Link copied!
Sign in / Sign up
6
Shares

ಕಾಂಡೊಮ್ ಯೋನಿಯೊಳಗೆ ಸಿಲುಕಿ ಹಾಕಿಕೊಂಡರೆ ಏನು ಮಾಡಬೇಕು?

ಸೆಕ್ಸ್ ಎನ್ನುವುದು ಹೇಗೆ ಎಂದರೆ, ನಾವು ಎಷ್ಟೇ ಜವಾಬ್ದಾರಿಯುತವಾಗಿ ನಡೆದುಕೊಂಡರೂ, ಎಲ್ಲಾ ಸುರಕ್ಷಿತ ಕ್ರಮಗಳನ್ನ ಪಾಲಿಸಿದರೂ, ಎಷ್ಟೇ ಜಾಗ್ರತೆಯಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೂ, ಕೆಲವೊಮ್ಮೆ ಅಚಾತುರ್ಯಗಳು ನಡೆದು ಹೋಗುತ್ತವೆ. ಒಂದು ವೇಳೆ ನೀವು ಕಾಂಡೊಮ್ ಬಳಸುತ್ತಿದ್ದರೆ, ಈ ರೀತಿಯ ಎಡವಟ್ಟುಗಳು ಆಗುವ ಸಾಧ್ಯತೆಗಳು ಮತ್ತಷ್ಟು ಹೆಚ್ಚಿರುತ್ತವೆ. ನಿಮಗೆ ತಿಳಿದಿರುವ ಹಾಗೆ ಕಾಂಡೋಮುಗಳು 97% ಅಷ್ಟು ಮಾತ್ರ ಸುರಕ್ಷಿತ - ಇದರರ್ಥ ನೀವು ಕಾಂಡೊಮ್ ಬಳಸುವಾಗ ಕೆಲವೊಂದು ವಿಚಿತ್ರ ಘಟನೆಗಳು ಆಗಬಹುದು ಮತ್ತು ಅವುಗಳು ಕಾಂಡೊಮ್ ಅನ್ನು ನಿಷ್ಕ್ರಿಯ ಮಾಡಬಹುದು ಎಂದು. ಇದು ಕಾಂಡೊಮ್ ಹರಿಯುವುದು, ಶಿಶ್ನದಿಂದ ಜಾರಿ ಕಾಂಡೊಮ್ ಕಳಚಿಕೊಳ್ಳುವುದು ಅಥವಾ ಇನ್ನೂ ಕೆಟ್ಟದ್ದು ಎಂದರೆ ಯೋನಿಯೊಳಗೆ ಕಾಂಡೊಮ್ ಸಿಲುಕಿ ಹಾಕಿಕೊಳ್ಳುವುದು!

ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನೀವು ಏನು ಮಾಡಬೇಕೆಂಬುದನ್ನ ನಾವು ಇಲ್ಲಿ ತಿಳಿಸುತ್ತೇವೆ ನೋಡಿ :


೧.ಕಾಂಡೊಮ್ ಹೊರತೆಗೆಯಲು ಪ್ರಯತ್ನಿಸಿ

ಮೊದಲಿಗೆ ನಿಮ್ಮ ಯೋನಿಯೊಳಗೆ ಕಾಂಡೊಮ್ ಸಿಲುಕಿಕೊಂಡಿದೆ ಎಂಬುದೇ ನಿಮ್ಮ ಅನುಭವಕ್ಕೆ ಬರುವುದಿಲ್ಲ. ನಿಮಗೆ ಅದು ಗೊತ್ತಾದೊಡನೆ, ನೀವಾಗಿಯೇ ಕಾಂಡೊಮ್ ಹೊರತೆಗೆಯಲು ಪ್ರಯತ್ನಿಸಿ. ಕೂತುಕೊಂಡು, ನಿಂತುಕೊಂಡು, ಬಗ್ಗಿ, ಹೀಗೆ ಹಲವು ಭಂಗಿಗಳಲ್ಲಿ ಕಾಂಡೊಮ್ ಹೊರತೆಗೆಯಲು ಪ್ರಯತ್ನಿಸಿ..


೨. ಕುರ್ಚಿಯ ಮೇಲೆ ಕೂತು ತೆಗೆಯಲು ಪ್ರಯತ್ನಿಸಿ

ಕುರ್ಚಿಯ ಮೇಲೆ ಕೂತು ಒಂದು ಕಾಲು ಮೇಲೆ ಮಾಡಿ, ನಿಮ್ಮ ಕೈಗಳಿಂದ ಕಾಂಡೊಮ್ ಹೊರತೆಗೆಯಲು ಪ್ರಯತ್ನಿಸಿ. ಇದಕ್ಕೆ ಮುಜುಗರ ಪಟ್ಟುಕೊಳ್ಳದೆ ನಿಮ್ಮ ಸಂಗಾತಿಯ ಸಹಾಯವನ್ನೂ ಪಡೆದುಕೊಳ್ಳಿ.


೩. ಉಟ್-ಭೈಸ್ ಮಾಡಿ

ನೀವು 20 ಭಸ್ಕಿಗಳನ್ನ ಮಾಡಲು ಪ್ರಯತ್ನಿಸಿ. ಕೇವಲ ನಾಲ್ಕೈದು ಬಾರಿ ಭಸ್ಕಿ ಹೊಡೆಯುವಷ್ಟರಲ್ಲೇ ನಿಮ್ಮ ಹೊಟ್ಟೆಯೊಳಗೆ ಉಂಟಾಗುವ ಒತ್ತಡವು ಕಾಂಡೊಮ್ ಅನ್ನು ಹೊರತಳ್ಳುತ್ತದೆ.  


೪. ಗಾಬರಿ ಆಗಬೇಡಿ ಮತ್ತು ಚೂಪಾದ ವಸ್ತುಗಳನ್ನ ಬಳಸಬೇಡಿ

ಕಾಂಡೊಮ್ ಒಳಗಡೆ ಸಿಲುಕಿ ಹಾಕಿಕೊಂಡಿದೆ ಎಂದೊಡನೆ ನೀವು ತಬ್ಬಿಬ್ಬಾಗಬೇಡಿ. ಇದೇನು ಮಾರಕ ಆಗುವಂತಹ ವಿಷಯವಲ್ಲ. ಮೇಲೆ ತಿಳಿಸಿದ ದಾರಿಗಳನ್ನ ಸಮಾಧಾನದಿಂದ ಪ್ರಯತ್ನಿಸಿ. ಒಂದು ವೇಳೆ ನಿಮ್ಮ ಅಥವಾ ನಿಮ್ಮ ಸಂಗಾತಿಯ ಬೆರಳುಗಳಿಂದ ಅದನ್ನ ಹೊರತೆಗೆಯಲು ಆಗುತ್ತಿಲ್ಲ ಎಂದರೆ, ಯಾವುದೇ ಕಾರಣಕ್ಕೂ ಇತರೆ ಚೂಪಾದ ವಸ್ತುಗಳಿಂದ ಕಾಂಡೊಮ್ ಅನ್ನು ಹೊರತೆಗೆಯಲು ಪ್ರಯತ್ನಿಸಲೇ ಬೇಡಿ!


೫. ಹೊರತೆಗೆಯಲು ಆಗಲಿಲ್ಲ ಎಂದರೆ ತಜ್ನರನ್ನ ಭೇಟಿ ಮಾಡಿ

ಒಂದು ವೇಳೆ ನೀವು ಎಷ್ಟೇ ಭಂಗಿಗಳನ್ನ ಪ್ರಯತ್ನಿಸಿದರೂ,ನಿಮ್ಮ ಅಥವಾ ನಿಮ್ಮ ಸಂಗಾತಿಯಿಂದ ಕಾಂಡೊಮ್ ಅನ್ನು ಹೊರತೆಗೆಯಲು ಆಗಲಿಲ್ಲ ಎಂದರೆ, ನೀವು ವೈದ್ಯರನ್ನ ಭೇಟಿ ಮಾಡಿ. ಏಕೆಂದರೆ, ಅದು ಒಳಗೆ ಇದ್ದಷ್ಟು ನಿಮಗೆ ತೊಂದರೆ ಉಂಟಾಗುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon