Link copied!
Sign in / Sign up
1
Shares

ಶಿಶುವಿನ ಹೊಟ್ಟೆ ನೋವನ್ನು ಹೇಗೆ ಕಡಿಮೆ ಮಾಡುವುದು?

ನಿಮ್ಮ ಮಗುವಿನ ಹೊಟ್ಟೆ ನೋವಿನ ಶಮನಕ್ಕಾಗಿ ನೀವು ಏನು ಸಾಹಸವನ್ನು ಮಾಡಬೇಡಿ ಅದನ್ನು ವೈದ್ಯರ ಬಳಿ ಕೇಳಿ ಸರಿಯಾದ ಚಿಕಿತ್ಸೆ ನೀಡಿರಿ. ಮಕ್ಕಳ ಹೊಟ್ಟೆ ನೋವು ದೊಡ್ಡವರ ಹೊಟ್ಟೆ ನೋವಿನಂತಲ್ಲ ಅದು ಬೇರೆಯ ತರಹದ ನೋವಾಗಿರುತ್ತದೆ. ಅದಕ್ಕಾಗಿ ಅವರಿಗೆ ನೀವು ತೆಗೆದುಕೊಳ್ಳುವ ಔಷದಿ ಅಥವಾ ಸವಕಳಿಗಳನ್ನು ನೀಡಬೇಡಿ. ಮಗುವಿನ ಹೊಟ್ಟೆ ನೋವನ್ನು ನಿವಾರಿಸಲು ಅಥವಾ ನೋವನ್ನು ಕಡಿಮೆ ಮಾಡಲು ಈ ಕೆಳಗಿನ ಪರ್ಯಾಯ ವಿಧಾನಗಳನ್ನು ಮಾಡಿರಿ.

೧.ಮಗುವಿಗೆ ಹೆಚ್ಚು ದ್ರವ ಪದಾರ್ಥಗಳನ್ನು ನೀಡಿ

ನಿರಂತರ ಅಥವಾ ಆಗಾಗ್ಗೆ ನೀರನ್ನು ಕುಡಿಯುವುದು ಬೇಗನೆ ಮಗುವಿನ ಹೊಟ್ಟೆ ನೋವನ್ನು ಕಡಿಮೆ ಮಾಡಲು ಇರುವ ಒಂದು ಅತ್ಯದ್ಭುತ ಮನೆ ಔಷಧಿ ಆಗಿದೆ. ಇದು ೬ ತಿಂಗಳ ಮೇಲಿನ ಶಿಶುಗಳಿಗೆ ಕೆಲಸ ಮಾಡುತ್ತದೆ. ಮತ್ತು ಮಲಬದ್ಧತೆ ಹೊಟ್ಟೆ ನೋವಿಗೆ ಕಾರಣ ಆಗಿದ್ದರೆ, ನೀರು ದೇಹದಿಂದ ಹೊರಗೆ ಹೋದ ನೀರನ್ನು ಮತ್ತೆ ದೇಹಕ್ಕೆ ಸೇರಿಸಲು ಸಹಾಯವಾಗುತ್ತದೆ. ಮತ್ತು ಮಲ ಮಾಡುವಾಗ ಆರಾಮದಾಯಕವಾಗಿ ಹೋಗುವಂತೆ ಮಗುವು ಕಷ್ಟಪಡದಂತೆ ಮಾಡಲು ನೆರವಾಗುತ್ತದೆ.

೨.ಮಸಾಜ್ ಮಾಡಿರಿ

ನೋವಿಗೆ ಕಾರಣ ಕಾಲಿಕ್ ಅಥವಾ ತೇಗು ಅಥವಾ ವಾಂತಿ ಆಗಿದ್ದರೆ, ಮೃದುವಾಗಿ ಮಸಾಜ್ ಮಾಡುವುದು ನೋವನ್ನು ಕಡಿಮೆ ಮಾಡುವುದರಲ್ಲಿ ಸಹಾಯವಾಗುತ್ತದೆ. ನಿಮ್ಮ ಮಗುವು ವಾಂತಿ ಮಾಡುವಾಗ ಮಗುವಿನ ಬೆನ್ನನ್ನು ಹಿಮ್ಮುಖವಾಗಿ ಸವರಿ, ನಂತರ ಹೊಟ್ಟೆಯನ್ನು ಮೇಲಿನಿಂದ ಕೆಳಮುಖವಾಗಿ ನಿದಾನವಾಗಿ ಮೃದುವಾಗಿ ಮಸಾಜ್ ಮಾಡಿ. ಇದರಿಂದ ವಾಂತಿ ಕಡಿಮೆ ಆಗುತ್ತದೆ ಮತ್ತು ಹೊಟ್ಟೆ ನೋವು ಕೂಡ ಕಡಿಮೆ ಆಗುತ್ತದೆ.

೩.ಹೆಚ್ಚಿನ ವಿಶ್ರಾಂತಿಯನ್ನು ನೀಡಿ

ಮಗುವು ಆರಾಮವಾಗಿರುವುದು ಈ ಸಮಯದಲ್ಲಿ ತುಂಬಾ ಮುಖ್ಯವಾಗುತ್ತದೆ. ಮಗುವು ಮಲಗುವ ಸ್ಥಿತಿ ಆರಾಮವಾಗಿರುವಂತೆ ನೋಡಿಕೊಳ್ಳಿ ಮತ್ತು ಮಗುವು ಗಾಢ ನಿದ್ರೆಗೆ ಜಾರುವಂತೆ ಮಾಡಿ. ಮಗುವನ್ನು ನಿಮ್ಮ ತೋಳಿನಲ್ಲಿ ಇರಿಸಿಕೊಂಡು ನಿಧಾನವಾಗಿ ಆಡಿಸಿ, ಮಗುವು ಮಲಗುವಂತೆ ನೋಡಿಕೊಳ್ಳಿ. ನೀವು ಮಗುವನ್ನು ತೋಳಿನಲ್ಲಿ ಇರಿಸಿಕೊಳ್ಳುವಾಗ ಬೆಚ್ಚನೆಯ ಹೊದಿಕೆಯನ್ನು ಹಾಕಿ ಮಗುವು ಬೆಚ್ಚನೆಯ ವಾತಾವರಣದಲ್ಲಿ ಇರುವಂತೆ ಮಾಡಿ. ಮಗುವಿನ ಹೊಟ್ಟೆಯ ಭಾಗಕ್ಕೆ ಬೆಚ್ಚನೆಯ ಬಟ್ಟೆಯನ್ನು ಹಾಕಿ.

೬ ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ಮಗು ಆಗಿದ್ದರೆ, ಅವನು/ಳು ಸೇವಿಸುವ ಆಹಾರದ ಮೇಲೆ ನಿಗಾವಹಿಸಿ. ಈ ಸಮಯದಲ್ಲಿ ಹೆಚ್ಚು ದ್ರವ ಪದಾರ್ಥಗಳನ್ನು ನೀಡಿ, ಮುದ್ದೆ ಮತ್ತು ಮುಂತಾದ ಗಟ್ಟಿ ಪದಾರ್ಥಗಳನ್ನು ಮಗುವಿಗೆ ನೀಡಬೇಡಿ.

ಮಗುವಿಗೆ ಹೊಟ್ಟೆ ನೋವು ಇದ್ದಾಗ ಏನನ್ನು ಕೊಡಬಹುದು?

ಮಗುವಿಗೆ ಹೊಟ್ಟೆ ನೋವು ಇದ್ದಾಗ ಅವನಿಗೆ/ಅವಳಿಗೆ ಸೇವಿಸಲು ನೀಡುವ ಆಹಾರ ಅವನ/ಳ ಹೊಟ್ಟೆ ನೋವಿಗೆ ಕಾರಣ ಏನು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಮಗುವಿಗೆ ಸುರಕ್ಷಿತವಾಗಿರುವ ಕೆಲವು ಆಹಾರಗಳನ್ನು ಇಲ್ಲಿ ನೀಡಲಾಗಿದೆ.

೧.ಎದೆಹಾಲು

ಎದೆಹಾಲಿನಲ್ಲಿ ಮಗುವಿನ ದೇಹಕ್ಕೆ ಅವಶ್ಯಕವಾದ ಪೌಷ್ಟಿಕಾಂಶಗಳು ಇವೆ ಮತ್ತು ಇದು ಮಗುವಿನ ಹೊಟ್ಟೆ ನೋವನ್ನು ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಮತ್ತು ಎದೆಹಾಲಿನ ಜೊತೆ ಬ್ಯಾಕ್ಟೀರಿಯಾವನ್ನು ಹೊಡೆದು ಓಡಿಸುವ ಶಕ್ತಿಯನ್ನು ತಾಯಿಯು ಮಗುವಿಗೆ ವರ್ಗಾಯಿಸುತ್ತಾಳೆ.

೨.ತರಕಾರಿ ರಸ

ನಿಮ್ಮ ಮಗುವು ೬ ತಿಂಗಳಿಗಿಂತ ದೊಡ್ಡ ಶಿಶುವಾಗಿದ್ದರೆ, ತರಕಾರಿಯ ಸಾರನ್ನು ಅಥವಾ ತರಕಾರಿಯ ರಸವನ್ನು ಕುಡಿಸಬಹುದು. ಇದು ದ್ರವ ಆಗಿರುವುದರಿಂದ ಮಗುವಿನ ಹೊಟ್ಟೆಯಲ್ಲಿ ಬೇಗನೆ ಜೀರ್ಣವಾಗುತ್ತದೆ ಮತ್ತು ತರಕಾರಿಯ ಪೌಷ್ಟಿಕಾಂಶಗಳು ಮಗುವಿಗೆ ಸಿಗುತ್ತವೆ.

೩.ಹಣ್ಣಿನ ಗಂಜಿ

ಹಣ್ಣನ್ನು ನೀರಿನಲ್ಲಿ ಬೇಯಿಸಿ, ಚೆನ್ನಾಗಿ ಕಿವುಚಿ ದ್ರವ ರೂಪಕ್ಕೆ ತರಿಸಿ ಯಾವುದೇ ಗಂಟುಗಳು ಇರದಂತೆ ಮಾಡಿ ಮಗುವಿಗೆ ನೀಡಿ. ಹಣ್ಣುಗಳು ಸಿಹಿಯಾಗಿರುವುದರಿಂದ ಮಗುವು ಇದನ್ನು ಸುಲಾಭವಾಗಿ ಸೇವಿಸುತ್ತದೆ. ಮತ್ತು ಇದರಲ್ಲಿ ಹೆಚ್ಚು ಪೌಷ್ಟಿಕಾಂಶಗಳು ಮತ್ತು ಶಕ್ತಿಯು ಇರುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon