ಹೀಗೆ ಮಾಡಿದರೆ ನೀವು ಸಿಸೇರಿಯನ್ ತಪ್ಪಿಸಬಹುದು !
ಗರ್ಭಧಾರಣೆಯು ಒಂದು ನೈಸರ್ಗಿಕ ಕಾರ್ಯ ವಿಧಾನ. ಇದು ಒಂದು ಜೀವವನ್ನು ಭೂಮಿಗೆ ಪರಿಚಯಿಸುತ್ತದೆ. ಕೆಲವೊಮ್ಮೆ ಈ ಪ್ರಕ್ರಿಯೆಗೆ ಸಹಾಯದ ಅಗತ್ಯವಿರುತ್ತದೆ, ಅದು ಸಂಪೂರ್ಣವಾಗಿ ಸರಿಯಾಗಿದೆ. ಸಿಸೇರಿಯನ್ ಪ್ರಸವಕ್ಕೆ ಏಕೆ ನೀವು ಒಳಗಾಗಬೇಕು ಎಂಬುದಕ್ಕೆ ಹಲವು ಕಾರಣಗಳಿವೆ. ಆದಾಗ್ಯೂ, ನೈಸರ್ಗಿಕ ಹೆರಿಗೆಯಾದರೆ ತಾಯಿ ಮತ್ತು ಮಗು ಇಬ್ಬರೂ ಹೆಚ್ಚು ಆರೋಗ್ಯವಾಗಿರುತ್ತಾರೆ ಎಂದು ಪರಿಗಣಿಸಲಾಗಿದೆ.
ಸಿಸೇರಿಯನ್ ಹೆರಿಗೆಯನ್ನು ತಪ್ಪಿಸಿಕೊಳ್ಳಲು ನಾವು ಇಲ್ಲಿ ಕೆಲವು ಸಲಹೆಗಳನ್ನು ನೀಡಿದ್ದೇವೆ.
೧.ವ್ಯಾಯಾಮ
ಇದು ಕೇಳಲು ಕಷ್ಟಕರವಾಗಿದ್ದರು, ನೈಸರ್ಗಿಕ ಹೆರಿಗೆಯಾಗಲು ಬಯಸಿದರೆ, ನಿಮ್ಮ ಗರ್ಭವಸ್ಥೆಯಲ್ಲಿ ವ್ಯಾಯಾಮ ಮಾಡುವುದು ನಿಮಗೆ ಅತ್ಯಂತ ಉಪಕಾರಿಯಾಗುತ್ತದೆ/ಸಹಾಯವಾಗುತ್ತದೆ. ವೈದ್ಯರು ವ್ಯಾಯಾಮ ಮಾಡಲು ಶಿಫಾರಸ್ಸು ಮಾಡುತ್ತಾರೆ, ಆದರೆ ಅದು ನಿಮಗೆ ಆರಾಮದಾಯಕವಾಗಿರಬೇಕು, ಆಯಾಸವಾಗುವಂತಿರಬಾರದು, ಸ್ವಲ್ಪ ಬೆವರು ಬಂದರೆ ಸಾಕು. ವ್ಯಾಯಾಮ ಮಾಡುವುದು ನಿಮ್ಮ ದೇಹದ ಶಕ್ತಿ ಹೆಚ್ಚಿಸಿಕೊಳ್ಳಲು ಮತ್ತು ನಿಮ್ಮ ದೇಹದಲ್ಲಿ ಮುಂದೆ ಆಗುವ ಬದಲಾವಣೆಗೆ ನಿಮ್ಮ ದೇಹವನ್ನು ತಯಾರಿಮಾಡಿಕೊಳ್ಳಲು. ನೀವು ಹೆಚ್ಚು ಶ್ರಮವಹಿಸಿ ವ್ಯಾಯಾಮ ಅಥವಾ ಯಾವುದೇ ಕೆಲಸಗಳನ್ನು ಮಾಡುವಂತಿಲ್ಲ, ಆದರೆ ಸ್ವಲ್ಪ ಆರಾಮದಾಯಕ ಯೋಗ ಮಾಡುವುದು ಒಳ್ಳೆಯದು ಮತ್ತು ವಾರಕ್ಕೆ ೩ ಬಾರಿ ಮಾಡಿದರೆ ಸಾಕು.
ಗರ್ಭಾವಸ್ಥೆಯಲ್ಲಿ ಯಾವ ಮಹಿಳೆ ವ್ಯಾಯಾಮ ಮಾಡುತ್ತಾರೆ, ಅವರ ಹೆರಿಗೆ ಸಮಯದಲ್ಲಿ ಸಿಸೇರಿಯನ್ ಗೆ ಒಳಪಡುವುದು ವಿರಳ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ನೀವು ಹೆಚ್ಚು ತೂಕವಿರುವ ಮಗುವನ್ನು ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳುವಲ್ಲಿ ವ್ಯಾಯಾಮ ಸಹಾಯಮಾಡುತ್ತದೆ, ಮತ್ತು ಸಿಸೇರಿಯನ್ ಮಾಡಲು ಒಂದು ಕಾರಣ.
ವ್ಯಾಯಾಮವು ಗರ್ಭಧಾರಣೆಯ ಮಧುಮೇಹವನ್ನು ತಡೆಯುವುದರಲ್ಲಿ ಸಹಾಯಮಾಡುತ್ತದೆ.
ನೆನಪಿನಲ್ಲಿರಲಿ ಗರ್ಭಧಾರಣೆಯ ಸಮಯದಲ್ಲಿ ಮಗುವಿಗೆ ತೊಂದರೆಯಾಗುವಂತಹ ವ್ಯಾಯಾಮಗಳನ್ನು ಮಾಡಬೇಡಿ.
೨.ಸರಿಯಾದ ವೈದ್ಯರನ್ನು ಕಂಡುಕೊಳ್ಳಿ
ನೀವು ಆಸ್ಪತ್ರೆ ಮತ್ತು ವೈದ್ಯರನ್ನು ಆಯ್ಕೆಮಾಡಿಕೊಳ್ಳುವಾಗ, ನಿಮ್ಮ ಹೆರಿಗೆಯ ಕಾಳಜಿ ಬಗ್ಗೆ ಅರ್ಥಮಾಡಿಕೊಳ್ಳುವ ಮತ್ತು ನೈಸರ್ಗಿಕ ಹೆರಿಗೆಯ ಬಗ್ಗೆ ನಿಮಗೆ ಸರಿಯಾಗಿ ತಿಳಿಸುವ ಮತ್ತು ಅದಕ್ಕೆ ಬೆಂಬಲಿಸುವ ವೈದ್ಯರನ್ನು ಆಯ್ಕೆಮಾಡಿಕೊಳ್ಳಲು ಸಲಹಿಸುತ್ತೇವೆ. ಕಡಿಮೆ ಸಿಸೇರಿಯನ್ ಮಾಡಲು ಬಯಸುವ ಮತ್ತು ನಿಮ್ಮ ಸ್ನೇಹಿತರು, ಕುಟುಂಬದವರನ್ನು ಕೇಳಿ ಸರಿಯಾದ ವೈದ್ಯರನ್ನು ಸಂಪರ್ಕಿಸಿ.
೩.ಆರೋಗ್ಯಕರ ಆಹಾರ ಸೇವಿಸಿ
ಗರ್ಭಿಣಿ ಮಹಿಳೆಯರು ತಮ್ಮ ಬಯಕೆಗಳನ್ನು ಹೊಂದಿರುತ್ತಾರೆ, ಮತ್ತು ಅವು ಸರಿಯಾಗಿವೆ. ಆದರೆ ನೀವು ಹೆಚ್ಚು ಬೇಡವಾದ ಆಹಾರ ಸೇವಿಸುತ್ತಿದ್ದರೆ, ಪ್ರಸವವು ಹೆಚ್ಚು ಮಂದಿಯನ್ನು ನಿಮ್ಮ ಹೆರಿಗೆಗೆ ಕೇಳಬಹುದು ಮತ್ತು ನಿಮ್ಮ ಜೀವನ ಘಟನೆಗಳು ಹೆಚ್ಚು ಅಪಾಯವಾಗಬಹುದು. ನೀವು ನಿಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವದು ಉತ್ತಮ. ಆರೋಗ್ಯಕರ ಆಹಾರ ಸೇವನೆ ಮಾಡುವುದರಿಂದ ನಿಮ್ಮ ಮಗುವಿಗೂ ಒಳ್ಳೆಯದು ಮತ್ತು ನಿಮ್ಮ ಆರೋಗ್ಯದ ಜೊತೆಗೆ ಹೆರಿಗೆಯಲ್ಲಿ ಸಿಸೇರಿಯನ್ ಮಾಡುವ ಅವಕಾಶಗಳನ್ನು ಕಡಿಮೆ ಮಾಡುತ್ತದೆ.
೪.ನಿಮ್ಮ ಸಂಗಾತಿಯು ತಿಳಿಯಲಿ
ಸಿಸೇರಿಯನ್ ಹೆರಿಗೆಗಿಂತ ನೈಸರ್ಗಿಕ ಹೆರಿಗೆ ಒಳ್ಳೆಯದು ಮತ್ತು ಅದು ಮಗು ಮತ್ತು ತಾಯಿಯ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯಮಾಡುತ್ತದೆ ಎಂಬುದನ್ನು ಪತಿ ಪತ್ನಿಯರಿಬ್ಬರು ಅರಿತುಕೊಳ್ಳುವುದು ಒಳಿತು. ಹೆರಿಗೆಯ ಸಮಯದಲ್ಲಿ ನಿಮ್ಮ ಸಂಕೋಚ ಪಡುವುದರಿಂದ ನಿಮ್ಮ ಪತಿಯು ನೀವು ನೈಸರ್ಗಿಕ ಹೆರಿಗೆ ಬಯಸುವಿರಿ ಎಂದು ಅವರಿಗೆ ತಿಳಿಸಿ ನಿಮಗೆ ಸಹಾಯ ಮಾಡಲು ಜೊತೆಗಿರುವರು. ಮತ್ತು ಈಗಿನಿಂದಲೇ ಇಬ್ಬರು ಅದಕ್ಕೆ ಮಾನಸಿಕವಾಗಿಯೂ ತಯಾರಾಗಿರಿ.
