Link copied!
Sign in / Sign up
39
Shares

ಸೊಂಟ ನೋವಿನಿಂದ ಶೀಘ್ರ ಪರಿಹಾರಕ್ಕಾಗಿ ಮನೆಮದ್ದುಗಳು

ಗೃಹಿಣಿಯಾಗಿರಲಿ ಅಥವಾ ದುಡಿಯುವ ಮಹಿಳೆಯರಾಗಿರಲಿ, ಸೊಂಟ ನೋವು ಒಮ್ಮೆ ಪ್ರಾರಂಭವಾಯಿತೆಂದರೆ ಅದರ ಸಂಕಟವನ್ನು ದಿನವಿಡೀ ಅನುಭವಿಸಬೇಕಾಗುತ್ತದೆ. ಸೊಂಟ ನೋವಿನಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಲು ಸಾಧ್ಯವಾಗದಿದ್ದರೂ ಮನೆ ಮದ್ದುಗಳ ಬಳಕೆಯಿಂದ ಕೆಲವೇ ನಿಮಿಷಗಳಲ್ಲಿ ಅದರ ಬೇನೆಯನ್ನು ಕಡಿಮೆಗೊಳಿಸಬಹುದು.

೧.ಎಳ್ಳೆಣ್ಣೆ ಮತ್ತು ಸಾಸಿವೆಎಣ್ಣೆಯ ಮಿಶ್ರಣ

ತಲಾ ಎರಡು ಚಮಚಗಳಂತೆ ಎಳ್ಳೆಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಒಂದು ಸೌಟಿನಲ್ಲಿಟ್ಟು, ಉಗುರು ಬೆಚ್ಚಗಾಗಿಸಿಕೊಳ್ಳಿ. ಇದನ್ನು ಸೊಂಟದ ಮೇಲೆ ಹಾಕಿಕೊಂಡು ನಿಧಾನವಾಗಿ ನಿಮ್ಮ ಗಂಡನ ಸಹಾಯದಿಂದ ಮಸಾಜ್ ಮಾಡಿಸಿಕೊಳ್ಳಿ. ಅಥವಾ ನೋವಿರುವ ಭಾಗಗಳಲ್ಲಿ ನೀವೆ ಸ್ವಂತ ಹಚ್ಚಿಕೊಳ್ಳಬಹುದು. ಅರ್ಧ ಗಂಟೆಯ ಬಳಿಕ ಬಿಸಿನೀರಿನ ಸ್ನಾನ ಮಾಡಿದರೆ ಸೊಂಟ ನೋವು ಗಣನೀಯವಾಗಿ ಕಡಿಮೆಯಾಗುವುದು

೩.ತೆಂಗಿನೆಣ್ಣೆ ಮತ್ತು ಕರ್ಪೂರ

ಒಂದು ಅಗಲವಾದ ಪಾತ್ರೆಯಲ್ಲಿ ತೆಂಗಿನೆಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಕರ್ಪೂರವನ್ನು ಸಂಪೂರ್ಣವಾಗಿ ಕರಗಿಸಿ.ಅದನ್ನು ಬಿಸಿ ಮಾಡಿದ ಬಳಿಕ ಆರಿ ತಣ್ಣಗಾಗಲು ಬಿಡಿ. ಇದನ್ನು ಬಾಟಲಿಯಲ್ಲಿ ತೆಗೆದಿಟ್ಟುಕೊಂಡರೆ, ಯಾವಾಗೆಲ್ಲಾ ಸೊಂಟ ನೋವು ಅನುಭವಿಸವಿರೋ, ಆವಾಗೆಲ್ಲ ಅಗತ್ಯದ ಭಾಗಗಳಲ್ಲಿ ಹಚ್ಚಿಕೊಂಡು ಆರಾಮ ದೊರೆಯುವವರಿಗೆ ಮಸಾಜ್ ಮಾಡಿಕೊಳ್ಳಬಹುದು.

೩.ಶುಂಠಿಯ ರಸ ಮತ್ತು ಅರಶಿನದ ಮಿಶ್ರಣ 

ಅರ್ಧ ಗ್ಲಾಸ್ ಶುಂಠಿಯ ರಸಕ್ಕೆ ಒಂದು ಚಿಟಿಕೆ ಅರಸಿನ ಪುಡಿಯನ್ನು ಸೇರಿಸಿ ದಿನವೂ ಕುಡಿಯುವುದು ಸೊಂಟ ನೋವಿಗೆ ರಾಮಬಾಣವಿದ್ದಂತೆ. ನಿಯಮಿತವಾಗಿ ಈ ರಸವನ್ನು ಕುಡಿಯುವುದು, ಸೊಂಟನೋವನ್ನು ಮಾರು ದೂರದಲ್ಲಿಡುತ್ತದೆ.

೪.ಅಕ್ಕಿ

ಒಂದು ಹಿಡಿ ಅಕ್ಕಿಯನ್ನು ಬಟ್ಟೆಯಲ್ಲಿಟ್ಟು ಗಂಟು ಕಟ್ಟಿಕೊಳ್ಳಿ. ನಂತರ ಅದನ್ನು ಓವೆನ್ ಅಥವಾ ನೀರಿನಲ್ಲಿ ಮುಳುಗಿಸಿಟ್ಟು ಬಿಸಿ ಮಾಡಿ. ನೀವು ತಾಳಿಕೊಳ್ಳುವಷ್ಟು ಬಿಸಿಯಾದಾಗ, (ಬಿಸಿನೀರಿನ ಶಾಖ ಕೊಡುವಂತೆ) ಸೊಂಟನೋವಿರುವ ಭಾಗದಲ್ಲಿಟ್ಟು ಒತ್ತಿರಿ. ಸೊಂಟನೋವು ಶೀಘ್ರದಲ್ಲಿ ಪರಿಹಾರವಾಗುವುದು.

೫.ನೀಲಗಿರಿ ಎಣ್ಣೆ

ಜ್ವರ ಶರೀರ ನೋವು ಹಾಗೂ ಶರೀರದ ಉರಿಯನ್ನು ಕಡಿಮೆ ಮಾಡುವ ಗುಣಗಳಿರುವ ನೀಲಗಿರಿ ಎಣ್ಣೆಯನ್ನು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ತೆಗೆದುಕೊಂಡು ಸೊಂಟನೋವಿರುವ ಭಾಗದಲ್ಲಿ ಹಚ್ಚಿಕೊಳ್ಳಿ. ನೀವು ಸ್ನಾನ ಮಾಡುವ ಬಿಸಿನೀರಿಗೆ ಕೂಡ ನೀಲಗಿರಿ ಎಣ್ಣೆಯನ್ನು ಸೇರಿಸಿದರೆ ಮನಸ್ಸಿಗೆ ಮುದ ನೀಡುವ ಸ್ನಾನವನ್ನು ಆನಂದಿಸಬಹುದು.

೬.ಶುಂಠಿ ಮತ್ತು ಜೇನುತುಪ್ಪ 

ಶುಂಠಿ ತುಂಡನ್ನು ಸೇರಿಸಿ ಚೆನ್ನಾಗಿ ಕುದಿಸಿ ಗಾಳಿಸಿದ ನೀರಿಗೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಸೇವಿಸುವುದು, ಸೊಂಟನೋವಿನಿಂದ ನರಳುವವರಿಗೆ ಆರಾಮ ನೀಡುವುದು. ಬಾಕಿಯಾದ ಶುಂಠಿಯನ್ನು ಸೊಂಟ ನೋವು ಇರುವ ಭಾಗಗಳಲ್ಲಿ ಮಸಾಜ್ಮಾಡಬಹುದು. ಹೆಚ್ಚು ಕಡಿಮೆ ನಿತ್ಯವೂ ಸೊಂಟ ನೋವಿನಿಂದ ಬಳಲುವವರಿಗೆ ಇದು ಅತ್ಯಂತ ಪರಿಣಾಮಕಾರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon