರುತ್ತಿತ್ತು.


೪.ಸಮುದ್ರದ ಉಪ್ಪು

ಸಮುದ್ರದ ಉಪ್ಪನ್ನು ನೀರಿಗೆ ಸೇರಿಸಿ ಆ ನೀರಿನಿಂದ ಸ್ನಾನ ಮಾಡುವುದರಿಂದ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇಂದು ಮಾರುಕಟ್ಟೆಯಲ್ಲಿ ಮೃತ ಸಮುದ್ರ ಉಪ್ಪು(ಡೆಡ್ ಸೀ ಸಾಲ್ಟ್) ಲಭ್ಯವಿದ್ದು ನೀವು ಅದನ್ನು ಬಳಸಬಹುದು. ಈ ಉಪ್ಪಿನಲ್ಲಿ ಅನೇಕ ಪೌಷ್ಟಿಕಾಂಶಗಳು ಇರುವುದರಿಂದ ಚರ್ಮವು ನೇರವಾಗಿ ಇದರ ಲಾಭವನ್ನು ಪಡೆಯುತ್ತದೆ.


೫.ಅಕ್ಕಿ

ಅಕ್ಕಿಹಿಟ್ಟು ಮತ್ತು ನೀರನ್ನು ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಕಪ್ಪು ಕಲೆಗಳನ್ನು ನಿವಾರಿಸಬಹುದು. ಇದಕ್ಕೆ ಚಿಟಿಕೆ ಅರಿಶಿಣ ಸೇರಿಸಿ. ಇದರಿಂದ ಮೊಡವೆ ಕೂಡ ನಿವಾರಣೆ ಮಾಡಬಹುದು.

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon