Link copied!
Sign in / Sign up
0
Shares

ಗರ್ಭಿಣಿ ಹೆಂಗಸರನ್ನು ಬಚಾವ್ ಮಾಡುವ 6 ಶುಚಿತ್ವ ಕಾಯ್ದುಕೊಳ್ಳುವ ಸಲಹೆಗಳು

ಗಾಬರಿ ಆಗಬೇಡಿ, ಇವೇನು ಯಾರು ಕೇಳಿರದಂತಹ ಅಥವಾ ಮಾಡಲು ಆಗದೇ ಇರುವಂತಹ ಕೆಲಸಗಳಲ್ಲ. ಆದರೆ ಬಹಳಷ್ಟು ಹೆಣ್ಣು ಮಕ್ಕಳಿಗೆ ಇದರ ಸಾಮಾನ್ಯ ಅರಿವು ಇರುವುದಿಲ್ಲ. ಸದಾ ಬದಲಾಗುತ್ತಿರುವ ಹಾರ್ಮೋನುಗಳ ಗತಿ, ಕ್ಷೀಣಿಸಿದ ಪ್ರತಿರಕ್ಷಣಾ ವ್ಯವಸ್ಥೆ, ಉಬ್ಬುತ್ತಿರುವ ಉದರ, ಇವೆಲ್ಲವೂ ನೀವು ಇಲ್ಲಿಯವರೆಗೆ ಶುಚಿ ಎಂದು ಯಾವುದನ್ನೆಲ್ಲಾ ಅಂದುಕೊಂಡಿದ್ದೀರೋ, ಅವುಗಳನ್ನ ಬದಲಾಯಿಸುತ್ತವೆ. ಅದೃಷ್ಟವಶಾತ್, ಗರ್ಭಧಾರಣೆಯ ಸಮಯದಲ್ಲಿ ಶುಚಿತ್ವ ಕಾಯ್ದುಕೊಳ್ಳಲು ಕೆಲವೊಂದು ಸುಲಭ ಸಲಹೆಗಲಿದ್ದು, ಅವುಗಳನ್ನು ನೀವು ಪಾಲಿಸಬಹುದು. ಅವುಗಳು ಯಾವು ಎಂದು ಕೆಳಗೆ ತಿಳಿಸಿದ್ದೇವೆ.

೧. ಕಾಟನ್ ಇಂದ ಮಾಡಿರುವ ಬ್ರಾ, ಪ್ಯಾಂಟಿಗಳನ್ನೇ ಧರಿಸಿ

ಎಲ್ಲಾ ವಸ್ತ್ರಗಳಲ್ಲಿ, ಉಸಿರಾಡಲು ಅತ್ಯಂತ ಸುಲಭವೆನಿಸುವುದು ಕಾಟನ್ ವಸ್ತ್ರಗಳಲ್ಲಿಯೇ. ಬೇಬಿಮೆಡ್ ಪ್ರಕಾರ ನೀವು ಒಂದು ವೇಳೆ ಕಾಟನ್ ಬಿಟ್ಟು ಬೇರೆ ಮೆಟೀರಿಯಲ್ಲಿನ ಪ್ಯಾಂಟಿ ಧರಿಸಿದ್ದಲ್ಲಿ ಅದು ಬ್ಯಾಕ್ಟೀರಿಯಾ ಬೆಳವಣಿಗೆಗೆ ಸಹಾಯ ಆಗುತ್ತದೆ. ಇದರಿಂದ ದುರ್ವಾಸನೆ, ಬೆವರು ಮತ್ತು ಯೀಸ್ಟ್ ಸೋಂಕಿಗೆ ಕಾರಣ ಆಗುತ್ತದೆ. ಈ ಸೋಂಕು ನಿಮಗೆ ಮತ್ತು ಹುಟ್ಟಲಿರುವ ಮಗುವಿಗೆ ತೊಂದರೆ ಮಾಡಬಹುದು. ಹೀಗಾಗಿ ಕಾಟನ್ ಪ್ಯಾಂಟಿಗಳನ್ನ ಧರಿಸುವುದು ಒಳ್ಳೆಯದು.


೨. ಪದೇ ಪದೇ ಹಲ್ಲನ್ನು ಉಜ್ಜಿ

ಅಮೆರಿಕನ್ ಪ್ರೆಗ್ನನ್ಸಿ ಅಸೋಸಿಯೇಷನ್ ಪ್ರಕಾರ ಗರ್ಭಿಣಿ ಹೆಂಗಸರು ಒಸಡಿನ ಕಾಯಿಲೆಗಳಿಗೆ ಮತ್ತು ಕ್ಯಾವಿಟಿಗಳಿಗೆ ಸುಲಭವಾಗಿ ತುತ್ತಾಗಬಹುದು. ಇದಕ್ಕೆ ಕಾರಣ ದೇಹದಲ್ಲಿನ ಹಾರ್ಮೋನುಗಳ ಗತಿಯಲ್ಲಿ ಆಗುವ ಏರುಪೇರಿನಿಂದ, ನಿಮ್ಮ ಒಸಡು ಊದಿಕೊಳ್ಳಬಹುದು, ರಕ್ತಸ್ರಾವ ಆಗಬಹುದು ಮತ್ತು ಆಹಾರ ಸಿಕ್ಕಿ ಹಾಕಿಕೊಳ್ಳಬಹುದು.


೩. ಚರ್ಮವನ್ನು ಶುಷ್ಕತೆಯಿಂದ ದೂರವಿರಿಸಲು ಸ್ನಾನ ಆದ ತಕ್ಷಣ ಲೋಷನ್ ಹಚ್ಚಿಕೊಳ್ಳಿ

ಶುಷ್ಕತೆ ಇಂದ ಕೂಡಿದ ತ್ವಚೆ ಅಥವಾ ಒಣ ಚರ್ಮವು ಗರ್ಭಧಾರಣೆಯ ಸಮಯದಲ್ಲಿ ತಾಯಿಗೆ ಎದುರಾಗುವ ಮತ್ತೊಂದು ತೊಡಕು. ಇದಕ್ಕೆ ಪರಿಹಾರ ಏನೆಂದರೆ, ನಿಮ್ಮ ಸ್ನಾನ ಆದೊಡನೆ ನಿಮ್ಮ ದೇಹಕ್ಕೆ ಲೋಷನ್ ಹಚ್ಚಿಕೊಳ್ಳಿ. ಇನ್ನೂ ಒಳ್ಳೆಯ ವಿಷಯ ಎಂದರೆ, ನೀವು ಒಂದು ವೇಳೆ ಲೋಷನ್ ಬಳಸಲು ಇಷ್ಟಪಡದೆ ಇದ್ದರೆ ನೀವು ಕೊಬ್ಬರಿ ಎಣ್ಣೆಯನ್ನೇ ಬಳಸಬಹುದು. ಏಕೆಂದರೆ ಅಂಗಡಿಯಿಂದ ತಂಡ ಲೋಷನ್ಗಳಿಗಿಂತ ಇದು ಚರ್ಮದ ಒಳಗೆ ಬೇಗ ನುಗ್ಗುತ್ತವೆ.


೪. ಕೈಗಳನ್ನು ತೊಳೆಯುತ್ತಿರಿ

ನೀವು ಪದೇ ಪದೇ ಕೈ ತೊಳೆಯುತ್ತಿದ್ದರೆ, ನಿಮ್ಮ ಚರ್ಮವು ಒಣಗುತ್ತದೆ ಎಂಬುದು ತಿಳಿದಿರುವ ವಿಷಯ. ಆದರೂ, ಸೋಂಕು ಮತ್ತು ಅನಾರೋಗ್ಯ ಹರಡದಂತೆ ತಡೆಯಲು ಅತ್ಯಂತ ಸುಲಭದ ವಿಧಾನ ಎಂದರೆ ಅದು ಕೈಗಳನ್ನು ತೊಳೆಯುವುದು. ಹೀಗೆ ಕೈ ತೊಳೆದೊಡನೆ ಮೇಲೆ ಹೇಳಿರುವಂತೆ ಲೋಷನ್ ಅಥವಾ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಿ.


೫. ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಿರಿ

ಅಮೆರಿಕನ್ ಪ್ರೆಗ್ನನ್ಸಿ ಅಸೋಸಿಯೇಷನ್ ಗರ್ಭಿಣಿ ಹೆಂಗಸರು ಎಲ್ಲಾ ಸಮಯದಲ್ಲೂ ಸರಿಯಾಗಿ ಜಲೀಕರಣ ಹೊಂದಿರಬೇಕು ಎಂದಿದೆ. ಹೆಚ್ಚು ನೀರು ಕುಡಿಯುವುದರಿಂದ (ನಿಮ್ಮ ಮೂತ್ರವು ತಿಳಿ ಬಣ್ಣ/ ಬಣ್ಣ ರಹಿತವಾಗಿ ಬರುವಂತೆ) ನೀವು ಒಣ ತ್ವಚೆ ಮತ್ತು ಉಷ್ಣದಿಂದ ದೂರವಿರಬಹುದು. ಅಷ್ಟೇ ಅಲ್ಲದೆ ಇದು ನಿಮ್ಮ ಮಗುವಿನ ಸರಿಯಾದ ಬೆಳವಣಿಗೆಗೆ ಬಹಳ ಅಗತ್ಯ.

 

೬. ಆ ಭಾಗವನ್ನು ಕಠಿಣವಾಗಿ ತೊಳೆಯಬೇಡಿ

ಗರ್ಭಧಾರಣೆ ವೇಳೆ ಯೋನಿಯಿಂದ ದ್ರವ್ಯ ವಿಸರ್ಜನೆ ಜಾಸ್ತಿ ಆಗುವುದರಿಂದ ಬಹಳಷ್ಟು ಹೆಂಗಸರು ದುರ್ವಾಸನೆ, ತುರಿಕೆ ಅಥವಾ ವದ್ದೆ ಆಗುವುದನ್ನು ಅನುಭವಿಸುತ್ತಾರೆ. ಈ ಕಾರಣಕ್ಕಾಗಿ ನಿಮಗೆ ನೀವು ಆ ಭಾಗವನ್ನು ಪದೇ ಪದೇ ತೊಳೆದುಕೊಳ್ಳಬೇಕು ಎಂದೆನಿಸಬಹುದು. ಆದರೆ ಅಲ್ಲಿ ಪದೇ ಪದೇ ಉಜ್ಜುವುದರಿಂದ ಒಳಿತಿಗಿಂತ ತೊಂದರೆಗಳೇ ಹೆಚ್ಚು ಉಂಟಾಗುತ್ತವೆ. ಹೀಗಾಗಿ ನೀವು ಅದನ್ನು ಜೋರಾಗಿ ಉಜ್ಜುವುದಾಗಲಿ ಅಥವಾ ಸುಗಂಧಭರಿತ ಸೋಪ್ ಬಳಸಿ ತೊಳೆಯುವುದಾಗಲಿ ಮಾಡಬೇಡಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon