Link copied!
Sign in / Sign up
11
Shares

ಶ್ರಮಜೀವಿ ಮಕ್ಕಳನ್ನು ಬೆಳೆಸಲು ಈ 6 ಟ್ರಿಕ್ಸ್ ಪಾಲಿಸಿದರೆ ಸಾಕು!

ಪೋಷಕರ ಮುಖ್ಯ ಗುರಿಗಳಲ್ಲಿ ಒಂದು ಎಂದರೆ ಅದು ತಮ್ಮ ಮಕ್ಕಳು ಮಾಡುವ ಸಾಧನೆಗಳನ್ನ ನೋಡುವುದು. ನನ್ನ ಮಗುವಿಗೆ ಈಗ ಕೇವಲ 3 ವರ್ಷ, ಆದರೆ ಅವನ ಬಗ್ಗೆ ನನಗಿರುವ ಸಾರ್ಥಕ ಭಾವನೆ ಮತ್ತು ಸಾತ್ವಿಕ ಜಂಭವು ನನ್ನ ಜೀವನ ಪರ್ಯಂತ ಇರುತ್ತದೆ ಎಂದು ನನಗೆ ಅನಿಸಲು ಈಗಲೇ ಶುರುವಾಗಿದೆ. ಕರುಣಾಮಯಿ ಆಗಿರುವುದರ ಜೊತೆಗೆ ನನ್ನ ಮಗನು ತನ್ನ ಜೀವನದಲ್ಲಿ ಅವನು ಇಷ್ಟಪಡುವ ಕ್ಷೇತ್ರದಲ್ಲೇ ಏನಾದರೂ ಸಾಧಿಸುವುದನ್ನು ನೋಡಬೇಕೆಂಬ ಆಸೆ ನನ್ನದು. ನಮ್ಮ ಗುರಿಯು ನಮ್ಮ ಇಷ್ಟಪಡುವ ಕ್ಷೇತ್ರದ್ದು ಆಗಿದ್ದರೆ, ಅದನ್ನು ತಲುಪಲು ನಾವು ಶ್ರಮಿಸುತ್ತೇವೆ ಎಂಬುದು ನನ್ನ ಅನುಭವದಿಂದ ನನಗೆ ಗೊತ್ತಿದೆ. ಆದರೆ ಶ್ರಮಜೀವಿ ಮಗುವನ್ನು ಬೆಳೆಸುವುದು ಸುಲಭದ ಕೆಲಸವಲ್ಲ.


ಶ್ರಮಿಸುವ ಮಗುವಿಗೆ ತಾನು ಮಾಡುವ ಕಾರ್ಯದಲ್ಲಿ ಯಶಸ್ಸು ಪಡೆಯಲು ಬೇಕಿರುವ ಎಲ್ಲಾ ಸಾಧನಗಳನ್ನ ಹೇಗೆ ಬಳಸಿಕೊಳ್ಳಬೇಕು ಎಂಬುದು ಗೊತ್ತಿರುತ್ತದೆ. ಶ್ರಮಿಸುವ ಮಗುವಿಗೆ ನಮಗೆ ಬೇಕಾಗಿರುವುದೆಲ್ಲಾ ಸುಲಭವಾಗಿ ಸಿಕ್ಕಿಬಿಡುವುದಿಲ್ಲ ಎಂಬುದು ತಿಳಿದಿರುತ್ತದೆ. ನಾನು ಒಂದು ತಾಯಿ ಅಲ್ಲದೆ ಒಂದು ಶಿಕ್ಷಕಿಯೂ ಕೂಡ. ನಿಜವಾಗಿ ಹೇಳಬೇಕೆಂದರೆ ನನ್ನ ತರಗತಿಯಲ್ಲಿ ನಾನು ತುಂಬಾ ಬುದ್ಧಿವಂತ ಮಕ್ಕಳಿಗಿಂತ ತುಂಬಾ ಶ್ರಮಿಸುವ ಮಕ್ಕಳನ್ನು ಹೊಂದಲು ಇಷ್ಟಪಡುತ್ತೇನೆ. ಸ್ವಲ್ಪ ಬಿದ್ದರೂ, ಏಟು ತಿಂದರೂ, ಮೇಲೆದ್ದು ಪುನಃ ತೋಳುಗಳನ್ನು ಮಡಚಿಕೊಂಡು ಮುನ್ನುಗ್ಗುವ ಧೋರಣೆ ಹೊಂದುವಂತೆ ಮಕ್ಕಳನ್ನ ಬೆಳೆಸುವುದೇ ಅವರು ಯಶಸ್ಸು ಹೊಂದುವಂತೆ ಮಾಡಲು ಇರುವ ದಾರಿ.


೧. ಅವರ ಜಡತ್ವ ಮತ್ತು ಬಿಟ್ಟು ಕೊಡದ ಧೋರಣೆಯನ್ನು ಗುರುತಿಸಿ ಮತ್ತು ಪ್ರಶಂಸಿಸಿ


ಬಿಟ್ಟು ಕೊಡದ ಧೋರಣೆಯು ಮಕ್ಕಳಲ್ಲಿ ತುಂಬಾನೇ ಮುಖ್ಯ, ಏಕೆಂದರೆ ಇದು ಅವರಿಗೆ ಸೋಲೇ ಎಲ್ಲಾ ಅಲ್ಲ ಎಂಬುದನ್ನು ತಿಳಿಸುತ್ತದೆ. ನಾನು ಪಾಠ ಮಾಡುವ ಮಕ್ಕಳಲ್ಲಿ ಬಹುತೇಕರು ಸೋಲೇ ಕೊನೆ ಅಂದುಕೊಳ್ಳುವ ವಿದ್ಯಾರ್ಥಿಗಳೇ ಹೆಚ್ಚು. ಅವರು ತಪ್ಪನ್ನು ಮಾಡುವುದೇ ನನಗೆ ಒಳ್ಳೆಯದು, ಏಕೆಂದರೆ ಅವರಿಗೆ ಆ ಕೆಲಸವನ್ನು ಇನ್ನೊಮ್ಮೆ ಹೇಳಿಕೊಟ್ಟು ಮಾಡಿಸಬಹುದು. ಅದರಲ್ಲಿ ಅವರನ್ನು ಮತ್ತಷ್ಟು ಪರಿಣಿತರಾಗಿ ಮಾಡಬಹುದು. ಹೀಗೆ ಜಡತ್ವ ಬೆಳೆಸಿಕೊಳ್ಳಲು ಅವರಿಗೆ ಕಲಿಸುವ ಮೂಲಕ ಸೋಲು ಕೂಡ ಯಶಸ್ಸಿನ ಒಂದು ಭಾಗ ಎಂಬುದನ್ನು ಅವರಿಗೆ ತಿಳಿಸಬಹುದು. ದೃತಿಗೆಡದೆ ಪುನಃ ಪ್ರಯತ್ನಿಸುವುದೊಂದೇ ಯಶಸ್ಸಿಗೆ ದಾರಿ ಎಂಬುದು ಅವರಿಗೆ ಈ ವಯಸ್ಸಲ್ಲೇ ತಿಳಿಸಬಹುದು.


೨. ಅವರ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಆದರೆ ಅದನ್ನು ಹೊಂದಲು ಅವರು ಪಟ್ಟ ಶ್ರಮದ ಬಗ್ಗೆ ಅವರಿಗೆ ಪುನಃ ನೆನಪಿಸಿ

ಪ್ರತಿಯೊಂದು ತಂದೆ ಅಥವಾ ತಾಯಿಯು ತನ್ನ ಮಗುವಿನ ಬಗ್ಗೆ ಹೆಮ್ಮೆ ಹೊಂದಲು ಇಷ್ಟ ಪಟ್ಟೇ ಪಡುತ್ತಾರೆ. ಯಾರು ಬೇಕಾದರೂ ಹೊಗಳಬಹುದು. ಆದರೆ ಕಷ್ಟಕರ ಕೆಲಸ ಏನು ಎಂದರೆ ಮಕ್ಕಳು ಸಾಧನೆ ಮಾಡಿದಾಗ, ಅವರು ಆ ಸಾಧನೆ ಮಾಡುವ ಹಿಂದೆ ಹಾಕಿದ ಶ್ರಮವನ್ನು ಅವರಿಗೆ ಮತ್ತೆ ನೆನಪಿಸುವುದು. ನಿಮ್ಮ ಮಗುವು ಫುಟ್ಬಾಲ್ ಆಡುವಾಗ ಗೋಲ್ ಬಾರಿಸಿ ತನ್ನ ತಂಡವನ್ನು ಗೆಲ್ಲಿಸಬಹುದು, ಅದು ನಿಮಗೆ ಅದ್ಭುತ ಅನಿಸಬಹುದು, ಆದರೆ ಅದು ಸುಮ್ಮನೆ ಹಾಗೇ ಆಗಲಿಲ್ಲ ಅಲ್ಲವಾ? ಅಭ್ಯಾಸ, ಕೌಶಲ್ಯತೆ, ತಂಡದ ಸಮಗ್ರ ಶ್ರಮ, ತರಬೇತುದಾರರ ಸಲಹೆಗಳು, ಇವೆಲ್ಲವೂ ಅವರಿಗೆ ಸಹಾಯ ಮಾಡಿದೆ ಅಲ್ಲವೇ. ಅವರು ಗೋಲ್ ಹೊಡೆದಾಗ ಸಂಭ್ರಮಿಸಿ ಅವರ ಬೆನ್ನು ತಟ್ಟಿ, ಆದರೆ ಅದರ ಮರುಕ್ಷಣವೇ ಅವರಿಗೆ ಮೃದುವಾಗಿ ಇವೆಲ್ಲಾ ಸಾಧ್ಯವಾಗಿದ್ದು ಯಾವುಗಳಿಂದ ಎಂಬುದನ್ನು ನೆನಪಿಸಿ.


೩. ಅವರು ನೀವು ಹೇಳಿದ ವಿಧಾನದಲ್ಲೇ ಕೆಲಸವನ್ನು ಮುಗಿಸಬೇಕು ಎಂಬ ಹಠ ಮಾಡಬೇಡಿ


ಪೋಷಕರು ಮೈಗೂಡಿಸಿಕೊಳ್ಳಲೇಬೇಕಾದ ಅತ್ಯಂತ ಕಷ್ಟಕರ, ಆದರೆ ಅತ್ಯಂತ ಅಗತ್ಯ ಗುಣ ಯಾವುದೆಂದರೆ ಇದು. ನೀವು ಮಕ್ಕಳನ್ನ ಶ್ರಮಜೀವಿಗಳಾಗಿ ಬೆಳೆಸುವಾಗ, ಅವರೇ ಹೊಸ ದಾರಿಗಳನ್ನು ಕಂಡುಕೊಳ್ಳಲು, ತಮ್ಮದೇ ಆದ ದಾರಿಯಲ್ಲಿ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಲು ಅವಕಾಶ ಕೊಡಿ. ನಾನು ಶಾಲೆಯಲ್ಲಿ ಪಾಠ ಕೇಳುತ್ತಿದ್ದಾಗ ಸಣ್ಣದೊಂದು ನೋಟ್ಸ್ ಮಾಡಿಕೊಳ್ಳುತ್ತಿದೆ ಮತ್ತು ಪರೀಕ್ಷೆ ಸಮಯದಲ್ಲಿ ಅದರಿಂದ ಓದುತ್ತಿದ್ದೆ. ಅದು ನನಗೆ ಕೆಲಸ ಮಾಡುತ್ತಿತ್ತು. ಆದರೆ ಅದು ಎಲ್ಲರಿಗೂ ಕೆಲಸ ಮಾಡಬೇಕು ಎಂಬ ನಿಯಮವೇನೂ ಇಲ್ಲವಲ್ಲ. ಪ್ರತಿಯೊಂದು ಮಗುವೂ ತನ್ನ ದಾರಿಯನ್ನು ತಾನೇ ಕಂಡುಕೊಳ್ಳಬೇಕು. ಏಕೆಂದರೆ ಅವರಿಗೆ ಯಾವುದು ಸುಲಭ ಆಗುತ್ತದೆ ಅಥವಾ ಯಾವುದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದು ಬೇರೆಯವರಿಗಿಂತ ಅವರಿಗೇನೇ ಚೆನ್ನಾಗಿ ಗೊತ್ತಿರುತ್ತದೆ.


೪. ಅವರು ಬೇರೆ ಬೇರೆ ಜಗತ್ತುಗಳನ್ನು ನೋಡಲಿ


ಶ್ರಮಜೀವನ ಎನ್ನುವುದು ಒಬ್ಬೊಬ್ಬರ ಕಣ್ಣುಗಳಿಗೆ ಒಂದೊಂದು ರೀತಿ ಕಾಣಿಸುತ್ತದೆ. ನಾನು ಪಾಠ ಮಾಡುವ ಕೆಲವು ಮಕ್ಕಳಲ್ಲಿ ಶೇಕ್ಸ್ಪಿಯರ್ ಕಾದಂಬರಿಗಳೆಂದರೆ ಮೂಗು ಮುರಿಯುವರು, ಇಷ್ಟಪಡದೆ ಇರುವವರು ಇದ್ದಾರೆ. ಆದರೆ ಹಾಗೆಂದ ಮಾತ್ರಕ್ಕೆ ನಾನು ಅವರು ನನ್ನ ಸಬ್ಜೆಕ್ಟ್ ಅಲ್ಲಿ ಏನು ಸಾಧಿಸಲು ಸಾಧ್ಯವಿಲ್ಲ ಎಂದುಕೊಂಡು ಸುಮ್ಮನಾಗಿಬಿಟ್ಟರೆ, ನನ್ನ ವೃತ್ತಿ ಜೀವನದಲ್ಲಿ ನನ್ನ ತರಗತಿಯ ಎಷ್ಟೋ ಮಕ್ಕಳು ಕಥೆಗಾರರು ಅಥವಾ ಪದ್ಯ ರಚನೆಕಾರರು ಆಗುವುದನ್ನು ನೋಡಲು ಆಗುತ್ತಲೇ ಇರಲಿಲ್ಲ. ಶ್ರಮಜೀವನ ಎನ್ನುವುದು ಒಬ್ಬೊಬ್ಬರ ಕಣ್ಣಿಗೆ ಒಂದೊಂದು ರೀತಿ ಕಾಣಿಸುತ್ತದೆ. ಬೇರೆ ಬೇರೆ ಆಯಕಟ್ಟಿನಲ್ಲಿ, ಬೇರೆ ಬೇರೆ ವಿಷಯಗಳಲ್ಲಿ, ಶ್ರಮಜೀವನವು ಬೇರೆ ಬೇರೆಯಾಗಿ ಕಾಣುತ್ತದೆ. ತಮಗೆ ಯಾವುದು ಖುಷಿ ನೀಡುತ್ತದೆ, ಯಾವುದು ಹೆಚ್ಚು ಕೆಲಸ ಮಾಡಲು ಪ್ರೇರಣೆ ನೀಡುತ್ತದೆ ಎಂಬುದನ್ನು ಮಕ್ಕಳು ತಾವಾಗಿಯೇ ನಿರ್ಧರಿಸಲಿ.


೫. ಅವರ ಶ್ರಮವನ್ನು ಚಿಕ್ಕದಂತೆ ನೋಡಬೇಡಿ


ನನ್ನ ಮಗ ನನಗೆ ಮನೆ ಸ್ವಚ್ಛ ಮಾಡಲು ಸಹಾಯ ಮಾಡುತ್ತಾನೆ. ಆದರೆ ಅವನಿಗೆ ನಿಜವಾಗಿಯೂ ಮನೆ ಸ್ವಚ್ಛ ಮಾಡಲು ಬರುತ್ತದೆಯೇ? ಇಲ್ಲ. ಆದರೆ ವಿಷಯ ಇರುವುದೇ ಅಲ್ಲಿ. ನನಗೆ ನನ್ನ ಮನೆಕೆಲಸಗಳು 3 ಪಟ್ಟು ಹೆಚ್ಚು ಸಮಯ ತೆಗೆದುಕೊಂಡರೂ ಪರವಾಗಿಲ್ಲ. ಆದರೆ ನನ್ನ ಮಗನನ್ನು ನಿರುತ್ಸಾಹಗೊಳಿಸುವುದು ನನಗೆ ಇಷ್ಟವಿಲ್ಲ.


೬. ನೀವು ಅವರಿಗೆ ಮಾದರಿ ಆಗಿ


ಮಕ್ಕಳು ತಮ್ಮ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ತಿಳಿದುಕೊಳ್ಳಲು ದೊಡ್ಡವರನ್ನು ಮಾದರಿ ಆಗಿ ತೆಗೆದುಕೊಳ್ಳುತ್ತಾರೆ. ನಾವು ಕೆಲಸದಿಂದ ಮನೆಗೆ ಬಂದು, “ಛೆ! ಈ ಕೆಲಸ ಯಾವನಿಗೆ ಬೇಕು?” ಎಂದು ಗೋಳಿಡುತ್ತಾ, ಕೆಲಸಕ್ಕೆ ಬಾರದ ಟಿವಿ ಕಾರ್ಯಕ್ರಮಗಳನ್ನ ನೋಡುತ್ತಾ ಸುಮ್ಮನೆ ಕುಳಿತು ಬಿಟ್ಟರೆ, ಈ ನಕಾರಾತ್ಮಕತೆಯನ್ನು ನಮ್ಮ ಮಕ್ಕಳು ಶ್ರಮಜೀವನದ ಕಡೆ ತೋರಿಸಲು ಶುರು ಮಾಡುತ್ತಾರೆ. ಸಕಾರಾತ್ಮಕವಾಗಿ ಇರಿ ಮತ್ತು ನೀವು ನಿಮ್ಮ ಮನೆಗಾಗಿ, ಕುಟುಂಬಕ್ಕಾಗಿ, ಕೆಲಸಕ್ಕಾಗಿ, ಆರೋಗ್ಯಕ್ಕಾಗಿ ಎಷ್ಟೆಲ್ಲಾ ಕಷ್ಟ ಪಡುತ್ತಿದ್ದೀರಾ ಎಂಬುದನ್ನು ಅವರಿಗೆ ತೋರಿಸಿ. ಆದರೆ ಗೊಣಗುತ್ತಾ ಹೇಳಬೇಡಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon