Link copied!
Sign in / Sign up
4
Shares

ಸೊಳ್ಳೆ ಮತ್ತು ಇತರೆ ಕೀಟಗಳಿಂದ ಮಕ್ಕಳು ಕಡಿತಕ್ಕೆ ಒಳಗಾದಾಗ ಹೀಗೆಯೇ ಮಾಡಬೇಕು!

ಕಳೆದ ತಿಂಗಳು ನನ್ನ ಮಗಳು ಶಾಲೆಯಿಂದ ಚಾರಣದ ಕ್ಯಾಂಪ್ ಎಂದು ಹೇಳಿ 3 ದಿನಗಳ ಪ್ರವಾಸಕ್ಕೆ ಹೋಗಿದ್ದಳು. ಆಕೆ ವಾಪಸ್ ಬಂದಾಗ ತನ್ನೊಂದಿಗೆ ಕೇವಲ ತಾನು ಒಯ್ದ ಬ್ಯಾಗ್ ಮಾತ್ರವನ್ನು ತರಲಿಲ್ಲ. ಆಕೆಯು ಆ ಪ್ರವಾಸವನ್ನ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಳು. ಅದನ್ನು ಅವಳು ಮನೆಗೆ ಬಂದಾಗಿನಿಂದ ವಿರಾಮವಿಲ್ಲದೆ ಹೇಳುತ್ತಿದ್ದಳು. ಆದರೆ ಇಷ್ಟೊಂದು ಮನೋರಂಜನೆಯು ಕೆಲವೊಂದು ಅಡ್ಡ ಪರಿಣಾಮಗಳೊಂದಿಗೇ ಅಲ್ಲವೇ ಬರುವುದು. ಅವಳಿಗೆ ಸ್ನಾನ ಮಾಡಿಸುವಾಗ ನನಗೆ ಕಂಡದ್ದು ಆ ಅಡ್ಡ ಪರಿಣಾಮಗಳೇ. ಆಕೆಯ ಮೈ ಉದ್ದಕ್ಕೂ ಸುಮಾರು 20 ಸೊಳ್ಳೆ ಕಡಿತದ ಗುರುತುಗಳು ಇದ್ದವು.

ಆಕೆ ಅವುಗಳನ್ನ ಕೆರೆದುಕೊಳ್ಳುತ್ತಲೇ ಇದ್ದಳು. ಕುಪಿತಗೊಂಡ ಅಮ್ಮನಾದ ನಾನು ಕೆರೆದುಕೊಳ್ಳಬೇಡ ಎಂದು ಅವಳಿಗೆ ಗದರಿ ಬೈದುಬಿಟ್ಟೆ. ಆದರೆ, ಬೈದರೆ ನನ್ನ ಕೆಲಸ ಮುಗಿಯಿತೇ? ಅವಳು ಹಾಗೆ ಕೆರೆದುಕೊಳ್ಳುತ್ತಿರುವುದನು ನೋಡಿಯೂ ಮನಸ್ಸಿಗೆ ಸಮಾಧಾನ ಹೇಗೆ ಬರುತ್ತದೆ? ಈ ಎಲ್ಲಾ ಸೊಳ್ಳೆ ಕಡಿತಗಳನ್ನ ಕೇವಲ ಒಂದೇ ಕ್ಷಣದಲ್ಲಿ ಹೋಗಲಾಡಿಸುವಂತಹ ಯಾವುದಾದರೂ ಮಂತ್ರದಂಡ ನನ್ನ ಬಳಿ ಇರಬಾರದಿತ್ತೇ ಎಂದು ಯೋಚಿಸುತ್ತಿದ್ದೆ.

ಇಲ್ಲಿ ನೀವು ನೆನಪಿಡಬೇಕಾದ ಒಂದು ವಿಷಯ ಎಂದರೆ, ಪ್ರತಿಯೊಂದು ಮಗುವಿನ ಚರ್ಮವು ಸೊಳ್ಳೆ ಅಥವಾ ಇತರೆ ಕೀಟಗಳ ಕಡಿತಕ್ಕೆ ಬೇರೆ ಬೇರೆ ರೀತಿಯಲ್ಲೇ ಪ್ರತಿಕ್ರಿಯಿಸುತ್ತದೆ. ಹೀಗಾಗಿ ನೀವು ಅಲರ್ಜಿ ಪ್ರತಿಕ್ರಿಯೆಗಳ ಮೇಲೆ ಕಣ್ಣಿಡಬೇಕು. ಇವುಗಳು ಮಗುವು ಕಡಿತಕ್ಕೆ ಒಳಗಾದ 20 ನಿಮಿಷಗಳಲ್ಲಿ ಕಾಣಿಸಿಕೊಳ್ಳಲು ಶುರುವಾಗುತ್ತವೆ. ಈ ಲಕ್ಷಣಗಳು ಕೆಲವೊಮ್ಮೆ ಊದಿಕೊಂಡ ತುಟಿಗಳು ಅಥವಾ ನಾಲಿಗೆ, ನುಂಗಲು ಅಥವಾ ಉಸಿರಾಡಲು ಕಷ್ಟಪಡುವುದು, ವಿಪರೀತ ತುರಿಕೆ ಆಗಿರಬಹುದು. ಆದರೆ ಕೆಲವೊಂದು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಡಿತದ ತುರಿಕೆ ಅಥವಾ ನೋವಿಗೆ ಮಾಡಬೇಕಿರುವುದು ಇಲ್ಲಿದೆ ನೋಡಿ.

೧. ಜೇನು ಕಡಿತ

ಜೇನು ನೊಣಗಳು ಕಚ್ಚಿದಾಗ ಸಾಮಾನ್ಯವಾಗಿ ವಿಷದ ಚೀಲಕ್ಕೆ ಅಂಟಿಕೊಂಡ ಮುಳ್ಳನ್ನು ದೇಹದಲ್ಲಿ ಬಿಟ್ಟು ಹೋಗುತ್ತವೆ. ಇದನ್ನು ನಿಮಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಕೆರೆಯುವುದರಿಂದ ಅಥವಾ ಕೆತ್ತುವುದರ ಮೂಲಕ (ಕಾರ್ಡ್ ಅಥವಾ ಉಗುರುಗಳಿಂದ) ಹೊರತೆಗೆಯಿರಿ. ಕಡಿತಕ್ಕೆ ಒಳಗಾದ ಭಾಗವನ್ನ ನೀರು ಮತ್ತು ಸೋಪಿನಿಂದ ತೊಳೆದು, ಚರ್ಮದ ಮೇಲಿನ ಗಾಯ ಆರುವವರೆಗೂ ಸ್ವಚ್ಛವಾಗಿ ಇಡಿ. ಆ ಭಾಗದ ಮೇಲೆ ಐಸ್ ಪ್ಯಾಕ್ ಅಥವಾ ತಣ್ಣೀರಿನ ಚೀಲ, ಹಸಿ ಬಟ್ಟೆ ಇಟ್ಟು ಊತ ಕಡಿಮೆ ಆಗುವಂತೆ ಮಾಡಿ. ಇದರೊಂದಿಗೆ ವೈದ್ಯರು ತಿಳಿಸುವ, ಮಕ್ಕಳ ವಯಸ್ಸಿಗೆ ಸರಿ ಹೊಂದುವ ಅಸೆಟಾಮಿನೋಫೆನ್ ಅಥವಾ ಐಬುಪ್ರೊಫೇನ್ ಅನ್ನು ಮಗುವಿಗೆ ನೀಡಿ.

 

೨. ಸೊಳ್ಳೆ ಕಡಿತ

ಒಂದು ವೇಳೆ ಸೊಳ್ಳೆ ಕಡಿತ ತುಂಬಾ ತುರಿಕೆ ಉಂಟು ಮಾಡುತ್ತಿದ್ದರೆ ಅಥವಾ ನೋವುತ್ತಿದ್ದರೆ, ಕಡಿತಕ್ಕೆ ಒಳಗಾದ ಭಾಗಕ್ಕೆ ಕ್ಯಾಲಮೈನ್ ಕ್ರೀಮ್ ಅನ್ನು ಹಚ್ಚಿ. ತುರಿಕೆಯನ್ನು ಕಡಿಮೆ ಮಾಡಲು ನೀವು ಮಗುವಿಗೆ ಮಕ್ಕಳ ಬೆನಡ್ರಿಲ್ ಅಂತಹ ಆಂಟಿ-ಹಿಸ್ಟಾಮೈನ್ ಅನ್ನು ನೀಡಬಹುದು. ನೋವು ಕಡಿಮೆ ಮಾಡಬೇಕು ಎಂದರೆ ಮಕ್ಕಳ ಟೈಲಿನೋಲ್ ಅಥವಾ ಐಬುಪ್ರೊಫೇನ್ ಅನ್ನು ನೀಡಿ. ಆದರೆ ಇವೆಲ್ಲಾ ಔಷಧಿಗಳು ನಿಮ್ಮ ಮಗುವಿಗೆ ಏನೂ ತೊಂದರೆ ಮಾಡುವುದಿಲ್ಲ ಎಂಬುದನ್ನು ನೀವು ಈಗಾಗಲೇ ವೈದ್ಯರಿಂದ ಈ ಮುಂಚೆ ಖಚಿತಪಡಿಸಿಕೊಂಡಿದ್ದರೆ.

 

೩. ತಿಗಣೆ ಕಡಿತ

ನಿಮ್ಮ ಮಕ್ಕಳು ಮರಗಳ ದಿಣ್ಣೆಗಳನ್ನ ಅಥವಾ ಯಾವುದೇ ಸುತ್ತಲೂ ಮರಗಳ ಪೀಠಪಾಕರಣಗಳಿರುವ ಜಾಗಕ್ಕೆ ಹೋಗಿಬಂದೊಡನೆ, ಅವರ ನೆತ್ತಿ, ಕಿವಿಗಳ ಹಿಂದಿನ ಭಾಗ ಮತ್ತು ಕಂಕುಳ ಮೇಲೆ ಕಣ್ಣಾಡಿಸಿ ಅಲ್ಲಿ ಯಾವ ತಿಗಣೆಗಳೂ ಇಲ್ಲವೆಂಬುದು ಖಚಿತಪಡಿಸಿಕೊಳ್ಳಿ. ಒಂದು ವೇಳೆ ನಿಮಗೆ ತಿಗಣೆಗಳು ಕಾಣಿಸಿಕೊಂಡರೆ, ನೀವು ಕೂದಲು ಕೀಳಲು ಬಳಸುವ ಟ್ವೀಸರ್ ಅನ್ನು ಬಳಸಿ ತಿಗಣೆಯ ತಲೆಯ ಭಾಗವನ್ನ ಅದರಿಂದ ಹಿಡಿದು ಮೇಲೆತ್ತಿ. ತಿರುವುದಾಗಲಿ ಅಥವಾ ಅಲ್ಲಾಡಿಸಿ ಕೀಳುವುದಾಗಲಿ ಮಾಡಬೇಡಿ. ನಂತರ ಕಡಿತಕ್ಕೆ ಒಳಗಾದ ಭಾಗದ ಮೇಲೆ ಆಲ್ಕೋಹಾಲ್ ಅನ್ನು ಹಚ್ಚಿಸಿ.

 

೪. ಜೇಡ ಕಡಿತ

ಕಡಿತಕ್ಕೆ ಒಳಗಾದ ಭಾಗವನ್ನು ಚೆನ್ನಾಗಿ ನೀರು ಮತ್ತು ಸೋಪಿನಿಂದ ತೊಳೆಯಿರಿ. ನಂತರ ಅದರ ಮೇಲೆ ಐಸ್ ಪ್ಯಾಕ್, ತಣ್ಣೀರಿನ ಬ್ಯಾಗ್ ಅಥವಾ ಹಸಿ ಬಟ್ಟೆಯಿಂದ ಒತ್ತಿ ನೋವು ಮತ್ತು ಊತವನ್ನು ಕಡಿಮೆ ಮಾಡಿ. ಆ ಭಾಗದಲ್ಲಿ ಸೋಂಕು ಉಂಟಾಗದಂತೆ ತಡೆಯಲು, ಆ ಭಾಗದ ಚರ್ಮದ ಮೇಲೆ ಆಂಟಿಬಯೋಟಿಕ್ ಕ್ರೀಮ್ ಅನ್ನು ಹಚ್ಚಿ ಮತ್ತು ನಿಮ್ಮ ಮಗುವಿನ ಚರ್ಮವನ್ನ ಸ್ವಚ್ಛವಾಗಿರಿಸಿ. ಒಂದು ವೇಳೆ ನಿಮಗೇನಾದರೂ ನಿಮ್ಮ ಮಗುವಿಗೆ ಕಡಿದಿರುವ ಜೇಡ ವಿಷಪೂರಿತವಾದದ್ದು ಎನಿಸಿದರೆ, ಕೂಡಲೇ ನಿಮ್ಮ ಮಗುವನ್ನು ಆಸ್ಪತ್ರೆಯ ತುರ್ತು ಕೊಠಡಿಗೆ ಕರೆದುಕೊಂಡು ಹೋಗಿ.

 

ಕಡಿತದಿಂದ ತಪ್ಪಿಸಿಕೊಳ್ಳಲು ಮಾರ್ಗಗಳು

 

೧. ಸೊಳ್ಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಇರುವ ಸ್ಥಳಗಳಲ್ಲಿ ಮಗುವು ಕಾಲ ಕಳೆಯಲು ಬಿಡಲೇ ಬೇಡಿ. ಉದಾಹರಣೆಗೆ ನಿಂತ ನೀರಿರುವ ಜಾಗ, ಕೈ ತೋಟಗಳು ಮತ್ತು ಇತರೆ.

 

೨. ನಿಮ್ಮ ಮಕ್ಕಳು ಹುಲ್ಲುಹಾಸುಗಳ ಮೇಲೆ ಬರಿಗಾಲಿನಲ್ಲಿ ಓಡಾಡಲು ಬಿಡಬೇಡಿ. ಒಂದು ವೇಳೆ ನೀವು ಎಲ್ಲಿಗಾದರೂ ಹೋಗಬೇಕಿರುವ ಜಾಗದಲ್ಲಿ ಸೊಳ್ಳೆಗಳಿಂದ ತಪ್ಪಿಸಿಕೊಳ್ಳಲು ಆಗುವುದೇ ಇಲ್ಲ ಎಂದು ನಿಮಗೆ ಗೊತ್ತಿದ್ದರೆ, ಮಗುವಿಗೆ ಪೂರ್ತಿ ತೋಳಿರುವ ಅಂಗಿಯನ್ನು ಮತ್ತು ಪ್ಯಾಂಟ್ ಅನ್ನು ತೊಡಿಸಿ ಕರೆದುಕೊಂಡು ಹೋಗಿ.

 

೩. ಮುಸ್ಸಂಜೆ ಸಮಯ ಆಗುತ್ತಿದ್ದಂತೆ ಮಗುವನ್ನು ಮನೆಗೆ ಸೇರಿಸಿ. ಏಕೆಂದರೆ, ಈ ಸಮಯದಲ್ಲೇ ಸೊಳ್ಳೆಗಳು ತುಂಬಾ ಸಕ್ರಿಯವಾಗಿರುವುದು.

 

೪. ನಿಮ್ಮ ಮಗುವಿನ ವಯಸ್ಸನ್ನು ನೋಡಿಕೊಂಡು, ಅವರಿಗೆ ಸೊಳ್ಳೆ ನಿರೋಧಕ ಕ್ರೀಮ್ ಅನ್ನು ಬೇಕಾದರೂ ಹಚ್ಚಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon