Link copied!
Sign in / Sign up
5
Shares

ಶುಷ್ಕ ಚರ್ಮವನ್ನು ಚಿಕಿತ್ಸಿಸಲು ನೀವು ಪ್ರಯತ್ನಿಸಬೇಕಾದ ೧೨ ಮನೆಮದ್ದುಗಳು (12 Home Remedies For Dry Skin You Need To Try in Kannada)

ಶುಷ್ಕ ಮತ್ತು ಹೊಳಪಿಲ್ಲದ ಚರ್ಮದ ಸಮಸ್ಯೆ ಹಲವರಿಗೆ ಅತಿ ದೊಡ್ಡ ಚಿಂತೆಯಾಗಿರುತ್ತದೆ. ನಿಮ್ಮ ಚರ್ಮದ ಬಗೆ ಅಥವಾ ಪರಿಸರದ ಕಾರಣಗಳಿಂದಾಗಿ, ಅದು ನಿಮ್ಮ ಚಹರೆಯ ಮೇಲೆ ಪರಿಣಾಮ ಬೀರುವುದರೊಂದಿಗೆ ನಿಮ್ಮ ಚರ್ಮದ ಆರೋಗ್ಯಕ್ಕೂ ತೊಂದರೆ ಉಂಟುಮಾಡಬಹುದು. ನೀವು ಸಹ ಈ ರೀತಿಯ ಶುಷ್ಕ ಚರ್ಮದ ತೊಂದರೆಗೆ ಉಪಯುಕ್ತ ಮನೆಮದ್ದುಗಳನ್ನು ಹುಡುಕುತ್ತಿದ್ದಿರಾ? ಈ ಲೇಖನದಲ್ಲಿ ಆ ಬಗೆಯ ಕೆಲವು ಮನೆಮದ್ದುಗಳ ಬಗ್ಗೆ ಚರ್ಚಿಸಲಾಗಿದೆ. ಅದರೊಂದಿಗೆ, ಶುಷ್ಕ ಚರ್ಮ ಉಂಟಾಗಲು ಕಾರಣ, ನಿಮ್ಮ ಶುಷ್ಕ ಚರ್ಮಕ್ಕೆ ಫೇಸ್ ಪ್ಯಾಕ್ ಅನ್ನು ನಿಮ್ಮ ದಿನನಿತ್ಯದ ಚರ್ಮದ ಕಾಳಜಿವಹಿಸುವ ವಾಡಿಕೆಯಲ್ಲಿ ಹೇಗೆ ಒಂದು ಮಾಡಬೇಕು ಎನ್ನುವುದರ ಬಗ್ಗೆ ಇಲ್ಲಿ ವಿವರಿಸಿದ್ದೇವೆ. 

ಶುಷ್ಕ ಚರ್ಮ ಸಾಮಾನ್ಯವಾಗಿ ನೆವೆ, ಕಿರಿಕಿರಿ ಮತ್ತು ಒಡೆದ ಚರ್ಮಗಳ ಜೊತೆಗೆ ಕಾಡುತ್ತದೆ. ನಿಮ್ಮ ಚರ್ಮದ ಹೈಪೊಡೆರ್ಮಿಸ್ ನಲ್ಲಿರುವ ಎಣ್ಣೆಯ ಕಿರುಚೀಲಗಳು ಅಗತ್ಯವಿರುವಷ್ಟು  ಉತ್ಪಾದಿಸದಿದ್ದರೆ, ನಿಮ್ಮ ಚರ್ಮ ನಿರ್ಜಲೀಕರಣಗೊಳ್ಳುತ್ತದೆ. ಇದನ್ನು ಚಿಕಿತ್ಸದೇ ಇದ್ದಲ್ಲಿ, ನಿಮ್ಮ ಚರ್ಮದಲ್ಲಿ ಒಡಕು, ಸುಕ್ಕು ಕಾಣಬಹುದು. ಇದರಿಂದ ಸಹಜವಾಗಿ ನೀವು ನಿಮ್ಮ  ವಯಸ್ಸಿಗಿಂತ  ಸಾಧ್ಯತೆ ಇರುತ್ತದೆ. ಹಾಗಾಗಿ, ನೀವು ನಿಮ್ಮ ಚರ್ಮದಲ್ಲಿ ಶುಷ್ಕತನ ಕಂಡೊಂಡನೆಯೇ ಕಾಳಜಿವಹಿಸುವುದು ಅತಿ ಮುಖ್ಯ.  ಮಾಡಬೇಕು ಎಂದು ಯೋಚಿಸುತ್ತಿದ್ದರೆ, ಅದಕ್ಕೆ ಉತ್ತರ ಮನೆಮದ್ದುಗಳ ಸಹಾಯದಿಂದ. 

ಪರಿವಿಡಿ: 

೧. ಶುಷ್ಕ ತ್ವಚೆಯ ಮುಖ್ಯ ಕಾರಣಗಳು (Important Causes Of Dry Skin in Kannada)

೨. ಶುಷ್ಕ ತ್ವಚೆಗೆ ಮನೆಮದ್ದುಗಳು (Home Remedies For Dry Skin in Kannada)

೩. ಶುಷ್ಕ ತ್ವಚೆಗೆ ಮನೆಯಲ್ಲಿಯೇ ತಯಾರಿಸುವ ಫೇಸ್ ಪ್ಯಾಕ್  (Homemade Face Packs For Dry Skin in Kannada)

೪. ನಿರ್ಣಯ (Conclusion in Kannada)

೧. ಶುಷ್ಕ ತ್ವಚೆಯ ಮುಖ್ಯ ಕಾರಣಗಳು (Important Causes Of Dry Skin in Kannada):

ಕೆಲವರಿಗೆ ಶುಷ್ಕ ತ್ವಚೆ ಕೇವಲ ಚಳಿಗಾಲದಲ್ಲಿ ಉಂಟಾದರೆ, ಇನ್ನಿತರರಿಗೆ ಅದು ಶಾಶ್ವತ ಚರ್ಮ ಸ್ಥಿತಿ ಇರಬಹುದು. ಶುಷ್ಕ ತ್ವಚೆ ಒರಟಾಗಿ, ಒಣ ಪ್ಯಾಚಸ್ ಗಳನ್ನು ನಿಮ್ಮ ಮುಖದ ಮೇಲೆ ಉಂಟುಮಾಡಬಹುದು. ನಾವೇ ಉಂಟಾಗುವುದು ಸಹ ಶುಷ್ಕ ತ್ವಚೆಯ ತೊಂದರೆಗಳಲ್ಲಿ ಒಂದು. ಚರ್ಮ ಕೆಂಪಾಗಿ, ಒಡಕುಗಳನ್ನೂ ಹೊಂದಬಹುದು. ಶುಷ್ಕ ತ್ವಚೆಯ ಕೆಲವು ಕಾರಣಗಳು ಇಲ್ಲಿವೆ. 

* ವಾತಾವರಣ: ಶುಷ್ಕ ತ್ವಚೆಯ ಅತಿ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು ವಾತಾವರಣ. ಚಳಿಗಾಲದಲ್ಲಿ ನಿಮ್ಮ ಚರ್ಮ ಅತಿ ಶುಷ್ಕವಾಗಿರುತ್ತದೆ. ತಿಯಾದ ಚಳಿ ಮತ್ತು ಕಡಿಮೆ ಆರ್ಧ್ರತೆಯ ಕಾರಣದಿಂದಾಗಿ ನಿಮ್ಮ ಚರ್ಮ ಆರ್ಧ್ರತೆಯನ್ನು ಕಳೆದುಕೊಳ್ಳುತ್ತದೆ. ವಾತಾವರಣವೇ ನಿಮ್ಮ ಶುಷ್ಕ ತಾಚೆಗೆ ಕಾರಣವಾದರೆ ಅದನ್ನು ಪ್ರತಿನಿತ್ಯ ಮೊಯಿಶ್ಚರೈಸರ್ ಹಚ್ಚಿಕ್ಕೊಳ್ಳುವುದರಿಂದ ನಿಯಂತ್ರಿಸಬಹುದು. 

* ಶಾಖ: ನೀವು ಇರುವ ವಾತಾವರಣ ಹೀಟರ್, ಫರ್ನೇಸ್ ಅಥವಾ ಫೈರ್ ಪ್ಲೇಸ್ ಗಳನಂತಹ ಕಾರಣದಿಂದ ಯಾವಾಗಲೂ ಬಿಸಿಯಾಗಿದ್ದರೆ, ಪರಿಸರದಲ್ಲಿ ಆರ್ಧ್ರತೆ ಕಡಿಮೆಯಾಗಿ, ನಿಮ್ಮ ಚರ್ಮ ಒಣಗುವಂತೆ ಮಾಡುತ್ತದೆ. 

* ಬಿಸಿ ನೀರಿನ ಸ್ನಾನ: ಎಲ್ಲರಿಗೂ ಬಿಸಿ ನೀರಿನ ಸ್ನಾನ ಎಂದರೆ ಅಚ್ಚುಮೆಚ್ಚು. ಅದು ನಿಮ್ಮ ದಣಿವಾರಿಸಿದರೂ, ನಿಮ್ಮ ತ್ವಚೆಗೆ ಹಾನಿಕಾರಕ. ನಿಮ್ಮ ಚರ್ಮವನ್ನು ಬಿಸಿ ನೀರಿಗೆ ತೆರೆದಿಟ್ಟಾಗ, ಅದು ನೈಸರ್ಗಿಕ ಎಣ್ಣೆಗಳನ್ನು ಕಳೆದುಕೊಳ್ಳುತ್ತದೆ. ಹಾಗಾಗಿ, ಸ್ನಾನವನ್ನು ೧೦ ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಮಾಡಿಮುಗಿಸುವುದು ಒಳಿತು. 

* ಒರಟಾದ ಸೋಪುಗಳ ಬಳಕೆ: ನಿಮಗೆ ತಿಳಿದೋ, ತಿಳಿಯದೆಯೋ, ಒರಟಾದ ಸೋಪ್, ಶ್ಯಾಂಪೂ, ಡಿಟರ್ಜೆಂಟ್, ಇತ್ಯಾದಿಗಳನ್ನು ನಮ್ಮ ದೇಹಕ್ಕೆ ಬಳಸುತ್ತವೆ. ಇವುಗಳಲ್ಲಿ ಹಲವು ಸೋಪ್ ಗಳು ಹಾನಿಕಾರಕ ರಾಸಾಯನಿಕಗಳನ್ನು ಹೊಂದಿದ್ದು, ನಿಮ್ಮ ಚರ್ಮದಿಂದ ಆರ್ಧ್ರತೆಯನ್ನು ತೊಡೆದುಹಾಕುತ್ತದೆ. ಹಾಗಾಗಿ, ನಿಮ್ಮ ಚರ್ಮಕ್ಕೆ ಬಳಸುವ ಉತ್ಪನ್ನಗಳನ್ನು ಬಹಳಷ್ಟು ಕಾಳಜಿ ವಹಿಸಿ ಆಯ್ಕೆ ಮಾಡುವುದು ಉತ್ತಮ. ನೀವು ಬಳಸುವ ಶ್ಯಾಂಪೂ ಸ್ವಲ್ಪ ಮಟ್ಟದ ಆಮ್ಲೀಯತೆಯನ್ನು ಪಡೆದಿರಬೇಕು. ಆದರೆ ಅದು ನಿಮ್ಮ ಚರ್ಮಕ್ಕೆ ಯಾವುದೇ ರೀತಿಯ ಹಾನಿ ಉಂಟುಮಾಡಬಾರದು. 

* ಅತಿಯಾಗಿ ಎಕ್ಸ್ಫೋಲಿಯೇಟ್ ಮಾಡುವುದು: ನಿಮ್ಮ ಚರ್ಮವನ್ನು ಎಕ್ಸ್ಫೋಲಿಯೇಟ್ ಮಾಡುವುದು ಅಗತ್ಯ. ಅದು ನಿಮ್ಮ ಚರ್ಮದ ಅನಗತ್ಯ ಸತ್ತ ಜೀವಕೋಶಗಳನ್ನು ತೊಡೆದುಹಾಕುತ್ತದೆ. ಆದರೆ ಸ್ವತಃ ಎಕ್ಸ್ಫೋಲಿಯೇಟಿಂಗ್ ಕಿಟ್ ನಲ್ಲಿ ಹೇಳಿರುವ ಪ್ರಕಾರ ಅದನ್ನು ವಾರದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಬಳಸಬಾರದು. ಸತ್ತ ಜೀವಕೋಶಗಳನ್ನು ತೆಗೆದುಹಾಕುವುದರಿಂದ ನಿಮ್ಮ ಮುಖ ಚೈತನ್ಯಭರಿತವಾಗುವುದಾದರೂ, ನಿಮ್ಮ ಎರಡು ಸೆಶನ್ ಗಳ ಮಧ್ಯೆ ಸಾಕಷ್ಟು ಸಮಯ ನೀಡದಿದ್ದರೆ, ನಿಮ್ಮ ಚರ್ಮದಲ್ಲಿರುವ ಆರೋಗ್ಯಕರ ಜೀವಕೋಶಗಳು ಸಹ ತೊಡೆದು ಹೋಗುವಂತೆ ಆಗಬಹುದು. ಇದರಿಂದ ನಿಮ್ಮ ಚರ್ಮ ಕೆಂಪಾಗಿ, ನವೆ ಉಂಟಾಗಬಹುದು. 

* ನೀರು ಇಲ್ಲದಿರುವುದು: ಇದು ಪ್ರಮುಖವಾದ ಕಾರಣಗಳಲ್ಲಿ ಒಂದು. ಎಲ್ಲರಿಗೂ ತಿಳಿದಿರುವಂತೆ ನಿಮ್ಮ ಚರ್ಮದ ಆರ್ಧ್ರಕತೆ ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಇರಿಸುತ್ತದೆ. ಹಾಗಾಗಿ, ಪ್ರತಿದಿನ ಕನಿಷ್ಠ ೨-೩ ಲೀಟರ್ ನೀರು ಕುಡಿಯುವುದು ಅಗತ್ಯ. ನಿರ್ಜಲೀಕರಣ ನಿಮ್ಮ ಚರ್ಮವನ್ನು ಒಣಗುವಂತೆ ಮಾಡುತ್ತದೆ. 

[Back To Top]

೨. ಶುಷ್ಕ ತ್ವಚೆಗೆ ಮನೆಮದ್ದುಗಳು (Home Remedies For Dry Skin in Kannada):

ಶುಷ್ಕ ತ್ವಚೆಗೆ ಹಲವಾರು ಬಗೆಯ ಮನೆಮದ್ದುಗಳಿವೆ. ಅವುಗಳು ನಿಮ್ಮ ತ್ವಚೆಯನ್ನು ಮೊದಲಿನ ಸ್ಥಿತಿಗೆ ತಂದು ಹೊಳೆಯುವಂತೆ ಮಾಡುತ್ತವೆ. ನಿಮ್ಮ ಚರ್ಮಕ್ಕೆ ದಿನನಿತ್ಯ ಮೊಯಿಶ್ಚರೈಸರ್ ಹಚ್ಚುವುದು ಅತ್ಯಗತ್ಯ. ಈ ರೀತಿಯ ಮೊಯಿಶ್ಚರೈಸರ್ ಗಳನ್ನು ಮನೆಯಲ್ಲಿಯೇ ತಯಾರಿಸಬಹುದು. ಹಾಗಾಗಿ, ಈ ಕೆಳಗಿನ ಭಾಗದಲ್ಲಿ ಈ ರೀತಿಯ ಮನೆಮದ್ದುಗಳ ಸಹಾಯದಿಂದ ಶುಷ್ಕ ತ್ವಚೆಯಿಂದ ಹೇಗೆ ಮುಕ್ತಿ ಪಡೆಯಬೇಕು ಎನುವುದರ ಬಗ್ಗೆ ಮಾಹಿತಿ ನೀಡಲಾಗಿದೆ. 

೧. ಕೊಬ್ಬರಿ ಎಣ್ಣೆ: ಈ ಎಣ್ಣೆ ನಿಮ್ಮ ತ್ವಚೆಗೆ ಅದ್ಭುತವಾದ ಪರಿಣಾಮಗಳನ್ನು ನೀಡಬಹುದು. ಇದು ಸುರಕ್ಷಿತ್ ಮತ್ತು ಪೆಟ್ರೋಲಿಯಂ ಜೆಲ್ಲಿ ತರಹ ಕಾರ್ಯಗತವಾಗುವ ಉತ್ಪನ್ನ. ಕೊಬ್ಬರಿ ಎಣ್ಣೆಯ ಮೆತ್ತಗೆ ಮಾಡುವ ಗುಣದಿಂದಾಗಿ ಅದು ಚರ್ಮದ ಜೀವಕೋಶಗಳ ಮಧ್ಯೆ ಇರುವ ಖಾಲಿ ಜಾಗವನ್ನು ತುಂಬುತ್ತದೆ. ಕೊಬ್ಬರಿ ಎಣ್ಣೆಯಲ್ಲಿರುವ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ಸ್ ನಿಮ್ಮ ಚರ್ಮವನ್ನು ಅರ್ಧರಿಕರಿಸಿ, ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ. ಇದು ನಿಮ್ಮ ಶುಷ್ಕ ಚರ್ಮಕ್ಕೆ ಅತ್ಯುತ್ತಮ ಆರ್ಧ್ರಕ. ಅದು ನಿಮ್ಮ ಚರ್ಮದ ನೆವೆಯನ್ನು ಸಹ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಕೊಬ್ಬರಿ ಎಣ್ಣೆಯ ಇನ್ನೊಂದು ಉತ್ತಮ ಗುಣವೆಂದರೆ ಅದನ್ನು ನಿಮ್ಮ ದೇಹದ ಯಾವುದೇ ಸೂಕ್ಷ್ಮ ಭಾಗಗಳಿಗೆ ಬೇಕಾದರೂ ಹಚ್ಚಿಕೊಳ್ಳಬಹುದು. 

೨. ಓಟ್ ಮೀಲ್ ಸ್ನಾನ: ಓಟ್ ಮೀಲ್ ನಿಮ್ಮ ಕಿರಿಕಿರಿ ಉಂಟು ಮಾಡುವ ನಾವೇ ಉಂಟು ಮಾಡುವ ಚರ್ಮಕ್ಕೆ ಸೂಕ್ತ ಪರಿಹಾರ. ಕಾಲಾಯಿಡಲ್ ಓಟ್ ಮೀಲ್ ಆಂಟಿಆಕ್ಸಿಡೆಂಟ್ಸ್ ಗಳನ್ನು ಹೊಂದಿದ್ದು, ಉರಿಯೂತದ ವಿರೋಧಿ ಗುಣಲಕ್ಷಣಗಳನ್ನೂ ಹೊಂದಿದೆ. ಇದು ನಿಮ್ಮ ನೆವೆ ಉಂಟು ಮಾಡುವ ಚರ್ಮವನ್ನು ಸಂತೈಸಿ, ನಿಮ್ಮ ಶುಷ್ಕ ಚರ್ಮವನ್ನು ಅರ್ಧ್ರಿಕರಿಸುತ್ತದೆ. ಓಟ್ ಮೀಲ್ ಅನ್ನು ನಿಮ್ಮ ಸ್ನಾನದ ನೀರಿಗೆ ಸೇರಿಸಬಹುದು. ಓಟ್ ಮೀಲ್ ಅನ್ನು ಹೊಂದಿರುವ ಹಲವಾರು ಉತ್ಪನ್ನಗಳಿವೆ. 

೩. ಹಾಲು: ಹಾಲನ್ನು ಒಳಗೊಂಡಿರುವ ಆಹಾರ ಪದ್ಧತಿ ನಿಮ್ಮ ಚರ್ಮದ ಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ನಿಮ್ಮ ಶುಷ್ಕ ಚರ್ಮಕ್ಕೆ ಮನೆಮದ್ದುಗಳೇನು ಎಂದು ನೀವು ಯೋಚಿಸುತ್ತಿದ್ದರೆ, ನೀವು ನಿಮ್ಮ ಮನೆಯ ಫ್ರಿಡ್ಜ್ ಗಳಲ್ಲಿ ನೋಡಿದರೆ ಸಾಕು. ಹಾಲು ಲ್ಯಾಕ್ಟಿಕ್ ಆಸಿಡ್ ಹೊಂದಿದ್ದು, ನಿಮ್ಮ ಚರ್ಮದ ಸತ್ತ ಜೀವಕೋಶಗಳನ್ನು ಕಿತ್ತೊಗೆಯುತ್ತವೆ ಮತ್ತು ನಿಮ್ಮ ಚರ್ಮದ ಆರ್ಧ್ರಕತೆಯನ್ನು ಕಾಪಾಡುತ್ತದೆ. ಹಾಲು ಶುಷ್ಕ ಚರ್ಮಕ್ಕೆ ಅತ್ಯುತ್ತಮ ಆರ್ಧ್ರಕ. ಅದು ನಿಮ್ಮ ಚರ್ಮದ ಬಣ್ಣವನ್ನು ಸಹ ಉತ್ತಮಗೊಳಿಸಬಹುದು. 

೪. ಜೇನುತುಪ್ಪ: ಜೇನುಹುಳಗಳ ಉಡುಗೊರೆಯಾದ ಜೇನುತುಪ್ಪ ನಿಮ್ಮ ಶುಷ್ಕ ಚರ್ಮಕ್ಕೆ ಉತ್ತಮ ಆರ್ಧ್ರಕ. ಮುಖದ ಮೇಲಿನ ಒಣ ಪ್ಯಾಚಸ್ ಗಳನ್ನು ತೊಡೆದುಹಾಕುವುದರೊಂದಿಗೆ, ಜೇನುತುಪ್ಪ ಆಂಟಿಆಕ್ಸಿಡೆಂಟ್ ಆಗಿ, ಆಂಟಿಮೈಕ್ರೋಬಿಯಲ್ ಆಗಿ ವರ್ತಿಸುತ್ತದೆ. 

೫. ಆಲಿವ್ ಎಣ್ಣೆ: ಈ ಅದ್ಭುತ ಸಾಮಗ್ರಿಯನ್ನು ಹಲವಾರು ಶುಷ್ಕ ಚರ್ಮದ ಮನೆಮದ್ದುಗಳಲ್ಲಿ ಬಳಸಲಾಗುತ್ತದೆ. ಚರ್ಮಕ್ಕೆ ಮೈಸ್ಚುರೈಸರ್ ಹಚ್ಚುವ ಮುನ್ನ ಈ ಎಣ್ಣೆಯನ್ನು ಹಚ್ಚಿದರೆ ಅದು ನಿಮ್ಮ ಚರ್ಮದ ಆರ್ದ್ರಾತೆಯನ್ನು ನಿಮ್ಮ ಚರ್ಮದಲ್ಲಿಯೇ ಉಳಿಯುವಂತೆ ಮಾಡುತ್ತದೆ. ಆಲಿವ್ ಎಣ್ಣೆಯಲ್ಲಿ ಆಂಟಿಆಕ್ಸಿಡೆಂಟ್ಸ್ ಮತ್ತು ಫ್ಯಾಟಿ ಆಸಿಡ್ಸ್ ಗಳಿದ್ದು ಅವು ನಿಮ್ಮ ಶುಷ್ಕ ಚರ್ಮ ನಿವಾರಣೆಯಾಗುವಂತೆ ಮಾಡುತ್ತದೆ. 

೬. ಆಲೋ ವೆರಾ ಜೆಲ್: ಇತ್ತೀಚಿನ ಸಂಶೋಧನೆಯ ಅನುಸಾರ ಆಲೋ ವೆರಾ ನಿಮ್ಮ ಚರ್ಮದ ಶುಷ್ಕತೆ ನಿವಾರಣೆಯಾಗುವಂತೆ ಮಾಡುತ್ತದೆ. ಒಣಗಿರುವ ಚರ್ಮದ ಮೇಲೆ ಆಲೋ ವೆರಾ ಜೆಲ್ ಅನ್ನು ಒಂದು ರಾತ್ರಿ ಹಚ್ಚಿದರೆ, ಅದು ನಿಮ್ಮ ಶುಷ್ಕ ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತದೆ.

೭. ಗ್ಗ್ಲಿಸರಿನ್: ಗ್ಲಿಸರಿನ್ ನ ಆರ್ಧ್ರತೆಯನ್ನು ಸೆಳೆಯುವ ಗುಣದಿಂದಾಗಿ ನಿಮ್ಮ ಚರ್ಮವನ್ನು ಉತ್ತಮ ರೀತಿಯಲ್ಲಿ ಅರ್ಧ್ರಿಕರಿಸುತ್ತದೆ. ನಿಮ್ಮ ಚರ್ಮದ ಕಾಳಜಿಯ ದಿನಚರಿಯಲ್ಲಿ ಗ್ಲಿಸರಿನ್ ಸೇರಿಸುವುದರಿಂದ ಅದು ಮುಖದ ಒಣ ಪ್ಯಾಕ್ಸ್ ಗಳನ್ನು ನಿವಾರಿಸುತ್ತದೆ. ಇದು ಒಡೆದ ತುಟಿ ಮತ್ತು ಹಿಮ್ಮಡಿಯನ್ನು ಚಿಕಿತ್ಸಿಸುವಲ್ಲಿಯೂ ಸಹಾಯ ಮಾಡುತ್ತದೆ. 

೮. ವಿಟಮಿನ್ ಇ ಎಣ್ಣೆ: ವಿಟಮಿನ್ ಇ ಪೌಷ್ಟಿಕಾಂಶ ನಿಮ್ಮ ಚರ್ಮದ ಆರ್ಧ್ರತೆಯನ್ನು ಕಾಪಾಡುತ್ತದೆ. ಇದರಿಂದ ನಿಮ್ಮ ಚರ್ಮಕ್ಕೆ ನೀವು ಯೋಚಿಸದೆ ಇರುವ ಬಗೆಯಲ್ಲಿ ಸಹಾಯವಾಗುತ್ತದೆ. ವಿಟಮಿನ್ ಇ ಸಹ ಹಲವಾರು ಮನೆಮದ್ದುಗಳಲ್ಲಿ ಪ್ರಖ್ಯಾತಿ ಪಡೆದಿರುವ ಸಾಮಗ್ರಿ. ವಿಟಮಿನ್ ಇ ಎಣ್ಣೆಯನ್ನು ನೀವು ದಿನ ನಿತ್ಯ ಬಳಸುವ ಕ್ರೀಮ್ ಅಥವಾ ಲೋಷನ್ ಬೆರೆಸಿ ಹಚ್ಚಿಕೊಂಡರೆ ಅದು ನಿಮ್ಮ ಚರ್ಮದ ಮೇಲೆ ಅದ್ಭುತ ಪ್ರಭಾವವನ್ನು ಬೀರುತ್ತದೆ. 

೯. ಸಾಸಿವೆ ಎಣ್ಣೆ: ಸಾಸಿವೆ ಎಣ್ಣೆ ತನ್ನ ಉರಿಯೂತದ ವಿರೋಧಿ ಲಕ್ಷಣ, ಆಂಟಿಬ್ಯಾಕ್ಟೀರಿಯಲ್ ಗುಣ ಮತ್ತು ಶಿಲಿಂಧ್ರಗಳ ವಿರುದ್ಧ ಗುಣಲಕ್ಷಣಗಳ ಕಾರಣದಿಂದ ಪ್ರಖ್ಯಾತಿ ಪಡೆದಿದೆ. ನಿಮ್ಮ ಚರ್ಮದ ಮೇಲೆ ಸಾಸಿವೆ ಎಣ್ಣೆಯನ್ನು ಹಚ್ಚುವುದರಿಂದ ಚರ್ಮದ ನೆವೆ ಮತ್ತು ಶುಷ್ಕತೆಯನ್ನು ತಡೆಗಟ್ಟಿ ನಿಮ್ಮ ಚರ್ಮವನ್ನು ಬೆಳ್ಳಗಾಗಿಸಿಕೊಳ್ಳಲು ಸಹಾಯ ಮಾಡುತ್ತದೆ. 

೧೦. ಅವಕಾಡೊ: ಅವಕಾಡೊ ಚರ್ಮವನ್ನು ಸಂತೈಸಿಸುವ ಗುಣ ಮತ್ತು ನಿಮ್ಮ ಚರ್ಮವನ್ನು ಪೋಷಿಸಿ, ಮೃದುಗೊಳಿಸುವ ಗುಣ ಹೊಂದಿದೆ. ಮೋನೊಸ್ಯಾಚ್ಯುರೇಟೆಡ್ ಫಾಟ್ಸ್ ಗಳನ್ನು ಹೆಚ್ಚಿನ ಮಟ್ಟದಲ್ಲಿ ಹೊಂದಿದ್ದು, ಅವಕಾಡೊ ಅಗತ್ಯವಿರುವ ವಿಟಮಿನ್ಸ್ ಮತ್ತು ಮಿನರಲ್ಸ್ ಗಳನ್ನು ಹೊಂದಿದೆ. ಹಾಗಾಗಿ ಇದನ್ನು ಫೇಸ್ ಪ್ಯಾಕ್ ಆಗಿ ಬಳಸಿದರೆ, ಇದು ನಿಮ್ಮ ಚರ್ಮದ ಶುಷ್ಕತೆಯನ್ನು ತೊಡೆದುಹಾಕುತ್ತದೆ. 

೧೧. ಮೊಸರು: ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ನಿಮ್ಮ ಚರ್ಮದ ಸತ್ತಿರುವ ಜೀವಕೋಶಗಳನ್ನು ಕರಗಿಸಿ, ನಿಮ್ಮ ಚರ್ಮದ ರಂಧ್ರಗಳು ಬಿಗಿಯಾಗುವಂತೆ ಮಾಡುತ್ತದೆ. ಇದು ಅತಿ ಅಗ್ಗವಾಗಿ ಸಿಗುವ ಮನೆಮದ್ದುಗಳಲ್ಲಿ ಒಂದು. 

೧೨. ಕಡಲೆ ಹಿಟ್ಟು (ಬೇಸನ್): ಕಡಿಮೆ ಪರಿಚಯವಿರುವ ನಿಮ್ಮ ಚರ್ಮದ ಮನೆಮದ್ದುಗಳಲ್ಲಿ ಒಂದು ಬೇಸನ್ ಅಥವಾ ಕಡಲೆ ಹಿಟ್ಟು. ಇದು ನಿಮ್ಮ ಚರ್ಮದ ಸೂಕ್ಷ್ಮತೆಯನ್ನು ಹೆಚ್ಚಿಸಿ, ನಿಮ್ಮ ಚರ್ಮಕ್ಕೆ ಯಾವುದೇ ಹಾನಿಯಾಗದಂತೆ ನಿಮ್ಮ ಚರ್ಮದ ಎಲ್ಲಾ ಕಲ್ಮಶಗಳನ್ನು ತೊಡೆದುಹಾಕುತ್ತದೆ. ಇದರ ಬಳಕೆಯ ಫಲಿತಾಂಶ ಹೆಚ್ಚಿಸಲು ಇದನ್ನು ಜೇನುತುಪ್ಪ, ಹಾಲು ಅಥವಾ ಹಾಲಿನ ಕೆನೆ ಜೊತೆ ಬೆರೆಸಿ ಫೇಸ್ ಪ್ಯಾಕ್ ಮಾಡಿ ಲೇಪಿಸಿಕೊಳ್ಳಿ. ಇದು ನಿಮ್ಮ ಚರ್ಮಕ್ಕೆ ಸ್ಕ್ರಬ್ ಆಗಿ ಕೂಡಾ ವರ್ತಿಸುತ್ತದೆ. 

[Back To Top]

೩. ಶುಷ್ಕ ತ್ವಚೆಗೆ ಮನೆಯಲ್ಲಿಯೇ ತಯಾರಿಸುವ ಫೇಸ್ ಪ್ಯಾಕ್ (Homemade Face Packs For Dry Skin in Kannada):

ಶುಷ್ಕ ತ್ವಚೆಗೆ ಸುಲಭವಾದ ಮನೆಮದ್ದುಗಳಲ್ಲಿ ಒಂದು ಎಂದರೆ ಅದರ ಫೇಸ್ ಪ್ಯಾಕ್ ಗಳು. ಅಂತಹ ಸುಲಭ ೫ ಫೇಸ್ ಪ್ಯಾಕ್ ಗಳು ಇಲ್ಲಿವೆ. 

* ನಿಮ್ಮ ಶುಷ್ಕ ತ್ವಚೆಗೆ ಕಿವುಚಿದ ಬಾಳೆಹಣ್ಣು, ಜೇನುತುಪ್ಪ ಕಲಸಿ. ಅದಕ್ಕೆ ಆಲಿವ್ ಎಣ್ಣೆಯನ್ನು ಸೇರಿಸಿ. ಈ ಕಣಕವನ್ನು ನಿಮ್ಮ ಚರ್ಮದ ಮೇಲೆ ಲೇಪಿಸಿ. ಸ್ವಲ್ಪ ಸಮಯದ ನಂತರ ಅದನ್ನು ತೊಳೆದುಕೊಳ್ಳಿ. 

* ನೆನೆಸಿಟ್ಟ, ಪುರದಿ ಮಾಡಿದ ಬಾದಾಮ್ ಅನ್ನು ನಿಂಬೆ ರಸ, ಕಡಲೆ ಹಿಟ್ಟು, ತಣ್ಣನೆಯ ಹಾಲು - ಈ ಸಾಮಾಗ್ರಿಗಳನ್ನು ಬೆರೆಸಿ, ಕಣಕವನ್ನು ತಯಾರಿಸಿ. ಇದನ್ನು ನಿಮ್ಮ ಮುಖಕ್ಕೆ ಫೇಸ್ ಪ್ಯಾಕ್ ಆಗಿ ಬಳಸಬಹುದು. 

* ತಣ್ಣನೆಯ ಮೊಸರು, ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿ, ಕಲಿಸಿ ನಿಮ್ಮ ಶುಷ್ಕ ಚರ್ಮದ ಮೇಲೆ ಲೇಪಿಸಿ. ಇದು ನಿಮ್ಮ ಚರ್ಮವನ್ನು ಅರ್ಧ್ರಿಕರಿಸುತ್ತದೆ. 

* ಸೌತೆಕಾಯಿಯ ಸಿಪ್ಪೆ ತೆಗೆದು, ಸ್ವಲ್ಪ ಸಕ್ಕರೆಯಲ್ಲಿ ಸೇರಿಸಿ, ಫ್ರಿಡ್ಜ್ ನಲ್ಲಿ ತಣ್ಣಗಾಗಿಸಿ. ನಿಮ್ಮ ಮುಖದ ಮೇಲೆ ಹಚ್ಚಿ ೧೦ ನಿಮಿಷದ ನಂತರ, ಇದನ್ನು ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ. 

* ಒಂದು ಚಮಚ ಕಲ್ಲಂಗಡಿ ಹಣ್ಣಿನ ರಸ ಮತ್ತು ಒಂದು ಚಮಚ ಜೇನುತುಪ್ಪ ಬೆರೆಸಿ, ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ೨೦ ನಿಮಿಷದ ನಂತರ ಅದನ್ನು ತೊಳೆದುಕೊಳ್ಳಿ. 

[Back To Top]

೪. ನಿರ್ಣಯ (Conclusion in Kannada):

ಈ ಲೇಖನದಲ್ಲಿ ನಿಮ್ಮ ಶುಷ್ಕ ತ್ವಚೆಯನ್ನು ನಿವಾರಿಸಲು ಕೆಲವು ಮನೆಮದ್ದುಗಳನ್ನು ನೀಡಿದ್ದೇವೆ. ಈ ಮೇಲೆ ಕೊಟ್ಟಿರುವ ಸಲಹೆಗಳನ್ನು ನೀವು ಪಾಲಿಸಿದರೆ, ಅವುಗಳು ನಿಮ್ಮ ಚರ್ಮವನ್ನು ಅರೋಜಿಕರವಾಗಿಸಿ, ನಿಮ್ಮ ಚರ್ಮ ದೀರ್ಘಕಾಲದ ವರೆಗೆ ಹೊಳೆಯುವಂತೆ ಮಾಡುತ್ತದೆ. 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon