Link copied!
Sign in / Sign up
5
Shares

ಸೆಕ್ಸ್ : ಶಿಶ್ನದ ಗಾತ್ರ ಎಷ್ಟು ಮುಖ್ಯ?!

ಸಿನಿಮಾ ಅಥವಾ ಮತ್ತ್ಯಾವುದೋ ಮಾಧ್ಯಮದಿಂದ ನಮ್ಮಲ್ಲಿ ಮೂಡಿರುವ ತಪ್ಪು ಗ್ರಹಿಕೆ ಎಂದರೆ, ಅದು ಗಾತ್ರದಲ್ಲಿ ದೊಡ್ದದಿದ್ದಷ್ಟು ಒಳ್ಳೆಯದು ಎಂದು. ಇದು ಸಮಾಜದಲ್ಲಿ ಸಾಂಪ್ರದಾಯಿಕವಾಗಿ ಇರುವ ನಂಬಿಕೆಯಾದ ಶಿಶ್ನ ದೊಡ್ದದಿದ್ದಷ್ಟು ಹೆಚ್ಚು ಪುರುಷತ್ವ ಎಂಬ ತಪ್ಪು ಕಲ್ಪನೆ ಇಂದ ಕೂಡ ಇರಬಹುದು. ಆದರೆ ಶಿಶ್ನವಿನ ಗಾತ್ರವು ನಿಜವಾಗಿಯೂ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆಯೇ? ಒಂದು ಹೆಣ್ಣನ್ನು ಕೆರಳಿಸಲು ಮತ್ತು ಸಂಭೋಗದ ಸುಖ ನೀಡಲು ಗಾತ್ರವು ಅಷ್ಟೊಂದು ಮುಖ್ಯವೇ?

ಶಿಶ್ನವಿನ ಗಾತ್ರವು ಲೈಂಗಿಕ ಆಹ್ಲಾದ ಅಥವಾ ಸುಖದ ಮೇಲೆ ಬೀರುವ ಪರಿಣಾಮ ನಿರ್ಲಕ್ಷಿಸುವಂತದ್ದು ಎಂಬ ಪುರಾವೆಯ ಆಧಾರದ ಮೇಲೆ ಸಂಶೋಧಕರು ಮುಂದೆ ತಿಳಿಯಲು ಹೊರಟಿದ್ದು ಶಿಶ್ನವಿನ ಗಾತ್ರವು ಹೆಣ್ಣಿನ ಲೈಂಗಿಕ ಕೆರಳಿಕೆಯ ಮೇಲೆ ಯಾವ ರೀತಿಯ ಮಾನಸಿಕ ಪರಿಣಾಮ ಬೀರುತ್ತದೆ ಎಂಬುದು. ಈ ಸಂಶೋಧನೆಗೆ ಇವರು ಮಾಡಿದ್ದು ಸ್ನಾತಕಪೂರ್ವ ವಿದ್ಯಾರ್ಥಿನಿಯರಿಗೆ ಲೈಂಗಿಕವಾಗಿ ಕೆರಳಿಸುವಂತಹ ಕಥೆಗಳನ್ನ ಓದಲು ನೀಡಲಾಯಿತು. ಒಂದೊಂದು ಕಥೆಯಲ್ಲೂ ಬರುವ ಗಂಡು ಪಾತ್ರಕ್ಕೆ ಬೇರೇ ಬೇರೇ ಗಾತ್ರದ ಶಿಶ್ನ ಇರುವುದಾಗಿ ಬರೆದಿತ್ತು. ಎಲ್ಲಾ ಕಥೆಗಳನ್ನ ಓದುವಂತೆ ಮಾಡಿದ ಮೇಲೆ, ತಿಳಿದು ಬಂದ ವಿಷಯ ಅಂದರೆ, ಹುಡುಗಿಯರಲ್ಲಿ ಶಿಶ್ನದ ಗಾತ್ರದ ಆಧಾರದ ಮೇಲಿನ ಕೆರಳುವಿಕೆಯಲ್ಲಿ ಅಷ್ಟೊಂದು ವ್ಯತ್ಯಾಸವೇ ಇರಲಿಲ್ಲ. ಆದರೆ ಇದರಿಂದ ಇನ್ನೊಂದು ವಿಷಯವೂ ತಿಳಿದು ಬಂದಿತು. ಅದು ಏನೆಂದರೆ, ಸೆಕ್ಸ್ ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಅಥವಾ ಹೆಚ್ಚು ಆಸಕ್ತಿ ತೋರುವ ಹುಡುಗಿಯರಲ್ಲಿ ಗಾತ್ರವು ದೊಡ್ದದಿದ್ದಷ್ಟು ಹೆಚ್ಚು ಕೆರಳುವಿಕೆ ಇದೆ ಎಂಬುದು.

ಇವುಗಳನ್ನೆಲ್ಲಾ ಬದಿಗಿಟ್ಟು, ಸಂಶೋಧಕರು ಹೆಂಗಸರು ತಮ್ಮ ಸಂಗಾತಿಯ ಶಿಶ್ನವಿನ ಗಾತ್ರದ ಬಗ್ಗೆ ಏನು ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಕೂಡ ಕಲೆಹಾಕಿದರು. ಬಹುತೇಕ ಹೆಂಗಸರು(67%) ಗಾತ್ರವು ಸಾಧಾರಣ ಇದೆ ಎಂದರೆ, ಕಾಲುಭಾಗದಷ್ಟು ಹೆಂಗಸರು (27%) ಗಾತ್ರವು ದೊಡ್ಡದಿದೆ ಎಂದು ತಿಳಿಸಿದರು ಹಾಗು ಕೇವಲ ಸಣ್ಣ ಪ್ರಮಾಣದ (6%) ಅಷ್ಟು ಹೆಂಗಸರು ತಮ್ಮ ಸಂಗಾತಿಯ ಶಿಶ್ನದ ಗಾತ್ರ ಚಿಕ್ಕದಿದೆ ಎನ್ಮ್ಬ ಭಾವನೆ ವ್ಯಕ್ತಪಡಿಸಿದ್ದಾರೆ.

ಎಲ್ಲದಕ್ಕಿಂತಾ ಪ್ರಮುಖವಾಗಿ ಬಹುತೇಕ ಎಲ್ಲಾ ಹೆಂಗಸರು (84%) ತಮ್ಮ ಸಂಗಾತಿಯ ಶಿಶ್ನವಿನ ಗಾತ್ರದ ಬಗ್ಗೆ ತೃಪ್ತಿ ಹೊಂದಿದ್ದು, ಇದು ಗಂಡಸರು ತಮ್ಮ ಶಿಶ್ನವಿನ ಗಾತ್ರದ ಬಗ್ಗೆ ತೃಪ್ತಿ ಹೊಂದಿರುವುದಕ್ಕಿಂತ (55%) ಹೆಚ್ಚು. ಇಷ್ಟಾದರೂ ಮಾಧ್ಯಮಗಳಲ್ಲಿ ನಾವು ಕೇಳುವುದು ಏನೆಂದರೆ ಸಂಭೋಗ ಕಾರ್ಯಕ್ಕೆ ಗಾತ್ರವು ಅತಿಮುಖ್ಯ ಎಂಬುದು.

ಶಿಶ್ನವಿನ ಗಾತ್ರದ ಬಗೆಗಿನ ಸಂಶೋಧನೆ ಇಂದ ನಮಗೆ ತಿಳಿದು ಬರುವ ಇನ್ನೊಂದು ಮುಖ್ಯ ಹಾಗು ಕುತೂಹಲಕರ ಸಂಗತಿ ಎಂದರೆ ಅದು ಶಿಶ್ನವಿನ ಗಾತ್ರ “ಅವಳಿಗಿಂತ” ಜಾಸ್ತಿ “ಅವನ” ಮೇಲೆಯೇ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದು. ಕೇವಲ ಕೆಲವು ಹೆಂಗಸರು ತಮ್ಮ ಸಂಗಾತಿಯ ಶಿಶ್ನದ ಗಾತ್ರ ದೊಡ್ದದಿರಬೇಕಿತ್ತು ಅಥವಾ ಚಿಕ್ಕದಿರಬೇಕಿತ್ತು ಎಂದು ಹೇಳಿದ್ದು ಬಿಟ್ಟರೆ, ಬಹುತೇಕ ಹೆಂಗಸರು ಅದರ ಬಗ್ಗೆ ಯಾವುದೇ ತಕರಾರು ವ್ಯಕ್ತ ಪಡಿಸಲಿಲ್ಲ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon