Link copied!
Sign in / Sign up
3
Shares

ಸಿಸೇರಿಯನ್ ಗೆ ಒಳಪಟ್ಟ ತಾಯಿಯಂದಿರು ಮಾತ್ರ ಇದನ್ನು ಅನುಭವಿಸುತ್ತಾರೆ

ಸಿಸೇರಿಯನ್ ಗೆ ಒಳಪಟ್ಟ ಮಹಿಳೆಯರಲ್ಲಿ ಸಾಮಾನ್ಯವಾಗಿ ಎಲ್ಲರು ಕೇಳುವ ಪ್ರಶ್ನೆ "ಹೊ ನೀವು ಸಿಸೇರಿಯನ್ ಗೆ ಒಳಗಾದರೆ?" ಅದು ಸುಲಭವಾಗಿತ್ತೇ? ನೀವು ಸಿಸೇರಿಯನ್ ಮೂಲಕ  ಮಗುವಿಗೆ ಜನ್ಮ ನೀಡಿದ್ದರೆ ಆ ಆಯಾಸದ ನೋವಿನ ಯಾತನೆ ನಿಮಗೆ ಮಾತ್ರ ಗೊತ್ತು.

ಖಂಡಿತವಾಗಿ, ಸಿಸೇರಿಯನ್ ಬಗ್ಗೆ ಎಲ್ಲಾ ಮಹಿಳೆಯರಿಗೆ ತಿಳಿದಿರುವುದಿಲ್ಲ, ನಮಗೆ ಗೊತ್ತು ನಿಮಗೆ ಖಂಡಿತವಾಗಿ ಸಿಸೇರಿಯನ್ ಮಾಡುತ್ತಾರೆ ಎಂದು ತಿಳಿದಿದ್ದೀರಿ ಆದರೆ ಅದರ ನೋವು, ಸಿಸೇರಿಯನ್ ಹೇಗೆ ಮಾಡುತ್ತಾರೆ ಎಂಬ ಬಗ್ಗೆ ನಿಮಗೆ ನಿಖರವಾಗಿ ತಿಳಿದಿರುವುದಿಲ್ಲ. ನಿಮ್ಮನ್ನು ಅದು ಮುಜುಗರಕ್ಕೆ ಒಳಪಡಿಸಬಹುದು, ನಿಮ್ಮ ಜೀವನ ಶೈಲಿಯನ್ನು ಕಷ್ಟಕರವಾಗಿಸಬಹುದು. ಸಿಸೇರಿಯನ್ ಮುಗಿಸಿಕೊಂಡು ಬಂದ ನಂತರ ಮಹಿಳೆಯರು ಮನೆಯಲ್ಲಿ ಯಾವ ತೊಂದರೆಗಳನ್ನು ಎದುರಿಸಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

೧.ಅತಿ ಹೆಚ್ಚಾಗಿ ಮೂತ್ರಮಾಡುವುದು

ತಾಯಿಯಂದಿರು ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ, ಆದ್ದರಿಂದ ಇದರ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಇದರ ಬಗ್ಗೆ ನೀವು ಯೋಚಿಸಬೇಕು. ಇದು ಬರಿ ಮೂತ್ರ ,ಮಾಡುವುದಲ್ಲ, ಇದರ ಜೊತೆಗೆ, ಶೀತ, ಕೆಮ್ಮು ಮುಂತಾದ ತೊಂದರೆಗಳನ್ನು ಎದುರಿಸಬಹುದು. ಮತ್ತು ನಿಮ್ಮ ದೈನಂದಿನ ಚಟುವಟಿಕೆಗಳನ್ನು ಅದು ಹದಗೆಡುವಂತೆ ಮಾಡಬಹುದು.

೨.ಸ್ನಾನ ಮಾಡುವಂತಿಲ್ಲ

ಕನಿಷ್ಠ ಮೂರು ವಾರದವರೆಗೆ ಸ್ನಾನ ಮಾಡದಂತೆ ಇರಲು ವೈದ್ಯರು ನಿಮಗೆ ಸಲಹಿಸುತ್ತಾರೆ. ಆಪರೇಷನ್ ಮಾಡಿರುವ ಜಾಗಕ್ಕೆ ನೀರು ಬೀಳದಂತೆ ನೋಡಿಕೊಳ್ಳುವುದು ಒಳ್ಳೆಯದು. ಆದ್ದರಿಂದ ಸ್ನಾನ ಮಾಡದೇ ಇರಲು ಅವರು ಸೂಚಿಸುತ್ತಾರೆ. ಮತ್ತು ಒಲಿಗೆಗೆ ಯಾವುದೇ ತೊಂದರೆಯಾಗದಂತೆ ಅಥವಾ ಅದು ಬಿಚ್ಚದಂತೆ ನೋಡಿಕೊಳ್ಳುವುದು ಒಳಿತು. ನಿಮ್ಮ ಕೆಲವು ಕಾರ್ಯಗಳಲ್ಲಿ ಅದಕ್ಕೆ ನೀರು ಬೆಳದಂತೆ ಬಟ್ಟೆ ಅಥವಾ ಯಾವುದಾದರು ವಸ್ತುವಿನಿಂದ ಮುಚ್ಚುವುದು ಒಳ್ಳೆಯದು. ನಿಮಗೆ ಏನಾದರು ತೊಂದರೆ ಅಥವಾ ಅಸಹಜತೆ ಎನಿಸಿದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

೩.ಎಲ್ಲೆಡೆ ರಕ್ತ

ಹೆರಿಗೆ ನಂತರ ಬರುವ ರಕ್ತದ ಪ್ರಮಾಣ - ಇದು ಅತ್ಯಂತ ರಹಸ್ಯವಾಗಿರುವ ಮತ್ತು ಮಹಿಳೆಯರು ಮಾತನಾಡಲು ಮುಜುಗರ ಪಡುವ ವಿಷಯ. ನಿಮ್ಮ ಸಂಗಾತಿ ಇದರ ಬಗ್ಗೆ ಈಗ ತಿಳಿದುಕೊಳ್ಳಲಿ, ನಿಮಗೆ ಮುಜುಗರ ಆಗದಂತೆ ಅವರು ನಿಮ್ಮನ್ನು ಜೋಪಾನ ಮಾಡಲಿ. ನಿಮಗೆ ಬೇಕಾದ ಪ್ಯಾಡ್ ಮುಂತಾದವುಗಳನ್ನು ತಂದುಕೊಳ್ಳಲು ಹೇಳಿ. ಈ ಸಮಯದಲ್ಲಿ ನಿಮಗೆ ರಕ್ತಸ್ರಾವ ಆಗಬಹುದು, ಅತಿ ಹೆಚ್ಚು ರಕ್ತಸ್ರಾವ ಆದರೆ ವೈದ್ಯರನ್ನು ಬೇಟಿಮಾಡಿ.

೪.ಕಡಿತ? ಎಲ್ಲಿ?

ಹೌದು, ನಿಮ್ಮ ತ್ವಚೆಯ ಮೇಲೆ ಆಪರೇಷನ್ ಮಾಡಿದ ಕಡಿತದ ಮತ್ತು ಕಲೆಯು ಉಳಿದುಕೊಳ್ಳುತ್ತದೆ. ಆದರೆ ಅದು ನಿಮ್ಮ ಉದರದ ಕೆಳಗೆ ಇರುತ್ತದೆ ಮತ್ತು ಅಸ್ಪಷ್ಟವಾಗಿ ಗೋಚರಿಸುತ್ತದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ನಿಮಗೆ ಗೋಚರವಾಗುತ್ತದೆ.

೫.ದೊಡ್ಡ ಒಳುಡುಪು

ಇದು ಎಲ್ಲರ ಮುಂದೆ ಮಾತನಾಡುವ ಅಥವಾ ಹೇಳುವ ವಿಷಯವಲ್ಲ, ಆದರೆ ನಿಜವಾಗಿ ಸಿಸೇರಿಯನ್ ನಂತರ ನಿಮಗೆ ದೊಡ್ಡ ಒಳಉಡುಪಿನ ಅವಶ್ಯಕತೆ ಇದೆ. ಆಸ್ಪತ್ರೆ ಇಂದ ಮನೆಗೆ ಬಂದ ಬಳಿಕ ನೀವು ಆರಾಮದಾಯಕವಾಗಿರಲು ಇದು ಸಹಾಯ ಮಾಡುತ್ತದೆ. ಅದಕ್ಕಾಗೇ ಈಗ ವಿಶೇಷ ಒಳಉಡುಪು ಆನ್ಲೈನ್ ನಲ್ಲಿ ಲಭ್ಯವಿದೆ.

೬.ಯಾವಾಗಲು ಚೇತರಿಸಿಕೊಳ್ಳುತ್ತೀರಿ

ನಿಮ್ಮ ದೇಹದ ವಿಧ ಮತ್ತು ಸ್ಥಿತಿ ಮೇಲೆ ನೀವು ಚೇತರಿಸಿಕೊಳ್ಳುವುದು ಅವಲಂಭಿತವಾಗಿದೆ. ಅದು ಎರಡು ದಿನ ಎರಡು ವಾರ ಅಥವಾ ಎರಡು ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಇದು ದೊಡ್ಡ ಶಸ್ತ್ರ ಚಿಕಿತ್ಸೆ ಆಗಿದ್ದರೆ, ನೀವು ಬಹುಶಃ ಒಂದು ವಾರದವರೆಗೆ ಆಸ್ಪತ್ರೆಯಲ್ಲಿ ಇರಬೇಕಾಗಬಹುದು. ನೀವು ಮನೋಧೈರ್ಯ ಒಂದುವುದು ತುಂಬಾ ಮುಖ್ಯ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon