Link copied!
Sign in / Sign up
13
Shares

ಶಿಶುವಿಗೆ ಜೇನುತುಪ್ಪ ಸುರಕ್ಷಿತವೇ? (Is Honey Safe For Babies? in Kannada)

ಸಿಹಿ ದ್ರವವಾದ ಜೇನುತುಪ್ಪ ಆಂಟಿ-ಬ್ಯಾಕ್ಟೀರಿಯಲ್ ಮತ್ತು ನಂಜಳಿಕ ಗುಣವನ್ನು ಹೊಂದಿದೆ. ಜೇನುತುಪ್ಪವನ್ನು ಹಲವು ಬಗೆಯ ನಿವಾರಣೋಪಾಯಗಳಲ್ಲಿ ಬಳಸಲಾಗಿದೆ. ಉದಾಹರೆಣೆಗೆ ಹಲ್ಲು ನೋವು ಮತ್ತು ಗಾಯಗಳನ್ನು ಮಾಯಾ ಮಾಡುವಲ್ಲಿ. ಗತಕಾಲದಿಂದಲೂ ಜೇನುತುಪ್ಪವನ್ನು ಶೀತ ಮತ್ತು ಕೆಮ್ಮು ನಿವಾರಿಸಲು ಭಾರತೀಯರು ಬಳಸುತ್ತಿದ್ದರೂ, ಇತ್ತೀಚಿನ ದಿನಗಳ ತಾಯಂದಿರು ಶಿಶುವಿಗೆ ಒಂದು ಕಾಲಾವಧಿಯ ತನಕ ಜೇನುತುಪ್ಪವನ್ನು ತಿನ್ನಿಸದೇ ಇರುವುದು ಸೂಕ್ತ. ಏಕೆಂದರೆ ಜೇನುತುಪ್ಪದಲ್ಲಿರುವ ಬ್ಯಾಕ್ಟೀರಿಯಾ ಬೀಜಗಳು ನಿಮ್ಮ ಮಗುವಿನಲ್ಲಿ ಬೊಟುಲಿಸ್ಮ್ ತೊಂದರೆಯನ್ನು ಉಂಟಮಾಡಬಹುದು. ನಿಮ್ಮ ಮಗುವಿನ ರೋಗ ನಿರೋಧಕ ಶಕ್ತಿ ಸಂಪೂರ್ಣವಾಗಿ ಬೆಳವಣಿಗೆಯಾಗಿರದೆ ಇರುವ ಕಾರಣ ನಿಮ್ಮ್ ಮಗು ಈ ಬೀಜಕಗಳ ಬೆಳವಣಿಗೆಯನ್ನು ಸಹಿಸದೆ ಸೋಂಕಿಗೊಳಗಾಳಬಹುದು. 

ಬಂಗಾರ ಬಣ್ಣದ ಜೇನುತುಪ್ಪ ಆಹಾರ ಪದಾರ್ಥಗಳಲ್ಲಿ ಸಿಹಿಯಾದ ರುಚಿಯನ್ನುಂಟ್ ಮಾಡುತ್ತದೆ. ಜೇನುಹುಳಗಳು ತಮ್ಮ ಕಿಣ್ವ ಪ್ರಕ್ರಿಯೆಯಿಂದ ಜೇನುತುಪ್ಪವನ್ನು ಉತ್ಪಾದಿಸುತ್ತವೆ. ಆದರೆ ಜೇನುತುಪ್ಪ ಶಿಶುವಿನ ಸಾವಿಗೆ ಕಾರಣವಾಗಬಹುದು. 

ಪರಿವಿಡಿ:

೧. ಶಿಶುವಿಗೆ ಜೇನುತುಪ್ಪ ಒಳಿತೇ? (Is honey good for the babies? in Kannada)

೨. ನಿಮ್ಮ ಮಗುವಿಗೆ ಯಾವ ವಯಸ್ಸಿನಲ್ಲಿ ಜೇನುತುಪ್ಪ ನೀಡಬೇಕು? (At what age should you give baby honey? in Kannada)

೩. ಬೊಟುಲಿಸ್ಮ್ ನ ಗುಣಲಕ್ಷಣಗಳು (Symptoms of botulism in Kannada)

೪. ಹಾಲುಣಿಸುವ ತಾಯಂದಿರು ಜೇನುತುಪ್ಪ ಸೇವಿಸುವುದು ಸುರಕ್ಷಿತವೇ? (Is it safe for the lactating mothers to consume honey? in Kannada)

೫. ಜೇನುತುಪ್ಪವನ್ನು ಮಗುವಿನ ಆರೋಗ್ಯಕ್ಕೆ ಮದ್ದಾಗಿ ಬಳಸಬಹುದೇ? (Can honey be used for the babies for health remedies? in Kannada)

೬. ಜೇನುತುಪ್ಪವನ್ನು ಹೊಂದಿರುವ ಆಹಾರ ಪದಾರ್ಥಗಳು - ಶಿಫಾರಸ್ಸು ಮಾಡಬಹುದೇ ಅಥವಾ ಇಲ್ಲವೇ? (Baby Foods Containing Honey- Recommended or not in Kannada)

೧. ಶಿಶುವಿಗೆ ಜೇನುತುಪ್ಪ ಒಳಿತೇ? (Is honey good for the babies? in Kannada)

ಶಿಶುಗಳ ಅರೋಗ್ಯ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಅವುಗಳನ್ನು ಎಲ್ಲ ಬಗೆಯ ಮಾರಣಾಂತಿಕ ಖಾಯಿಲೆಗಳು ಮತ್ತು ಸೋಂಕುಗಳಿಂದ ರಕ್ಷಿಸಬೇಕು. ಭಾರತದಲ್ಲಿ ಮಗುವಿನ ಜೆನಿಸಿದ ನಂತರ ಜೇನುತುಪ್ಪವನ್ನು ತಿನ್ನಿಸುವುದು ವಾಡಿಕೆ. ಆದರೆ ಜೇನುತುಪ್ಪ ನವಜಾತ ಶಿಶುವಿಗೆ ಒಳ್ಳೆಯದೇ? ಅದಕ್ಕೆ ಏನಾದರೂ ಅಡ್ಡಪರಿಣಾಮಗಳಿವೆಯೇ? ಜೇನುತುಪ್ಪ ಅತ್ಯಮೂಲ್ಯ ಪೌಷ್ಟಿಕಾಂಶವನ್ನು ಹೊಂದಿದ್ದರೂ, ೧೨ ತಿಂಗಳ ಕೆಳಗಿನ ಮಕ್ಕಳಿಗೆ ಜೇನುತುಪ್ಪ ತಿನ್ನಿಸಬಾರದು. ಜೇನುತುಪ್ಪ ಇಂತಹ ಮಕ್ಕಳಲ್ಲಿ ಶಿಶುವಿನ ಬೊಟುಲಿಸ್ಮ್ ಎನ್ನವ ಜೀರ್ಣಕ್ರಿಯೆಗೆ ಸಂಬಂಧಿತ ಸೋಂಕುನ್ನು ಉಂಟುಮಾಡಬಹುದು. 

೨. ನಿಮ್ಮ ಮಗುವಿಗೆ ಯಾವ ವಯಸ್ಸಿನಲ್ಲಿ ಜೇನುತುಪ್ಪ ನೀಡಬೇಕು? (At what age should you give baby honey? in Kannada)

ಬೇಬಿ ಸೆಂಟರ್ ನ ವಿಷಶಾಸ್ತ್ರಜ್ಞರು ಮತ್ತು ಆಹಾರ ವಿಜ್ಞಾನಿಗಳ ಅನುಸಾರ ೧೨ ತಿಂಗಳಿಗಿಂತ ಚಿಕ್ಕ ವಯಸ್ಸಿನ ಶಿಶುಗಳಿಗೆ ಜೇನುತುಪ್ಪ ನೀಡಬಾರದು. ಜೇನುತಪ್ಪ ಕ್ಲೊಸ್ಟ್ರಿಡಿಯಮ್ ಬೊಟುಲಿನಮ್ ಎನ್ನುವ ಬೀಜಗಳನ್ನು ಹೊಂದಿದ್ದು, ಅವುಗಳು ಶಿಶುವಿನ ಕರುಳಿನಲ್ಲಿ ಮೊಳಕೆಯೊಡೆದು, ಬೊಟುಲಿಸ್ಮ್ ಸೋಂಕಿಗೆ ಕಾರಣವಾಗಬಹುದು. 

ಕೆಲವು ಬಾರಿ ತಾಯಂದಿರು ಜೇನುತುಪ್ಪವನ್ನು ಕಾಯಿಸಿ, ಮಕ್ಕಳಿಗೆ ನೀಡುತ್ತಾರೆ. ಆದರೆ ಶಾಖದಿಂದ ಈ ಬೀಜಗಳು ಸಾಯುವುದಿಲ್ಲ. ಈ ಬೀಜಕಗಳು ಮಗುವಿನ ಜೀರ್ಣಾಂಗಗಳಲ್ಲಿ ಬೆಳೆದು, ನಿಮ್ಮ ಮಗುವಿನ ದೇಹದಲ್ಲಿ ಹಾನಿಕಾರಕ ನಂಜನ್ನು ಉತ್ಪಾದಿಸಬಹುದು. ಇದು ನಿಮ್ಮ ಮಗುವಿಗೆ ಮಾರಣಾಂತಿಕವೂ ಆಗಬಹುದು. ನಿಮ್ಮ ಮಗು ಒಂದು ವರ್ಷ ವಯಸ್ಸನ್ನು ದಾಟಿದಲ್ಲಿ, ಅದು ಈ ಬೀಜಗಳು ನಿಮ್ಮ ಮಗುವಿಗೆ ಯಾವುದೇ ರೀತಿಯ ಹಾನಿ ಮಾಡಲಾರವು. 

[Back To Top]

೩. ಬೊಟುಲಿಸ್ಮ್ ನ ಗುಣಲಕ್ಷಣಗಳು (Symptoms of botulism in Kannada):

ಕ್ಲೊಸ್ಟ್ರಿಡಿಯಮ್ ಬೊಟುಲಿನಮ್ ಸಾಮಾನ್ಯವಾಗಿ ಪೂರ್ವಸಿದ್ಧ ಆಹಾರಗಳು, ಮಾಂಸ, ಮಣ್ಣಿನಿಂದ ಉತ್ಪಾದಿಸಿದ ಆಹಾರ ಮತ್ತು ಜೇನುತುಪ್ಪದಲ್ಲಿ ಕಂಡುಬರುತ್ತದೆ. ಈ ಬೀಜಕಗಳು ೧೨೧ ಡಿಗ್ರಿ ಸೆಲ್ಷಿಯಸ್ ಶಾಖದಲ್ಲಿ ಕೊಲ್ಲಲ್ಲ್ಪಡುತ್ತವೆ. ಆದರೆ ಕೆಲವು ಬೀಜಗಳು ಈ ಶಾಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತವೆ. ಈ ಬೀಜಕಗಳು ಮಾನವನು ಜೀರ್ಣಾಂಗಗಳಲ್ಲಿ ಬೆಳೆದು, ಬೊಟುಲಿಸ್ಮ್ ಎನ್ನುವ ಒಂದು ಬಗೆಯ ಆಹಾರದ ಸೋಂಕಿಗೆ ಕಾರಣವಾಗಬಹುದು. ಈ ರೋಗ ಅಪಾಯಕಾರಿಯಾಗಿದ್ದು, ಬೀಜಗಳು ಉತ್ಪಾದಿಸುವ ಹಾನಿಕಾರಕ ವಿಷ, ನಿಮ್ಮ ಮಗುವಿನ ಶಕ್ತಿಗುಂದಿಸಿ, ಅರೋಗ್ಯ ಕೆಡುವಂತೆ ಮಾಡಿ, ಶಿಶುವಿನ ಮಾರಣಕ್ಕೂ ಕಾರಣವಾಗಬಹುದು. 

ಬೊಟುಲಿಸ್ಮ್ ರೋಗದ ಗುಣಲಕ್ಷಣಗಳು ಸಾಮಾನಿವಾಗಿ ೮-೩೬ ಗಂಟೆಗಳೊಳಗೆ ಕಂಡುಬರುತ್ತವೆ. ಆ ರೀತಿಯಾದಲ್ಲಿ ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವುದು ಅನಿವಾರ್ಯ. ಈ ರೋಗದ ಗುಣಲಕ್ಷಣಗಳು ಇಂತಿವೆ:

* ನರ ದೌರ್ಬಲ್ಯ

* ಮಲಬದ್ಧತೆ (ಶಿಶುವುನ ಬೊಟುಲಿಸ್ಮ್ ನ ಅಪಾಯಕಾರಿ ಗುಣಲಕ್ಷಣ)

* ಹಸಿವು ಇಲ್ಲದೇ ಇರುವುದು. 

* ಉಸಿರಿಟಾದ ತೊಂದರೆ 

* ಕಣ್ಣುರೆಪ್ಪೆಗಳ ಇಳಿಬೀಳುವಿಕೆ

* ನಿಶ್ಶಕ್ತಿ ಮತ್ತು ಸೀಮಿತ ಮುಖದ ಅಭಿವ್ಯಕ್ತಿ

* ಅಳುವುದಕ್ಕೆ ಮತ್ತು ಹಾಲು ಕುಡಿಯುವುದಕ್ಕೂ ಆಗದಷ್ಟು ದುರ್ಬಲತೆ 

ನಿಮ್ಮ ಮಗುವಿಗೆ ಜೇನುತುಪ್ಪವನ್ನು ತಿನ್ನಿಸಿದ್ದರೆ ಮತ್ತು ನಿಮ್ಮ ಮಗುವಿನಲ್ಲಿ ಮೇಲ್ಕೋಟ್ಟಿರುವ ಯಾವುದಾದರೂ ಗುಣಲಕ್ಷಣಗಳು ಕಂಡುಬಂದಲ್ಲಿ, ಬೊಟುಲಿಸ್ಮ್ ನಿಮ್ಮ ಮಗುವಿಗೆ ಸೋಂಕಿರಬಹುದು ಎನ್ನುವುದನ್ನು ತಾಯಂದಿರು ಅರ್ಥೈಸಿಕೊಳ್ಳಬೇಕು. ಸಾಧ್ಯವಾದರೆ, ನಿಮ್ಮ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ, ನಿಮ್ಮ ಮಗುವಿಗೆ ತಿನ್ನಿಸಿದ ಆಹಾರ ಪದಾರ್ಥದ ತುಂಡು ಅಥವಾ ನಮೂನೆಯನ್ನು ತೆಗೆದುಕೊಂಡು ಹೋಗಿರಿ. ಇದರಿಂದ ವೈದ್ಯರಿಗೆ ರೋಗನಿರ್ಣಯ ಮಾಡುವಲ್ಲಿ ಅನುಕೂಲವಾಗುತ್ತದೆ. 

ಬಾಟುಲಿಸ್ಮ್ ರೋಗವನ್ನು ಶೀಘ್ರವಾಗಿ ನಿರ್ಣಯಿಸಿದಲ್ಲಿ ಅದನ್ನು ಚಿಕಿತ್ಸಿಸಬಹುದು. ಕೆಲವು ಬಾರಿ, ಶಿಶುವಿಗೆ ಉಸಿರಾಟದಲ್ಲಿ ಸಹಾಯ ಮಾಡಲು ಯಾಂತ್ರಿಕ ಉಸಿರಾಟದ ವ್ಯವಸ್ಥೆಯನ್ನು ಮಾಡಬೇಕಾಗಬಹುದು. ನಿಮ್ಮ ಮಗು ವೇಗವಾಗಿ ಚೇತರಿಸಿಕೊಳ್ಳಲ್ಲು ಎದೆಹಾಲು ಉಣಿಸುವುದು ಸೂಕ್ತ. 

೪. ಹಾಲುಣಿಸುವ ತಾಯಂದಿರು ಜೇನುತುಪ್ಪ ಸೇವಿಸುವುದು ಸುರಕ್ಷಿತವೇ? (Is it safe for the lactating mothers to consume honey? in Kannada)

ಈ ಲೇಖನದಲ್ಲಿ ತಿಳಿಸಿರುವಂತೆ ಒಂದು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಜೇನುತುಪ್ಪ ತಿನ್ನಿಸುವುದು ಸೂಕ್ತವಲ್ಲ. ಆದರೆ ಹಾಲುಣಿಸುವ ತಾಯಂದಿರಿಗೆ ಇನ್ನೊಂದು ಪ್ರಶ್ನೆ ಕಾಡುವುದು ಸಹಜ - ಹಾಲುಣಿಸುವ ತಾಯಂದಿರು ಜೇನುತುಪ್ಪ ಸೇವಿಸಬಹುದೇ? ಎದೆಹಾಲಿನ ಮೂಲಕ ಜೇನುತುಪ್ಪ ಮಗುವಿನ ದೇಹಕ್ಕೆ ವರ್ಗಾವಣೆಯಾಗುತ್ತದೆಯೇ? ಇದರಿಂದ ಮಗು ಬೊಟುಲಿಸ್ಮ್ ರೋಗದಿಂದ ಬಳಲುವಂತೆಯಾಗಬಹುದೇ?

ವೈದ್ಯರ ಪ್ರಕಾರ ಹಾಲುಣಿಸುವ ತಾಯಿ ಜೇನುತುಪ್ಪ ಸೇವಿಸುವುದರಿಂದ ಯಾವುದೇ ಬಗೆಯ ಹಾನಿಯಿಲ್ಲ. ಇದರಿಂದ ತಾಯಿ ಬ್ಯಾಕ್ಟೀರಿಯಾ ಬೀಜಕಗಳನ್ನು ಮಗುವಿಗೆ ವರ್ಗಾಯಿಸುವ ತೊಂದರೆಯಾಗಲಾರದು. ಹಾಗಾಗಿ ಮಗುವಿನ ಬೊಟುಲಿಸ್ಮ್ ಸೋಂಕು ಕಾಡುವುದಿಲ್ಲ. ಆದರೆ ಜೇನುತುಪ್ಪ ಸೇವಿಸಿದ ನಂತರ ತಾಯಿಯಾದವರು ತಮ್ಮ ಕೈಯನ್ನು ಜಾಗರೂಕತೆಯಿಂದ ತೊಳೆದುಕೊಳ್ಳಬೇಕು. ಇಲ್ಲವಾದಲ್ಲಿ ಅಕಸ್ಮಾತಾಗಿ ನಿಮ್ಮ ಮಗುವು ಜೇನುತುಪ್ಪ ಮತ್ತು ಅದರಲ್ಲಿರುವ ಬ್ಯಾಕ್ಟೀರಿಯಾ ದಿಂದ ಸೋಂಕಿಗೊಳಗಾಗುವ ಸಾಧ್ಯತೆಯಿರುತ್ತದೆ. 

[Back To Top]

೫. ಜೇನುತುಪ್ಪವನ್ನು ಮಗುವಿನ ಆರೋಗ್ಯಕ್ಕೆ ಮದ್ದಾಗಿ ಬಳಸಬಹುದೇ? (Can honey be used for the babies for health remedies? in Kannada)

ಭಾರತೀಯ ಸಂಸ್ಕೃತಿಯಲ್ಲಿ ಜೇನುತುಪ್ಪವನ್ನು ಗಂಟಲುನೋವು, ಕೆಮ್ಮು, ಹಲ್ಲು ನೋವುಗಳಂತಹ ಅರೋಗ್ಯ ಸಮಸ್ಯೆಗಳನ್ನು ಚಿಕಿತ್ಸಿಸುವಲ್ಲಿ ಉಪಯೋಗಿಸಲಾಗುತ್ತದೆ. ಆದರೆ ಯಾವುದೇ ಕಾರಣದಿಂದಲೂ ಜೇನುತುಪ್ಪವನ್ನು ಶಿಶುವಿಗಾಗಿ ಬಳಸಬಾರದು. ತಾಯಂದಿರು ಮಾಡಬಾರದ ಸಾಮಾನ್ಯ ತಪ್ಪುಗಳ ಪಟ್ಟಿ ಇಲ್ಲಿದೆ:

* ಜೇನುತುಪ್ಪವನ್ನು ಹಲ್ಲು ನೋವಿಗೆ  ಬಳಸಲಾಗುತ್ತದೆ. ಶಿಶುವಿಗೆ ಒಸಡು ನೋವು ಅಥವಾ ಹಲ್ಲು ನೋವು ಕಾಡುವುಡ್ ಸಾಮಾನ್ಯ. ಆದರೆ ಆ ನೋವನ್ನು ಕಡಿಮೆ ಮಾಡಲು ಜೇನುತುಪ್ಪ ಬಳಸಬಾರದು. ಬಳಸಿದ್ದೇ ಆದಲ್ಲಿ ಅದು ನಿಮ್ಮ ಮಗುವನ್ನು ಬಾಟುಲಿಸ್ಮ್ ಸೋಂಕನ್ನು ಅನುಭವಿಸುವಂತೆ ಮಾಡಬಹುದು. 

* ಜೇನುತುಪ್ಪ ಕೆಮ್ಮಿನ ಔಷಧಿಗಳಿಗೆ ಒಳ್ಳೆಯ ಪರ್ಯಾಯ. ಆದರೆ ಒಂದು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಜೇನುತುಪ್ಪ ನೀಡಬಾರದು. 

* ಆಹಾರ ಪದಾರ್ಥವನ್ನು ಸಿಹಿಗೊಳಿಸಲು ಜೇನುತುಪ್ಪವನ್ನು ಸೇರಿಸುತ್ತೇವೆ. ಆದರೆ ಇದರಿಂದ ನಿಮ್ಮ ಮಗುವಿನಲ್ಲಿ ಸಿಹಿಯಾದ ಆಹಾರಕ್ಕೆ ಹೆಚ್ಚಿನ ಬಯಕೆ ಹುಟ್ಟಬಹುದು. ಅದರೊಂದಿಗೆ ಶಿಶುವಿನ ಬೊಟುಲಿಸ್ಮ್ ಗೆ ನಿಮ್ಮ ಮಗು ಬಲಿಯಾಗಬಹುದು. 

ಈ ಎಲ್ಲಾ ಮಾಹಿತಿಯನ್ನು 'ಜೇನುತುಪ್ಪ ಶಿಶುವಿಗೆ ಒಳಿತೇ?' ಎನ್ನುವ ಭಾಗದಲ್ಲಿ ಸೂಕ್ತ ರೀತಿಯಲ್ಲಿ ವಿಶ್ಲೇಷಿಸಲಾಗಿದೆ. ಹಾಗಾಗಿ, ತಾಯಂದಿರು ತಮ್ಮ ಮಗುವಿಗೆ ಒಂದು ವರ್ಷ ವಯಸ್ಸಾಗುವವರೆಗೂ ಅತಿಯಾದ ಕಾಳಜಿ ವಹಿಸುವುದು ಸೂಕ್ತ. 

[Back To Top]

೬. ಜೇನುತುಪ್ಪವನ್ನು ಹೊಂದಿರುವ ಆಹಾರ ಪದಾರ್ಥಗಳು - ಶಿಫಾರಸ್ಸು ಮಾಡಬಹುದೇ ಅಥವಾ ಇಲ್ಲವೇ? (Baby Foods Containing Honey- Recommended or not in Kannada)

ಮಗುವಿನ ಆಹಾರ ಪದಾರ್ಥಗಳು ಜೇನುತುಪ್ಪವನ್ನು ಹೊಂದಿರುವ ಸಾಧ್ಯತೆ ಇದೆ. ಆದರೆ ಇದನ್ನು ಬಳಸಬೇಕೇ ಅಥವಾ ಬೇಡವೇ ಎನ್ನುವುದರ ಚರ್ಚೆ ಈಗಲೂ ನಡೆಯುತ್ತಿದೆ. ಕ್ಲೊಸ್ಟ್ರಿಡಿಯಮ್ ಬೊಟುಲಿನಮ್ ಬೀಜಕಗಳನ್ನು ಹೆಚ್ಚಿನ ತಾಪಮಾನದಲ್ಲಿ ಕೊಳ್ಳಬಹುದು. ಆದರೆ ಇದು ಮನೆಯಲ್ಲಿ ಅಡುಗೆ ಮಾಡುವ ತಾಪಮಾನದಲ್ಲಿ ಸಾಧ್ಯವಿಲ್ಲ. ವಾಣಿಜ್ಯಿಕವಾಗಿ ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಅತಿಯಾದ ತಾಪಮಾನ ಬಳಸುವುದರಿಂದ, ಅದು ಈ ಬೀಜಕಗಳನ್ನು ಕೊಂಡು, ಜೇನುತುಪ್ಪ ಸಂಸ್ಕರಿಸುತ್ತದೆ. ಆದರೂ ಸಹ ಈ ತಾಪಾಮಾನದಲ್ಲಿಯೂ ಕೆಲವು ಬೀಜಕಗಳು ಬದುಕುಳಿಯಬಹುದು. ವಿಶ್ವ ಅರೋಗ್ಯ ಸಂಸ್ಥೆಯ ಅನುಸಾರ ಜೇನುತುಪ್ಪವನ್ನು ಶಿಶುವಿಗೆ ನೀಡುವ ಆಹಾರ, ನೀರು ಅಥವಾ ಇನ್ಫ್ಯಾಂಟ್ ಫಾರ್ಮುಲಾ ಗಳಲ್ಲಿ ಸೇರಿಸಬಾರದು. ಒಂದು ವರ್ಷಕ್ಕಿಂತ ಚಿಕ್ಕ ಶಿಶುವಿಗೆ ಜೇನುತುಪ್ಪವನ್ನು ನೀಡಬಾರದು. 

ಶಿಶುವಿಗೆ ಸಿಹಿಯಾದ ಪದಾರ್ಥವನ್ನು ತಿನ್ನಿಸುವುದರಿಂದ ನಿಮ್ಮ ಮಗು ನಂತರದ ವಯಸ್ಸಿನಲ್ಲಿ ಸಿಹಿಯಾದ ಆಹಾರ ಪದಾರ್ಥಗಳ ಬಗ್ಗೆ ಬಯಕೆಯನ್ನು ಬೆಳೆಸಿಕೊಳ್ಳಬಹುದು. ನಿಮ್ಮ ಮಗುವಿನ ಆಹಾರವನ್ನು ಸಿಹಿ ಮಾಡಲು ಬಯಸಿದರೆ, ಅದಕ್ಕೆ ಕಿವುಚಿದ ಹಣ್ಣುಗಳನ್ನು ಅಥವಾ ಬಾಳೆಹಣ್ಣಿನ ರಸವನ್ನು ಅಥವಾ ಮೊಸರನ್ನು ಸೇರಿಸಿ. ಈ ಪದಾರ್ಥಗಳು ಆಹಾರದ ಸಿಹಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೇ, ವಿಟಮಿನ್ ಮತ್ತು ಮೊನೆರಲ್ಸ್ ಗಳನ್ನೂ ಹೊಂದಿರುತ್ತದೆ. ಇದು ಆಹಾರ ಪೌಷ್ಟಿಕ ಮೌಲ್ಯವನ್ನು ಹೆಚ್ಚಿಸುತ್ತದೆ. 

ನಿಮ್ಮ ಮಗುವಿಗೆ ಹೊಸತಾದ ಫಾರ್ಮುಲಾ ಪರಿಚಯಿಸುವ ಮೊದಲು ನಿಮ್ಮ ವೈದ್ಯರು ಸಲಹೆ ನೀಡಿದ ಆಹಾರವನ್ನು ಬಳಸುವುದು ಸೂಕ್ತ ನಿಮ್ಮ ವೈದ್ಯರ ಸಲಹೆ ಪಡೆಯುವುದು ಒಳಿತು. 

ಎಲ್ಲಾ ಬಗೆಯ ಜೇನುತುಪ್ಪ ಈ ಬ್ಯಾಕ್ಟೀರಿಯಾ ಬೀಜಕಗಳನ್ನು ಹೊಂದಿರುವುದಿಲ್ಲ. ಆದರೆ ಯಾವ್ ಜೇನುತುಪ್ಪ ಬೀಜಕಗಳನ್ನು ಹೊಂದಿಲ್ಲ ಎನ್ನುವುದು ಕಂಡುಹಿಡಿಯುವುದು ಕಷ್ಟಸಾಧ್ಯ. ಹಾಗಾಗಿ, ಜೇನುತುಪ್ಪ ನಿಮ್ಮ ಮಗುವಿಗೆ ನೀಡಿ, ಮಗುವಿನ ಅರೋಗ್ಯ ಕೆಡಿಸುವ ಬದಲಿಗೆ, ಮನ್ನೆಚ್ಚರಿಕೆಗಳನ್ನು ವಹಿಸುವುದು ಒಳಿತು. ನವಜಾತ ಶಿಶುವಿನ ತಾಯಂದಿರು ತಮ್ಮ ಮಗುವಿಗೆ ಆರು ತಿಂಗಳವರೆಗೆ ಕೇವಲ ಎದೆಹಾಲುಣಿಸುವುದು ಒಳಿತು ಏಕೆಂದರೆ ಅದರಲ್ಲಿ ಸೂಕ್ತ ಪ್ರಮಾಣದ ವಿಟಮಿನ್, ಮಿನರಲ್ಸ್ ಗಳಿದ್ದು, ಅವುಗಳು ಮಗುವಿನ ಒಟ್ಟಾರೆ ಬೆಳವಣಿಗೆಯಲ್ಲಿ ಸಹಾಯ ಮಾಡುತ್ತವೆ. 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon