Link copied!
Sign in / Sign up
5
Shares

ನಿಮ್ಮ ಬಸುರಿ ಹೊಟ್ಟೆ ಸೈಜ್ ಮೇಲೆ ಪ್ರಭಾವ ಬಿರುವುದು ಈ 5 ವಿಷಯಗಳೇ !

ನಿಮಗೆಲ್ಲಾ ತಿಳಿದಿರುವ ಹಾಗೆ, ಹೆಣ್ಣು ಗರ್ಭಿಣಿಯಾಗಿರುವುದು ಕಂಡುಬರುವುದು, ಅವಳ ಉಬ್ಬಿದ ಹೊಟ್ಟೆಯಿಂದ  ಎಂದರೆ ತಪ್ಪಾಗುವುದಿಲ್ಲ. ಹಾಸ್ಯದ ವಿಷಯವೇನೆಂದರೆ ಅವಳ ಉಬ್ಬಿದ ಈ ಹೊಟ್ಟೆಯನ್ನು ಮುಟ್ಟಲು, ಅದರೊಳಗಿರುವ ಪುಟ್ಟ ಕಂದಮ್ಮನ ಚಲನ-ವಲನ ತಿಳಿದುಕೊಳ್ಳಲು, ಅವಳ ಸ್ನೇಹಿತರು, ಅಕ್ಕ-ಪಕ್ಕದ ಮನೆಯವರು ಕಾತುರರಾಗಿರುತ್ತಾರೆ. ಆದರೆ ನಿಮ್ಮ ಹೊಟ್ಟೆ ತುಂಬಾ ಚಿಕ್ಕದಿದೆ ಅಥವಾ ತುಂಬಾ ದಪ್ಪಗಿದೆ ಎಂದ ಮಾತ್ರಕ್ಕೆ, ನಿಮ್ಮ ಮಗು ಒಳಗೆ ಸರಿಯಾಗಿ ಬೆಳವಣಿಗೆ ಹೊಂದುತ್ತಿಲ್ಲ ಎಂದಲ್ಲ. ಒಂದು ಹೆಣ್ಣಿನ ದೇಹದ ರಚನೆ ಮತ್ತೊಂದು ಹೆಣ್ಣಿನ ದೇಹದ ರಚನೆಗಿಂತ ಭಿನ್ನವಾಗಿರುತ್ತದೆ. ಹಾಗಾಗಿ, ಹೊಟ್ಟೆಯ ಗಾತ್ರದಲ್ಲಿ ವ್ಯತ್ಯಾಸ ಕಂಡುಬರುವುದು ಸಹಜ. ಇದರಲ್ಲಿ ಗಾಬರಿ ಪಡುವ ವಿಷಯವೇನಿಲ್ಲ. ಹಾಗಾದರೆ, ನಿಮ್ಮ ಹೊಟ್ಟೆಯ ಗಾತ್ರದಲ್ಲಿ ವ್ಯತ್ಯಾಸವಿರುವುದಕ್ಕೆ ಕಾರಣಗಳೇನೆಂದು ತಿಳಿಯೋಣ ಬನ್ನಿ.


೧. ಗರ್ಭಧಾರಣೆಯ ಸಂಖ್ಯೆ

ನೀವು, ನಿಮ್ಮ ಸ್ನೇಹಿತೆಯ ಹೊಟ್ಟೆ ದಪ್ಪಗಿದೆ, ನಿಮ್ಮದೇಕಿಲ್ಲ ಎಂದು ಚಿಂತಿಸಬೇಡಿ. ಮೊದಲ ಬಾರಿ, ಗರ್ಭಿಣಿಯಾದವರ ಹೊಟ್ಟೆ ಸಾಮಾನ್ಯವಾಗಿ ಗಾತ್ರದಲ್ಲಿ ಸಣ್ಣದಿರುತ್ತದೆ. ಇದಕ್ಕೆ ಕಾರಣವೇನೆಂದರೆ, ಮೊದಲ ಸಲ ಗರ್ಭಿಣಿಯಾದಾಗ ತಾಯಿಯ ಗರ್ಭಕೋಶದ ಮಾಂಸ ಖಂಡಗಳು ಭಿಗಿಯಾಗಿರುವುದರಿಂದ, ಹೊಟ್ಟೆ ಹೆಚ್ಚು ದಪ್ಪಗಾಗಲು ಕಷ್ಟವಾಗುತ್ತದೆ. ಅದೇ ಎರಡನೇ ಬಾರಿ ಗರ್ಭಧರಿಸುವ ಮಹಿಳೆಯರಲ್ಲಿ, ಈಗಾಗಲೇ ಮೊದಲನೇ, ಗರ್ಭಾವಸ್ಥೆಯಿಂದ  ಮಾಂಸ ಖಂಡಗಳು ಸಡಿಲಗೊಂಡಿರುವುದರಿಂದ, ಎರಡನೇ ಬಾರಿ ಗರ್ಭಿಣಿಯಾದಾಗ ಹೊಟ್ಟೆಯುಗಾತ್ರದಲ್ಲಿ ದೊಡ್ಡದಾಗಿ ಕಾಣುತ್ತದೆ.


೨. ಗರ್ಭದೊಳಗಿರುವ ಮಗುವಿನ ಸಂಖ್ಯೆ

ಅವಳಿ ಮಕ್ಕಳು ತಾಯಿಯ ಹೊಟ್ಟೆಯೊಳಗೆ ಬೆಳೆಯುತ್ತಿದ್ದರೆ, ಅವುಗಳ ಬೆಳವಣಿಗೆಗೆ ಸಹಾಯವಾಗುವಂತೆ ಗರ್ಭಕೋಶವು ಸ್ಥಳಾವಕಾಶ ಮಾಡಿಕೊಡುವುದರಿಂದ ಹೊಟ್ಟೆ ದೊಡ್ದಾಗಿ ಕಾಣುತ್ತದೆ. ಅವಳಿಯಲ್ಲದೆ, ತ್ರಿವಳಿ ಅಥವಾ ಹೆಚ್ಚು ಕಂದಮ್ಮಗಳು ಹೊಟ್ಟೆಯೊಳಗೆ ಬೆಳೆಯುತ್ತಿದರೆ, ಗರ್ಭಿಣಿಯ ಹೊಟ್ಟೆಯು ಗಾತ್ರದಲ್ಲಿ ಮತ್ತಷ್ಟು ದೊಡ್ಡದಾಗಿ ಕಾಣಿಸುತ್ತದೆ.


೩. ಗರ್ಭಾಶಯದೊಳಗಿರುವ ನೀರು

ಹೌದು, ಮಗುವಿನ ಸಂಪೂರ್ಣ ಬೆಳವಣಿಗೆಗೆ ಪೋಷಕಾಂಶಗಳು ತಾಯಿಯ ದೇಹದಿಂದ ಮಗುವಿನ ದೇಹದೊಳಗೆ ಪ್ಲಾಸೆಂಟ/ಕರುಳ ಬಳ್ಳಿಯ ಮೂಲಕ ತಲುಪುತ್ತದೆ. ಹೀಗೆ, ಮಗುವಿನ ಬೆಳವಣಿಗೆಗೆ ಸಹಾಯ ಮಾಡುವ ಗರ್ಭಶಯದೊಳಗೆ ಕೇವಲ ಮಗುವಲ್ಲದೆ, ಮಗುವಿನ ಸುತ್ತಾ ರಕ್ಷಾಕವಚದಂತಿರುವ, ನೀರಿನ ತೂಕ ಕೂಡ ಹೊಟ್ಟೆಯ ಗಾತ್ರವನ್ನು ಹೆಚ್ಚಿಸುತ್ತದೆ.


೪. ಮಗುವಿನ ಸ್ಥಾನ ಪಲ್ಲಟವಾದಾಗ

ಹೊಟ್ಟೆಯೋಳಗಿರುವ ನಿಮ್ಮ ಪುಟ್ಟ ಕಂದಮ್ಮ, ಆಗಿಂದಾಗ್ಗೆ ಸ್ಥಾನ ಬದಲಾಯಿಸುತ್ತಿದರೆ ನಿಮ್ಮ ಹೊಟ್ಟೆಯ ಗಾತ್ರ ಕೂಡ ಬದಲಾವಣೆ ಹೊಂದಿದಂತೆ ಕಾಣಿಸುತ್ತದೆ. ಮಗು ಅಡ್ಡಡ್ಡ ಮಲಗಿದರೆ, ಹೊಟ್ಟೆ ಕೂಡ ಅಗಲ ಕಾಣಿಸುತ್ತದೆ, ಇಲ್ಲವೇ, ಉದ್ದ ಮಲಗಿದರೆ, ನಿಮ್ಮ ಹೊಟ್ಟೆ ಕೂಡ ಮೇಲಿಂದ ಕೆಳಗೆ ಅಂದರೆ ವರ್ಟಿಕಲ್ ಆಗಿ ದಪ್ಪಗೆ ಕಾಣಿಸುತ್ತದೆ.


೫. ತಾಯಿಯ ಭಂಗಿ

ಗರ್ಭಿಣಿಯರು ಹೆಚ್ಚಾಗಿ ಹಿಂದಕ್ಕೆ ಬಾಗಿ ನಡೆಯುವುದರಿಂದ, ಹೊಟ್ಟೆ ಮತ್ತಷ್ಟು ದಪ್ಪಗೆ ಕಾಣಿಸುತ್ತದೆ. ಮತ್ತೆ ಕೆಲವರು ಸಾಮಾನ್ಯವಾಗಿ ನಡೆಯುವುದರಿಂದ, ಅವರ ಹೊಟ್ಟೆ ಸಾಮನ್ಯ ಗಾತ್ರಕ್ಕೆ ಕಾಣಿಸುತ್ತದೆ. ಹೀಗಾಗಿ, ಹೊಟ್ಟೆಯ ಗಾತ್ರ ಮಗುವಿನ ಬೆಳವಣಿಗೆಯನ್ನು ತಿಳಿಸುವುದಿಲ್ಲ. ಆದ್ದರಿಂದ, ಗರ್ಭಿಣಿಯರೇ ಮೇಲೆ ಹೇಳಿದ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಂಡು, ನಿಮ್ಮ ಗರ್ಭಾವಸ್ಥೆಯನ್ನು ಸಂತೋಷ ಹಾಗು ಆರೋಗ್ಯಕರವಾಗಿ ಕಳೆಯಿರಿ ಎಂದು ಶುಭ ಹಾರೈಸುತ್ತೇವೆ.

ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು, ಬಂಧು-ಮಿತ್ರರೊಂದಿಗೆ ಶೇರ್ ಮಾಡುವ ಮೂಲಕ ಜಾಗೃತಿ ಮೂಡಿಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon