Link copied!
Sign in / Sign up
2
Shares

ನಿಮ್ಮ ಮಗುವಿನ ತ್ವಚೆಯನ್ನು ಆರೋಗ್ಯವಾಗಿರಿಸಲು ಉಪಯುಕ್ತ ಸಲಹೆಗಳು

ನವಜಾತ ಶಿಶುವಿನ ತ್ವಚೆಯು ತುಂಬಾ ನವಿರಾಗಿ ಮತ್ತು ಸೂಕ್ಹ್ಮವಾಗಿರುವುದರಿಂದ ತುಂಬಾ ಜಾಗರೂಕತೆಯಿಂದ ಹೆಚ್ಚಿನ ರಕ್ಷಣೆಯನ್ನು ಒದಗಿಸುವುದು ಅಗತ್ಯ. ಶಿಶುಗಳು ನಾಜೂಕಿನ ಮತ್ತು ಮೃದುವಾದ ಚರ್ಮದ ಜೊತೆ ಜನಿಸಿರುವರು. ಮಗುವಿನ ತ್ವಚೆ ತುಂಬಾ ಸೂಕ್ಹ್ಮವಾಗಿರುವುದರಿಂದ ಅಲರ್ಜಿ ಮತ್ತು ದದ್ದುಗಳನ್ನು ಬೇಗನೆ ಬೆಳೆಸಿಕೊಳ್ಳಬಹುದು. ಇದನ್ನು ತಡೆಯಲು ನೀವು ಸರಿಯಾದ ನೈಸರ್ಗಿಕ ವಿಧಾನಗಳನ್ನು ಉಪಯೋಗಿಸುವುದು ಒಳ್ಳೆಯದು ರಾಸಾಯನಿಕಯುಕ್ತ ಪದಾರ್ಥಗಳಿಂದ ಮಗುವಿನ ಚರ್ಮಕ್ಕೆ ಹಾನಿ ಅಥವಾ ತೊಂದರೆ ಆಗಬಹುದು.

ರಾಸಾಯನಿಕ ಪದಾರ್ಥಗಳು ಮಗುವಿನ ತ್ವಚೆಗೆ ಹಾನಿಮಾಡಲು ಕಾರಣಗಳು

೧.ಮಗುವಿನ ತ್ವಚೆ ತುಂಬಾ ತೆಳು ಮತ್ತು ನಾಜೂಕಾಗಿರುತ್ತದೆ.

೨.ಮಗುವಿನ ಸುತ್ತ ಇರುವ ವಾತಾವರಣಕ್ಕೆ ಹೊಂದಿಕೊಳ್ಳಲು ಶಿಶುವಿಗೆ ತನ್ನದೇ ಆದ ಸಮಯದ ಅವಶ್ಯಕತೆ ಇರುತ್ತದೆ.

೩.ಮಗುವಿನ ಚರ್ಮವು ಹಲವು ಸವಾಲುಗಳನ್ನು ಎದುರಿಸುತ್ತದೆ - ಅದು ಡೈಪರ್ ದದ್ದುಗಳು, ರಾಸಾಯನಿಕ ಸೋಪುಗಳು ಮತ್ತು ಶ್ಯಾಂಪು ಮುಂತಾದವುಗಳಿರಬಹುದು.

೪.ಶಿಶುಗಳು ಮೊದಲ ಕೆಲವು ತಿಂಗಳುಗಳು ಚರ್ಮ ಅಲರ್ಜಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ.

ಮಗುವಿನ ತ್ವಚೆಯ ರಕ್ಷಣೆ

ನಿಮಗೆ ಗೊತ್ತೇ? ಮಾನವನು ಮಗುವಾಗಿರುವಾಗ ಅತ್ಯುತ್ತಮ ತ್ವಚೆಯನ್ನು ಹೊಂದಿರುವನು/ಳು. ಅದರ ಸರಿಯಾದ ಪೋಷಣೆ ಮಾಡುವುದರಿಂದ ತನ್ನ ಜೀವನ ಪೂರ್ತಿ ಆ ತ್ವಚೆಯನ್ನು ಕಾಪಾಡಿಕೊಳ್ಳಬಹುದು. ಮಗುವಿನ ತ್ವಚೆಯನ್ನು ಹೇಗೆ ಪೋಷಣೆ ಮಾಡಬಹುದು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

೧.ಸ್ನಾನ

ಪೋಷಕರು ಸಾಮಾನ್ಯವಾಗಿ ಪ್ರತಿದಿನ ಸ್ನಾನ ಮಾಡಿಸಲು ಬಯಸುವರು. ಇದಕ್ಕೆ ಬಳಸುವ ಸೋಪುಗಳು ಮತ್ತು ಶ್ಯಾಂಪುಗಳು ಮಗುವಿನ ತ್ವಚೆಗೆ ಅಲರ್ಜಿಯನ್ನು ಉಂಟುಮಾಡುವುದಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಉತ್ತಮ. ಉಗುರು ಬೆಚ್ಚಗಿನ ಮತ್ತು ಮೃದುವಾದ ಸೋಪನ್ನು ಬಳಸಿ.

ಹೊಸ ಉತ್ಪನ್ನಗಳನ್ನು ನಿಮ್ಮ ಮಗುವಿನ ಮೇಲೆ ಪ್ರಯೋಗ ಮಾಡಬೇಡಿ. ಆಂಟಿಬ್ಯಾಕ್ಟೀರಿಯಲ್ ಸೋಪುಗಳನ್ನು ಉಪಯೋಗಿಸುವುದು ಮಗುವಿನ ತ್ವಚೆಯ ಮೇಲೆ ಪರಿಣಾಮ ಬೀರಬಹುದು. ತ್ವಚೆಯನ್ನು ಒರೆಸಲು ಶುದ್ಧ ಕಾಟನ್ ಮತ್ತು ಮೃದುವಾದ ಟವೆಲ್ ಅನ್ನು ಬಳಸಿ.

೨.ಪೌಡರ್

ನಿಮ್ಮ ಮಗುವಿಗೆ ಟಾಲ್ಕಮ್ ಪೌಡರ್ ಅನ್ನು ಆಯ್ಕೆ ಮಾಡುವಾಗ ಕೂಡ ನೀವು ಎಚ್ಚರಿಕೆವಹಿಸುವುದು ಉತ್ತಮ. ವಿಶೇಷವಾಗಿ ಮಗುವಿವಾಗಿ ತಯಾರಿಸಿರುವ ಪೌಡರ್ ಅನ್ನು ಬಳಸಿ ಮತ್ತು ಹೆಚ್ಚು ಸುವಾಸನೆ ಹಾಕಿರುವ, ಮತ್ತು ರಾಸಾಯನಿಕಗಳನ್ನು ಬೆರೆಸಿರುವ ಉತ್ಪನ್ನಗಳನ್ನು ಉಪಯೋಗಿಸಬೇಡಿ. ಅದು ಸೂಕ್ಷ್ಮವಾಗಿರುವ ಮಗುವಿನ ತ್ವಚೆಗೆ ಕಿರಿಕಿರಿಯನ್ನುಂಟುಮಾಡಬಹುದು.

೩.ನಿದ್ರೆ ಮತ್ತು ಡೈಪರ್ ಗಳು

ಮಗುವಿಗೆ ಡೈಪರ್ ಗಳನ್ನು ಹಾಕುವುದರಿಂದ ಶಿಶುಗಳು ನೈರ್ಮಲ್ಯವಾಗಿರಲು ಸಹಾಯವಾಗುತ್ತದೆ. ಆದರೆ, ಕೆಲವು ಡೈಪರ್ ಗಳು ಮಗುವಿನ ತ್ವಚೆಗೆ ಕಿರಿಕಿರಿಯನ್ನು ಉಂಟುಮಾಡುತ್ತವೆ ಅಥವಾ ಸೋಂಕನ್ನು ಉಂಟುಮಾಡಬಹುದು. ಮಗುವು ದೈಪಾರ್ ಅನ್ನು ಬಳಸಿದ ನಂತರ ಆಗಾಗ್ಗೆ ಅದನ್ನು ಬದಲಿಸುವುದು ಒಳ್ಳೆಯದು. ಮಗುವಿನ ಡೈಪರ್ ಹಾಕುವ ಜಾಗದಲ್ಲಿ ಕಿರಿಕಿರಿ ಅಥವಾ ದದ್ದುಗಳನ್ನು ನೀವು ಕಂಡರೆ ಕೂಡಲೇ ಅದನ್ನು ಬದಲಾಯಿಸಿ.

೪.ತ್ವಚೆಯ ಸಮಸ್ಯೆ

ನಿಮ್ಮ ಕುಟುಂಬದಲ್ಲಿ ಅಲರ್ಜಿ, ಅಸ್ತಮಾ, ಅಟೊಪಿಕ್ ಡರ್ಮೊಟೈಟಿಸ್ ನಿಂದ ತೊಂದರೆ ಅನುಭವಿಸುವವರು ಇದ್ದರೆ ನಿಮ್ಮ ಮಗುವಿಗೆ ಇಸುಬು ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ. ನೀವು ಮೃದುವಾದ ಸೋಪನ್ನು ಬಳಸಿ.

ಕೆಲವು ಶಿಶುಗಳು ಮೊಡವೆ ಅಥವಾ ಗುಳ್ಳೆಗಳನ್ನು ಬೆಳೆಸಿಕೊಳ್ಳುವರು. ಈ ಮೊಡವೆಗಳು ವಯಸ್ಕರಲ್ಲಿ ಬರುವ ಮೊಡವೆಗಳಲ್ಲ.

ಸಲಹೆಗಳು

೧.ಮಗುವನ್ನು ನೇರ ಸೂರ್ಯ ಕಿರಣಗಳಿಗೆ ಕನಿಷ್ಠ ೬ ತಿಂಗಳುಗಳ ವರೆಗೆ ಕರೆತರಬೇಡಿ.

೨.ನಿಮ್ಮ ಮಗುವಿಗೆ ಹೊಸ ಬಟ್ಟೆಗಳನ್ನು ಧರಿಸಬೇಡಿ. ಮತ್ತು ಒಂದೇ ಬಟ್ಟೆಯನ್ನು ಎರಡು ಮೂರು ದಿನದ ವರೆಗೆ ಹಾಕಿರಬೇಡಿ.

೩.ಮಗು ಬೆವರುವುದರಿಂದ ತ್ವಚೆಯ ಮೇಲೆ ಬೆವರು ಗುಳ್ಳೆ ಮೂಡಬಹುದು, ಮಗುವಿಗೆ ಕಾಲಕ್ಕೆ ತಕ್ಕಂತೆ ಬಟ್ಟೆಗಳ ಆಯ್ಕೆ ಮಾಡಿ. ಸೊಳ್ಳೆಗಳ ಕಡಿತದಿಂದ ಮತ್ತು ಕೀಟಗಳ ಕಡಿತದಿಂದ ರಕ್ಷಣೆ ಮಾಡಿ.

೪.ಮಗುವಿನ ತ್ವಚೆಗೆ ಅಲರ್ಜಿ ಇರುವ ಪದಾರ್ಥಗಳನ್ನು ಉಪಯೋಗಿಸಬೇಡಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon