Link copied!
Sign in / Sign up
21
Shares

ಮಗುವಿನ ತ್ವಚೆಯನ್ನು ಬೆಳ್ಳಗಾಗಿಸಲು ಮತ್ತು ಹೊಳಪನ್ನು ಹೆಚ್ಚಿಸಲು ನೈಸರ್ಗಿಕ ಸಲಹೆಗಳು

ನೀವು ಗರ್ಭಿಣಿ ಎಂದು ತಿಳಿದ ತಕ್ಷಣ ಮಗುವು ಬೆಳ್ಳಗೆ ಮುದ್ದಾಗಿ ಜನಿಸಲಿ ಎಂದು ನಿಮ್ಮ ಮನೆಯ ಹಿರಿಯರು ಹಲವು ಉಪಚಾರಗಳನ್ನು ಮಾಡುವುದು ಸಹಜ, ಮತ್ತು ನನ್ನ ಮಗುವು ಬೆಳ್ಳಗೆ ಮುದ್ದಾಗಿ ಜನಿಸಬೇಕು ಎಂಬುದು ಪ್ರತಿ ತಾಯಿಯ ಆಸೆ ಕೂಡ. ಮಗುವಿನ ತ್ವಚೆಯು ಬೆಳ್ಳಗೆ ಹೊಳಪುಯುಕ್ತವಾಗಿರಲು ಈ ಕೆಳಗಿನ ನೈಸರ್ಗಿಕ ಉಪಾಯಗಳು ನಿಮಗೆ ಸಹಾಯ ಮಾಡುತ್ತದೆ.

ನಿಮ್ಮ ಮಗುವಿನ ತ್ವಚೆಯು ಬೆಳ್ಳಗಾಗಲು ಮತ್ತು ಹೊಳಪನ್ನು ಪಡೆಯಲು ಕೆಲವು ನೈಸರ್ಗಿಕ ಮತ್ತು ಪ್ರಾಯೋಗಿಕ ಸಲಹೆಗಳು

೧.ಕಡಲೆ ಹಿಟ್ಟು ಪೇಸ್ಟ್

ಮನೆಯಲ್ಲಿ ನೀವು ಹಾಲು, ಅರಿಶಿಣ ಪುಡಿ, ಮತ್ತು ಕಡಲೆ ಹಿಟ್ಟನ್ನು ಮಿಶ್ರಣ ಮಾಡಿ ಚೆನ್ನಾಗಿ ಮಿಶ್ರಿಸಿ, ಪೇಸ್ಟ್ ತರಹ ತಯಾರಿಸಿಕೊಳ್ಳಿ.

ಈ ಪೇಸ್ಟ್ ಅನ್ನು ಮಗುವಿನ ತ್ವಚೆಯ ಮೇಲೆ ಮೃದುವಾಗಿ ಹಚ್ಚಿ. ೧೦ ನಿಮಿಷದ ನಂತರ ಅದು ಒಣಗಲು ಪ್ರಾರಂಭವಾಗುತ್ತದೆ, ಅದು ಒಣಗುವ ಮುನ್ನ ಒಂದು ಶುದ್ಧ ತೇವವಾದ ಹತ್ತಿಯನ್ನು ಅಥವಾ ಶುದ್ಧ ಮೃದು ಬಟ್ಟೆಯನ್ನು ತೆಗೆದುಕೊಂಡು ಮಗುವಿನ ತ್ವಚೆಯ ಮೇಲಿನ ಪೇಸ್ಟ್ ಅನ್ನು ನಿದಾನವಾಗಿ ಮೃದುವಾಗಿ ತೆಗೆಯಿರಿ.

ಹಾಲು ಮಗುವಿನ ತ್ವಚೆಯ ಮೇಲಿರುವ ಬ್ಯಾಕ್ಟೀರಿಯಾವನ್ನು ತೆಗೆಯುದರಲ್ಲಿ ಸಹಾಯವಾಗುತ್ತದೆ.

ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳು ಮಗುವಿನ ತ್ವಚೆಯ ಮೇಲೆ ಪರಿಣಾಮ ಬಿರುವುದರಿಂದ ಮನೆಯಲ್ಲಿ ಮಾಡಿರುವುದನ್ನು ಉಪಯೋಗಿಸುವುದು ಉತ್ತಮ.

೨.ಹಣ್ಣಿನ ಜೀವರಸ

ನಿಮ್ಮ ಮಗುವಿನ ಮೈಬಣ್ಣವನ್ನು ಹೆಚ್ಚಿಸಲು ಇರುವ ಮತ್ತೊಂದು ಸುಲಭ ಮನೆ ಮಾರ್ಗ ಎಂದರೆ, ದ್ರಾಕ್ಷಿ ಹಣ್ಣಿನ ರಸವನ್ನು ಕುಡಿಸುವುದು.

ನೈಸರ್ಗಿಕ ಹಣ್ಣಿನ ರಸದಲ್ಲಿರುವ ಅಂಶಗಳು ಚರ್ಮದ ಮೇಲ್ಪದರದಲ್ಲಿರುವ ಕಲ್ಮಶಗಳನ್ನು ತೆಗೆದು ಹಾಕಿ, ತ್ವಚೆಯ ಹೊಳಪನ್ನು ಹೆಚ್ಚಿಸಲು ಸಹಾಯ ಆಗುವುದು.

ಇದರ ಜೊತೆಗೆ ಸೇಬು ಮತ್ತು ಕಿತ್ತಳೆ ಕೂಡ ತ್ವಚೆಯ ಆರೋಗ್ಯವನ್ನು ಕಾಪಾಡುವುದರ ಜೊತೆಗೆ, ಮೈಬಣ್ಣವನ್ನು ಹೆಚ್ಚಿಸುತ್ತವೆ.

ಸೂಚನೆ : ಇದು ೩ ತಿಂಗಳ ಮೇಲ್ಪಟ್ಟ ಶಿಶುಗಳಿಗೆ ಮಾತ್ರ.ನವಜಾತ ಶಿಶುವಿಗೆ ಹಣ್ಣಿನ ರಸವನ್ನು ಕುಡಿಸುವ ಪ್ರಯತ್ನ ಮಾಡಬೇಡಿ.

೩.ಎಣ್ಣೆ ಮಸಾಜ್

ನಮ್ಮ ಪೂರ್ವಜರ ವಿಧಾನ ನಿಜಕ್ಕೂ ಕೆಲಸ ಮಾಡುತ್ತದೆ. ಎಣ್ಣೆಯನ್ನು ಬೆಚ್ಚಗೆ ಮಾಡಿ, ಅದನ್ನು ಮಗುವಿನ ತ್ವಚೆಯ ಮೇಲೆ ಮಸಾಜ್ ಮಾಡುವುದರಿಂದ ಶಿಶುವಿನ ತ್ವಚೆಯ ಪೋಷಣೆ ಮತ್ತು ತ್ವಚೆಯ ಮೃದುತ್ವ ಬರುವಂತೆ ಮಾಡುತ್ತದೆ.

ಬೆಚ್ಚನೆಯ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಮಗುವಿನ ಶಿಶುವಿನ ಸೂಕ್ಷ್ಮ ತ್ವಚೆಯ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಸಹಾಯವಾಗುತ್ತದೆ.

ಇದನ್ನು ನಿರಂತರವಾಗಿ ಮಾಡುವುದರಿಂದ ಶಿಶುವಿನ ತ್ವಚೆ ಬೆಳ್ಳಗಾಗುವುದರ ಜೊತೆ, ಹೂವಿನಂತೆ ಪ್ರಕಾಶಿಸುತ್ತದೆ ಮತ್ತು ಕಾಂತಿಯನ್ನು ಪಡೆಯುತ್ತದೆ.

ಸಾವಯವ ನೈಸರ್ಗಿಕ ಎಣ್ಣೆಯನ್ನು ಉಪಯೋಗಿಸುವುದು ಉತ್ತಮ. (ಶಿಶುವಿನ ತ್ವಚೆಗೆ ಉತ್ತಮವಾದ ಎಣ್ಣೆ ಎಂದರೆ ಬಾದಾಮಿ ಎಣ್ಣೆ ಮತ್ತು ಆಲಿವ್ ಎಣ್ಣೆ)

೪.ಸ್ನಾನದ ಸಮಯದಲ್ಲಿ ಸರಿಯಾದ ಬಿಸಿ ನೀರಿನ ತಾಪ

ಅತಿಯಾದ ತಣ್ಣನೆಯ ಅಥವಾ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಮಗುವಿನ ಸೂಕ್ಷ್ಮ ಚರ್ಮ ಗಾಢ ಬಣ್ಣವನ್ನು ಪಡೆಯುತ್ತದೆ. ಸ್ನಾನದ ಸಮಯದಲ್ಲಿ ಸರಿಯಾದ ನೀರಿನ ತಾಪ ಇರಿಸುವುದು ತ್ವಚೆಯ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ತುಂಬಾ ಬಿಸಿ ನೀರು ಮಗುವಿನ ತ್ವಚೆಯ ಬಣ್ಣವನ್ನು ಗಾಢ  ಬಣ್ಣಕ್ಕೆ ಪರಿವರ್ತಿಸುತ್ತದೆ.

೫.ಕಾಳಜಿ

ಮಗುವಿನ ಸೂಕ್ಷ್ಮ ತ್ವಚೆಯನ್ನು ನೀವು ಕಾಳಜಿ ಮಾಡುವುದು ತುಂಬಾ ಮುಖ್ಯ.

ಮಗುವಿನ ತ್ವಚೆ ಆರೋಗ್ಯವಾಗಿರಲು ಮಗುವು ಸರಿಯಾಗಿ ಎದೆಹಾಲನ್ನು ನೀಡಿ, ಮಗುವಿನ ತ್ವಚೆ ನೀರಿನಾಂಶದ ಕೊರತೆಯಿಂದ ಒಣಗುವಂತೆ ಮಾಡಬೇಡಿ.

ತ್ವಚೆಗೆ ಗಟ್ಟಿ ಅಥವಾ ಗಡುಸಾದ ಸೋಪನ್ನು ಬಳಸಬೇಡಿ. ಮೃದುವಾದ ಸೋಪನ್ನು ಬಳಸಿ. ಅದರಿಂದ ಮಗುವಿನ ತ್ವಚೆಗೆ ಯಾವುದೇ ಅಲರ್ಜಿ ಅಥವಾ ಅಪಾಯ ಆಗುವುದಿಲ್ಲ ಎಂದು ಖಚಿತ ಪಡಿಸಿಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon